ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು
ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ವಿರಾಟ್ ಕೊಹ್ಲಿ ಮುಂದೆ ಹೇಳಿದ ಸಿಎಂ.!
ಕಿವೀಸ್ ವಿರುದ್ಧದ ಪಂದ್ಯದಲ್ಲಿ 95 ರನ್ಗಳನ್ನ ಬಾರಿಸಿದ್ದ ವಿರಾಟ್ ಕೊಹ್ಲಿ
ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿಯವರ ನಿರ್ಣಾಯಕ ಆಟದಿಂದ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾದ ಗೆಲುವು ಸಾಧಿಸಿದೆ. ಓಪನರ್ ಬ್ಯಾಟ್ಸ್ಮನ್ಗಳ ಬೇಗ ಔಟ್ ಆಗಿದ್ದರಿಂದ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಿ ನಿಂತು ತಮ್ಮ ಅಮೋಘ 95 ರನ್ಗಳಿಂದ ಭಾರತವನ್ನು ಗೆಲ್ಲಿಸಿದರು. ಸದ್ಯ ವಿರಾಟ್ ಕೊಹ್ಲಿಯವರು ಹಿಮಾಚಲ ಪ್ರದೇಶದ ಸಿಎಂ ಠಾಕೂರ್ ಸುಖವಿಂದರ್ ಸಿಂಗ್ ಸುಖು ಅವರನ್ನು ಭೇಟಿ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಧರ್ಮಶಾಲಾದಲ್ಲಿ ಸಿಎಂ ಠಾಕೂರ್ ಸುಖವಿಂದರ್ ಸಿಂಗ್ ಸುಖುರನ್ನ ಭೇಟಿ ಮಾಡಿದ್ದು ಈ ವೇಳೆ ಇಬ್ಬರು ಕೆಲ ಹೊತ್ತು ಕ್ರಿಕೆಟ್ ಬಗ್ಗೆ ಕುಳಿತು ಚರ್ಚೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಕೊಹ್ಲಿಗೆ ಸಿಎಂ ಶುಭ ಕೋರಿದರು. ಅಲ್ಲದೇ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದರಿಂದ ಈ ಬಾರಿ ಭಾರತ ವಿಶ್ವಕಪ್ ಅನ್ನು ಗೆದ್ದೇ ಗೆಲ್ಲುತ್ತದೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.
ಸದ್ಯ ವರ್ಲ್ಡ್ಕಪ್ಗೆ ಆಯ್ಕೆಯಾದ ಆಟಗಾರರೆಲ್ಲ ಚೆನ್ನಾಗಿ ಆಡುತ್ತಿದ್ದರಿಂದ ಒಳ್ಳೆಯ ತಂಡವನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ವರ್ಲ್ಡ್ಕಪ್ ಅನ್ನು ಮತ್ತೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಇನ್ನು ಇದೇ ವೇಳೆ ಸಿಎಂ ಜೊತೆ ಹಿಮಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ತೇಜೇಂದ್ರ ಬಿಟ್ಟು, ಸುನಿಲ್ ಶರ್ಮಾ, ಶಾಸಕ ಸುಧೀರ್ ಶರ್ಮಾ ಇದ್ದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 274 ರನ್ ಗಳಿಸುವ ಮೂಲಕ ವಿಜಯಮಾಲೆ ಧರಿಸಿತು. ಇದು ವಿಶ್ವಕಪ್ನಲ್ಲಿ ಭಾರತದ 5ನೇ ಗೆಲುವು ಆಗಿರುವುದು ಇನ್ನೊಂದು ವಿಶೇಷ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ