newsfirstkannada.com

ಸಚಿನ್​ಗೆ​​ ಸರಿಸಮನಾಗಿ ನಿಂತ​ ಕೊಹ್ಲಿ; ಇಬ್ಬರ ಶತಕದ ಹಿಂದಿದೆ ಒಂದೊಂದು ಕಹಾನಿ

Share :

07-11-2023

    ರೋಚಕವಾಗಿದೆ ಲೆಜೆಂಡ್​ಗಳ ಶತಕದ ಹಾದಿ.!

    ಹೇಗಿತ್ತು ಸಚಿನ್​, ಕೊಹ್ಲಿಯ​ ಶತಕದ ಜರ್ನಿ.?

    ಜರ್ನಿಯಲ್ಲಿ ಇಬ್ಬರಿಗೂ ಕಾಡಿವೆ ಅಡೆತಡೆಗಳು

ಅಭಿಮಾನಿಗಳ ಹೆಬ್ಬಯಕೆ ಕೊನೆಗೂ ಈಡೇರಿದೆ. 49ನೇ ಸೆಂಚುರಿ ಸಿಡಿಸಿ ಕಿಂಗ್​ ಕೊಹ್ಲಿ, ಮಾಸ್ಟರ್​ ಸಚಿನ್​ ಸರಿಸಮನಾಗಿ ನಿಂತಿದ್ದಾರೆ. ಸದ್ಯ ಏಕದಿನ ಕ್ರಿಕೆಟ್​ನ ಸಿಂಹಾಸನವನ್ನ ಇಬ್ಬರೂ ಜಂಟಿಯಾಗಿ ಹಂಚಿಕೊಂಡಿದ್ದಾರೆ. ಹಾಗಾದ್ರೆ, ಲೆಜೆಂಡ್​ಗಳ ಜರ್ನಿ ಹೇಗಿತ್ತು.? ಸಾಧನೆ ಮಾಡಿದ್ದೇಗೆ.? ಗಾಡ್​ ಆಫ್​ ಕ್ರಿಕೆಟ್​​, ಕಿಂಗ್​ ಕೊಹ್ಲಿ ಸೆಂಚುರಿ ಸಾಧನೆಯ ರೋಚಕ ಕಹಾನಿ ಇಲ್ಲಿದೆ.

ಸಚಿನ್​ ತೆಂಡುಲ್ಕರ್​ ಕ್ರಿಕೆಟ್​ ಲೋಕದ ಗಾಡ್​. ಆದರೆ, ವಿರಾಟ್​ ಕೊಹ್ಲಿ ಜಗತ್ತಿನ ಕಿಂಗ್​. ಸಚಿನ್​ರನ್ನೇ ಆರಾಧಿಸಿ, ಸ್ಫೂರ್ತಿಯಾಗಿ ತೆಗೆದುಕೊಂಡು ಬ್ಯಾಟ್​ ಹಿಡಿದ ಕೊಹ್ಲಿ ಇಂದು ಸಚಿನ್​ ಸರಿಸಮನಾಗಿ ನಿಂತಿದ್ದಾರೆ. ಎಲ್ಲರೂ ಅಂದು ಅಸಾಧ್ಯ ಎಂದಿದ್ದ ದಾಖಲೆಯನ್ನ ಕೊಹ್ಲಿ ಮುಟ್ಟಿದ್ದಾರೆ.

ಸಚಿನ್​ ದಾಖಲೆಯನ್ನ ಮುರಿಯೋದು ಅಸಾಧ್ಯ ಅಂತ ಸಲ್ಮಾನ್​ ಖಾನ್​ ಸೇರಿದಂತೆ ಎಲ್ಲರೂ ಅಂದ್ರೆ, ಸಚಿನ್​ ಮಾತ್ರ ದಾಖಲೆ ಮುರಿಯೋ ಭವಿಷ್ಯ ನುಡಿದಿದ್ರು. ಅದೂ ಕೊಹ್ಲಿ ಹೆಸರನ್ನ ವಿಶೇಷವಾಗಿ ಮೆನ್ಶನ್​ ಮಾಡಿದ್ರು. ಹೀಗೆ ಮಾತಾಡಿ ವರ್ಷಗಳು ಉರುಳಿವೆ. ಕೊಹ್ಲಿ ಇದೀಗ ಸಚಿನ್​ ಸರಿಸಮನಾಗಿ ಬಂದು ನಿಂತೂ ಆಗಿದೆ. ಅದೂ ಸಚಿನ್​ಗಿಂತ ಬರೋಬ್ಬರಿ 174 ಇನ್ನಿಂಗ್ಸ್​​ಗಳ ಮೊದಲೇ.

ಸಚಿನ್​​ ಸರಿಸಮನಾಗಿ ನಿಂತ ವಿರಾಟ್​ ಕೊಹ್ಲಿ.!

18 ಡಿಸೆಂಬರ್​​​ 1989ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸಚಿನ್​, 49ನೇ ಸೆಂಚುರಿ ಸಿಡಿಸಿದ್ದು ಮಾರ್ಚ್​​ 16, 2012ರಂದು. ಸುದೀರ್ಘ 23 ವರ್ಷಗಳ ಜರ್ನಿ ಅದು. ಈ ಜರ್ನಿಯಲ್ಲಿ ಸಚಿನ್​ ಕಂಡ ಏರಿಳಿತ ಹಲವು. ಫಾರ್ಮ್​ ಸಮಸ್ಯೆ ಅಷ್ಟಾಗಿ ಕಾಡದಿದ್ರು, ನರ್ವಸ್​ 90 ಅನ್ನೋ ಮಾತು ಮನಸ್ಸಿಗೆ ನಾಟಿದೆ. ಓಪನರ್​, 4ನೇ ಕ್ರಮಾಂಕ ಹೀಗೆ​ ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆಯೂ ಆಗಿದೆ. ಒಂದೊಂದು ಸೆಂಚುರಿ ಹಿಂದೂ ಒಂದೊಂದು ಕಥೆಯೆ ಇದೆ.

ಸಚಿನ್​ ತೆಂಡುಲ್ಕರ್​ ಆರಂಭಿಕನಾಗಿ 45 ಸೆಂಚುರಿಗಳನ್ನ ಸಿಡಿಸಿದ್ರೆ, 4ನೇ ಕ್ರಮಾಂಕದಲ್ಲಿ ಕೇವಲ 04 ಸೆಂಚುರಿಗಳನ್ನ ಸಿಡಿಸಿದ್ದಾರೆ.

49 ಶತಕಗಳ ಪೈಕಿ ಭಾರತದ ನೆಲದಲ್ಲಿ 20 ಶತಕ ಸಿಡಿಸಿದ್ರೆ, ವಿದೇಶದಲ್ಲಿ 12 ಶತಕಗಳನ್ನ ಸಚಿನ್​ ಸಿಡಿಸಿದ್ದಾರೆ. ಇನ್ನೂ ನ್ಯೂಟ್ರಲ್​ ವೆನ್ಯೂನಲ್ಲಿ 17 ಶತಕಗಳು ಬಂದಿವೆ.

ಇನ್ನು ಕರಿಯರ್​​ನ ಜರ್ನಿ ನೋಡಿದ್ರೆ, ಸಚಿನ್​ ಸಕ್ಸಸ್​ ಕಂಡಿದ್ದು ಆರಂಭಿಕನಾಗಿ. ಆದರೆ, ಕೊಹ್ಲಿಗೆ ಸಕ್ಸಸ್​ ಸಿಕ್ಕಿದ್ದು, 3ನೇ ಕ್ರಮಾಂಕದಲ್ಲಿ. 49 ಶತಕ ಸಿಡಿಸಿದ ಸುದೀರ್ಘ ಜರ್ನಿಯಲ್ಲಿ ಕೊಹ್ಲಿಯೂ ಏಳುಬೀಳನ್ನ ಕಂಡಿದ್ದಾರೆ. ಸಮಸ್ಯೆಗಳನ್ನ ಎದುರಿಸಿದ್ದಾರೆ. ಆದರೆ, NEVER GIVE UP ಆ್ಯಟಿಟ್ಯೂಡ್​ ಮಾತ್ರ ಬಿಟ್ಟಿಲ್ಲ. ಅದೇ ಇಂದು ಸಚಿನ್​ ಸರಿಸಮವಾಗಿ ನಿಲ್ಲುವಂತೆ ಮಾಡಿದೆ.

ವಿರಾಟ್​ ಕೊಹ್ಲಿ 3ನೇ ಕ್ರಮಾಂಕದಲ್ಲಿ 42 ಶತಕ ಸಿಡಿಸಿ ಮಿಂಚಿದ್ರೆ, 4ನೇ ಕ್ರಮಾಂಕದಲ್ಲಿ 7 ಸೆಂಚುರಿ ಸಿಡಿಸಿದ್ದಾರೆ.

ಈ ಪೈಕಿ ಭಾರತದ ನೆಲದಲ್ಲಿ 23 ಶತಕ ಸಿಡಿಸಿದ್ರೆ, ವಿದೇಶದಲ್ಲಿ 21 ಶತಕಗಳನ್ನ ಕೊಹ್ಲಿ​ ಸಿಡಿಸಿದ್ದಾರೆ. ನ್ಯೂಟ್ರಲ್​ ವೆನ್ಯೂನಲ್ಲಿ 05 ಶತಕಗಳನ್ನ ವಿರಾಟ್​ ಖಾತೆಗೆ ಹಾಕಿಕೊಂಡಿದ್ದಾರೆ.

ಆ ಕಾಲದಲ್ಲಿ ಬೆಂಕಿಯುಂಡೆಗಳನ್ನೇ ಉಗುಳುತಿದ್ದ ಬೌಲರ್​ಗಳನ್ನ ಆರಂಭಿಕ ಫೇಸ್​ ಮಾಡೋದು ಅಸಾಧ್ಯದ ಮಾತಾಗಿತ್ತು. ಅಂತಾ ಸಮಯದಲ್ಲಿ ಸಚಿನ್ ಓಪನರ್​​ ಆಗಿ​ ಸಕ್ಸಸ್​ ಕಂಡಿದ್ದನ್ನ ಸಾಧಾರಣ ಅನ್ನೋಕೆ ಸಾಧ್ಯವೇ ಇಲ್ಲ.

ಹಾಗಂತ ಕೊಹ್ಲಿ ಆಟವನ್ನೂ ಅಲ್ಲಗಳೆಯುವಂತಿಲ್ಲ. ಟೆಕ್ನಾಲಜಿ ಅಪ್​ಡೇಟ್​ ಆಗಿರೋದು ಕೊಹ್ಲಿಗೆ ಪ್ಲಸ್​ ಪಾಯಿಂಟ್​ ಅನ್ನೋ ಮಾತಿದೆ. ಆದ್ರೆ, ಟೆಕ್ನಾಲಜಿಯಿಂದ ಕೇವಲ ಅಡ್ವಾಂಟೇಜ್​ ಮಾತ್ರವೆ ಇಲ್ಲ. ಡಿಸ್​​ಅಡ್ವಾಂಟೇಜ್ ಕೂಡ ಇದೆ. ಎಷ್ಟೋ ಬಾರಿ ಅಂಪೈರ್​ ನಾಟೌಟ್​ ಅಂದ್ರೂ ಡಿಆರ್​ಎಸ್​​ನಲ್ಲಿ ಕೊಹ್ಲಿ ಔಟಾಗಿ ಪೆವಿಲಿಯನ್​ ಸೇರಿದ ಉದಾಹರಣೆಯಿದೆ.

ಹೀಗಾಗಿ ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ ಇವರಿಬ್ಬರಲ್ಲಿ ಯಾರು ಗ್ರೇಟ್ ಅಂತಾ ಈಗ ನಡೀತಾ ಇರೋ ಚರ್ಚೆಯೇ ಅನಗತ್ಯ. ಇಬ್ಬರ ಆಟದಿಂದ ಗೆದ್ದಿರೋದು ಟೀಮ್​ ಇಂಡಿಯಾ ಅನ್ನೋದಷ್ಟೇ ಸತ್ಯ. ಸಚಿನ್​ ಕ್ರಿಕೆಟ್​ ದೇವರು. ಕೊಹ್ಲಿ ಕ್ರಿಕೆಟ್​ ಕಿಂಗ್​ ಅನ್ನೋದೆ ವಾಸ್ತವ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿನ್​ಗೆ​​ ಸರಿಸಮನಾಗಿ ನಿಂತ​ ಕೊಹ್ಲಿ; ಇಬ್ಬರ ಶತಕದ ಹಿಂದಿದೆ ಒಂದೊಂದು ಕಹಾನಿ

https://newsfirstlive.com/wp-content/uploads/2023/11/Kohli.jpg

Load More