ಚಿನ್ನಸ್ವಾಮಿ ಮೈದಾನದಲ್ಲಿ ಸಚಿನ್ ರೆಕಾರ್ಡ್ ಖತಂ
ಕರ್ನಾಟಕದ ಫ್ಯಾನ್ಸ್ ಮುಂದೆ 50ನೇ ಸೆಂಚುರಿ ಸಂಭ್ರಮ..!
2ನೇ ತವರಿನಲ್ಲಿ ವಿಶ್ವದಾಖಲೆಗೆ ವಿರಾಟ್ ಉತ್ಸುಕ..!
ಬರ್ತ್ಡೇ ಸೆಂಚುರಿ ಗಿಫ್ಟ್ ಕೊಟ್ಟಾಯ್ತು. ಕ್ರಿಕೆಟ್ ದೇವರಿಗೆ ಸರಿಸಮನಾಗಿ ಬೆಳೆದು ನಿಂತಿದ್ದು ಆಯ್ತು. ಈಗ ಕಿಂಗ್ ಕೊಹ್ಲಿ ಕನ್ನಡಿಗರಿಗೆ ಫಾರೆವರ್ ಬಿಗ್ಗೆಸ್ಟ್ ಗಿಫ್ಟ್ ಕೊಡುವ ಸಮಯ ಬಂದಿದೆ. ಆ ಕ್ಷಣಕ್ಕಾಗಿ ಕರ್ನಾಟಕ ಅಭಿಮಾನಿಗಳು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಅಷ್ಟಕ್ಕೂ ರನ್ ಮಾಸ್ಟರ್ ಕನ್ನಡಿಗರಿಗೆ ಕೊಡ್ತಿರೋ ಆ ಬಿಗ್ಗಿಫ್ಟ್ ಆದ್ರು ಏನು ? ಈ ಸ್ಟೋರಿ ಓದಿ.
ವಿರಾಟ್ ಕೊಹ್ಲಿ ರೆಕಾರ್ಡ್ ಬ್ರೇಕರ್ ಅಲ್ಲ, ರೆಕಾರ್ಡ್ ಮೇಕರ್. ಈ ಮಾತು ಹಂಡ್ರೆಂಡ್ ಪರ್ಸಂಟ್ ನಿಜ. ಕಿಂಗ್ ಕೊಹ್ಲಿಗೆ ವಯಸ್ಸು 35 ಕಂಪ್ಲೀಟ್ ಆಯ್ತು. ಆದ್ರೂ ಕೊಹ್ಲಿಯೊಳಗಿನ ಸಾಧನೆಯ ಹಸಿವಿಗೆ ಮಾತ್ರ ಇನ್ನೂ ವಯಸ್ಸಾಗಿಲ್ಲ.15 ವರ್ಷದ ಹಿಂದೆ ಅದ್ಯಾವ ಪ್ಯಾಶನ್, ಕಮಿಟ್ಮೆಂಟ್ ಇತ್ತೋ, ಈಗಲೂ ಅದೇ ಇದೆ. ಕಿಂಚಿತ್ತೂ ಕಮ್ಮಿಯಾಗಿಲ್ಲ. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ನಲ್ಲಿ ಮೂಡಿ ಬಂದ 49ನೇ ಸೆಂಚುರಿ ಅದಕ್ಕೆ ಹಿಡಿದ ಕೈಗನ್ನಡಿ.
ಬೆಂಗಳೂರಿನಲ್ಲೇ ವಿರಾಟ್ ಕೊಹ್ಲಿ ವಿಶ್ವ ದಾಖಲೆ
ಕಿಂಗ್ ಕೊಹ್ಲಿಯ ಬೆಂಕಿ-ಬಿರುಗಾಳಿ ಆಟಕ್ಕೆ ಬಲಾಢ್ಯ ಸೌತ್ ಆಫ್ರಿಕಾ ತತ್ತರಿಸಿ ಹೋಗಿದೆ. ವಿರಾಟ್ ನೆಕ್ಸ್ಟ್ ಟಾರ್ಗೆಟ್ ನೆದರ್ರ್ಲೆಂಡ್ಸ್. ನವೆಂಬರ್ 12 ರಂದು ಭಾರತ ತಂಡ ಲೀಗ್ನ ಕೊನೆ ಪಂದ್ಯವನ್ನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಹೀಗಾಗಿ ಸೆಂಚುರಿ ಸಾಮ್ರಾಟನ ಮೇಲಿನ ಎಕ್ಸ್ಪೆಕ್ಟೇಶನ್ ಡಬಲ್ ಆಗಿದೆ.
ಯಾಕಂದ್ರೆ ಹೇಳಿಕೇಳಿ ಬೆಂಗಳೂರು ಕಿಂಗ್ ಕೊಹ್ಲಿಗೆ 2ನೇ ತವರು. ದಶಕಕ್ಕೂ ಅಧಿಕ ಕಾಲ ಆರ್ಸಿಬಿ ಪರ ಆಡಿ ಮನೆಯಮಗನಾಗಿದ್ದಾರೆ. ವಿರಾಟ್ಗೆ ಇಲ್ಲಿ ಸಿಗುವ ಸಪೋರ್ಟ್ ಇನ್ನೆಲ್ಲೂ ಸಿಗೋದಿಲ್ಲ. ಐಪಿಎಲ್ನಂತ ಫ್ಯಾಂಟಸಿ ಲೀಗ್ನಲ್ಲೇ ಮೈದಾನದ ರೂಫ್ ಕಿತ್ತು ಹೋಗಬೇಕು. ಆ ಮಟ್ಟಿಗೆ ಕೊಹ್ಲಿ, ಕೊಹ್ಲಿ ಘೋಷಣೆ ಮೊಳಗುತ್ತೆ. ಅಂತ್ರದಲ್ಲಿ ವಿಶ್ವಕಪ್..ಅದು ಚಿನ್ನಸ್ವಾಮಿಯಲ್ಲಿ ಅಂದ್ರೆ ಕೇಳ್ಬೇಕಾ. ಬೆಂಬಲ ನೆಕ್ಸ್ಟ್ ಲೆವೆಲ್ಗೆ ಇರುತ್ತೆ ಬಿಡಿ.
ಬೆಂಗಳೂರು ಅಂದ್ರೆ ಕಿಂಗ್ ಕೊಹ್ಲಿಗೆ ಸ್ಪೆಷಲ್ ಲವ್
ಕೊಹ್ಲಿ ಹುಟ್ಟಿ ಬೆಳೆದಿದ್ದು ಡೆಲ್ಲಿಯಲ್ಲಾದ್ರು ಅವರಿಗೆ ಬೆಂಗಳೂರು ಅಂದ್ರೆ ಇನ್ನಿಲ್ಲದ ಲವ್. ಚಿನ್ನಸ್ವಾಮಿ ಮೈದಾನದ ಜೊತೆ ಸ್ಪೆಷಲ್ ಕನೆಕ್ಷನ್ ಹೊಂದಿದ್ದಾರೆ. ಇಂತಹ ಕೊಹ್ಲಿ ಈಗ ಇದೇ ಸ್ಟೇಡಿಯಂನಲ್ಲಿ ವಿಶ್ವದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈಗಾಗ್ಲೇ ವಿರಾಟ್ 49 ಸೆಂಚುರಿ ಬಾರಿಸಿ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಇನ್ನು ಒಂದೇ ಒಂದು ಶತಕ ಹೊಡೆದು ಬಿಟ್ರೆ ಏಕದಿನ ಕ್ರಿಕೆಟ್‌ನ ಡಾನ್ ಅನ್ನಿಸಿಕೊಳ್ಳಲಿದ್ದಾರೆ.
ಪ್ರಚಂಡ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ ಪ್ರಸಕ್ತ ವಿಶ್ವಕಪ್ನಲ್ಲಿ ಈಗಾಗ್ಲೇ ಎರಡು ಶತಕಗಳನ್ನ ಸಿಡಿಸಿದ್ದಾರೆ. ಇನ್ನು ನೆದರ್ರ್ಲೆಂಡ್ಸ್ ಸೇರಿದಂತೆ ಸೆಮಿಫೈನಲ್, ಫೈನಲ್ ಸೇರಿ 3 ಪಂದ್ಯಗಳು ಬಾಕಿ ಇವೆ. ಈ ಮೂರು ಮ್ಯಾಚ್ಗಳಲ್ಲಿ ರನ್ ಹಂಟರ್ ವಿಶ್ವದಾಖಲೆ ಮಾಡೇ ಮಾಡ್ತಾರೆ ಅನ್ನೋದು ಅಭಿಮಾನಿ ದೇವರುಗಳ ನಂಬಿಕೆಯಾಗಿದೆ.
ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಆಸೆ ಈಡೇರಿಸ್ತಾರಾ ಕೊಹ್ಲಿ..?
ಕೊಹ್ಲಿ, ಸಚಿನ್ ತೆಂಡುಲ್ಕರ್ ದಾಖಲೆ ಅಳಿಸಿಹಾಕಲು ಇನ್ನೂ ಮೂರು ಅವಕಾಶವಿದೆ ನಿಜ. ಆದ್ರೆ ಹಿಸ್ಟಾರಿಕಲ್ 50ನೇ ಶತಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲೆ ಮೂಡಿಬರಲಿ ಅನ್ನೋದು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮಹಾದಾಸೆ. ಕೊಹ್ಲಿ ಕೂಡ ಸೆಕೆಂಡ್ ಹೋಮ್ಗ್ರೌಂಡ್ನಲ್ಲಿ ವಿಶ್ವದಾಖಲೆ ನಿರ್ಮಿಸಲು ಸಾಕಷ್ಟು ಉತ್ಸುಕರಾಗಿದ್ದಾರೆ.
ಒಂದು ವೇಳೆ ಕೊಹ್ಲಿ ಮೆಮೊರೇಬರ್ 50ನೇ ಒನ್ಡೇ ಶತಕವನ್ನ ಬೆಂಗಳೂರಿನಲ್ಲೇ ಹೊಡೆದ್ರೆ ಅದು ಕರ್ನಾಟದ ಫ್ಯಾನ್ಸ್ಗೆ ಎಂದೆಂದೂ ಮರೆಯಲಾಗದ ಸ್ಪೆಷಲ್ ಗಿಫ್ಟ್ ಆಗಿರಲಿದೆ. ಹಾಗೊಂದು ವೇಳೆ ತಪ್ಪಿದ್ರೆ ಮುಂಬೈ ಅಥವಾ ಅಹ್ಮದಾಬಾದ್ನಲ್ಲಿ ವಿಶ್ವದಾಖಲೆ ರಚಿಸಲಿದ್ದಾರೆ. ಆ ಮಹಾ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾದು ಕುಳಿತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ