newsfirstkannada.com

RCB ತವರಲ್ಲೇ ವಿರಾಟನ 50ನೇ ಸೆಂಚುರಿ ಕನಸು.. ಚಿನ್ನಸ್ವಾಮಿ ಸುತ್ತ ಕೊಹ್ಲಿ ಕಟೌಟ್​​ ಇಟ್ಟು ಗೌರವ ಸೂಚಿಸಿದ ಫ್ಯಾನ್ಸ್​ 

Share :

12-11-2023

  50ನೇ ಸೆಂಚುರಿ ಬಾರಿಸಲು ರೆಡಿಯಾದ ವಿರಾಟ್​ ಕೊಹ್ಲಿ

  ಎಲ್ಲರ ಕಣ್ಣು ಕೊಹ್ಲಿ ಮೇಲೆ, ಕೊಹ್ಲಿ ಕಣ್ಣು ಜಯದ ಮೇಲೆ

  ಇಂದು INDvsNED ಪಂದ್ಯ, 9ನೇ ಪಂದ್ಯದ ಜಯದಲ್ಲಿ ರೋಹಿತ್ ಪಡೆ

ಭಾರೀ ಕುತೂಹಲತೆಯಿಂದ ಕೂಡಿದ ಪಂದ್ಯ ಪ್ರಾರಂಭಕ್ಕೆ ಕ್ಷಣಗಣನೆ. ಟೀಂ ಇಂಡಿಯಾ ಮತ್ತು ನೆದರ್​ಲ್ಯಾಂಡ್​ ಹೋರಾಟಕ್ಕೆ ಕೆಲವೇ ಗಂಟೆಗಳು ಬಾಕಿ. ಕ್ರಿಕೆಟ್​ ಪ್ರಿಯರ ಮನದಾಸೆಯಂತೆ ಇಂದು ಟೀಂ ಇಂಡಿಯಾದ ಜಯದ ಜೊತೆಗೆ ಕೊಹ್ಲಿ ಸೆಂಚುರಿ ಬಾರಿಸಲಿ ಎಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಚಿನ್ನಸ್ವಾಮಿ ಮೈದಾನದ ಹೊರಗೆ ಕೊಹ್ಲಿಯ ಕಟೌಟ್​ ಅನ್ನು ಇಡಲಾಗಿದ್ದು, ಅಭಿಮಾನಿಗಳು ವಿರಾಟ್​ಗೆ ವಿಶೇಷ ಅಭಿಮಾನವನ್ನು ಹೊರಹಾಕಿದ್ದಾರೆ.

ಕೊಹ್ಲಿ 50ನೇ ಸೆಂಚುರಿ ಬಾರಿಸಲು ಬಾಕಿ ಉಳಿದಿದೆ. ಅದು ಆರ್​ಸಿಬಿ ತವರಲ್ಲೇ ಸಾಧ್ಯವಾಗಲಿ ಎಂಬುದು ಫ್ಯಾನ್ಸ್​ ಮನದಾಸೆ. ಅದರಂತೆಯೇ ಮೈದಾನದ ಹೊರಗೆ ಕೊಹ್ಲಿ ಈವರೆಗೆ ಬಾರಿಸಿದ ಸೆಂಚುರಿಗಳ ಝಲಕ್​ ಅನ್ನು ಕಟೌಟ್​ ನಿರ್ಮಿಸಿ ಇಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಕಟೌಟ್​​ನ ಝಲಕ್​ ಹರಿದಾಡುತ್ತಿದೆ. ದೇವ್​ ಸಾಗರ್​ ಎಂಬ ಎಕ್ಸ್​ ಖಾತೆ ಬಳಕೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವೈರಲ್​ ಆಗಿದೆ. ಅನೇಕರು ಕೊಹ್ಲಿ ಇಂದು 50ನೇ ಸೆಂಚುರಿ ಬಾರಿಸಲಿ ಎಂದು ಶುಭಹಾರೈಸುತ್ತಿದ್ದಾರೆ.

ಅಂದಹಾಗೆಯೇ ಇಂದು ಟೀಂ ಇಂಡಿಯಾ 9ನೇ ಪಂದ್ಯವನ್ನು ಎದುರಿಸಲಿದೆ. ಈವರೆಗೆ ಆಡಿದ 8 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದು, 9ನೇ ಪಂದ್ಯದಲ್ಲೂ ಟೀಂ ಇಂಡಿಯಾಗೆ ಜಯ ಸಿಗಲಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಇನ್ನು ನೆದರ್​​ಲ್ಯಾಂಡ್​ ವಿಚಾರಕ್ಕೆ ಬರೋದಾದರೆ. ಆಡಿರುವ 8 ಪಂದ್ಯದಲ್ಲಿ 6 ಪಂದ್ಯ ಸೋತಿದೆ. 2 ಪಂದ್ಯ ಗೆದ್ದಿದೆ. ಹಾಗಾಗಿ ಭಾರತ ತಂಡ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲಿದೆ ಎಂಬುದು ಬಹುತೇಕ ಎದ್ದು ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ತವರಲ್ಲೇ ವಿರಾಟನ 50ನೇ ಸೆಂಚುರಿ ಕನಸು.. ಚಿನ್ನಸ್ವಾಮಿ ಸುತ್ತ ಕೊಹ್ಲಿ ಕಟೌಟ್​​ ಇಟ್ಟು ಗೌರವ ಸೂಚಿಸಿದ ಫ್ಯಾನ್ಸ್​ 

https://newsfirstlive.com/wp-content/uploads/2023/11/virat-kohli-3.jpg

Load More