newsfirstkannada.com

ಏಷ್ಯಾಕಪ್​ನಲ್ಲಿ ಕ್ಯಾಪ್ಟನ್​ ರೋಹಿತ್, ವಿರಾಟ್​ ಟಾರ್ಗೆಟ್​​​ ಯಾರು..? ಜೋಡಿಯಾಗಿ ಪ್ರಾಕ್ಟೀಸ್ ಮಾಡ್ತಿರೋದ್ಯಾಕೆ?

Share :

28-08-2023

  ಆಲೂರಿನ KSCA ಸ್ಟೇಡಿಯಂನಲ್ಲಿ ಆರು ದಿನಗಳ ಕ್ಯಾಂಪ್

  ಏಷ್ಯಾಕಪ್​ ದಂಗಲ್​ಗೆ ಭಾರತ ತಂಡ ಭರ್ಜರಿ ತಯಾರಿ..!

  ಪಾಕ್​ನ ಶಾಹೀನ್ ಅಫ್ರಿದಿಗೆ ಕೌಂಟರ್​ ಕೊಡಲು ಪ್ಲಾನ್

ಟೀಮ್ ಇಂಡಿಯಾ ನೆಕ್ಸ್ಟ್​ ಟಾರ್ಗೆಟ್​ ಏಷ್ಯಾಕಪ್​​​​​​​​​. ಏಷ್ಯಾದ ಅಧಿಪತಿ ಆಗಲು ರೋಹಿತ್​ ಪಡೆ ಹವಣಿಸ್ತಿದೆ. ಅದಕ್ಕಾಗಿ ಡಿಫರೆಂಟ್​ & ಹಾರ್ಡ್​ ಪ್ರಾಕ್ಟೀಸ್ ಕೂಡ ನಡೆಸ್ತಿದೆ. ಹಾಗಾದ್ರೆ ಏಷ್ಯಾಕಪ್​​ ಬ್ಯಾಟಲ್​ಗೆ ರೋಹಿತ್ ಪಡೆ ಸಿದ್ಧತೆ ಹೇಗಿದೆ ? ಕ್ಯಾಂಪ್​​​​ನಲ್ಲಿ ಏನೇನು ನಡೆಯುತ್ತಿದೆ?.

ಟೀಮ್ ಇಂಡಿಯಾದ 2023ರ ಮೊದಲ ಮಿಷನ್​​ ಏಷ್ಯಾ, ಬಳಿಕ ವಿಶ್ವಕಪ್​​​. ಮುಂಬರೋ ಏಷ್ಯಾಕಪ್​​​ ಮೆನ್​ ಇನ್ ಬ್ಲೂ ಪಡೆ ಭರ್ಜರಿ ಸಿದ್ಧತೆ ಆರಂಭಿಸಿದೆ. ಆಲೂರಿನ ಕೆಎಸ್​ಸಿಎ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ 6 ದಿನಗಳ ಕ್ಯಾಂಪ್ ಆಯೋಜಿಸಿದ್ದು, 4 ದಿನ ಕಂಪ್ಲೀಟ್ ಆಗಿದೆ. ಹಾಗಾದ್ರೆ 4ನೇ ದಿನದ ಕ್ಯಾಂಪ್​​​ ಹೈಲೆಟ್ಸ್​ ಏನು?.

ಟೀಮ್ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಸ್ಪಿನ್ನರ್ಸ್​ ವಿರುದ್ಧ ಕೊಹ್ಲಿ ಅಗ್ರೆಸ್ಸಿವ್ ಅಪ್ರೋಚ್​​​​..!

ಏಷ್ಯಾಕಪ್ ಟೂರ್ನಿಯ ಸೆಂಟರ್ ಆಫ್​ ಅಟ್ರ್ಯಾಕ್ಷನ್ ಅನ್ನಿಸಿಕೊಂಡಿರೋ ವಿರಾಟ್ ಕೊಹ್ಲಿ ಕ್ಯಾಂಪ್​​ನಲ್ಲಿ ಸ್ಪಿನ್ನರ್​ಗಳನ್ನ ಕಂಪ್ಲೀಟ್​ ಟಾರ್ಗೆಟ್ ಮಾಡಿದ್ರು. ಅಗ್ರೆಸ್ಸಿವ್​​​ ಅಪ್ರೋಚ್​ ತೋರಿದ ರನ್ ಮಷಿನ್ ದೊಡ್ಡ ಹೊಡೆತಗಳಿಗೆ ಹೆಚ್ಚು ಒತ್ತು ನೀಡಿದ್ರು. ಯಾಕಂದ್ರೆ 2022 ರ ಬಳಿಕ ಲೆಫ್ಟ್​ ಆರ್ಮ್​ ಸ್ಪಿನ್ನರ್ಸ್​ ವಿರುದ್ಧ 10 ಪಂದ್ಯಗಳಲ್ಲಿ 7 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಈ ಮಿಸ್ಟೇಕ್ಸ್​ ಏಷ್ಯಾಕಪ್​​​​ ನಲ್ಲಿ ಮರುಕಳಿಸದಿರಲು ಕ್ಯಾಂಪ್​​ನಲ್ಲಿ ಸ್ಪಿನ್ನರ್ಸ್​ ಟಾರ್ಗೆಟ್​ ಮಾಡಿದ್ದಾರೆ.

ಶಾಹೀನ್​​​ ಅಫ್ರಿದಿ ಎನ್​​​​ಕೌಂಟರ್​ಗೆ ರೋಹಿತ್​​-ಕೊಹ್ಲಿ ರೆಡಿ..!

ಮೆಗಾ ಬ್ಯಾಟಲ್​ ಏಷ್ಯಾಕಪ್​ನಲ್ಲಿ ಭಾರತಕ್ಕೆ ಲೆಫ್ಟ್​ ಆರ್ಮ್​ ಬೌಲರ್ಸ್​ ಬಿಗ್​​ ಥ್ರೆಟ್. ಪಾಕ್​​​ನ ಶಾಹೀನ್ ಅಫ್ರಿದಿ ಎದುರಿಸೋ ಬಿಗ್ ಚಾಲೆಂಜ್​​​​ ಟೀಮ್ ಇಂಡಿಯಾ ಮುಂದಿದೆ. ಈ ಬಾರಿ ಇದಕ್ಕೆ ತಕ್ಕ ಆನ್ಸರ್​​ ನೀಡಲು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿ ಲೆಫ್ಟ್ ಆರ್ಮ್​ ಪೇಸರ್​ ಟಾರ್ಗೆಟ್ ಮಾಡಿದ್ದಾರೆ. ನೆಟ್ಸ್​​ನಲ್ಲಿ ಶಾಹಿನ್​ ಅಫ್ರಿದಿ ಶೈಲಿಯನ್ನೇ ಹೋಲುವ ನೀಳಕಾಯದ ಅನಿಕೇತ್ ಚೌದ್ರಿ ಬೌಲಿಂಗ್​​ ಅನ್ನ ಪೇಸ್ ಮಾಡಿದ್ದಾರೆ.

ಜೋಡಿ ಪ್ರಾಕ್ಟೀಸ್​​​.. ಏನಿದರ ಮರ್ಮ..?

ಇನ್ನು 4ನೇ ದಿನದಾಟದ ಕ್ಯಾಂಪ್​​​​​​ನಲ್ಲಿ ಹೆಚ್ಚು ಹೈಲೆಟ್ ಅನ್ನಿಸಿದ್ದು ಜೋಡಿ ಪ್ರಾಕ್ಟೀಸ್​​​. ಇಬ್ಬರು ಆಟಗಾರರು ಜೊತೆಯಾಗಿ ಅಭ್ಯಾಸ ನಡೆಸಿದ್ರು. ಯಾಕಂದ್ರೆ ಬಿಗ್ ಟೂರ್ನಮೆಂಟ್​ಗಳಲ್ಲಿ ಸ್ಟ್ರೈಕ್​ ರೊಟೇಟ್​ ಬಹುಮುಖ್ಯ. ಉತ್ತಮವಾಗಿ ಆಡಿಯೂ ಸ್ಟ್ರೈಕ್​ರೇಟ್ ಮಾಡದಿದ್ದಲ್ಲಿ ಪಂದ್ಯ ಸೋಲುವ ಸಾಧ್ಯತೆ ಇರುತ್ತೆ. ಇದನ್ನ ಅರ್ಥೈಸಿಕೊಂಡಿರೋ ಟೀಮ್ ಇಂಡಿಯಾ ಪಾರ್ಟ್ನರ್​​ಶಿಪ್ ಬೀಲ್ಡ್​ಅಪ್​ ಮತ್ತು ಸಿಂಗಲ್​​, ಡಬಲ್ ಕದಿಯುವ ಮೂಲಕ ಸ್ಟ್ರೈಕ್​ ರೊಟೇಟ್​ ಕಡೆ ಹೆಚ್ಚು ಫೋಕಸ್ ನಡೆಸಿದೆ.

ಬಿಗ್ ಶಾಟ್ಸ್​​​ನತ್ತ ರೋಹಿತ್ ಶರ್ಮಾ ಫೋಕಸ್​​​..!

ಮಹತ್ವದ ಟೂರ್ನಿಗಳಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮೇನ್ ರೋಲ್ ಪ್ಲೇ ಮಾಡ್ತಾರೆ. ಏಷ್ಯಾಕಪ್​​​ನಲ್ಲೂ ಆ ಜವಾವ್ದಾರಿ ಹಿಟ್​​ಮ್ಯಾನ್ ಹೆಗಲಿಗೇರಿದ್ದು ನೆಟ್ಸ್​​ನಲ್ಲಿ ಬಿಗ್​​​ ಶಾಟ್ಸ್​​ನತ್ತ ಹೆಚ್ಚು ಫೋಕಸ್ ನಡೆಸಿದ್ರು. ಸ್ಪಿನ್​​​, ರೈಟಿ ಆ್ಯಂಡ್​​ ಲೆಫ್ಟ್ ಆರ್ಮ್​ ಬೌಲರ್​ಗಳನ್ನ ಲೀಲಜಾಲವಾಗಿ ದಂಡಿಸಿ ಗಮನ ಸೆಳೆದ್ರು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಡೆಕ್ಸಾ ಸ್ಕ್ಯಾನಿಂಗ್, ​ಕೋಚ್​​​-ಪ್ಲೇಯರ್ಸ್​ ಮೀಟಿಂಗ್

ಟೀಮ್ ಇಂಡಿಯಾ ಆಟಗಾರರಿಗೆ ಡೆಕ್ಸಾ ಸ್ಕ್ಯಾನಿಂಗ್​ ನಡೆಸಲಾಯಿತು. ಆಟಗಾರರ ಮೂಳೆಗಳು ಎಷ್ಟು ಬಲಿಷ್ಠವಾಗಿದೆ ಅನ್ನೊದನ್ನ ತಿಳಿದುಕೊಳ್ಳಲು ಇದು ಸಹಕಾರಿ. ಜೊತೆಗೆ ಪ್ಯಾಟ್​​ ಹಾಗೂ ಮಸಲ್ ಪರ್ಸೆಂಟೇಜ್ ಎಷ್ಟಿದೆ ಅನ್ನೋದನ್ನ ಈ ಸ್ಕ್ಯಾನಿಂಗ್​​ನಿಂದ ತಿಳಿಯಬಹುದು. ಅನೇಕ ಆಟಗಾರರು ಸುದೀರ್ಘ ಇಂಜುರಿ ಬಳಿಕ ತಂಡಕ್ಕೆ ವಾಪಾಸ್ಸಾಗಿದ್ದು ಅವರೆಷ್ಟು ಫಿಟ್​ ಇದ್ದಾರೆ ಪಿಕ್ಚರ್ ಕೂಡ ಸಿಗಲಿದೆ. ಇದರ ಜೊತೆ ರಣತಂತ್ರ ರೂಪಿಸುವ ದೃಷ್ಟಿಯಿಂದ ಕೋಚ್ ಹಾಗೂ ಪ್ಲೇಯರ್ಸ್​ ನಡುವೆ ಒನ್​ ಟು ಒನ್​​ ಮೀಟಿಂಗ್ ನಡೆದಿದೆ.

ಆಲೂರಿನ ಕೆಎಸ್​​​​​ಸಿಎ ಸ್ಟೇಡಿಯಂನಲ್ಲಿ ಬೀಡು ಬಿಟ್ಟಿರುವ ಮೆನ್​ ಇನ್​ ಬ್ಲೂ ಪಡೆ ಏಷ್ಯಾಕಪ್​​​ ಟೂರ್ನಿಗೆ ಭರ್ಜರಿ ತಯಾರಿ ನಡೆಸಿದೆ. ಇನ್ನೆರಡು ಕ್ಯಾಂಪ್​ ಬಾಕಿ ಉಳಿದಿದ್ದು ಅದ್ಯಾವ ರೀತಿ ಅಭ್ಯಾಸ ನಡೆಸಿ ಏಷ್ಯಾಕಪ್ ಅಖಾಡಕ್ಕೆ ಧುಮುಕುತ್ತೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏಷ್ಯಾಕಪ್​ನಲ್ಲಿ ಕ್ಯಾಪ್ಟನ್​ ರೋಹಿತ್, ವಿರಾಟ್​ ಟಾರ್ಗೆಟ್​​​ ಯಾರು..? ಜೋಡಿಯಾಗಿ ಪ್ರಾಕ್ಟೀಸ್ ಮಾಡ್ತಿರೋದ್ಯಾಕೆ?

https://newsfirstlive.com/wp-content/uploads/2023/08/VIRAT_ROHIT_Afridi.jpg

Load More