ಕೆರಿಬಿಯನ್ನರ ನಾಡಿನಿಂದ ಕಿಂಗ್ ಕೊಹ್ಲಿಯ ವಿಶ್ವಕಪ್ ಅಭಿಯಾನ ಶುರು
ವಿಶ್ವಕಪ್ಗೂ ಮೊದಲೇ ಆಡೋ ಪ್ರತಿ ಪಂದ್ಯ ಕೊಹ್ಲಿಗೆ ಇಂಪಾರ್ಟೆಂಟ್
ಈ ಬಾರಿಯಾದ್ರೂ ವರ್ಲ್ಡ್ಕಪ್ ಗೆದ್ದು ದೇಶಕ್ಕೆ ಕೊಡುಗೆ ನೀಡ್ತಾರಾ..?
ಇಷ್ಟು ದಿನ ಒಂದು ಲೆಕ್ಕ. ವೆಸ್ಟ್ ಇಂಡೀಸ್ ಟೂರ್ನಿಂದ ಇನ್ನೊಂದು ಲೆಕ್ಕ. ಈ ಡೈಲಾಗ್ ಹೇಳ್ತಾ ಇರೋದು ಬೇಱರು ಅಲ್ಲ. ವಿಶ್ವ ಸಾಮ್ರಾಟ ವಿರಾಟ್ ಕೊಹ್ಲಿ. WTC ಫೈನಲ್ ಸೋಲಿನ ಬಳಿಕ ಮುಂಬರುವ ಸರಣಿಗಳನ್ನ ಫುಲ್ ಸಿರೀಯಸ್ ಆಗಿ ತೆಗೆದುಕೊಂಡಿರೋ ವಿರಾಟ್, ಪರಾಕ್ರಮ ತೋರಿಸೋಕೆ ರೆಡಿಯಾಗಿದ್ದಾರೆ. ಅಷ್ಟೇ ಅಲ್ಲ, ಟಾರ್ಗೆಟ್ ಒಂದನ್ನ ಫಿಕ್ಸ್ ಕೂಡ ಮಾಡಿದ್ದಾರೆ. ಆ ಟಾರ್ಗೆಟ್ ಏನು..?
ಕೊಹ್ಲಿ.. ಟೀಮ್ ಇಂಡಿಯಾದ ರನ್ ಮಷಿನ್. ವಿಶ್ವ ಕ್ರಿಕೆಟ್‌ನ ಚೇಸಿಂಗ್ ಮಾಸ್ಟರ್. ಬೋರ್ಗೆರತದ ಬ್ಯಾಟಿಂಗ್ ನಡೆಸೋ ಪರಾಕ್ರಮಿ. ಪಿಚ್ ಯಾವುದೇ ಆಗಲಿ ಬೌಲರ್ ಯಾರೇ ಆಗಲಿ ಎದುರಾಳಿ ಯಾರೇ ಆಗಲಿ ರನ್ ಗಳಿಸೋದೆ ಈತನ ಮೂಲ ಮಂತ್ರ. ಆದ್ರೆ ಎಂಥವರಿಗೂ ಬ್ಯಾಟ್ನಿಂದಲೇ ಟಕ್ಕರ್ ನೀಡೋ ಕಿಂಗ್ ಕೊಹ್ಲಿ, ವೆಸ್ಟ್ ಇಂಡೀಸ್ ಟೂರ್ನಲ್ಲಿ ಅಟ್ಟಹಾಸ ಮೆರೆಯೋಕೆ ಸಜ್ಜಾಗಿದ್ದಾರೆ.
WTC ಫೈನಲ್ನಲ್ಲಾದ ಮುಖಭಂಗದ ಗಾಯಕ್ಕೆ ಹತಾಶೆಗೊಂಡಿರೋ ವಿರಾಟ್, ಮುಂದಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ವೀರಾವೇಶ ಮೆರೆಯೋಕೆ ರೆಡಿಯಾಗಿದ್ದಾರೆ.
ಕೊಹ್ಲಿಯ ಏಕದಿನ ವಿಶ್ವಕಪ್ ಅಭಿಯಾನ ಶುರು..!
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನಿಂದ ಗಾಯಗೊಂಡ ಹುಲಿಯಂತಾಗಿರೋ ವಿರಾಟ್, ವೆಸ್ಟ್ ಇಂಡೀಸ್ ಟೂರ್ನಿಂದ ಏಕದಿನ ವಿಶ್ವಕಪ್ ಪ್ರಪರೇಷನ್ ನಡೆಸೋ ಪ್ಲಾನ್ನಲ್ಲಿದ್ದಾರೆ. ಹೀಗಾಗಿ ಕೆರಿಬಿಯನ್ ನಾಡಲ್ಲಿ ರಣಬೇಟೆಗಾರ ಕಿಂಗ್ ಕೊಹ್ಲಿ, ಬೇಟೆಗೆ ಸನ್ನದ್ಧರಾಗಿದ್ದಾರೆ. ಅದರಲ್ಲೂ ಸೇಮ್ ಟೂ ಸೇಮ್ ಇಂಡಿಯನ್ ಕಂಡೀಷನ್ಸ್ ಅನ್ನೇ ಹೋಲುವ ವೆಸ್ಟ್ ಇಂಡೀಸ್ ಕಂಡೀಷನ್ಸ್ನಲ್ಲಿ, ರನ್ ಸುನಾಮಿಯನ್ನೇ ಸೃಷ್ಟಿಸೋ ಲೆಕ್ಕಚಾರದಲ್ಲಿದ್ದಾರೆ. ಆ ಮೂಲಕ 2023ರ ಏಕದಿನ ವಿಶ್ವಕಪ್ ಅಭಿಯಾನವನ್ನ ಕೆರಿಬಿಯನ್ನರ ನಾಡಿನಿಂದಲೇ ಶುರು ಮಾಡ್ತಿದ್ದಾರೆ.
ಕೊಹ್ಲಿ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್ ಟೂರ್..!
ಸದ್ಯ ವಿಶ್ವಕಪ್ಗೆ ಸಜ್ಜಾಗ್ತಿರೋ ವಿರಾಟ್ ಕೊಹ್ಲಿ, ಏಕದಿನ ಫಾರ್ಮೆಟ್ ಕ್ರಿಕೆಟ್ ಆಡಿ ಬರೋಬ್ಬರಿ 3 ತಿಂಗಳೇ ಕಳೆಯುತ್ತಿದೆ. ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ, ವಿಂಡೀಸ್ ಟೂರ್ನಲ್ಲಿ 3 ಏಕದಿನ ಪಂದ್ಯಗಳು, ಏಷ್ಯಾಕಪ್ನಲ್ಲಿ ಫೈನಲ್ ಸೇರಿದಂತೆ ಒಟ್ಟು 6 ಪಂದ್ಯಗಳನ್ನಾಡಲಿರೋ ಟೀಮ್ ಇಂಡಿಯಾ, ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನ್ ಎದುರು ತಲಾ 3 ಪಂದ್ಯಗಳನ್ನಾಡಲಿದೆ. ಆ ಮೂಲಕ ಏಕದಿನ ವಿಶ್ವಕಪ್ಗೂ ಮುನ್ನ ಒಟ್ಟು 15 ಏಕದಿನ ಪಂದ್ಯಗಳನ್ನಾಡಲಿದೆ. ಹೀಗಾಗಿ ವಿಶ್ವಕಪ್ಗೂ ಮುನ್ನ ಆಡೋ ಪ್ರತಿ ಮ್ಯಾಚ್ ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವವಾಗಲಿದೆ.
ಕೊನೆ ಏಕದಿನ ವಿಶ್ವಕಪ್ ಗೆಲ್ಲುವ ಹಂಬಲ..!
2011ರ ಏಕದಿನ ವಿಶ್ವಕಪ್ ಬಳಿಕ ವಿರಾಟ್, ವಿಶ್ವಕಪ್ ಗೆದ್ದ ಮಾತೇ ಇಲ್ಲ. ಐಸಿಸಿ ಟೂರ್ನಿಗಳಲ್ಲಿ ಸೆಮೀಸ್ ಹಾಗೂ ಫೈನಲ್ಗೆ ತಲುಪಿದರೂ, ಕಿರೀಟಕ್ಕೆ ಮುತ್ತಿಡದ ಕೊರಗು, ಕೊಹ್ಲಿಗೆ ಕಾಡುತ್ತಿದೆ. ನಾಯಕನಾಗಿ ಒಂದೇ ಒಂದು ಟ್ರೋಫಿ ಗೆಲ್ಲದ ವಿರಾಟ್, ಕೊನೆ ಸಲ ಆಟಗಾರನಾಗಿ ವಿಶ್ವಕಪ್ ಗರಿಗೆ ಮುತ್ತಿಡುವ ಹಂಬಲದಲ್ಲಿದ್ದಾರೆ. ಆ ಮೂಲಕ ವಿಶ್ವಕಪ್ ಗೆಲುವಿನೊಂದಿಗೆ ಏಕದಿನ ಫಾರ್ಮೆಟ್ಗೆ ಗುಡ್ಬೈ ಹೇಳುವ ಲೆಕ್ಕಾಚಾರದಲ್ಲಿದ್ದಾರೆ.
ಟೀಕೆಗಳಿಗೆ ಬ್ಯಾಟ್ನಿಂದ ಉತ್ತರ ಕೊಡುವ ಛಲ..!
ವಿರಾಟ್ಗೆ ಇರೋದು ಜಸ್ಟ್ ವಿಶ್ವಕಪ್ ಗೆಲ್ಲಬೇಕೆಂಬ ಹಂಬಲ ಮಾತ್ರವೇ ಅಲ್ಲ. ತನ್ನ ಬ್ಯಾಟ್ನಿಂದ ರನ್ ಸುನಾಮಿ ಸೃಷ್ಟಿಸಿ ತನ್ನ ಕೈಯಿಂದಲೇ ವಿಶ್ವಕಪ್ ಗೆಲ್ಲಿಸಿ ಕೊಡಬೇಕೆಂಬ ಛಲ ಕೊಹ್ಲಿಗಿದೆ. ಆ ಮೂಲಕ ಟೀಕೆಗಳಿಗೆ ಉತ್ತರಿಸಿ ತವರಿನಲ್ಲಿ ತನ್ನ ಮೇಲಿನ ಎಕ್ಸ್ಪೆಕ್ಟೇಷನ್ಸ್ ಉಳಿಸಿಕೊಂಡು ಅಭಿಮಾನಿಗಳಿಗೆ ವಿಶ್ವಕಪ್ ಗೆಲುವಿನ ಗಿಫ್ಟ್ ನೀಡೋದೇ ವಿರಾಟ್ ಗುರಿಯಾಗಿದೆ.
ಕೆರಿಬಿಯನ್ ಸಿರೀಸ್ ಅನ್ನ ಸಿರೀಯಸ್ ಆಗಿ ತೆಗೆದುಕೊಂಡಿರೋ ವಿರಾಟ್, ಏಕದಿನ ವಿಶ್ವಕಪ್ ಅಂತ್ಯದ ತನಕ ಗಾಯಗೊಂಡ ಹುಲಿಯಂತೆ ಆರ್ಭಟಿಸೋಕೆ ರೆಡಿಯಾಗಿರೋದು ಫಿಕ್ಸ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ