newsfirstkannada.com

ವಿಶ್ವಕಪ್​ ಗೆದ್ದ ಮೇಲೂ ಭಾರೀ ಅಸಮಾಧಾನ ಹೊರಹಾಕಿದ ವಿರಾಟ್​​ ಕೊಹ್ಲಿ.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published July 5, 2024 at 8:17pm

Update July 5, 2024 at 8:47pm

    ನಾನು ಭಾರತ ತಂಡಕ್ಕೆ ನ್ಯಾಯ ಒದಗಿಸಲಿಲ್ಲ ಎಂದು ಕೊಹ್ಲಿ ಬೇಸರ

    ಪ್ರಧಾನಿ ನರೇಂದ್ರ ಮೋದಿ ಮುಂದೆಯೇ ವಿರಾಟ್​ ಕೊಹ್ಲಿ ಭಾವುಕ!

    ಐತಿಹಾಸಿನ ದಿನ ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯಲಿದೆ ಎಂದ್ರು

ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್​ ಇಂಡಿಯಾ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಬಳಿಕ ಬಾರ್ಬಡೋಸ್‌ನಿಂದ ನೇರ ದೆಹಲಿಗೆ ಬಂದಿಳಿಸಿದ ಟೀಮ್​ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಟೀಮ್​ ಇಂಡಿಯಾ ಆಟಗಾರರು ಮಾತುಕತೆ ನಡೆಸಿದ್ರು.

ಇನ್ನು, ಮಾತುಕತೆ ವೇಳೆ ಕೊಹ್ಲಿ ಅವರ ಪ್ರದರ್ಶನದ ಏರಿಳಿತದ ಬಗ್ಗೆ ಪ್ರಧಾನಿ ಮೋದಿ ಪ್ರಶ್ನೆ ಕೇಳಿದ್ರು. ಇದಕ್ಕೆ ಕೊಹ್ಲಿ ರಿಯಾಕ್ಷನ್​​ ಹೀಗಿತು. ನಮ್ಮನ್ನು ಇಲ್ಲಿಗೆ ಕರೆದಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು. ಈ ಐತಿಹಾಸಿನ ದಿನ ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯಲಿದೆ ಎಂದರು.

ನಾನು ಈ ಟೂರ್ನಮೆಂಟ್​ನಲ್ಲಿ ಸಾಕಷ್ಟು ಕೊಡುಗೆ ನೀಡಬೇಕು ಎಂದಿದ್ದೆ. ಆದರೆ, ನನಗೆ ನನ್ನಿಂದ ಆಗುವಷ್ಟು ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ನಾನು ನಿಮಗೆ ಮತ್ತು ತಂಡಕ್ಕೆ ನ್ಯಾಯ ಒದಗಿಸಲಿಲ್ಲ ಎಂದು ರಾಹುಲ್​ ದ್ರಾವಿಡ್​ ಅವರಿಗೂ ಹೇಳಿದೆ. ಆಗ ರಾಹುಲ್​ ಅವರು ಸಂದರ್ಭ ಬಂದಾಗ ನೀನು ಪ್ರದರ್ಶನ ನೀಡುತ್ತೀಯಾ ಅನ್ನೋ ಭರವಸೆ ಇದೆ ಎಂದರು.

ಮೈದಾನಕ್ಕಿಳಿದಾಗ ನನ್ನ ಮೇಲೆ ನನಗೆ ನಂಬಿಕೆಯೇ ಇರಲಿಲ್ಲ. ಯಾವಾಗ ವಿಕೆಟ್​ ಬಿತ್ತೋ ಆಗ ನಾನು ತಂಡಕ್ಕಾಗಿ ಆಡಲೇಬೇಕು ಎಂದು ಭಾವಿಸಿದೆ. ಆ ಸಂದರ್ಭದಲ್ಲಿ ನಾನು ಬಂಧಿಯಾಗಿದ್ದೆ. ಆರಂಭದಲ್ಲೇ 4 ಬಾಲ್​ನಲ್ಲಿ 3 ಫೋರ್​​ಗಳು ಬಂದವು. ನಾನು ಆಡಬೇಕು ಎಂದಾಗ ಆಡಲು ಆಗಲಿಲ್ಲ, ನಾವು ಗೆಲ್ಲಬೇಕು ಅಂತಾ ಇತ್ತೇನೋ ಆಗ ಆಡಿದೆ. ಈ ಗೆಲುವು ನಾನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ‘ನನ್ನ ಗಂಡನ ಬೆಂಬಲಕ್ಕೆ ನಿಂತಿದ್ದಕ್ಕೆ ಥ್ಯಾಂಕ್ಸ್​​..’- ಕೊಹ್ಲಿಗೆ ಧನ್ಯವಾದ ತಿಳಿಸಿದ ಸ್ಟಾರ್​ ಕ್ರಿಕೆಟರ್​ ಹೆಂಡತಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಗೆದ್ದ ಮೇಲೂ ಭಾರೀ ಅಸಮಾಧಾನ ಹೊರಹಾಕಿದ ವಿರಾಟ್​​ ಕೊಹ್ಲಿ.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/07/Kohli-Fire.jpg

Load More