newsfirstkannada.com

Photo: ಸೋತ ನಿರಾಸೆಯಲ್ಲಿ ಕಣ್ಣೀರು ಸುರಿಸಿದ ವಿರಾಟ್​ ಕೊಹ್ಲಿ

Share :

22-05-2023

    ಸೋತ ನಿರಾಸೆಯಲ್ಲಿ ಕಿಂಗ್ ಕೊಹ್ಲಿ ಕಣ್ಣೀರು

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಸೆಂಚುರಿ

    ಕನಸಾಗಿಯೇ ಉಳಿದ ಈ ಸಲ ಕಪ್ ನಮ್ದೇ!

ನಿನ್ನೆ ನಡೆದ ಗುಜರಾತ್​ ಟೈಟಾನ್ಸ್​ ವಿರುದ್ಧ ಅಭಿಮಾನಿಗಳ ನೆಚ್ಚಿನ ತಂಡವಾದ ಆರ್​ಸಿಬಿ ಸೋತಿದೆ. ಹೀಗಾಗಿ ಈ ಬಾರಿಯ ಐಪಿಎಲ್​ ಟೂರ್ನಿಯಿಂದ ಆರ್​ಸಿಬಿ ಕೆಳಕ್ಕಿಳಿದೆ. ಅಭಿಮಾನಿಗಳಿಗಂತೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು​ ತಂಡ ಪ್ಲೇ ಆಫ್​ಗೆ ಹಂತಕ್ಕೇರಲು ವಿಫಲವಾಗಿರುವುದು ಬೇಸರ ತರಿಸಿರುವುದಲ್ಲದೆ, ಅನೇಕರು ಕಣ್ಣೀರು ಸುರಿಸಿದ್ದಾರೆ. ಆರ್​ಸಿಬಿ ಸ್ಫೋಟಕ ಬ್ಯಾಟ್ಸ್​ಮನ್ ವಿರಾಟ್​​​ ಕೊಹ್ಲಿ ಕೂಡ ಸೋತ ನಿರಾಸೆಯಲ್ಲಿ ಕಣ್ಣೀರು ಹಾಕಿದ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದೆ.

ಕೊಹ್ಲಿಗೆ ಈ ಬಾರಿಯಾದರೂ ತಂಡಕ್ಕೆ ಕಪ್​ ಗೆಲ್ಲಿಸಿ ಕೊಡುವ ಕನಸನ್ನು ನನಸು ಮಾಡಬೇಕೆಂದು ಬಯಸಿದ್ದರು. ಹಾಗಾಗಿ ಶತ ಪ್ರಯತ್ನದ ಮೂಲಕ ಪ್ಲೇ ಆಫ್​​ವರೆಗೆ ತಂಡವನ್ನು ಕೊಂಡೊಯ್ಯಲು ಹೆಜ್ಜೆ ಹಾಕಿದರು. ನಿನ್ನೆ ನಡೆದ ಪಂದ್ಯದಲ್ಲೂ ಕೊಹ್ಲಿ ಸೆಂಚುರಿ ಬಾರಿಸುವ ಮೂಲಕ ತಂಡಕ್ಕೆ ಅಧಿಕ ರನ್​ ಪೇರಿಸುವಲ್ಲಿ ಶ್ರಮಿಸಿದ್ದರು.

ಆದರೆ ಗುಜರಾತ್​ ಟೈಟಾನ್ಸ್​ ತಂಡದ ಆಟಗಾರ ಶುಭ್ಮನ್​ ಗಿಲ್​ ಸಿಕ್ಸರ್​ ಸಿಡಿಸಿ ಶತಕದ ಜೊತೆಗೆ ಆರ್​ಸಿಬಿಯ ಗೆಲುವಿನ ಕನಸನ್ನು ಕಸಿದುಕೊಂಡರು. ಹೀಗಾಗಿ ಕೊಹ್ಲಿಗೆ ನಿರಾಸೆಯಾಗಿದೆ.

ಕೊಹ್ಲಿ ಪ್ರಾರಂಭದಿಂದಲೂ ಆರ್​ಸಿಬಿ ತಂಡದಲ್ಲೇ ಇದ್ದಾರೆ. ಸುಮಾರು 14 ವರ್ಷದಿಂದ ತಂಡದ ಗೆಲವಿಗಾಗಿ ಹೋರಾಡುತ್ತಿದ್ದಾರೆ. ಒಂದು ಬಾರಿಯಾದರೂ ತಂಡಕ್ಕೆ ಕಪ್​ ತಂದುಕೊಡಬೇಕು ಎಂಬುದು ಕೊಹ್ಲಿ ಕನಸು. ಆರೆ ಈ ಕನಸು ಈ ಬಾರಿ ಕೂಡ ನನಸಾಗಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Photo: ಸೋತ ನಿರಾಸೆಯಲ್ಲಿ ಕಣ್ಣೀರು ಸುರಿಸಿದ ವಿರಾಟ್​ ಕೊಹ್ಲಿ

https://newsfirstlive.com/wp-content/uploads/2023/05/Virat-kohli-4.jpg

Load More