newsfirstkannada.com

‘0’ ಎಸೆತಕ್ಕೆ 1 ವಿಕೆಟ್​ ಉರುಳಿಸಿದ್ದ ಕೊಹ್ಲಿ.. ವಿರಾಟ್​ನ ಈ ವಿಶೇಷ ಸಾಧನೆ ಯಾರು ಬ್ರೇಕ್ ಮಾಡೇ ಇಲ್ಲ.!

Share :

05-08-2023

  ಕೊಹ್ಲಿ ಬ್ಯಾಟಿಂಗ್​ನಲ್ಲಿ ಅಲ್ಲ.. ಬೌಲಿಂಗ್​ನಲ್ಲೂ ರೆಕಾರ್ಡ್​

  ಯಾರು ಮಾಡದ ಸಾಧನೆ​ ಕೊಹ್ಲಿಯಿಂದ ಮಾತ್ರ ಸಾಧ್ಯ..!

  ಇಂಗ್ಲೆಂಡ್​ನ ಈ ಆಟಗಾರನ್ನು ಔಟ್ ಮಾಡಿದ್ದ ವಿರಾಟ್​

ಬ್ಯಾಟ್ಸ್​ಮನ್​ ವಿರಾಟ್​​ ಕೊಹ್ಲಿಯ ಸಾಧನೆಗಳು & ದಾಖಲೆಗಳ ಬಗ್ಗೆ ಗೊತ್ತೇ ಇದೆ. ಆದ್ರೆ, ಬೌಲರ್​ ವಿರಾಟ್​ನ ಈ ಅಸಮಾನ್ಯ ಸಾಧನೆ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಅದೇನು ಅನ್ನೋದನ್ನ ನೋಡೋಣ ಇವತ್ತಿನ ಸಖತ್​ ಸ್ಟೋರಿಯಲ್ಲಿ.

ಮುತ್ತಯ್ಯ ಮುರಳೀಧನ್​, ಶೇನ್​ ವಾರ್ನ್​, ಗ್ಲೇನ್​ ಮೆಗ್ರಾಥ್​, ಅಲಾನ್​ ಡೊನಾಲ್ಡ್​, ಅನಿಲ್​ ಕುಂಬ್ಳೆ ಇವರೆಲ್ಲ ಕ್ರಿಕೆಟ್​ ಲೋಕದ ಮಾಂತ್ರಿಕ ಬೌಲರ್ಸ್​​. ಜಸ್​ಪ್ರಿತ್​ ಬೂಮ್ರಾ, ಮಿಚೆಲ್​ ಸ್ಟಾರ್ಕ್​​, ಜೋಫ್ರಾ ಆರ್ಚರ್​, ಕಗಿಸೋ ರಬಾಡ ಇವರೆಲ್ಲ ಮಾಡ್ರನ್​​ ಡೇ ಟಿ20 ಫಾರ್ಮೆಟ್​ ಕಂಡ ಖತರ್ನಾಕ್​ ಬೌಲರ್ಸ್​​. ಆದ್ರೆ, ಇವಱರೂ ಮಾಡದ ಸಾಧನೆಯನ್ನ ಬ್ಯಾಟಿಂಗ್​ ಲೆಜೆಂಡ್​​, ಬೌಲಿಂಗ್​ನಲ್ಲಿ ವಿರಾಟ್​ ಕೊಹ್ಲಿ ಮಾಡಿದ್ದಾರೆ.

ಎಂಎಸ್ ಧೋನಿ, ಕೆವಿನ್​ ಪಿಟರ್​​ಸನ್​

AS A BATSMAN, ವಿರಾಟ್​ ಕೊಹ್ಲಿ ಕ್ರಿಕೆಟ್​ ಲೋಕದ ಹಲವು ದಾಖಲೆಗಳ ಒಡೆಯ. ನಾಯಕನಾಗಿಯು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಇದ್ರ ಜೊತೆಗೆ ಬೌಲಿಂಗ್​ನಲ್ಲೂ ಒಂದು ವಿಶಿಷ್ಟ ಸಾಧನೆಯನ್ನ ಬರೆದಿದ್ದಾರೆ. ಟಿ20 ಇಂಟರ್​​ನ್ಯಾಷನಲ್​ ಕ್ರಿಕೆಟ್​ನ ಇತಿಹಾಸದಲ್ಲೇ ಝೀರೋ ಬಾಲ್​ಗೆ ಒಂದು ವಿಕೆಟ್​ ಕಬಳಿಸಿದ ಖ್ಯಾತಿ ಕೊಹ್ಲಿಯದ್ದಾಗಿದೆ.

ವಿರಾಟ್​ಗೆ ಕೀಪರ್ ಧೋನಿ ಸಾಥ್..!

2011ರ ಭಾರತದ ಇಂಗ್ಲೆಂಡ್​ ಪ್ರವಾಸದ ಏಕೈಕ ಟಿ20 ಪಂದ್ಯದ ಸರಣಿಯಲ್ಲಿ ಕ್ರಿಯೇಟ್​ ಆದ ರೆಕಾರ್ಡ್​ ಇದು. ಕೆವಿನ್​ ಪಿಟರ್​​ಸನ್​ ಬ್ಯಾಟಿಂಗ್​ ಮಾಡ್ತಿದ್ದ ವೇಳೆ ಬೌಲಿಂಗ್​ ದಾಳಿಗಿಳಿದ ವಿರಾಟ್​ ಕೊಹ್ಲಿ, ಮೊದಲ ಎಸೆತವನ್ನ ವೈಡ್​ ಹಾಕಿದ್ರು. ಆದ್ರೆ, ಚಾಣಾಕ್ಷ ಧೋನಿ ಸುಮ್ಮನಿಬೇಕಲ್ಲಾ, ವೈಡ್​ ಆಗಿದ್ದ ಬಾಲ್​ನಲ್ಲೂ ಮಿಂಚಿನ ಸ್ಟಂಪಿಂಗ್​ ಮಾಡಿ ಪೀಟರ್​​ಸನ್​ರನ್ನ ಔಟ್​ ಮಾಡಿದ್ರು. ಇದ್ರೊಂದಿಗೆ ಝೀರೋ ಎಸೆತಕ್ಕೆ ಒಂದು ವಿಕೆಟ್​ ಕಬಳಿಸಿದ ಸಾಧನೆಯನ್ನ ಕೊಹ್ಲಿ ಮಾಡಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘0’ ಎಸೆತಕ್ಕೆ 1 ವಿಕೆಟ್​ ಉರುಳಿಸಿದ್ದ ಕೊಹ್ಲಿ.. ವಿರಾಟ್​ನ ಈ ವಿಶೇಷ ಸಾಧನೆ ಯಾರು ಬ್ರೇಕ್ ಮಾಡೇ ಇಲ್ಲ.!

https://newsfirstlive.com/wp-content/uploads/2023/08/VIRAT_KOHLI_BOWLING.jpg

Load More