/newsfirstlive-kannada/media/post_attachments/wp-content/uploads/2023/11/Kohli_Century_1-1.jpg)
ಸದ್ಯ ಮುಂಬೈನ ವಾಂಖೆಡೆ ಇಂಟರ್​​ ನ್ಯಾಷನಲ್​​ ಕ್ರಿಕೆಟ್​​​​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್​​ ಮಹಾ ಸಮರದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್​ ತಂಡಗಳು ಮುಖಾಮುಖಿ ಆಗಿವೆ.
ಇಂದು ಕಿಂಗ್​​ ಕೊಹ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​​ನಲ್ಲಿ ತನ್ನ 50ನೇ ಶತಕ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾದ ದಿಗ್ಗಜ ಸಚಿನ್​ ತೆಂಡೂಲ್ಕರ್​​​ ದಾಖಲೆಯನ್ನು ಮುರಿದರು. ಇನ್ನಿಂಗ್ಸ್​ ಬಳಿಕ ಮಾತಾಡಿದ ವಿರಾಟ್​ ಕೊಹ್ಲಿ, 50ನೇ ಶತಕದ ಬಗ್ಗೆ ನನಗೆ ಹೆಮ್ಮೆ ಇದೆ. ಇದು ನನ್ನ ಜೀವನದ ದೊಡ್ಡ ಮೈಲ್​ಸ್ಟೋನ್​ ಎಂದರು.
50ನೇ ಶತಕಕ್ಕೆ ನನ್ನ ಹೀರೋ ಸಚಿನ್​ ಪಾಜಿ ಸಾಕ್ಷಿಯಾಗಿದ್ದರು. ನನ್ನ ಲೈಫ್​ ಪಾರ್ಟ್ನರ್​​​ ಅನುಷ್ಕಾ ಕೂಡ ಇದ್ದರು. ಈ ಸಂದರ್ಭವನ್ನು ನನ್ನಿಂದ ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಮ್ಮ ಟಾರ್ಗೆಟ್​​ 340 ರನ್​​​ ಇತ್ತು. ಆದರೆ, ನಾವು 3 ರನ್​​ ಕಡಿಮೆ 400 ರನ್​ ಟಾರ್ಗೆಟ್​ ಕೊಟ್ಟಿದ್ದೇವೆ. ಇದಕ್ಕೆ ಕಾರಣ ಶ್ರೇಯಸ್​ ಅಯ್ಯರ್​​, ಗಿಲ್​​ ಮತ್ತು ಕ್ಯಾಪ್ಟನ್​ ರೋಹಿತ್​ ಶರ್ಮಾ. ಅದರಲ್ಲೂ ಕೆ.ಎಲ್​ ರಾಹುಲ್​ ಫಿನಿಶಿಂಗ್​ ಮಾತ್ರ ಸಖತ್​ ಆಗಿತ್ತು. ಇಷ್ಟು ದೊಡ್ಡ ಮೊತ್ತ ಪೇರಿಸಲು ಇಡೀ ತಂಡ ಕಾರಣ ಎಂದರು ಕೊಹ್ಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us