newsfirstkannada.com

World Cup Final: ಸಚಿನ್​ ತೆಂಡೂಲ್ಕರ್​ 100 ಶತಕಗಳ ದಾಖಲೆಯನ್ನ ಕೊಹ್ಲಿ ಮುರಿಯಬೇಕು; ಯುವರಾಜ್​ ಸಿಂಗ್​

Share :

18-11-2023

  ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ಶತಕಗಳನ್ನು ಗಳಿಸಬಹುದು

  ವಿರಾಟ್​ ಕೊಹ್ಲಿ ಪ್ರಪಂಚದ ಪರಿಚರ್ತನೆಯನ್ನು ಹೊಂದಿದ್ದಾರೆ

  71 ಅರ್ಧಶತಕ ಮತ್ತು 50 ಶತಕಗಳು ತಮಾಷೆಯಲ್ಲ ಎಂದ ಯುವಿ

ವಿರಾಟ್​​ ಕೊಹ್ಲಿ ಈಗಾಗಲೇ 50 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಸಚಿನ್​ ತೆಂಡೂಲ್ಕರ್​ ಅವರ ಕೈಯಿಂದ ಭೇಷ್​ ಎನಿಸಿಕೊಂಡಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅವರು ವಿರಾಟ್​ ಕೊಹ್ಲಿ ಸಚಿನ್​ ಅವರ 100 ಶತಕಗಳ ದಾಖಲೆಯನ್ನ ಮುರಿಯುತ್ತಾರೆ ಎಂದು ಹೇಳಿದ್ದಾರೆ.

‘‘ಭಾರತ ತಂಡದಲ್ಲಿ ನಾನು ಎಂದಿಗೂ ಉತ್ತಮ ಸಂಯೋಜನೆಯನ್ನು ಕಂಡಿಲ್ಲ. ಒಂದೇ ತಂಡದಲ್ಲಿ 5 ಬ್ಯಾಟರ್​​ಗಳು, 8-10 ಮ್ಯಾಚ್​ ವಿನ್ನರ್​ಗಳು ನಿಮ್ಮಲ್ಲಿದ್ದಾರೆ. 2003-2007ರಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಹೊಂದಿರುವಾಗ ಆಸ್ಟ್ರೇಲಿಯಾ ತಂಡವು ಈ ರೀತಿಯ ಪರಾಕ್ರಮವನ್ನು ಹೊಂದಿತ್ತು’’ ಎಂದು ಯುವರಾಜ್​ ಸಿಂಗ್​ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ‘‘ಸಚಿನ್​ ತೆಂಡೂಲ್ಕರ್​ ಅವರ 100 ಶತಕಗಳ ದಾಖಲೆಯನ್ನು ಮುರಿಯಲು ನಾನು ಕೊಹ್ಲಿಯನ್ನು ಬೆಂಬಲಿಸುತ್ತೇನೆ. ವಿರಾಟ್​ ಕೊಹ್ಲಿ ಸಾಗುತ್ತಿರುವ ವೇಗದಲ್ಲಿ , ಅವರು ಸಚಿನ್​ 100 ಶತಕಗಳ ದಾಖಲೆಯನ್ನು ಮುರಿಯಬೇಕು. ವಿಶೇಷವಾಗಿ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ಶತಕಗಳನ್ನು ಗಳಿಸಬಹುದು ಎಂದು ನಾನು ಭಾವಿಸುತ್ತೇನೆ. ಅವರು ಪ್ರಪಂಚದ ಪರಿಚರ್ತನೆಯನ್ನು ಹೊಂದಿದ್ದಾರೆ. 71 ಅರ್ಧಶತಕ ಮತ್ತು 50 ಶತಕಗಳು ತಮಾಷೆಯಲ್ಲ’’ ಎಂದು ಹೇಳಿದ್ದಾರೆ.

ಇದನ್ನು ಓದಿ: Team India: ಟಾಪರ್ಸ್​ ಸಕ್ಸಸ್​ ಹಿಂದೆ ಮಿಡಲ್​ ಆರ್ಡರ್​ ಶ್ರಮ.! ಶ್ರೇಯಸ್​- ರಾಹುಲ್ ಸೂಪರೋ ಸೂಪರ್

ನಾಳೆ ಗುಜರಾತ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ ಪಂದ್ಯ ನಡೆಯಲಿದೆ. ಟೀಂ ಇಂಡಿಒಯಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮತ್ತೊಂದೆಡೆ ವಿರಾಟ್​ ಕೊಹ್ಲಿ ಮೇಲೂ ಎಲ್ಲರ ಕಣ್ಣಿದೆ.

ಇದನ್ನು ಓದಿ: World Cup 2023: ಆಸೀಸ್​ಗೆ ಈತನೇ ಕೃಪಾಕಟಾಕ್ಷ! ಯೆಲ್ಲೋ ಆರ್ಮಿಯ ​​​ಹಣೆಬರಹ ಬದಲಿಸಿದ ಪುಣ್ಯಾತ್ಮ ಈತ!

ಇನ್ನು ವಾಂಖೆಂಡೆ ಮೈದಾನದಲ್ಲಿ ನ್ಯೂಜಿಎಲೆಂಡ್​ ವಿರುದ್ಧ ಕೊಹ್ಲಿ 50ನೇ ಶತಕ ಬಾರಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಕೊಹ್ಲಿ 80 ಶತಕ ಬಾರಿಸಿದ್ದಾರೆ. ಪ್ರಸ್ತುತ ಕೊಹ್ಲಿ 2023ರ ವಿಶ್ವಕಪ್​ನಲ್ಲಿ 711 ರನ್​ ಗಳಿಸುವ ಮೂಲಕ ಅತಿ ಹೆಚ್ಚು ಬಾರಿಸಿದ ಆಟಗಾರರೆಂದೆನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup Final: ಸಚಿನ್​ ತೆಂಡೂಲ್ಕರ್​ 100 ಶತಕಗಳ ದಾಖಲೆಯನ್ನ ಕೊಹ್ಲಿ ಮುರಿಯಬೇಕು; ಯುವರಾಜ್​ ಸಿಂಗ್​

https://newsfirstlive.com/wp-content/uploads/2023/11/Yuvraj-And-Kohli.jpg

Load More