ಹೆನ್ರಿಚ್ ಕ್ಲಾಸೆನ್ ಸೂಪರ್ ಡೂಪರ್ ಸೆಂಚುರಿ
ಹೈದ್ರಾಬಾದ್ಗೆ ಗುಮ್ಮಿದ ಭಲೇ ಜೋಡೆತ್ತು..!
ಆರ್ಸಿಬಿ ಪ್ಲೇ ಆಫ್ ಆಸೆ ಇನ್ನೂ ಜೀವಂತ
ಡು ಆರ್ ಡೈ ಬ್ಯಾಟಲ್ನಲ್ಲಿ ಆರ್ಸಿಬಿ ತಂಡ ಹೈದ್ರಾಬಾದ್ಗೆ ಶಾಕ್ ನೀಡಿದೆ. ಕಿಂಗ್ ಕೊಹ್ಲಿ ಸೆಂಚುರಿ ರೌದ್ರವಾತಾರಕ್ಕೆ ಆರೆಂಜ್ ಆರ್ಮಿ ಧೂಳೀಪಟವಾಯ್ತು..ಆರ್ಸಿಬಿಯ ಪ್ಲೇ ಆಫ್ ಎಂಟ್ರಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದ್ದು, ಸಂಡೇ ವಾರ್ ಕದನ ಕುತೂಹಲ ಕೆರಳಿಸಿದೆ.
ಹೆನ್ರಿಚ್ ಕ್ಲಾಸೆನ್ ಸೂಪರ್ ಡೂಪರ್ ಸೆಂಚುರಿ
ತವರಿನ ಅಂಗಳದಲ್ಲಿ ಟಾಸ್ ಸೋತ ಹೈದ್ರಾಬಾದ್ ತಂಡ ಮೊದಲು ಬ್ಯಾಟಿಂಗ್ ನಡೆಸ್ತು. ಆರೆಂಜ್ ಆರ್ಮಿಗೆ ಟಾಪ್ ಬ್ಯಾಟ್ಸ್ಮನ್ಗಳು ಕೈಕೊಟ್ರು. ಒಂದೆಡೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಮುಗ್ಗರಿಸಿದ್ರೆ ಮತ್ತೊಂದೆಡೆ ಹೆನ್ರಿಚ್ ಕ್ಲಾಸೆನ್ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ರು. 51 ಎಸೆತಗಳಲ್ಲಿ 104 ರನ್ ಚಚ್ಚಿದ್ರು. ಪರಿಣಾಮ ಹೈದ್ರಾಬಾದ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಕಲೆ ಹಾಕ್ತು.
ಹೈದ್ರಾಬಾದ್ಗೆ ಗುಮ್ಮಿದ ಭಲೇ ಜೋಡೆತ್ತು..!
187 ರನ್ ಟಾರ್ಗೆಟ್ ಬೆನ್ನಟ್ಟಿದ್ದಾಗ ಆರ್ಸಿಬಿ ಫ್ಯಾನ್ಸ್ ಆತಂಕಕ್ಕೊಳಗಾಗಿದ್ರು. ಆದ್ರೆ ಯಾವಾಗ ಕಿಂಗ್ ಕೊಹ್ಲಿ ಬೌಂಡ್ರಿಯಿಂದ ಇನ್ನಿಂಗ್ಸ್ ಆರಂಭಿಸಿದ್ರೋ ಆಗಲೇ ಗೆಲುವಿನ ಆಸೆ ಚಿಗುರಿತು. ಅದ್ರಲ್ಲೂ ಕೊಹ್ಲಿ-ಡುಪ್ಲೆಸಿ ಜತೆಗೂಡಿ ಕೊಟ್ಟ ಒಂದೊಂದು ಏಟು ಹೈದ್ರಾಬಾದ್ ಅನ್ನ ಮುಟ್ಟಿನೋಡಿಕೊಳ್ಳುವಂತೆ ಮಾಡಿತು. ಜಿದ್ದಿಗೆ ಬಿದ್ದವರಂತೆ ಎದುರಾಳಿ ಬೌಲರ್ಸ್ ಬೆಂಡೆತ್ತಿದ ಈ ಸೂಪರ್ ಸ್ಟಾರ್ ಜೋಡಿ ಮೊದಲ ವಿಕೆಟ್ಗೆ ಅತ್ಯಾಮೋಘ 172 ರನ್ ಕಲೆಹಾಕಿದ್ರು.
ಸ್ಫೋಟಕ ಶತಕ ಸಿಡಿಸಿ ವಿಜೃಂಭಿಸಿದ ವಿರಾಟ್
ಹೈದ್ರಾಬಾದ್ ಅಂಗಳದಲ್ಲಿ ನಿನ್ನೆ ನಡೆದಿದ್ದು ನಿಜಕ್ಕೂ ಕಿಂಗ್ ಕೊಹ್ಲಿ ರನ್ ವೈಭವ..ಎದುರಾಳಿ ಬೌಲರ್ಗಳನ್ನ ಮನಬಂದಂತೆ ದಂಡಿಸಿದ ರನ್ ಮಶೀನ್ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿಸಿ ಬಿಟ್ರು. ನರಸಿಂಹನ ಉಗ್ರರೂಪವನ್ನೇ ತಾಳಿದ ಕಿಂಗ್ ಕೊಹ್ಲಿ 63 ಎಸೆತಗಳಲ್ಲಿ ಸ್ಫೋಟಕ ಸೆಂಚುರಿ ಬಾರಿಸಿ ವಿಜೃಂಭಿಸಿದ್ರು.. ಆ ಮೂಲಕ ಐಪಿಎಲ್ನಲ್ಲಿ 6ನೇ ಶತಕ ದಾಖಲಿಸಿದ್ರು.
ಇನ್ನೊಂದೆಡೆ ಕಿಂಗ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಕ್ಯಾಪ್ಟನ್ ಡುಪ್ಲೆಸಿ ಅರ್ಧಶತಕ ಬಾರಿಸಿ ಶೈನ್ ಆದರು. ಇಬ್ಬರ ಆರ್ಭಟದ ಪರಿಣಾಮ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್ಗಳ ಪ್ರಚಂಡ ಗೆಲುವು ದಾಖಲಿಸ್ತು.
ಆರ್ಸಿಬಿ ಪ್ಲೇ ಆಫ್ ಆಸೆ ಜೀವಂತ
ಹೈದ್ರಾಬಾದ್ ವಿರುದ್ಧ ಪ್ರಚಂಡ ಗೆಲುವು ದಾಖಲಿಸುವ ಮೂಲಕ ರೆಡ್ ಆರ್ಮ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ. ಲೀಗ್ನ ಕೊನೆ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಸಂಡೇ ವಾರ್ನಲ್ಲಿ ಬಲಿಷ್ಠ ಹಾರ್ದಿಕ್ ಬಳಗವನ್ನು ಸದೆಬಡಿದ್ರೆ ಪ್ಲೇ ಆಫ್ಗೆ ಎಂಟ್ರಿಕೊಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್