newsfirstkannada.com

ಗಂಭೀರ್​ಗೆ ಭಯ ಬಿದ್ದು​​ ರೋಹಿತ್, ವಿರಾಟ್, ಜಡೇಜಾ ನಿವೃತ್ತಿ ಕೊಟ್ರಾ.. ಹಿಟ್​ಮ್ಯಾನ್ ಹೇಳಿದ್ದೇನು?

Share :

Published July 2, 2024 at 12:01pm

Update July 2, 2024 at 12:10pm

    ಹಿಟ್ ಮ್ಯಾನ್ ನಿವೃತ್ತಿ ಬಗ್ಗೆ ಪ್ಲಾನ್ ಮಾಡಿರಲಿಲ್ಲವಂತೆ ನಿಜನಾ?

    ರೋಹಿತ್, ವಿರಾಟ್​ ಇಲ್ಲದೇ ಚುಟುಕು ಕ್ರಿಕೆಟ್​​ ನೋಡಲು ಬೇಸರ

    ಒತ್ತಡದಿಂದ ಗುಡ್​​ಬೈ ಹೇಳಿದ್ರಾ ವಿಶ್ವ ಚಾಂಪಿಯನ್​ ಕ್ಯಾಪ್ಟನ್?

ಜೂನ್​​​ 29.. 140 ಕೋಟಿ ಭಾರತೀಯರು ಸಂಭ್ರಮಿಸಿದ ಸುದಿನ. ವೀರ ಕಲಿ ರೋಹಿತ್​​​​​ ಟಿ20 ವಿಶ್ವಕಪ್​​ ಜಯಿಸಿ 17 ವರ್ಷಗಳ T20 ಟ್ರೋಫಿ ಬರವನ್ನ ನೀಗಿಸಿದ್ರು. ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೇಲಾಡ್ತಿತ್ತು. ಈ ಖುಷಿ ನಡುವೆ ರೋಹಿತ್​​​​​​, ಟಿ20 ಗುಡ್​​ಬೈ ಹೇಳಿ ಎಲ್ಲರನ್ನ ಅಚ್ಚರಿಗೆ ತಳ್ಳಿದ್ರು. ಚಾಂಪಿಯನ್​​​ ಕ್ಯಾಪ್ಟನ್​ ಏಕಾಏಕಿ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾದ್ರು ಏಕೆ?.

ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್

ನಾನು ಕರಿಯರ್ ಆರಂಭದಿಂದಲೂ ಟಿ20 ಮಾದರಿಯ ಆಟವನ್ನ ಸಂಭ್ರಮಿಸಿದ್ದೇನೆ. ನಿವೃತ್ತಿ ಹೇಳಲು ಇದಕ್ಕಿಂತ ಉತ್ತಮ ಟೈಮ್ ಬೇಕಿಲ್ಲ. ಪ್ರತಿ ಕ್ಷಣವನ್ನ ಪ್ರೀತಿಸಿದ್ದೇನೆ, ಸಂಭ್ರಮಿಸಿದ್ದೇನೆ. ಇದನ್ನೆ ನಾನು ಬಯಸಿದ್ದೆ, ಕೊನೆಗೆ ಟ್ರೋಫಿ ಗೆದ್ದಿದ್ದೇನೆ.
ಅಂತರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ವಿದಾಯ ಘೋಷಿಸುವ ಬಗ್ಗೆ ನಾನು ಚಿಂತಿಸಿರಲಿಲ್ಲ. ಆದರೆ ಪರಿಸ್ಥಿತಿ ಹೀಗಿದೆ. ಇದು ಸೂಕ್ತ ಸಂದರ್ಭ ಎಂದು ನಾನು ಭಾವಿಸಿದೆ. ಕಪ್ ಗೆದ್ದು ವಿದಾಯ ಹೇಳುವುದಕ್ಕಿಂತ ಉತ್ತಮವಾದದ್ದು ಏನೂ ಇಲ್ಲ.

ರೋಹಿತ್​ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್

ಇದನ್ನೂ ಓದಿ: ರೋಹಿತ್​ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್​.. ಕ್ಯಾಪ್ಟನ್ ರೇಸ್​ನಲ್ಲಿ ನಾಲ್ವರು ಪ್ಲೇಯರ್ಸ್!​

ಒಂದು ಕಡೆ ಟಿ20 ಫಾಮ್ಯಾಟ್​ಗೆ ನಿವೃತ್ತಿ ಕೊಡಲು ಇದಕ್ಕಿಂತ ಉತ್ತಮ ಟೈಮ್​ ಬೇಕಿಲ್ಲ ಎಂದು ಹೇಳುವ ರೋಹಿತ್​​ ಶರ್ಮಾ, ಇನ್ನೊಂದೆಡೆ ವಿಶ್ವಕಪ್​​ ಗೆದ್ದ ಸ್ವಲ್ಪ ಸಮಯದ ಬಳಿಕ ನಾನು ನಿವೃತ್ತಿ ಬಗ್ಗೆ ಪ್ಲಾನೇ​​​ ಮಾಡಿಲಿರಲಿಲ್ಲ ಅಂತಿದ್ದಾರೆ. ಈ ಭಿನ್ನ ಭಿನ್ನ ಹೇಳಿಕೆಗಳನ್ನ ಕೊಟ್ಟಿರೋದು ಒಂದೇ ದಿನ. ರೋಹಿತ್​​​​​ ಶರ್ಮಾರ ಈ ದ್ವಂದ್ವ ಮಾತಿನ ಮರ್ಮ ಏನು ಅನ್ನೋದು ಕ್ರಿಕೆಟ್​​ ವಲಯದಲ್ಲಿ ಗಂಭೀರ ಚರ್ಚೆಯನ್ನ ಹುಟ್ಟು ಹಾಕಿದೆ.

ವಿಶ್ವಕಪ್​ ಗೆಲ್ಲಿಸಿ ಕೊಟ್ಟು ದಿಢೀರ್​​​ ನಿವೃತ್ತಿ ಘೋಷಿಸಿದ್ದೇಕೆ..?

17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿ ಕೊಟ್ಟ ರೋಹಿತ್ ಟಿ20 ಕ್ರಿಕೆಟ್​​​​​​ಗೆ ಗುಡ್​ಬೈ ಹೇಳಿದ್ದು ಕ್ರಿಕೆಟ್ ಲೋಕವನ್ನ ಅಚ್ಚರಿಗೆ ತಳ್ಳಿದೆ. ಅವರು ಇಷ್ಟು ಬೇಗ ನಿವೃತ್ತಿ ಘೋಷಿಸಬಾರದಿತ್ತು. ಇನ್ನಷ್ಟು ವರ್ಷ ಭಾರತ ಪರ ಆಡಬೇಕಿತ್ತು ಅನ್ನೋದು​​ ಅಭಿಮಾನಿಗಳ ಅಭಿಲಾಷೆ ಆಗಿತ್ತು. ಆದ್ರೆ ಅದ್ಯಾವುದಕ್ಕೆ ತಲೆಕೆಡಿಸಿಕೊಳ್ಳದೇ ರೋಹಿತ್​​ ಚುಟುಕು ಕ್ರಿಕೆಟ್​ನಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ಒತ್ತಡ. ಒತ್ತಡದಿಂದಲೇ ಇಂತಹ ನಿರ್ಧಾರ ಕೈಗೊಂಡ್ರಾ ಅನ್ನೋದಕ್ಕೆ ಅವರ ಮಾತುಗಳೇ ಪುಷ್ಠಿ ಕೊಡ್ತಿದೆ.

ಗೌತಿಯ ಆ ಡಿಮ್ಯಾಂಡ್​ನಿಂದ ರೋಹಿತ್​​ ಟಿ20 ಕ್ರಿಕೆಟ್ ತೊರೆದ್ರಾ.?

ರಾಹುಲ್​ ದ್ರಾವಿಡ್​​​​​​​​​​​​​ ಬಳಿಕ ಗೌತಮ್ ಗಂಭೀರ್​​​ ಟೀಮ್ ಇಂಡಿಯಾ ನೂತನ ಹೆಡ್​ಕೋಚ್​​ ಆಗೋದು ಬಹುತೇಕ ಫೈನಲ್ ಆಗಿದೆ. ಅಧಿಕೃತವಾಗಿ ಅನೌನ್ಸ್​​​ಮೆಂಟ್​​ ಒಂದೇ ಬಾಕಿ ಇದೆ. ಈ ಮುಂದಿನ ಕೋಚ್​​ ಗಂಭೀರ್​ ಕಾರಣಕ್ಕೆ ರೋಹಿತ್​​, ಟಿ20 ಕ್ರಿಕೆಟ್​​​ ತೊರೆದ್ರು ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಯಾಕಂದ್ರೆ ಗಂಭೀರ್​​ ಕೋಚ್​ ಹುದ್ದೆಗೇರುವ ಮುನ್ನ ಬಿಸಿಸಿಐ ಬಳಿ ಕೆಲ ಡಿಮ್ಯಾಂಡ್​​ಗಳನ್ನ ಇಟ್ಟಿದ್ರು. ಆ ಡಿಮ್ಯಾಂಡ್ ಪೈಕಿ ಒಂದು ಡಿಮ್ಯಾಂಡ್​​ ಹಿಟ್​ಮ್ಯಾನ್ ಹೊಡಿಬಡಿ ಆಟಕ್ಕೆ ಗುಡ್​​ಬೈ ಹೇಳುವಂತೆ ಮಾಡಿದೆ.

ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್​.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?

ಸೀನಿಯರ್​​ಗಳಿಗೆ ಗೇಟ್​​​ಪಾಸ್​ ನೀಡಲು ಗಂಭೀರ್​​ ಡಿಮ್ಯಾಂಡ್​​..!

ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾದ ಹೊಸ ಹೆಡ್​ಕೋಚ್ ಆಗಿ ಚಾರ್ಜ್​ ತೆಗೆದುಕೊಳ್ಳುವ ಗೌತಮ್ ಗಂಭೀರ್​, ಹಿರಿಯ ಆಟಗಾರರಿಗೆ ತಂಡದಿಂದ ಗೇಟ್​ಪಾಸ್​ ನೀಡಲು ಬೇಡಿಕೆ ಇಟ್ಟಿದ್ರು. 2026 ಟಿ20 ವಿಶ್ವಕಪ್​​​ಗೆ ಹೊಸ ತಂಡವನ್ನ ಕಟ್ಟಬೇಕು. ಹಾಗಾಗಿ ಸೀನಿಯರ್​​​​​​​​​​​​​ ಆಟಗಾರರನ್ನ ಕೈಬಿಡಬೇಕೆಂಬ ಬೇಡಿಕೆಯನ್ನ ಬಿಸಿಸಿಐ ಮುಂದಿಟ್ಟಿದ್ರು ಎಂದು ವರದಿಯಾಗಿದೆ. ಇದು ಗೊತ್ತಾಗುತ್ತಿದ್ದಂತೆ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿ ಕಿಂಗ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ದಿಢೀರನೆ ಟಿ20 ಕ್ರಿಕೆಟ್​ಗೆ ಗುಡ್​​​ಬೈ ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ

ಒತ್ತಡವೋ, ಸ್ವಯಂ ನಿರ್ಧಾರವೋ ಗೊತ್ತಿಲ್ಲ. ಆದರೆ ಚಾಂಪಿಯನ್ ಕ್ಯಾಪ್ಟನ್ ರೋಹಿತ್​ ಶರ್ಮಾ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದಾಗಿದೆ. ರೋಹಿತ್​ ಇಲ್ಲದೇ ಚುಟುಕು ಕ್ರಿಕೆಟ್​​ ನೋಡಲು ಬೇಸರ ನಿಜ. ಆದರೆ 17 ವರ್ಷಗಳ ಜರ್ನಿಯಲ್ಲಿ ಕಟ್ಟಿದ ಅದ್ಭುತ ಇನ್ನಿಂಗ್ಸ್​ಗಳನ್ನ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗಂಭೀರ್​ಗೆ ಭಯ ಬಿದ್ದು​​ ರೋಹಿತ್, ವಿರಾಟ್, ಜಡೇಜಾ ನಿವೃತ್ತಿ ಕೊಟ್ರಾ.. ಹಿಟ್​ಮ್ಯಾನ್ ಹೇಳಿದ್ದೇನು?

https://newsfirstlive.com/wp-content/uploads/2024/06/ROHIT_SHARMA-5.jpg

Load More