newsfirstkannada.com

ಕಿಂಗ್​ ಕೊಹ್ಲಿಯ ಕಮಿಟ್​ಮೆಂಟ್ಸ್​​ಗೆ ಒಂದು ಸಲಾಂ.. ಚಿನ್ನಸ್ವಾಮಿ ನೆಟ್ಸ್​ನಲ್ಲಿ ವಿರಾಟ್ ಅಭ್ಯಾಸ

Share :

09-11-2023

    ರನ್​ಮಷೀನ್​ ಕೊಹ್ಲಿಗೆ ತೀರದ ರನ್​ ದಾಹ.!

    ವಿರಾಟ್​ ಕೊಹ್ಲಿ ಅಭ್ಯಾಸ ಹಿಂದೆದೆ ದೊಡ್ಡ ಗುರಿ

    ನೋ ರೆಸ್ಟ್​.. ಅಭ್ಯಾಸವೇ ಫಸ್ಟ್​ ಅನ್ನೋ ವಿರಾಟ್​​

ಸೌತ್​ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ ಟೀಮ್​ ಇಂಡಿಯಾ ಬೆಂಗಳೂರಿಗೆ ಬಂದಿಳಿದು ಎರಡು ದಿನ ಆಯ್ತು. ಸತತ ಕ್ರಿಕೆಟ್​ನಿಂದ ಬಳಲಿದ್ದ ಆಟಗಾರರು ವಿಶ್ರಾಂತಿ ಮೊರೆ ಹೋಗಿದ್ದಾರೆ. ಆದರೆ, ಒಬ್ಬನನ್ನ ಬಿಟ್ಟು. ಈತ ಬೆಂಗಳೂರಿಗೂ ಎಲ್ಲರಿಗಿಂತ ಮುಂಚೆ ಬಂದಿದ್ದಾನೆ. ಅಭ್ಯಾಸದ ಅಖಾಡಕ್ಕೂ ಮೊದಲೇ ಧುಮುಕಿದ್ದಾನೆ. ಕಮಿಟ್​ಮೆಂಟ್​ ಅಂದ್ರೆ ಇದು.

ಪ್ರಯತ್ನದಿಂದ ಪರಿಪೂರ್ಣತೆ ಸಾಧ್ಯತೆ ಅನ್ನೋ ಮಾತಿಗೆ ಕಿಂಗ್​ ಕೊಹ್ಲಿಯೇ ಬ್ರಾಂಡ್​ ಅಂಬಾಸಿಡರ್​. ಕಮಿಟ್​ಮೆಂಟ್​​, ಡೆಡಿಕೇಶನ್​, ಡಿಟರ್ಮಿನೇಷನ್​ಗೆ ಸಲಾಂ ಅನ್ನಲೇಬೇಕು.

ಕಮಿಟ್​ಮೆಂಟ್​ ಅಂದ್ರೆ ಕಮಿಟ್​ಮೆಂಟ್​.. ನೋ ಕಾಂಪ್ರಮೈಸ್​.!

ಟೀಮ್​ ಇಂಡಿಯಾ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಾಗಿದೆ. ಇನ್ನುಳಿದ ಒಂದು ಪಂದ್ಯ ಭಾರತದ ಪಾಲಿಗೆ ಔಪಚಾರಿಕವಷ್ಟೇ. ಟೀಮ್​ ಇಂಡಿಯಾದ ಫಾರ್ಮ್​ ನೋಡಿದ್ರೆ, ನೆದರ್ಲೆಂಡ್​ ಮೇಲೂ ಗೆಲ್ಲೋದು ಅಂತಾ ಕಷ್ಟದ ವಿಚಾರ ಏನಲ್ಲ ಬಿಡಿ. ಹೀಗಾಗಿ ಸತತ ಕ್ರಿಕೆಟ್​ನಿಂದ ದಣಿದಿರೋ ಟೀಮ್​ ಇಂಡಿಯಾ ಕ್ರಿಕೆಟರ್ಸ್​​ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ವಿರಾಟ್​ ಕೊಹ್ಲಿಯೊಬ್ಬರನ್ನ ಬಿಟ್ಟು.

ನೋ ರೆಸ್ಟ್​, ಪ್ರಾಕ್ಟಿಸ್​ ಫಸ್ಟ್​.. ನೆಟ್ಸ್​ನಲ್ಲಿ ಬೆವರಿಳಿಸಿದ ವಿರಾಟ್​​.!

ಸೌತ್​ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್​ ಇಂಡಿಯಾ ಆಟಗಾರರು ಬೆಂಗಳೂರಿಗೆ ಬಂದು 2 ದಿನಗಳೇ ಆಯ್ತು. ಸತತ ಕ್ರಿಕೆಟ್​ ಆಡಿ ದಣಿದಿರೋ ಕ್ರಿಕೆಟರ್ಸ್​​ ವಿಶ್ರಾಂತಿ ಮೊರೆ ಹೋಗಿದ್ದಾರೆ. ಆದರೆ, ವಿರಾಟ್​​ ಕೊಹ್ಲಿ ಅಭ್ಯಾಸದ ಕಣಕ್ಕೆ ಧುಮುಕಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿರೋ ಎನ್​ಸಿಎ ನೆಟ್ಸ್​​ನಲ್ಲಿ ಬೆವರಿಳಿಸಿದ್ದಾರೆ.

ರನ್​ಮಷೀನ್​ ಕೊಹ್ಲಿಗೆ ತೀರದ ರನ್​ ದಾಹ.!

ಈ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಅತ್ಯಮೋಘ ಫಾರ್ಮ್​ನಲ್ಲಿದ್ದಾರೆ. ಬರೋಬ್ಬರಿ 108ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೀತಾ ಇದ್ದಾರೆ. ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ರ 49 ಸೆಂಚುರಿಗಳ ದಾಖಲೆಯನ್ನೂ ಸರಿಗಟ್ಟಿದ್ದಾಗಿದೆ. ಆದರೂ ರನ್​ ಮಷೀನ್​ ಕೊಹ್ಲಿಯಲ್ಲಿನ ರನ್​ ದಾಹ ನೀಗಿಲ್ಲ. ಬೆಂಗಳೂರಿಗೆ ಬಂದ ಕೂಡಲೇ ಚಿನ್ನಸ್ವಾಮಿಯಲ್ಲಿ ನಡೆಸಿದ ಅಭ್ಯಾಸವೇ ಇದಕ್ಕೆ ಉದಾಹರಣೆ.!

ಚಿನ್ನಸ್ವಾಮಿಯಲ್ಲಿ ಚಿನ್ನದಂತಾ ಸಾಧನೆ ಮಾಡೋ ತವಕ

ದೆಹಲಿ ಅರುಣ್​ ಜೇಟ್ಲಿ ಮೈದಾನ ವಿರಾಟ್​ ಕೊಹ್ಲಿಯ ಹೋಮ್​ ಗ್ರೌಂಡ್​ ಆದ್ರೂ, ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಕೊಹ್ಲಿಗೆ ಸ್ಪೆಷಲ್​. ವಿರಾಟ್​ ಪಾಲಿನ 2ನೇ ಹೋಮ್​ಗ್ರೌಂಡ್​ ಅಂದ್ರೂ ತಪ್ಪಾಗಲ್ಲ. ಕೊಹ್ಲಿಯನ್ನ ಕಣ್ತುಂಬಿಕೊಳ್ಳೋ ಹಂಬಲದಿಂದ ಸಾವಿರಾರು ಫ್ಯಾನ್ಸ್​, ಸ್ಟೇಡಿಯಂಗೆ ಬರೋದು ಕನ್​ಫರ್ಮ್​​. ತನ್ನನ್ನ ಅತಿಯಾಗಿ ಪ್ರೀತಿಸೋ ಬೆಂಗಳೂರಿನ ಫ್ಯಾನ್ಸ್​ ಎದುರು 50ನೇ ಶತಕದ ಸಾಧನೆ ಮಾಡೋ ಹಂಬಲ ಕೊಹ್ಲಿಯದ್ದಾಗಿದೆ.

ವಿರಾಟ್​ ಕೊಹ್ಲಿಗೆ ನಾಕೌಟ್​ ಫೋಬಿಯಾ.?

ಈ ಹಿಂದಿನ ಹಾಗೂ ಪ್ರಸಕ್ತ ನಡೀತಾ ಇರೋ ವಿಶ್ವಕಪ್​ ಟೂರ್ನಿಯ ಲೀಗ್​ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ಅತ್ಯಾದ್ಭುತ ಆಟವಾಡಿದ್ದಾರೆ. ಆದರೆ, ನಾಕೌಟ್​ ಸ್ಟೇಜ್​ನಲ್ಲಿ ತದ್ವಿರುದ್ಧ ಪರ್ಫಾಮೆನ್ಸ್​ ನೀಡಿದ್ದಾರೆ. ಏಕದಿನ ವಿಶ್ವಕಪ್​ನ ನಾಕೌಟ್​ ಸ್ಟೇಜ್​ನಲ್ಲಿ ಈ ವರೆಗೆ 6 ನಾಕೌಟ್​​​ ಇನ್ನಿಂಗ್ಸ್​​ಗಳನ್ನ ಆಡಿರೋ ಕೊಹ್ಲಿ ಕೇವಲ 12.16ರ ಸರಾಸರಿಯಲ್ಲಿ 73 ರನ್​ ಬಾರಿಸಿದ್ದಾರೆ. ಈ ದೌರ್ಬಲ್ಯವನ್ನ ಮೆಟ್ಟಿ ನಿಲ್ಲೋದು ಕೂಡ ಕೊಹ್ಲಿ ಅಭ್ಯಾಸದ ಹಿಂದಿನ ಸೀಕ್ರೆಟ್​ ಆಗಿದೆ.

ಒಟ್ಟಿನಲ್ಲಿ, ತವರಿನಲ್ಲಿ ನಡೀತಾ ಇರೋ ಟೂರ್ನಿಯ ಚಾಂಪಿಯನ್​ ಪಟ್ಟಕ್ಕೇರಲೇಬೇಕು. ತವರಿನ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್​ ನೀಡಬೇಕು ಅನ್ನೋದು ಕೊಹ್ಲಿಯ ಏಕಮೇವ ಗುರಿಯಾಗಿದೆ. ಪ್ರತಿ ಹೆಜ್ಜೆಯೂ ಅದನ್ನ ಸಾರಿ ಸಾರಿ ಹೇಳ್ತಿದ್ದು, ಕೊಹ್ಲಿಯ ಆ ಅಲ್ಟಿಮೇಟ್​ ಕನಸು ಈಡೇರಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಂಗ್​ ಕೊಹ್ಲಿಯ ಕಮಿಟ್​ಮೆಂಟ್ಸ್​​ಗೆ ಒಂದು ಸಲಾಂ.. ಚಿನ್ನಸ್ವಾಮಿ ನೆಟ್ಸ್​ನಲ್ಲಿ ವಿರಾಟ್ ಅಭ್ಯಾಸ

https://newsfirstlive.com/wp-content/uploads/2023/11/kohli-1.jpg

Load More