ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ
50ನೇ ಶತಕ ಬಾರಿಸಿದ ಕೊಹ್ಲಿಗೆ ಕಿವೀಸ್ ಅಭಿನಂದನೆ
ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿರುವ ಭಾರತ
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಹಲವು ಕ್ರೀಡಾ ಸ್ಫೂರ್ತಿಗೆ ಸಾಕ್ಷಿ ಆಯಿತು. ಜಿದ್ದಾಜಿದ್ದಿನ ಹೈ-ವೋಲ್ಟೇಜ್ ಕದನದ ಸಂದರ್ಭದಲ್ಲಿ ಕಿಂಗ್ ಕೊಹ್ಲಿ ನ್ಯೂಜಿಲೆಂಡ್ ತಂಡದ 12th ಮ್ಯಾನ್ನಿಂದ ಕುಡಿಯಲು ನೀರನ್ನು ಕೇಳಿ ಪಡೆದರು.
30ನೇ ಓವರ್ನಲ್ಲಿ ನ್ಯೂಜಿಲೆಂಡ್ ಆಟಗಾರರು ಡ್ರಿಂಕ್ಸ್ ಬ್ರೇಕ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ನ್ಯೂಜಿಲೆಂಡ್ ಆಟಗಾರರಿಗೆ ಡ್ರಿಂಕ್ಸ್ ತೆಗೆದುಕೊಂಡು ವಿಲ್ ಯಂಗ್ ಮೈದಾನಕ್ಕೆ ಬಂದಿದ್ದರು. ನ್ಯೂಜಿಲೆಂಡ್ ಆಟಗಾರರು ಪಾನೀಯ ಸೇವಿಸುತ್ತಿರುವ ಸ್ಥಳಕ್ಕೆ ಬಂದ ಕೊಹ್ಲಿ, ಡ್ರಿಂಕ್ಸ್ ನೀಡುವಂತೆ ಕೇಳಿದ್ದಾರೆ.
ಬಳಿಕ ವಿಲ್ ಯಂಗ್ ನೀಡಿದ ನೀರನ್ನು ವಿರಾಟ್ ಕುಡಿದರು. ಅದೇ ವೇಳೆ ಸ್ಯಾಂಟ್ನರ್ ಕೊಹ್ಲಿ ಬಳಿ ಬಂದು ಏನೋ ತಮಾಷೆ ಮಾಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ವಿರಾಟ್ ಏಕದಿನ ಕ್ರಿಕೆಟ್ನಲ್ಲಿ 50ನೇ ಶತಕ ಬಾರಿಸಿ ಔಟ್ ಆಗಿ ಪೆವಿಲಿಯನ್ಗೆ ಹೋಗುವಾಗ ಕಿವೀಸ್ ಆಟಗಾರರು ಕೊಹ್ಲಿಯನ್ನು ಅಭಿನಂದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
View this post on Instagram
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್