newsfirstkannada.com

ಕೊಹ್ಲಿಗೆ ನಿನ್ನೆ ಅವಿಸ್ಮರಣೀಯ ದಿನ.. ಕ್ರಿಕೆಟ್​ನ ಸೂಪರ್​ ಸ್ಟಾರ್​​ ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟು ಎಷ್ಟು ವರ್ಷ?

Share :

21-06-2023

  ‘ಟೆಸ್ಟ್​ ಕ್ರಿಕೆಟ್​ ನನ್ನ ಜೀವನ’ ಎಂದ ವಿರಾಟ ಕೊಹ್ಲಿ

  ನಾಯಕರಾಗಿ​​ ಕೊಹ್ಲಿಯದ್ದು ಬೇರೆಯದ್ದೇ ಖದರ್​

  ನಾಯಕನಾದ ಮೇಲೆ ಟೀಮ್​ ಇಂಡಿಯಾ ಚೇಂಜ್​

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಕ್ರಿಕೆಟ್​​ನಲ್ಲಿ ವಿರಾಟ್​ ಕೊಹ್ಲಿ ಮಾಡದ ಸಾಧನೆಯೇ ಇಲ್ಲ. ದಾಖಲೆಗಳ ಸರದಾರ, ಅಸಂಖ್ಯ ಅಭಿಮಾನಿಗಳ ಒಡೆಯ, ಮಾಡ್ರನ್​ ಡೇ ಕ್ರಿಕೆಟ್​ನ ಸೂಪರ್​ ಸ್ಟಾರ್​ ನಿನ್ನೆಯೂ ಒಂದು ಸಾಧನೆ ಮಾಡಿದ್ದಾರೆ. ಇದು ಕಿಂಗ್​ ಕೊಹ್ಲಿ ಜೀವನದ ಅವಿಸ್ಮರಣೀಯ ಸಾಧನೆ ಅಂದ್ರೂ ತಪ್ಪಾಗಲ್ಲ. ವಿರಾಟ ಸಾಧನೆಯ ಸ್ಪೆಷಲ್​ ಸ್ಟೋರಿ ಇಲ್ಲಿದೆ.

ಟೆಸ್ಟ್​​ ಕ್ರಿಕೆಟ್​​.. ಈ ಹೆಸರಿಗಿರೋ ಗತ್ತೆ ಬೇರೆ. ಆಟದ ಮಜವೇ ಬೇರೆ. ಹೆಸರೆ ಹೇಳುವಂತೆ ಟೆಸ್ಟ್​ ಕ್ರಿಕೆಟ್​​ ನಿಜಕ್ಕೂ ಟೆಸ್ಟ್​ ಮಾಡುತ್ತೆ. ನನ್ನ ಹತ್ರ ತಾಕತ್ತಿದೆ ಏನ್​ ಬೇಕಾದ್ರೂ ಮಾಡ್ತೀನಿ ಅಂದವರೆಲ್ಲಾ ಇಲ್ಲಿ ಮಕಾಡೆ ಮಲಗ್ತಾರೆ. ಒಬ್ಬ ಆಟಗಾರನ ತಾಳ್ಮೆ, ಏಕಾಗ್ರತೆಗೇ ಸವಾಲ್ ಎಸೆಯೋ ಆಟ ಇದು. ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಏನೇ ಸಾಧನೆ ಮಾಡಿದ್ರೂ, ಕೊನೇ ಪಕ್ಷ ಒಂದು ಟೆಸ್ಟ್​ ಪಂದ್ಯವನ್ನಾಡಿದ್ರೆ ಮಾತ್ರ ಆತನೊಬ್ಬ ಒಬ್ಬ ಪರಿಪೂರ್ಣ ಕ್ರಿಕೆಟರ್ ಅನ್ನೋ ಮಾತಿದೆ.. ಅಂತದ್ರಲ್ಲಿ, 12 ವರ್ಷಗಳ ಕಾಲ ಟೆಸ್ಟ್​​ ಕ್ರಿಕೆಟ್​​ ಆಡೋದಂದ್ರೆ ಸಾಮಾನ್ಯದ ಮಾತಾ!

ಟೆಸ್ಟ್​ ಕ್ರಿಕೆಟ್​ ಅಂದ್ರೆ ಕಿಂಗ್​ ಕೊಹ್ಲಿಗೆ ಪ್ರಾಣ

ಕ್ರಿಕೆಟ್​​ನ ಪ್ಯೂರೆಸ್ಟ್​ ಫಾರ್ಮೆಟ್​ ನಶಿಸಿ ಹೋಗ್ತಾಯಿದೆ ಅನ್ನೋ ಟಾಕ್​ ಹಲ ವರ್ಷಗಳಿಂದ ಇದೆ. ಆದ್ರೆ, ಟೆಸ್ಟ್ ಕ್ರಿಕೆಟ್​ನ ಕೀರ್ತಿ ಟಿ20 ಜಮಾನದಲ್ಲೂ ಕಡಿಮೆಯಾಗಿಲ್ಲ. ಸದ್ಯ ವಿಶ್ವ ಕ್ರಿಕೆಟ್​ ಲೋಕದ ಕಿಂಗ್​ ಆಗಿ ಮರೆದಾಡ್ತಿರೋ ಕಿಂಗ್​ ಕೊಹ್ಲಿಗೂ ಟೆಸ್ಟ್​ ಕ್ರಿಕೆಟ್​ ಅಂದ್ರೆ ಪ್ರಾಣ. ಕೊಹ್ಲಿ ಮನಸ್ಸಲ್ಲಿ ಟೆಸ್ಟ್ ಕ್ರಿಕೆಟ್​ಗೆ ಇರೋ ರೆಸ್ಪೆಕ್ಟ್​​ ಬೇರೆಯೇ.

ಟೆಸ್ಟ್​ ಕ್ರಿಕೆಟ್​ ನನ್ನ ಜೀವನ ಎಂದು ವಿರಾಟ

ಏಕದಿನ ಮಾದರಿಯಲ್ಲಿ ವಿರಾಟ್​ 274 ಪಂದ್ಯ ಆಡಿದ್ದಾರೆ. ಟಿ20 ರಲ್ಲಿ 115 ಪಂದ್ಯ ಆಡಿದ್ದಾರೆ.. ರನ್​ ಹೊಳೆ ಹರಿಸಿ, ಶತಕದ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ, ಒನ್​ ಡೇ, ಟಿ20 ಕೊಹ್ಲಿ ಪಾಲಿನ ಸೆಕೆಂಡ್​​ ಚಾಯ್ಸ್​​ ಫಾರ್ಮೆಟ್​​​. ಮೊದಲ ಆಯ್ಕೆ ಏನಿದ್ರೂ ಟೆಸ್ಟ್​​ ಕ್ರಿಕೆಟ್​. ಯಾಕಂದ್ರೆ ಟೆಸ್ಟ್​​ ಕ್ರಿಕೆಟ್​​ ಅನ್ನೋದೇ ಕೊಹ್ಲಿಗೆ ಜೀವನ.

5 ಸಲ ಹೇಳಿದೆ. ಟೆಸ್ಟ್​ ಕ್ರಿಕೆಟ್​​ ಅನ್ನೋದು ನನಗೆ ಜೀವನ. ಸತ್ಯವಾಗಲೂ. ನೀವು ರನ್​ಗಳಿಸದೇ ಇದ್ದಾಗಲೂ ನೀವು ಆಡಬೇಕು. ಬೇರೆಯವರು ರನ್​ಗಳಿಸಿದಾಗ ಚಪ್ಪಾಳೆಯನ್ನೂ ತಟ್ಟಬೇಕು. ನಿಮ್ಮಲ್ಲಿ ಇರೋ ಎಲ್ಲವನ್ನೂ ಕೊಡಬೇಕು. ಚನ್ನಾಗಿ ಆಡಿದ್ದೀರೋ.. ಇಲ್ವೋ.. ರೂಮ್​ಗೆ ಹೋಗಬೇಕು ಮತ್ತೆ ಬೆಳಗ್ಗೆ ಬರಬೇಕು. ಜೀವನದಲ್ಲೂ ನಾವು ಇದನ್ನೆ ಮಾಡಬೇಕು. ನಾನು ಸ್ಪರ್ಧೆ ಮಾಡಲ್ಲ ಅನ್ನೋ ಆಯ್ಕೆಯೇ ಇರಲ್ಲ. ನನಗೆ ಟೆಸ್ಟ್ ಕ್ರಿಕೆಟ್​ ಜೀವನ. ಟೆಸ್ಟ್​ ಕ್ರಿಕೆಟ್​ ಆಡೋದು ಒಳ್ಳೆಯ ವ್ಯಕ್ತಿಯಾದಂತೆ.
ವಿರಾಟ್ ಕೊಹ್ಲಿ

2011 ಜೂನ್​ 20. ರಾಹುಲ್​ ದ್ರಾವಿಡ್​, ವಿವಿಎಸ್​ ಲಕ್ಷ್ಮಣ್​ ರಂತಹ ದಿಗ್ಗಜ ಟೆಸ್ಟ್​ ಸ್ಪೆಷಲಿಸ್ಟ್​ಗಳಿದ್ದ ತಂಡಕ್ಕೆ ​ ಕನಸು ಕಂಗಳ ಹುಡುಗನೊಬ್ಬನ ಎಂಟ್ರಿಯಾಗಿತ್ತು. ಕಿಂಗ್​ಸ್ಟನ್​ನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್​ ಪಡೆಯ ದೈತ್ಯರ ಬೌಲಿಂಗ್​ ಅಟ್ಯಾಕ್​ ಎದುರಿಸಲು 23 ವರ್ಷದ ಯುವಕ ಪ್ಯಾಡ್​ ಕಟ್ಟಿ ಕಣಕ್ಕಿಳಿದಿದ್ದ. ಅದು ಬೇರಾರೂ ಅಲ್ಲ.. ಈಗ ವಿಶ್ವ ಕ್ರಿಕೆಟ್​ ಲೋಕವನ್ನೇ ಆಳ್ತಿರೋ ಕಿಂಗ್​ ಕೊಹ್ಲಿ.

12 ವರ್ಷ, 109 ಪಂದ್ಯ, ರನ್..?
2011 ಜೂನ್​ನಿಂದ 2023 ಜೂನ್​. ಬರೋಬ್ಬರಿ 13 ವರ್ಷಗಳ ಜರ್ನಿ. ನೆನಸಿಕೊಂಡಷ್ಟು ರೋಚಕ. ರಾಷ್ಟ್ರೀಯ ತಂಡದ ಪರ ಒಂದು ಟೆಸ್ಟ್​ ಪಂದ್ಯವನ್ನಾಡಿದ್ರೆ ಸಾಕಪ್ಪಾ ಅನ್ನೋರ ನಡುವೆ ಕೊಹ್ಲಿ ಆಡಿರೋದು ಬರೋಬ್ಬರಿ 109 ಪಂದ್ಯಗಳನ್ನ. ದೇಶ-ವಿದೇಶ ಎಲ್ಲೂ ಕೂಡ ಕೊಹ್ಲಿಯ ರನ್​ದಾಹಕ್ಕೆ ಬ್ರೇಕ್​ ಅನ್ನೋದೆ ಬಿದ್ದಿಲ್ಲ. ಇದಕ್ಕೆ ಸಾಕ್ಷಿ.. ಬ್ಯಾಟ್​ನಿಂದ 28 ಶತಕ, ಕಲೆ ಹಾಕಿರೋ 8479 ರನ್​.

ಕ್ಯಾಪ್ಟನ್​​ ಕೊಹ್ಲಿಯದ್ದು ಬೇರೆಯದ್ದೇ ಖದರ್​..
ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ ಕೊಹ್ಲಿಯ ಜರ್ನಿಯೇ ಬೇರೆ. ಕ್ಯಾಪ್ಟನ್ ಕೊಹ್ಲಿಯ​ ಜರ್ನಿಯೇ ಬೇರೆ. ವಿರಾಟ್​ ಕೊಹ್ಲಿ ಟೆಸ್ಟ್ ಕ್ಯಾಪ್ಟನ್​ ಆಗೋಕು ಮುನ್ನ ಟೀಮ್​ ಇಂಡಿಯಾ ಹೀನಾಯ ಸ್ಥಿತಿಗೆ ತುಲುಪಿತ್ತು. ಱಂಕಿಂಗ್​ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ವಿರಾಟ್​ ಕೊಹ್ಲಿ ಕ್ಯಾಪ್ಟನ್​ ಆದ ಬಳಿಕ ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾದ ಖದರೇ ಬದಲಾಯ್ತು. ಪಾತಾಳಕ್ಕೆ ಕುಸಿದಿದ್ದ ತಂಡ ಫಿನೀಕ್ಸ್​ನಂತೆ ಮೇಲೆದ್ದು ಬಂತು. ಸತತ 42 ತಿಂಗಳ ಕಾಲ ಟೀಮ್​ ಇಂಡಿಯಾ ನಂಬರ್​ 1 ಸ್ಥಾನದಲ್ಲಿತ್ತು.

ನಾಯಕನಾಗಿ ಕೊಹ್ಲಿ

ನಾಯಕನಾಗಿ ಟೀಮ್​ ಇಂಡಿಯಾವನ್ನ 68 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ, 40 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. 17 ಪಂದ್ಯಗಳಲ್ಲಿ ಸೋಲುಂಡಿದ್ರೆ 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. 58.82ರ ಗೆಲುವಿನ ಸರಾಸರಿಯನ್ನು ಹೊಂದಿದ್ದಾರೆ. ನಾಯಕತ್ವದ ಜವಾಬ್ದಾರಿ ಬೆನ್ನಿಗೆ ಬಿದ್ದರೆ ಹಲವು ಆಟಗಾರರ ಅಸಲಿ ಆಟವೇ ಮಾಯವಾಗುತ್ತೆ. ಆದ್ರೆ ಕೊಹ್ಲಿ ಈ ಮಾತಿಗೆ ತದ್ವಿರುದ್ಧ. ಕ್ಯಾಪ್ಟನ್​ ಆದ ಮೇಲೆ ತಂಡವನ್ನ ಮುಂದೆ ನಿಂತು ಲೀಡ್​ ಮಾಡಿರೋ ವಿರಾಟ್​​ 20 ಸೆಂಚುರಿ, 7 ಡಬಲ್​ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ.

ನಾಯಕನಾಗಿ, ಬ್ಯಾಟ್ಸ್​ಮನ್​ ಆಗಿ ಟೆಸ್ಟ್​ ಕ್ರಿಕೆಟ್​ನಲ್ಲಿ 12 ವರ್ಷ ಅಸಾಧ್ಯವನ್ನು ಸಾಧಿಸಿರೋ ಕೊಹ್ಲಿಯಲ್ಲಿ ಇನ್ನೂ ಹಸಿವು ನೀಗಿಲ್ಲ. ಮುಂದೆಯೂ ಕೊಹ್ಲಿ ಟೆಸ್ಟ್​ ಕ್ರಿಕೆಟ್​​ನಲ್ಲಿ ಮಿಂಚಿನ ಪ್ರದರ್ಶನವನ್ನ ನೀಡಲಿ. ವೈಟ್​ ಜೆರ್ಸಿಯಲ್ಲಿ ಶತಕ ಸಿಡಿಸಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿಗೆ ನಿನ್ನೆ ಅವಿಸ್ಮರಣೀಯ ದಿನ.. ಕ್ರಿಕೆಟ್​ನ ಸೂಪರ್​ ಸ್ಟಾರ್​​ ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟು ಎಷ್ಟು ವರ್ಷ?

https://newsfirstlive.com/wp-content/uploads/2023/06/VIRAT-3.jpg

Load More