newsfirstkannada.com

ಕೊಹ್ಲಿ ಆರ್ಭಟದ ಹಿಂದಿದೆ ಸೀಕ್ರೆಟ್​ ವೆಪನ್​; ವಿರಾಟನಿಗೆ​​ ಬಲ ತುಂಬುತ್ತಿರೋದು ಒಂದು ಸ್ಪೆಷಲ್​ ಬ್ಯಾಂಡ್​..!

Share :

19-11-2023

    ವಿಶ್ವಕಪ್​ ಟೂರ್ನಿಯಲ್ಲಿ ಕಿಂಗ್​ ಕೊಹ್ಲಿ ಆರ್ಭಟ

    ಸ್ಮಾರ್ಟ್ ​ವಾಚ್​ ತರ.. ಆದ್ರೆ ಸ್ಮಾರ್ಟ್​ ವಾಚ್​ ಅಲ್ಲ..!

    ಈ ಬ್ಯಾಂಡ್​ನ ವಿಶೇಷತೆ ಏನು..? ಉಪಯೋಗ ಏನು..?

ವಿಶ್ವಕಪ್​ ಟೂರ್ನಿಯಲ್ಲಿ ರನ್​ಮಷೀನ್​ ಕಿಂಗ್​ ಕೊಹ್ಲಿಯ ಆರ್ಭಟ ಜೋರಾಗಿದೆ. ಶತಕದ ಸರದಾರನಾಗಿ ಮುನ್ನುಗ್ಗುತ್ತಿರುವ ವಿರಾಟ್​, ಇಂದಿನ ಪಂದ್ಯದಲ್ಲೂ ಟೀಮ್​ ಇಂಡಿಯಾದ ಮೇನ್​ ವೆಪನ್​. ದಾಖಲೆಗಳನ್ನು ಪುಡಿಗಟ್ಟುತ್ತ ರೆಡ್​ ಹಾಟ್​ ಫಾರ್ಮ್​ನಲ್ಲಿ ಮಿಂಚುತ್ತಿರುವ ಕೊಹ್ಲಿಯ ಆಟದ ಹಿಂದೆ ಸಿಕ್ರೇಟ್​ ವೆಪನ್​ ಕಾರ್ಯ ನಿರ್ವಹಿಸಿದೆ.

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಬ್ಯಾಟರ್​ ಕಿಂಗ್​ ಕೊಹ್ಲಿ ರನ್​ಭೂಮಿಯಲ್ಲಿ ದರ್ಬಾರ್​ ನಡೆಸ್ತಿದ್ದಾರೆ. ಕ್ರಿಕೆಟ್​ ದೇವರು ಸಚಿನ್​ ನಿರ್ಮಿಸಿದ್ದ, ಜಗತ್ತಿನಲ್ಲಿ ಎಲ್ಲರೂ ಮುರಿಯಲು ಅಸಾಧ್ಯವಾದ ದಾಖಲೆ ಎಂದು ಭವಿಷ್ಯ ನುಡಿದಿದ್ದ, ದಾಖಲೆಯನ್ನ ಬ್ರೇಕ್​ ಮಾಡಿದ್ದೇ ಕಿಂಗ್​ ಕೊಹ್ಲಿಯ ಆರ್ಭಟ ಹೇಗಿದೆ ಅನ್ನೋದಕ್ಕೆ ಉದಾಹರಣೆಯಾಗಿ ನಿಂತಿದೆ. ಆಡಿದ 10 ಪಂದ್ಯಗಳಲ್ಲಿ ಬರೋಬ್ಬರಿ 101.57ರ ಸರಾಸರಿಯಲ್ಲಿ 711 ರನ್​ ಗಳಿಸೋದು ಅಂದ್ರೆ ಸಾಮಾನ್ಯದ ವಿಚಾರನಾ?

ಕಿಂಗ್​ ಕೊಹ್ಲಿ ಆರ್ಭಟದ ಹಿಂದಿದೆ ಸೀಕ್ರೆಟ್​ ವೆಪನ್​..!

ವಿಶ್ವಕಪ್​ ಮೆಗಾಟೂರ್ನಿಯಲ್ಲಿ ವಿರಾಟ್ ​ಕೊಹ್ಲಿ ಇಂತಹ ಟೆರರ್​ ಬ್ಯಾಟಿಂಗ್​ ನಡೆಸ್ತಾ ಇರೋದ್ರ ಹಿಂದೆ ಕಠಿಣ ಪರಿಶ್ರಮವಿದೆ. ಯಾವಾಗ್ಲೂ ಪ್ರಾಕ್ಟಿಸ್​ ಫಸ್ಟ್​ ಅನ್ನೋ ಕೊಹ್ಲಿ, ಮೆಗಾ ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲಿ ಕಣಕ್ಕಿಳಿಯೋಕು ಮುನ್ನ ಕಠಿಣ ಅಭ್ಯಾಸ ನಡೆಸಿದ್ದಾರೆ. ಇದ್ರ ಜೊತೆಗೆ ವಿಶ್ವಕಪ್​ ಗೆಲ್ಲಬೇಕು ಅನ್ನೋ ಛಲ, ಕೆಚ್ಚೆದೆಯ ಹೋರಾಟ ಎಲ್ಲವೂ ಕೊಹ್ಲಿ ಸಕ್ಸಸ್​ಗೆ ಕೆಲಸ ಮಾಡಿವೆ ಅನ್ನೋದು ಓಪನ್​ ಸೀಕ್ರೆಟ್. ಮತ್ತೊಂದು ಸೀಕ್ರೆಟ್​ ವೆಪನ್​ ಕೂಡ ವಿರಾಟನ ಯಶಸ್ಸಿನ ಹಿಂದಿದೆ ಅದೇ ಸ್ಪೆಷಲ್​ ಬ್ಯಾಂಡ್​.

ವಿರಾಟನಿಗೆ​​ ಬಲ ತುಂಬಿದ ಸ್ಪೆಷಲ್​ ಬ್ಯಾಂಡ್.​.!

ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಸೆಂಚುರಿ ಇನ್ನಿಂಗ್ಸ್​ ಕಟ್ಟಿದ್ರು. ಸಚಿನ್​ ಎದುರು, ಸಚಿನ್​ರದ್ದೇ ಹೋಮ್​​ಗ್ರೌಂಡ್​ನಲ್ಲಿ ಸಚಿನ್​ ದಾಖಲೆ ಧೂಳಿಪಟ ಮಾಡಿದ್ರು. ಸೆಲಬ್ರೇಷನ್​ ಮಾಡುವಾಗ ತೆಂಡುಲ್ಕರ್​ಗೆ​​ ನಮಸ್ಕಾರವನ್ನೂ ತಿಳಿಸಿದ್ರು. ಇದೇ ವೇಳೆ ನೋಡಿ ಕೊಹ್ಲಿಯ ಸೀಕ್ರೆಟ್ ವೆಪನ್ ಕೂಡ ರಿವೀಲ್​ ಆಗಿದ್ದು. ಕೈಯಲ್ಲಿದ್ದ ವಿಶೇಷ ಬ್ಯಾಂಡ್​ ಕ್ಯಾಮಾರಾ ಕಣ್ಣಿಗೆ ಬಿದ್ದಿದ್ದೇ ಬಿದ್ದಿದ್ದು ಹೊಸ ಸೆನ್ಸೇಷನ್​ ಸೃಷ್ಟಿಯಾಗಿದೆ.

ಕೊಹ್ಲಿಯ ಛಲದ ಹೋರಾಟದ ಸೀಕ್ರೆಟ್ ಇದೇ

ವಿಶ್ವಕಪ್​ ಅಖಾಡದಲ್ಲಿ ಕೊಹ್ಲಿ ಸಾಲಿಡ್​ ಆಟವಾಡ್ತಿದ್ದಾರೆ. ಎದುರಾಳಿಗಳ ಎದುರು ತೊಡೆ ತಟ್ಟಿ ಘರ್ಜಿಸ್ತಾ ಇರೋ ವಿರಾಟ್, ಭಾರತದ ಗೆಲುವಿನ ರೂವಾರಿಯಾಗಿದ್ದಾರೆ. ಛಲದ ಹೋರಾಟ, ದಣಿವರಿಯದ ಆಟ ಪ್ರತಿ ಪಂದ್ಯದಲ್ಲೂ ಮಾಮೂಲಿಯಾಗಿದೆ. ರನ್ನಿಂಗ್​ ಬಿಟ್ವಿನ್​ ದ ವಿಕೆಟ್ಸ್​​ ಅಮೋಘವಾಗಿದೆ. ಫೀಲ್ಡಿಂಗ್​ ವೇಳೆಯೂ ಕೊಹ್ಲಿ ಸಾಲಿಡ್​ ಪರ್ಫಾಮೆನ್ಸ್ ನೀಡ್ತಿದ್ದಾರೆ. ​ಸುಸ್ತೇ ಆಗದೇ ಕೊಹ್ಲಿ ಆಡ್ತಿರೋದಕ್ಕೆ ಆ ಬ್ಯಾಂಡ್​​ ಪ್ರಮುಖ ಕಾರಣವಾಗಿದೆ.

ಸ್ಮಾರ್ಟ್ ​ವಾಚ್​ ತರಾನೇ.. ಆದ್ರೆ ಸ್ಮಾರ್ಟ್​ ವಾಚ್​ ಅಲ್ಲ..!

ವಿರಾಟ್​ ಕೊಹ್ಲಿಯ ಕೈಯಲ್ಲಿದ್ದ ಬ್ಯಾಂಡ್​​ನ ಫೋಟೋಗಳು ವೈರಲ್​ ಆಗ್ತಿದ್ದಂತೆ ಎಲ್ಲರೂ ಅದನ್ನ ಸ್ಮಾರ್ಟ್​ ವಾಚ್​ ಎಂದು ಕರೀತಿದ್ದಾರೆ. ಅಸಲಿಗೆ ಸ್ಮಾರ್ಟ್​ ವಾಚ್​ ತರಾನೇ ಆದ್ರೆ, ಸ್ಮಾರ್ಟ್​ ವಾಚ್​ ಅಲ್ಲ.. ವಿರಾಟ್​ ಧರಿಸಿರೋ ಆ ಬ್ಯಾಂಡ್​ನ ಹೆಸರು ವೂಪ್​ ಬ್ಯಾಂಡ್​​ ಅಂತಾ. ಹೆಲ್ತ್​ ಅಂಡ್ ಫಿಟ್​ನೆಸ್​ ಟ್ರ್ಯಾಕರ್​. ಇದು ಅಫಿಶಿಯಲಿ ಇಂಡಿಯನ್​ ಮಾರ್ಕೆಟ್​ಗೆ ಇನ್ನೂ ಬಂದೆ ಇಲ್ಲ.

ವೂಪ್​ ಬ್ಯಾಂಡ್​ನ ವಿಶೇಷತೆ ಏನು.? ಉಪಯೋಗ ಏನು.?

ಚಾಲ್ತಿಯಲ್ಲಿರೋ ಫಿಟ್​ನೆಸ್​ ಬ್ಯಾಂಡ್​ಗಳಿಗಿಂತ ವೂಪ್​ ಬ್ಯಾಂಡ್​ ಸಿಕ್ಕಾಪಟ್ಟೆ ಡಿಫ್ರೆಂಟ್. ಫಿಟ್​ನೆಸ್​ ಬ್ಯಾಂಡ್​ಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡೋ ಇದು, ಫಿಸಿಕಲ್​ ಆ್ಯಕ್ಟಿವಿಟಿಯನ್ನು ಟ್ರ್ಯಾಕ್​ ಮಾಡುತ್ತೆ. ಇದಕ್ಕೆ ಅನುಗುಣವಾಗಿ ನಿಮ್ಮ ನಿದ್ರೆಯ ಗುಣಮುಟ್ಟ ಎಷ್ಟಿರಬೇಕು, ಮಾನಸಿಕ ಆರೋಗ್ಯ ಹೇಗಿದೆ ಅನ್ನೋ ಅಂಶಗಳನ್ನೆಲ್ಲಾ ಇದು ಟ್ರ್ಯಾಕ್​ ಮಾಡುತ್ತೆ.

ವೂಪ್​ ಬ್ಯಾಂಡ್​ನ ಉಪಯೋಗ ಏನು..?

  • ಬಾಡಿ ರಿಕವರಿ ಬಗೆಗಿನ ಸಂಪೂರ್ಣ ಮಾಹಿತಿ
  • ಹೃದಯ ಬಡಿತ, ಉಸಿರಾಟದ ಪ್ರಮಾಣ
  • ರಕ್ತದ ಆಮ್ಲಜನಕದ ಮಟ್ಟ, ಕ್ಯಾಲೋರಿ ಬಳಕೆ
  • ನಿದ್ರೆಯ ಗುಣಮಟ್ಟದ ಮೇಲೆ ನಿಗಾ
  • ಮಾನಸಿಕ ಆರೋಗ್ಯದ ಮೇಲ್ವಿಚಾರಣೆ
  • ಆರೋಗ್ಯ-ಫಿಟ್​ನೆಸ್​ನ ಡೇಟಾ 99% ನಿಖರ

ಫಿಟ್​ನೆಸ್​ ಫ್ರಿಕ್​ ಕೊಹ್ಲಿಗೆ ಇಂತದ್ದೊಂದು ಬ್ಯಾಂಡ್​​ ಅವಶ್ಯಕತೆ ಇದ್ದಿಂದ್ದಂತೂ ಸತ್ಯ. ವಿಶ್ವಕಪ್​ನಂತಹ ಮೆಗಾ ಟೂರ್ನಿಯಲ್ಲಿ ಕೊಹ್ಲಿ ಟೀಮ್​ ಇಂಡಿಯಾದ ಮೇನ್​ ವೆಪನ್​. ಹೀಗಾಗಿ ಕೊಹ್ಲಿ ಫಿಟ್​ ಆಗಿ, ಇಂಜುರಿ ಫ್ರಿ ಆಗಿರೋದು ತಂಡದ ದೃಷ್ಟಿಯಿಂದ ತುಂಬಾ ಇಂಪಾರ್ಟೆಂಟ್​ ಆಗಿತ್ತು. ಈ ವಿಚಾರದಲ್ಲಿ ವೂಪ್​ ಬ್ಯಾಂಡ್​ ಸಹಾಯ ಮಾಡಿದೆ ಅಂದ್ರೆ ತಪ್ಪಾಗಲ್ಲ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಆರ್ಭಟದ ಹಿಂದಿದೆ ಸೀಕ್ರೆಟ್​ ವೆಪನ್​; ವಿರಾಟನಿಗೆ​​ ಬಲ ತುಂಬುತ್ತಿರೋದು ಒಂದು ಸ್ಪೆಷಲ್​ ಬ್ಯಾಂಡ್​..!

https://newsfirstlive.com/wp-content/uploads/2023/11/Virat-kohli-1-3.jpg

Load More