newsfirstkannada.com

ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಬ್ಯಾಟ್​ ಸೌಂಡ್ ಮಾಡೋದು ಪಕ್ಕಾ.. ಈ ಹಿಂದಿನ ಟೂರ್ನಿಯಲ್ಲಿ ಕೊಹ್ಲಿ ಸಾಧನೆ ಹೇಗಿದೆ?

Share :

23-08-2023

    ನಡೆದಿದ್ದೆ ದಾರಿ.. ಎದುರಾಳಿಗೆ 'ವಿರಾಟದರ್ಶನ' ಫಿಕ್ಸ್​​..!

    ಏಷ್ಯಾಕಪ್​ ವಿಷ್ಯಕ್ಕೆ ಬಂದ್ರೆ ಕೊಹ್ಲಿ ನಿಜಕ್ಕೂ ಟೆರರ್

    ಕೊಹ್ಲಿಯಿಂದ ಲಂಕಾನ್ನರ ರೆಕಾರ್ಡ್ ಬ್ರೇಕ್ ಗ್ಯಾರಂಟಿ

ಏಷ್ಯಾಕಪ್ ಈ ಪದ ಕೇಳಿದ್ರೆ ಸಾಕು ನೆನಪಾಗೋದೆ ವಿರಾಟ್ ಕೊಹ್ಲಿ. ಏಷ್ಯನ್​​​​​ ದಂಗಲ್​​​ನಲ್ಲಿ ಕಿಂಗ್ ಕೊಹ್ಲಿ ಘರ್ಜನೆ ಹಾಗಿದೆ​​​​. ಈ ಟೂರ್ನಿಯಲ್ಲಿ ಕೊಹ್ಲಿಗೆ ಫಾರ್ಮೆಟ್​​​​​​ ಮ್ಯಾಟರೇ ಆಗಲ್ಲ. ಇಲ್ಲಿ ರನ್ ಮಷಿನ್​​ಗೆ, ರನ್ ಮಷಿನೆ ಸಾಟಿ. ಏಷ್ಯಾಕಪ್​ನಲ್ಲಿ ಕೊಹ್ಲಿಯ ದರ್ಬಾರ್​​ ಹೇಗಿದೆ.?

ಏಷ್ಯಾಕಪ್​ ಮಹಾ ಕದನಕ್ಕೆ ಕೌಂಟ್​ಡೌನ್​​​ ಶುರುವಾಗಿದೆ. ಆಗಸ್ಟ್​​ 30 ರಿಂದ ಟೂರ್ನಿಗೆ ಗ್ರ್ಯಾಂಡ್​ ಕಿಕ್​ ಸ್ಟಾರ್ಟ್​ ಸಿಗಲಿದ್ದು ಮಾನ್​ಸ್ಟಾರ್​ ಕೊಹ್ಲಿ ಪಂದ್ಯಾವಳಿಯ ಸೆಂಟರ್ ಆಫ್​​ ಅಟ್ರ್ಯಾಕ್ಷನ್ ಅನ್ನಿಸಿಕೊಂಡಿದ್ದಾರೆ. ಯಾವ ಟೂರ್ನಿಗಳಲ್ಲಿ ಕೊಹ್ಲಿ ಬ್ಯಾಟ್ ಸೌಂಡ್ ಮಾಡುತ್ತೋ, ಇಲ್ವೋ ಗೊತ್ತಿಲ್ಲ. ಬಟ್​ ಏಷ್ಯಾಕಪ್​ ಅಂದ್ರೆ ಸಾಕು ಫ್ಯಾನ್ಸ್​ಗೆ ವಿರಾಟರೂಪ ದರ್ಶನ ಫಿಕ್ಸ್​.

ವಿರಾಟ್ ಕೊಹ್ಲಿ

ಏಷ್ಯಾಕಪ್​​​ನಲ್ಲಿ ಕೊಹ್ಲಿಗೆ ಮೂಗುದಾರ ಹಾಕೋರೆ ಇಲ್ಲ

ಏಷ್ಯಾಕಪ್​ ವಿಷ್ಯಕ್ಕೆ ಬಂದ್ರೆ ಕೊಹ್ಲಿ ನಿಜಕ್ಕೂ ಟೆರರ್​​​. ಯಾವುದೇ ತಂಡ ಇರಲಿ. ಕಂಡೀಷನ್ ಯಾವುದೇ ಇರಲಿ. ಕೊಹ್ಲಿ ರನ್​ ಭರಾಟೆಗೆ ಬ್ರೇಕ್ ಹಾಕೋದು ಕಷ್ಟ ಕಷ್ಟ. ಪ್ಯಾಡ್ ಕಟ್ಟಿ ಅಂಗಳಕ್ಕಿದ್ರೆ ಸಾಕು ರನ್​​​​ ಹೊಳೆ ಹರಿಸೋದು ಫಿಕ್ಸ್​​. ಏಷ್ಯಾಕಪ್ ಹಿಸ್ಟರಿ ಕೆದಕಿದ್ರೆ ಕೊಹ್ಲಿಯ ರಗಢ್​​ ಫಾರ್ಮ್​ ಏನು ಅನ್ನೋದು ಗೊತ್ತಾಗುತ್ತೆ.

ಏಷ್ಯಾಕಪ್​​ನಲ್ಲಿ ಕೊಹ್ಲಿ ಸಾಧನೆ

ಏಕದಿನ ಮಾದರಿ ಏಷ್ಯಾಕಪ್ ಟೂರ್ನಿಯಲ್ಲಿ ಇಲ್ಲಿ ತನಕ ಒಟ್ಟು 10 ಇನ್ನಿಂಗ್ಸ್​​​ಗಳನ್ನ ಆಡಿರೋ ವಿರಾಟ್ ಕೊಹ್ಲಿ 61.3 ರ ಎವರೇಜ್​​ನಲ್ಲಿ ಬರೋಬ್ಬರಿ 613 ರನ್​​ ಬಾರಿಸಿದ್ದಾರೆ. ಇನ್ನು ಟಿ20 ಮಾದರಿಯಲ್ಲಿ ಆಡಿದ 9 ಇನ್ನಿಂಗ್ಸ್​​ಗಳಿಂದ 85.8ರ ಸರಾಸರಿಯ​ಲ್ಲಿ 429 ರನ್ ಚಚ್ಚಿದ್ದಾರೆ. ಏಕದಿನ-ಟಿ20 ಮಾದರಿ ಸೇರಿ ಒಟ್ಟು 19 ಇನ್ನಿಂಗ್ಸ್​ಗಳಿಂದ 69.5 ರ ಎವರೇಜ್​ನಲ್ಲಿ 1042 ರನ್​ ಕೊಳ್ಳೆ ಹೊಡೆದಿದ್ದಾರೆ.

ಇದೊಂದೆ ಸ್ಟ್ಯಾಟ್ಸ್ ಸಾಕು ಏಷ್ಯಾಕಪ್ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಎಷ್ಟು ಡೇಂಜರಸ್ ಅನ್ನೋದಕ್ಕೆ. ಹೇಳಿಕೇಳಿ ಈ ವರ್ಷವಂತೂ ವಿರಾಟ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಮುಂಬರೋ ಏಷ್ಯಾಕಪ್​​ ಫಿಫ್ಟಿ ಓವರ್​​​ ಮಾದರಿ ಆಗಿರೋದ್ರಿಂದ ಕೊಹ್ಲಿಯನ್ನ ಕಟ್ಟಿಹಾಕೋದು ನಿಜಕ್ಕೂ ಕಷ್ಟ.

2023ರ ಏಕದಿನ ಕ್ರಿಕೆಟ್​​ನಲ್ಲಿ ಕೊಹ್ಲಿ

ಪ್ರಸಕ್ತ ವರ್ಷ 9 ಏಕದಿನ ಇನ್ನಿಂಗ್ಸ್​ ಆಡಿರೋ ಕೊಹ್ಲಿ 53.27ರ ಸರಾಸರಿಯಲ್ಲಿ 427 ರನ್​​​ ಬಾರಿಸಿದ್ದಾರೆ. ಇದ್ರಲ್ಲಿ 2 ಶತಕ ಹಾಗೂ 1 ಹಾಫ್​ಸೆಂಚುರಿ ಸೇರಿಕೊಂಡಿದೆ.

ಭಾರತ ತಂಡದ ಆಟಗಾರರು

‘ಏಷ್ಯನ್ ಕಿಂಗ್’ ಪಟ್ಟದ ಮೇಲೆ ಕೊಹ್ಲಿ ಕಣ್ಣು..!

ಪ್ರತಿ ಟೂರ್ನಿಯಲ್ಲಿ ರನ್ ಸರಮಾಲೆ ಕಟ್ಟಿರೋ ಕೊಹ್ಲಿ ಸದ್ಯ ಏಷ್ಯನ್ ಕಿಂಗ್​ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. 50 ಓವರ್​​ಗಳ ಏಷ್ಯಾಕಪ್ ಟೂರ್ನಿ ಹಿಸ್ಟರಿಯಲ್ಲಿ ಲಂಕಾದ ಸನತ್​ ಜಯಸೂರ್ಯ 1,220 ಹಾಗೂ ಕುಮಾರ್​ ಸಂಗಾಕ್ಕಾರ 1,075 ರನ್ ಬಾರಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಕೊಹ್ಲಿ ಏಕದಿನ ಹಾಗೂ ಟಿ20 ಮಾದರಿ ಟೂರ್ನಿ ಸೇರಿ ಒಟ್ಟು 1,042 ರನ್​​ ಹೊಡೆದಿದ್ದಾರೆ. ಇನ್ನು 178 ರನ್​ ಹೊಡೆದು ಬಿಟ್ರೆ ಏಷ್ಯನ್ ದಂಗಲ್​​​ ಕಾ ಬಾಸ್ ಅನ್ನಿಸಿಕೊಳ್ಳಲಿದ್ದಾರೆ.

ಬಿಗ್​​​ ಟೂರ್ನಿಯಲ್ಲಿ ಅಬ್ಬರಿಸಲು ಬಿಗ್ ಪ್ಲೇಯರ್ ಸಜ್ಜಾಗಿದ್ದಾರೆ. ಅದ್ಯಾವ ಮಟ್ಟಿಗೆ ಫ್ಯಾನ್ಸ್​ಗೆ ವಿರಾಟದರ್ಶನ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಬ್ಯಾಟ್​ ಸೌಂಡ್ ಮಾಡೋದು ಪಕ್ಕಾ.. ಈ ಹಿಂದಿನ ಟೂರ್ನಿಯಲ್ಲಿ ಕೊಹ್ಲಿ ಸಾಧನೆ ಹೇಗಿದೆ?

https://newsfirstlive.com/wp-content/uploads/2023/08/VIRAT_KOHLI_ASIA_CUP.jpg

Load More