ವಿರಾಟ್ ಈ ಬಾರಿ ಟಿ20 ಸರಣಿಯಲ್ಲಿ ಆಡೋದೆ ಬಿಗ್ ಕೊಶ್ಚನ್ ಮಾರ್ಕ್
ವೆಸ್ಟ್ ಇಂಡೀಸ್ ಕಂಡೀಷನ್ಸ್ ಕೂಡ ಬಹುತೇಕ ಭಾರತದಂತೆಯೇ ಇದೆ..!
ಏಕದಿನ ಸರಣಿಯಲ್ಲಿ ‘ದಡಂ ದಶಗುಣಂ’ ಗ್ಯಾರಂಟಿ, ವಿರಾಟ್ನದ್ದೇ ದರ್ಬಾರ್
ವೆಸ್ಟ್ ಇಂಡೀಸ್ ಎದುರಿನ ಸರಣಿ ಆರಂಭಕ್ಕೆ 22 ದಿನ ಬಾಕಿಯಿದೆ. ಅದಕ್ಕೂ ಮುನ್ನ ಕೆರೀಬಿಯನ್ ಪ್ರವಾಸದಲ್ಲಿ ವಿರಾಟ್ ಕಿಂಗ್ ಆಗಿ ಮೆರೆಯುತ್ತಾರಾ ಎಂಬ ಪ್ರಶ್ನೆ ಹುಟ್ಟಿದೆ. ಅದರಲ್ಲೂ ವೈಟ್ಬಾಲ್ ಫಾರ್ಮೆಟ್ನಲ್ಲಿ ಅಬ್ಬರಿಸಿರೋ ವಿರಾಟ್, ಟೆಸ್ಟ್ನಲ್ಲಿ ರಿಯಲ್ ಟೆಸ್ಟ್ ಎದುರಿಸ್ತಾರಾ ಎಂಬ ಅನುಮಾನ ಕಾಡ್ತಿದೆ.
ಕೊಹ್ಲಿ.. ಕ್ರಿಕೆಟ್ ಪ್ರಪಂಚಕ್ಕೆ ಈ ಹೆಸರಿನ ಪರಿಚಯ ಬೇಕಿಲ್ಲ. ಇಂಡಿಯಾದ ರನ್ ಮಷಿನ್, ಚೇಸಿಂಗ್ ಚಾಂಪಿಯನ್, ಕಿಂಗ್ ಕೊಹ್ಲಿ. ಹೀಗೆ ಎಷ್ಟು ಹೆಸರುಗಳಿಂದ ಕರೆದರೂ, ಸಾಲಲ್ಲ. ಯಾಕಂದ್ರೆ, ದಿನ ಕಳೆದಂತೆ ಪರ್ವತಗಳು ಕರಗಿದ್ರೂ, ವಿರಾಟ್ ಕಟ್ಟಿದ ರನ್ ಶಿಖರ ಮಾತ್ರ ಕರಗುವುದಿಲ್ಲ.
ಕೊಹ್ಲಿಗೆ ವಯಸ್ಸಾಗುತ್ತಿದ್ದರೂ ಅವರಲ್ಲಿರುವ ಆಟ, ಛಲ ಮಾತ್ರ ಇಂದಿಗೂ ತಗ್ಗಿಲ್ಲ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಆದ್ರೂ, WTC ಫೈನಲ್ ಸೋಲಿನ ಬಳಿಕ ಕಮ್ಬ್ಯಾಕ್ ಮಾಡೋಕೆ ರೆಡಿಯಾಗಿರೋ ಕೊಹ್ಲಿ, ಮುಂಬರೋ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿರಾಟ ರೂಪ ತೋರಿಸ್ತಾರಾ.? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.
ಟೆಸ್ಟ್ನಲ್ಲಿ ನಡೆಯುತ್ತಾ ವಿರಾಟ್ ದರ್ಬಾರ್..?
WTC ಫೈನಲ್ನಲ್ಲಿ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿರೋ ವಿರಾಟ್, ಮುಂದಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ಅಬ್ಬರಿಸಬೇಕಾದ ಅನಿವಾರ್ಯತೆ ಇದೆ. ಅಷ್ಟೇ ಅಲ್ಲ, ಐಪಿಎಲ್ಗೂ ಮುನ್ನ ಆಸಿಸ್ ಎದುರಿನ ಟೆಸ್ಟ್ ಸರಣಿಯಲ್ಲಿ ತೋರಿದ್ದ ಟೆಂಪರ್ಮೆಂಟ್, ಈಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮುಂದುವರಿಸಬೇಕಿದೆ. ಕೆರಿಬಿಯನ್ನರನ್ನ ಬೇಟೆಯಾಡೋ ಕನಸು ಕಾಣ್ತಿರೋ ವಿರಾಟ್, ಈ ಸಲ ಇಂಡೀಸ್ ಪ್ರವಾಸದಲ್ಲಿ ದರ್ಬಾರ್ ನಡೆಸೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ, ಅಷ್ಟು ಸುಲಭದ ಮಾತಲ್ಲ..
ವಿಂಡೀಸ್ ಪ್ರವಾಸದ ಟೆಸ್ಟ್ನಲ್ಲಿ ವಿರಾಟ್
ವೆಸ್ಟ್ ಇಂಡೀಸ್ ನೆಲದಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿರೋ ವಿರಾಟ್ 463 ರನ್ ಸಿಡಿಸಿದ್ದಾರೆ. 2 ಅರ್ಧಶತಕ ದಾಖಲಿಸಿರೋ ವಿರಾಟ್, 1 ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದ್ರೆ, ಸರಾಸರಿ ಕೇವಲ 35.61ರ ಆಗಿದೆ.
ವೆಸ್ಟ್ ಇಂಡೀಸ್ ಎದುರು ಡಬಲ್ ಸೆಂಚೂರಿ ಬಾರಿಸಿದ ದಾಖಲೆ ವಿರಾಟ್ ಬೆನ್ನಿಗಿದೆ. ಹಾಗಿದ್ರೂ, 2 ಪಂದ್ಯಗಳ ಟೆಸ್ಟ್ ಸರಣಿ ನಿಜಕ್ಕೂ ಅಗ್ನಿಪರೀಕ್ಷೆಯಾಗಿದೆ. ಹೀಗಾಗಿ ಟೆಸ್ಟ್ನಲ್ಲಿ ಯಾವ ರೀತಿಯ ಪರ್ಪಾಮೆನ್ಸ್ ಹೊರ ಹಾಕ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಏಕದಿನ ಸರಣಿಯಲ್ಲಿ ದಡಂ ದಶಗುಣಂ ಗ್ಯಾರಂಟಿ..!
ಟೆಸ್ಟ್ ಫಾರ್ಮೆಟ್ನಲ್ಲಿ ಹಿಂದುಳಿದರೂ, ಏಕದಿನ ಸರಣಿಯಲ್ಲಂತೂ ವಿರಾಟ್, ವೀರಾವೇಶಕ್ಕೆ ಬ್ರೇಕ್ ಹಾಕೋರು ಯಾರೂ ಇಲ್ಲ. ಯಾಕಂದ್ರೆ, ವೈಟ್ಬಾಲ್ ಫಾರ್ಮೆಟ್ನಲ್ಲಿ ಅಬ್ಬರಿಸಿ ಬೊಬ್ಬೆರೆಯುತ್ತಿರೋ ಶತಕಗಳ ಸರದಾರ, ಕೆರಿಬಿಯನ್ನರ ನಾಡಲ್ಲೂ ಆರ್ಭಟಿಸೋದು ಗ್ಯಾರಂಟಿ. ಈ ಹಿಂದಿನ ಸಾಲಿಡ್ ಟ್ರ್ಯಾಕ್ ರೆಕಾರ್ಡೇ ಅದನ್ನ ರಿವೀಲ್ ಮಾಡಿದೆ.
ಕೆರಿಬಿಯನ್ ನಾಡಲ್ಲಿ ಕೊಹ್ಲಿ ODI ಸಾಧನೆ
ಕೆರಿಬಿಯನ್ ನಾಡಲ್ಲಿ 18 ಏಕದಿನ ಪಂದ್ಯಗಳನ್ನಾಡಿರೋ ವಿರಾಟ್ 825 ರನ್ ಸಿಡಿಸಿದ್ದಾರೆ. 58.92ರ ಸರಾಸರಿಯಲ್ಲಿ ಬ್ಯಾಟ್ ಬೀಸಿರೋ ಕೊಹ್ಲಿ, 3 ಅರ್ಧಶತಕ ಸಿಡಿಸಿದ್ರೆ, ನಾಲ್ಕು ಬಾರಿ ಮೂರಂಕಿ ದಾಟಿದ್ದಾರೆ. ಹೀಗಾಗಿ ಏಕದಿನ ಸರಣಿಯಲ್ಲಿ ಇಂಡೀಸ್ಗೆ ದಡಂ ದಶಗುಣಂ ಗ್ಯಾರಂಟಿ.
ಟೆಸ್ಟ್ ಅವರೇಜ್.. ODI ಸೂಪರ್.. ಟಿ20 ಲೆಕ್ಕ ಹೇಗಿದೆ..?
ವೆಸ್ಟ್ ಇಂಡೀಸ್ ನೆಲದಲ್ಲಿ ಟೆಸ್ಟ್ ಫಾರ್ಮೆಟ್ನಲ್ಲಿ ಆವರೇಜ್ ಪರ್ಫಾಮೆನ್ಸ್ ನೀಡಿರೋ ಕೊಹ್ಲಿ, ಏಕದಿನದಲ್ಲಂತೂ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದಾರೆ. ಏಕದಿನ ಫಾರ್ಮೆಟ್ನಲ್ಲಿ ಸಿಡಿದಂತೆಯೇ ಟಿ20 ಫಾರ್ಮೆಟ್ನಲ್ಲೂ ವಿರಾಟ್, ವೀರಾವೇಶ ತೋರಿದ್ದಾರೆ. ವೆಸ್ಟ್ ಇಂಡೀಸ್ ನೆಲದಲ್ಲಿ ಆಡಿರೋ 3 ಟಿ20ಗಳಿಂದ 142ರ ಸ್ಟ್ರೈಕ್ರೇಟ್ನಲ್ಲಿ 112 ರನ್ ಗಳಿಸಿದ್ದಾರೆ. ಆದ್ರೆ, ವಿರಾಟ್ ಈ ಬಾರಿ ಟಿ20 ಸರಣಿಯಲ್ಲಿ ಆಡೋದೆ ಬಿಗ್ ಕೊಶ್ಚನ್ ಮಾರ್ಕ್ ಆಗಿದೆ.
ಈ ಸಲ ಕೆರಿಬಿಯನ್ ನಾಡಲ್ಲಿ ನಡೆಯುತ್ತಾ ಕೊಹ್ಲಿ ಆಟ..?
ಇಷ್ಟೆಲ್ಲ ಅಂಕಿಅಂಶಗಳನ್ನ ನೋಡಿದ್ಮೇಲೆ ವಿರಾಟ್ ಇಂಡೀಸ್ ನೆಲದಲ್ಲಿ ಅಬ್ಬರಿಸ್ತಾರಾ ಅಂದ್ರೆ, ಹೌದು ಅಂತಾನೇ ಹೇಳಬೇಕು. ಇತ್ತಿಚೆಗಷ್ಟೇ ಐಪಿಎಲ್ನಲ್ಲಿ ಅಬ್ಬರಿಸಿರೋ ವಿರಾಟ್, ರೆಡ್ ಹಾಟ್ ಫಾರ್ಮ್ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ಕಂಡೀಷನ್ಸ್ ಕೂಡ ಬಹುತೇಕ ಭಾರತದಂತೆಯೇ ಇದೆ. ಆ ನೆಲದಲ್ಲಿ ಬೌಲರ್ಗಳನ್ನ ಬೆಂಡೆತ್ತಿ, ರನ್ ಸುರಿಮಳೆ ಸುರಿಸುವ ತಾಕತ್ತಿದೆ. ಆದ್ರೆ, ವೈಟ್ಬಾಲ್ನಲ್ಲಿ ಸಿಕ್ಕ ಸಕ್ಸಸ್ ರೆಡ್ ಬಾಲ್ನಲ್ಲಿ ಮಾಯವಾಗಿದೆ. ಹೀಗಾಗಿ 2 ಪಂದ್ಯಗಳ ಟೆಸ್ಟ್ ಸರಣಿ ಕೊಹ್ಲಿ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ