newsfirstkannada.com

×

ಅನುಷ್ಕಾ ಶರ್ಮಾ ನೋಡಲು ಇಣುಕಿ ಇಣುಕಿ ಚಡಪಡಿಸಿದ ಕಿಂಗ್ ಕೊಹ್ಲಿ; ಮಜವಾಗಿದೆ ವಿಡಿಯೋ..!

Share :

Published November 16, 2023 at 10:15am

    ಶತಕ ಬಾರಿಸಿದ ಸಂಭ್ರಮದಲ್ಲಿ ಅನುಷ್ಕಾ ನೆನಪಾಗಿದ್ದಾಳೆ

    ಪತ್ನಿ ನೋಡಲು ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿ ಪರದಾಟ

    ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್

ಸೆಂಚೂರಿ ಸರದಾರ ಕಿಂಗ್ ವಿರಾಟ್ ಕೊಹ್ಲಿ ನಿನ್ನೆ ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿಗೆ ಸಂಬಂಧಿಸಿದ ವಿಡಿಯೋ ಒಂದು ಭಾರೀ ವೈರಲ್ ಆಗಿದೆ.

ಏನದು ಆ ವಿಡಿಯೋ..?

113 ಬಾಲ್​ಗಳಲ್ಲಿ 117 ರನ್​ ಬಾರಿಸಿದ ವಿರಾಟ್, ಕೊನೆಗೆ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿ ಕ್ರೀಸ್​ನಿಂದ ಹೊರ ಹೋದರು. ಡ್ರೆಸ್ಸಿಂಗ್ ರೂಮ್​ಗೆ ಬಂದ ವಿರಾಟ್​​ಗೆ ತಮ್ಮ ಪತ್ನಿ ಅನುಷ್ಕಾ ಶರ್ಮಾ ನೆನಪಾಗಿದ್ದಾರೆ. ಕ್ರಿಕೆಟ್ ದಿಗ್ಗಜ ನಡುವೆಯೇ, ವೀಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾರನ್ನು ನೋಡಲು ಪ್ರಯತ್ನಿಸಿದ್ದಾರೆ.

ಅಂದ್ಹಾಗೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್​​ನ ಮೇಲಿನ ವೀಕ್ಷಕರ ಗ್ಯಾಲರಿಯಲ್ಲಿ ಅನುಷ್ಕಾ ಶರ್ಮಾ ಕೂತಿದ್ದರು. ಅದೇ ಕಾರಣಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಇಣುಕಿ ಇಣುಕಿ ನೋಡಲು ಪ್ರಯತ್ನಿಸಿದರು. ಕೊಹ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಅನುಷ್ಕಾ ಶರ್ಮಾ ಕಾಣಲಿಲ್ಲ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಅದೇ ರೀತಿ ಕೊಹ್ಲಿ ನೂರು ರನ್ ಬಾರಿಸುತ್ತಿದ್ದಂತೆಯೇ ಅನುಷ್ಕಾ ಶರ್ಮಾ ಫ್ಲೇಯಿಂಗ್ ಕಿಸ್ ಕೊಡುತ್ತಿರುವ ವಿಡಿಯೋ ಹಾಗೂ ಕೈಮುಗಿದ ವಿಡಿಯೋ ಸಹ ವೈರಲ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅನುಷ್ಕಾ ಶರ್ಮಾ ನೋಡಲು ಇಣುಕಿ ಇಣುಕಿ ಚಡಪಡಿಸಿದ ಕಿಂಗ್ ಕೊಹ್ಲಿ; ಮಜವಾಗಿದೆ ವಿಡಿಯೋ..!

https://newsfirstlive.com/wp-content/uploads/2023/11/KOHLI-3-1.jpg

Load More