/newsfirstlive-kannada/media/post_attachments/wp-content/uploads/2024/11/VIRAT-KOHLI-2.jpg)
ಇಂಡೋ - ಆಸಿಸ್​ ಮೊದಲ ಟೆಸ್ಟ್​ ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ತವರಿನಲ್ಲಿ ಗೆಲುವಿನ ಆರಂಭ ಮಾಡಲು ಸಜ್ಜಾಗಿರೋ ಆಸಿಸ್​ ಯುದ್ಧಕ್ಕೆ ರಣತಂತ್ರಗಳನ್ನ ಹೆಣೆಯುತ್ತಿದೆ. ಹೋಮ್​ ಅಡ್ವಾಂಟೇಜ್​ ಹೊಂದಿರೋ ಆಸಿಸ್​, ಟೀಮ್​ ಇಂಡಿಯಾನ ಸುಲಭಕ್ಕೆ ಟ್ಯಾಕಲ್​ ಮಾಡಲು ಸಜ್ಜಾಗಿದೆ. ಆದ್ರೆ, ಕಿಂಗ್​ ಕೊಹ್ಲಿಯನ್ನ ಕಟ್ಟಿಹಾಕೋದೆ ದೊಡ್ಡ ಪ್ರಶ್ನೆಯಾಗಿ ಕಾಡ್ತಿದೆ. ಕೊಹ್ಲಿ ತಂಟೆಗೆ ಹೋಗಲ್ಲ ಅಂತಿದ್ದಾರೆ ಆಸಿಸ್​ ಪ್ಲೇಯರ್ಸ್​!
ಭಾರತ VS ಆಸ್ಟ್ರೇಲಿಯಾ. ಕ್ರಿಕೆಟ್ ಲೋಕದ ಮದಗಜಗಳ ನಡುವಿನ ಕಾದಾಟಕ್ಕೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಪ್ರತಿಷ್ಠೆಯ ಯುದ್ಧಕ್ಕೆ ಉಭಯ ತಂಡಗಳ ತಯಾರಿ ಜೋರಾಗಿದೆ. ಸದ್ಯಕ್ಕಂತೂ ಟೀಮ್​ ಇಂಡಿಯಾಗಿಂತ ಹೋಮ್ ಅಡ್ವಾಂಟೇಜ್​ ಹೊಂದಿರುವ ಆಸ್ಟ್ರೇಲಿಯಾ ಸರಣಿ ಗೆಲ್ಲೋ ಹಾಟ್​ ಫೇವರಿಟ್​ ಎನಿಸಿದೆ. ತವರಿನಲ್ಲಿ ಟೀಮ್​ ಇಂಡಿಯಾವನ್ನ ಕಟ್ಟಿ ಹಾಕಲು ಪೇಸ್​ & ಬೌನ್ಸ್​ನ ವ್ಯೂಹವನ್ನ ರಚಿಸಿದೆ. ಎಲ್ಲಾ ತಯಾರಿ ನಡೆಸಿದ್ರೂ ಕಾಂಗರೂಗಳಿಗೆ ಒಬ್ಬನ ಭಯ ಕಾಡ್ತಿದೆ. ಆತನೇ ಕಿಂಗ್​​ ಕೊಹ್ಲಿ.
/newsfirstlive-kannada/media/post_attachments/wp-content/uploads/2024/10/Virat-Kohli-Fifty.jpg)
ವಿರಾಟ್​ ಕೊಹ್ಲಿ, ಈ ಹೆಸರು ಕೇಳಿದ್ರೆನೇ ಆಸ್ಟ್ರೇಲಿಯಾ ತಂಡದ ಹಾಲಿ ಬೌಲರ್ಸ್​ ಮಾತ್ರವಲ್ಲ. ಕಳೆದೊಂದು ದಶಕದಿಂದ ತಂಡಕ್ಕೆ ಬಂದು ಹೋಗಿರೋ ಬೌಲರ್​​ಗಳಿಗೆ ಈಗಲೂ ನಡುಕ ಶುರುವಾಗುತ್ತೆ. ವಿಶ್ವವೇ ಆಸ್ಟ್ರೇಲಿಯಾ ಬೌಲಿಂಗ್​ ಅಟ್ಯಾಕ್​ನ ಮಾರಕ ಬೌಲರ್ಸ್​ ಎಂದೇ ಕರೆದಿತ್ತು. ಈಗಲೂ ಕರೆಯುತ್ತೆ ಕೂಡ.! ಆದ್ರೆ, ಆ ಮಾರಕ ಬೌಲರ್​ಗಳು ಕೊಹ್ಲಿ ಮುಂದೆ ಏನೂ ಅಲ್ಲ, ಮೂರೂ ಫಾರ್ಮೆಟ್​ನಲ್ಲಿ ಬಾರಿಸಿ ಬೆಂಡೆತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/11/VIRAT-KOHLI-1.jpg)
ಸಾಕಪ್ಪಾ ಸಾಕು, ಕೊಹ್ಲಿ ತಂಟೆಗೆ ಮಾತ್ರ ಹೋಗಲ್ಲ..!
ಸ್ಲೆಡ್ಜಿಂಗ್​ ಅಂದ್ರೆ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ ಅಂದ್ರೆ ಸ್ಲೆಡ್ಜಿಂಗ್​. ಅದರಲ್ಲೂ ಅವರದ್ದೇ ನೆಲ ಆದರಂತೂ ಮುಗೀತು. ಎದುರಾಳಿಗಳನ್ನ ಬಾಲ್​ಗಿಂತ ಹೆಚ್ಚು ಮಾತಿನ ಬಾಣದಿಂದಲೇ ಮುಗಿಸಿಬಿಡ್ತಾರೆ. ಇಂತಾ ಆಸಿಸ್​ ಸ್ಲೆಡ್ಜಿಂಗ್​ಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದು, ವಿರಾಟ್​.! ವಿರಾಟ್​ ಕೊಹ್ಲಿ ಕೆಣಕಿದಾಗಲ್ಲಾ ಉಗ್ರವತಾರದ ದರ್ಶನವಾಗಿದೆ. ಹೀಗಾಗಿಯೇ ಈ ಬಾರಿ ಕೊಹ್ಲಿ ತಂಟೆಗೆ ಹೋಗದೇ ಇರೋ ಬೆಸ್ಟ್​ ಅಂತಿದ್ದಾರೆ. ಆಸಿಸ್​ ಪ್ಲೇಯರ್ಸ್​​.!
/newsfirstlive-kannada/media/post_attachments/wp-content/uploads/2024/11/VIRAT-KOHLI.jpg)
ಆಸ್ಟ್ರೇಲಿಯಾ ಕಿಂಗ್​ ಕೊಹ್ಲಿಯ ‘ಟೆರಿಟರಿ’.!
VO: ಭಾರತದಲ್ಲಿ ಮಾತ್ರವಲ್ಲ, ಎಲ್ಲರೂ, ಏಷ್ಯನ್​ ಬ್ಯಾಟರ್ಸ್​ಗೆ ಬ್ಯಾಟಿಂಗ್​ ಮಾಡೋಕೆ ಟಫ್​ ಟ್ರ್ಯಾಕ್​ಗಳು ಎಂದು ಕರೆಯೋ ಆಸ್ಟ್ರೇಲಿಯಾದಲ್ಲೂ ಕಿಂಗ್​ ಕೊಹ್ಲಿಯದ್ದೇ ದರ್ಬಾರ್​.! ಟೆಸ್ಟ್​ ಕ್ರಿಕೆಟ್​ನಲ್ಲಂತೂ ಕಾಂಗರೂ ನಾಡಲ್ಲಿ ಕೆರಳಿ ನಿಂತು ಸೂಪರ್ಬ್​ ಪರ್ಫಾಮೆನ್ಸ್​ ನೀಡಿದ್ದಾರೆ. ಕಳೆದ 2 ಸರಣಿಗಳಿಂದ ಕೊಹ್ಲಿ ರನ್​ಗಳಿಸದೇ ಇರಬಹುದು. ಹಾಗಂತ ಆಸ್ಟ್ರೇಲಿಯಾ ನಗ್ಲೇಟ್​ ಮಾಡುವಂತಿಲ್ಲ. ಯಾಕಂದ್ರೆ ಇದು ಕೊಹ್ಲಿಯ ಟೆರಿಟರಿ.
/newsfirstlive-kannada/media/post_attachments/wp-content/uploads/2023/07/RAVI_SHASTRI_INDIA.jpg)
ಕಾಂಗರೂಗಳಿಗೆ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ವಾರ್ನಿಂಗ್.!
ಅಂದ್ಹಾಗೆ ಕೊಹ್ಲಿಯ ಟೆರಿಟರಿ ಅನ್ನೋ ಮಾತನ್ನ ಹೇಳಿರೋದು ಟೀಮ್​ ಇಂಡಿಯಾ ಮಾಜಿ ಕೋಚ್​ ರವಿ ಶಾಸ್ತ್ರಿ.! ಸರಣಿ ಆರಂಭಕ್ಕೂ ಮುನ್ನವೇ ಮಾತನಾಡಿರೋ ಶಾಸ್ತ್ರಿ, ಇದು ಕೊಹ್ಲಿ ತಮ್ಮ ಸಾಮ್ರಾಜ್ಯಕ್ಕೆ ವಾಪಾಸ್ಸಾಗಿದ್ದಾರೆ. ಇಷ್ಟನ್ನ ಮಾತ್ರ ಹೇಳೋಕೆ ಇಷ್ಟ ಪಡ್ತೀನಿ ಅನ್ನೋ 2 ಲೈನ್​ಗಳ ಸಂದೇಶವನ್ನ ಆಸ್ಟ್ರೇಲಿಯಾಗೆ ಕಳುಹಿಸಿದ್ದಾರೆ. ರವಿ ಶಾಸ್ತ್ರಿ ಹೇಳಿದಂತೆ ಕಾಂಗರೂ ನಾಡು ಕೊಹ್ಲಿಯ ಟೆರಿಟರಿಯೇ. ಆಸಿಸ್​​ ಕಂಡಿಷನ್​​ಗಳಲ್ಲಿ ಘಟಾನುಘಟಿ ಬ್ಯಾಟ್ಸ್​ಮನ್​ಗಳೇ ರನ್​ಗಳಿಕೆಗೆ ತಿಣುಕಾಡಿದ್ರೆ, ಕೊಹ್ಲಿ ಬರೋಬ್ಬರಿ 54.08ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿದ್ದಾರೆ. ಇದಕ್ಕಿಂತ ಬೇಕಾ.?
/newsfirstlive-kannada/media/post_attachments/wp-content/uploads/2024/11/michael-clarke.jpg)
ಕೊಹ್ಲಿ ರನ್​ ಹೊಡೆದರೆ ಭಾರತಕ್ಕೆ ಸರಣಿ ಫಿಕ್ಸ್.!
ಯಾರೋ ಅಲ್ಲ, ಇದೇ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್​ ಕ್ಲಾರ್ಕ್​ ನುಡಿದಿರೋ ಭವಿಷ್ಯವಿದು. ಭಾರತ ಗೆಲ್ಲಬೇಕಂದ್ರೆ ಕೊಹ್ಲಿ ರನ್​ಗಳಿಸಬೇಕು. ಇಲ್ಲದಿದ್ರೆ ಆಸಿಸ್​ಗೆ ಸರಣಿ ಅಂದಿದ್ದಾರೆ ಕ್ಲಾರ್ಕ್​.!ನಾನು 5-0 ಅಂತ ಹೇಳಲ್ಲ. ಆಸ್ಟ್ರೇಲಿಯಾ 3-2 ಅಂತರದಲ್ಲಿ ಗೆಲ್ಲುತ್ತೆ. ಭಾರತ ತಂಡ ಏನಾದ್ರೂ ಗೆಲ್ಲಬೇಕು ಅಂದ್ರೆ, ವಿರಾಟ್​ ಕೊಹ್ಲಿ ಅತಿ ಹೆಚ್ಚು ರನ್​ಗಳಿಸಬೇಕು. ರಿಷಭ್​ ಪಂತ್​, ಕೊಹ್ಲಿ ಹಿಂದೆ ಇರ್ತಾರೆ ಅಂತ ಮೈಕಲ್​ ಕ್ಲಾರ್ಕ್​ ಹೇಳಿದ್ದಾರೆ
ಪರ್ತ್​​ನಲ್ಲಿ ಕಿಂಗ್​ ಕೊಹ್ಲಿಯ ಐಕಾನಿಕ್​ ಸೆಂಚುರಿ.!
ಇಂಡೋ-ಆಸಿಸ್​​ ನಡುವಿನ ಮೊದಲ ಬ್ಯಾಟಲ್​ ಸಜ್ಜಾಗಿರೋ ಪರ್ತ್​​ ಕೊಹ್ಲಿಗೆ ವೆರಿ ವೆರಿ ಸ್ಪೆಷಲ್​. ಈ ಮೈದಾನದಲ್ಲಿ 70ರ ರನ್​ಗಳಿಕೆಯ ಸರಾಸರಿ ಹೊಂದಿರೋ ಕೊಹ್ಲಿ, ರನ್​ ಕೊಳ್ಳೆ ಹೊಡೆದಿದ್ದಾರೆ. ಅದ್ರಲ್ಲೂ, 2018ರ ಪ್ರವಾಸದಲ್ಲಿ ಸಿಡಿಸಿದ ಸೆಂಚುರಿ ಹಾಗೂ ಸೆಂಚುರಿ ನಂತರದ ಸೆಲಬ್ರೇಷನ್​ ಕೊಹ್ಲಿಯ ಗತ್ತಿಗೆ ಸಾಕ್ಷಿ.!
ಇದೀಗ ಈ ಬಾರಿಯ ಇಂಡೋ-ಆಸಿಸ್ ಟೆಸ್ಟ್​ ಸರಣಿಯೂ ಇದೇ ಪರ್ತ್​​ ಮೈದಾನದಿಂದಲೇ ಆರಂಭವಾಗಲಿದೆ. ಕಳೆದ ಕೆಲ ದಿನಗಳಿಂದ ಪರ್ತ್​ನಲ್ಲಿ ಬೀಡುಬಿಟ್ಟಿರೋ ಕೊಹ್ಲಿ, ಭರ್ಜರಿ ಅಭ್ಯಾಸ ನಡೆಸಿ ಯುದ್ಧಕ್ಕೆ ಸಜ್ಜಾಗಿದ್ದಾರೆ. ಆಸಿಸ್​ಗೂ ಕೊಹ್ಲಿಯ ಭಯ ಕಾಡ್ತಿದೆ. ಕಳಪೆ ಫಾರ್ಮ್​ ಸುಳಿಗೆ ಸಿಲುಕಿರೋ ಕೊಹ್ಲಿ, ಕಾಂಗರೂ ನಾಡಲ್ಲಿ ಕಮ್​​ಬ್ಯಾಕ್​ ಮಾಡಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us