newsfirstkannada.com

ಕೊಹ್ಲಿಗೆ ಕೇವಲ ಎರಡೇ 2 ಚಾನ್ಸ್​.. ಮಿಸ್ ಮಾಡಿದ್ರೆ T20 ಅಧ್ಯಾಯದಿಂದ ಹೊರ ಬೀಳ್ತಾರಾ ವಿರಾಟ್​?

Share :

Published June 26, 2024 at 2:42pm

  ICC ಟೂರ್ನಿಗಳ ರನ್​ ಸರದಾರ ಕಿಂಗ್ ಕೊಹ್ಲಿಗೆ ಇದು ಎಂತಹ ಸ್ಥಿತಿ?

  T20 ವಿಶ್ವಕಪ್ ಪೈಕಿ ಆರಂಭಿಕನಾಗಿ ವಿರಾಟ್​ ಕೊಹ್ಲಿ ಕಳಪೆ ಸಾಧನೆ

  ಸಿಂಗಲ್ ಹ್ಯಾಂಡ್​ನಲ್ಲಿ ಮ್ಯಾಚ್ ಗೆಲ್ಲಿಸಿ ಕೊಡುತ್ತಿದ್ದ ವಿರಾಟ್ ಕೊಹ್ಲಿ

ಮೆಗಾ ಟೂರ್ನಿಗಳಂದ್ರೆ ಸಾಕು. ಎಂಥಹವರಿಗೂ ವಿರಾಟ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರುತ್ತೆ. ಸಿಂಗಲ್ ಹ್ಯಾಂಡ್​ನಲ್ಲೇ ವಿರಾಟ್ ಮ್ಯಾಚ್ ಗೆಲ್ಲಿಸ್ತಾರೆ ಎಂಬ ಭರವಸೆ ಇರುತ್ತೆ. ಆದ್ರೆ, ಈ ಸಲ ಇದೆಲ್ಲವನ್ನು ಕಿಂಗ್ ಕೊಹ್ಲಿ ಹುಸಿಯಾಗಿಸಿದ್ದಾರೆ. ವಿರಾಟ್​ ಕೊಹ್ಲಿಯ ಕಳಪೆಯಾಟ, ಅಭಿಮಾನಿಗಳನ್ನ ಕಂಗೆಡಿಸಿದೆ.

ಇದನ್ನೂ ಓದಿ: ಸ್ಕೂಲ್ ಫೀಸ್ ಕಟ್ಟಲು ಆಗದೇ ಮಕ್ಕಳ ಶಾಲೆ ಬಿಡಿಸಿದ ತಾಯಿ.. ದರ್ಶನ್​ ಗ್ಯಾಂಗ್​ ಮಾಡಿದ ತಪ್ಪಿಗೆ ಮಕ್ಕಳಿಗೂ ಶಿಕ್ಷೆ

ವಿರಾಟ್​ ಕೊಹ್ಲಿ, ವಿಶ್ವ ಕ್ರಿಕೆಟ್​ನ ಅಗ್ರಜ. ಈತನ ರೌದ್ರವತಾರಕ್ಕೆ ಚಿಂದಿಯಾದ ದಾಖಲೆಗಳು ಲೆಕ್ಕಕ್ಕಿಲ್ಲ. ಈತನ ಬೆಂಕಿ ಬ್ಯಾಟಿಂಗ್​​ ಜ್ವಾಲೆಗೆ ಮರೆಯಾದ ಬೌಲರ್​ಗಳು ಒಂದಿಬ್ಬರಲ್ಲ. ಕ್ರೀಸ್​​ನಲ್ಲಿರುವಷ್ಟು ಹೊತ್ತು ಎದುರಾಳಿ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುವ ವಿರಾಟ್, ಕ್ಲಾಸ್ ಆ್ಯಂಡ್ ಮಾಸ್ ಬ್ಯಾಟಿಂಗ್​ನಿಂದ ಎದುರಾಳಿ ನೆದ್ದೆಗೆಡಿಸಿದ್ದಿದೆ. ಆದ್ರೀಗ ಇದೆಲ್ಲವೂ ಮಾಯವಾಯ್ತಾ ಎಂಬ ಅನುಮಾನ ಹುಟ್ಟಿಹಾಕಿದೆ. ಇದಕ್ಕೆಲ್ಲ ಕಾರಣ ವಿರಾಟ್​ ಕೊಹ್ಲಿ ಬ್ಯಾಟಿಂಗ್ ವೈಫಲ್ಯ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ಐಸಿಸಿ ಟೂರ್ನಿಗಳ ರನ್​ ಸರದಾರನಿಗೆ ಇದೆಂಥಾ ಸ್ಥಿತಿ..?

ಐಸಿಸಿ ಟೂರ್ನಿಗಳು ಎಂದಾಕ್ಷಣ ನೆನೆಪಿಗೆ ಬರೋದು ವಿರಾಟ್​ ವೀರಾವೇಶದ ಬ್ಯಾಟಿಂಗ್. ಇದಕ್ಕೆ ಕಾರಣ ಪ್ರತಿ ಐಸಿಸಿ ಟೂರ್ನಿಗಳಲ್ಲಿ ವಿರಾಟ್​ ಗಳಿಸಿದ ರನ್​. ಪ್ರತಿ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾವನ್ನ ಗೆಲುವಿನ ದಡ ಸೇರಿಸ್ತಿದ್ದ ವಿರಾಟ್, ತಂಡದ ಲೀಡಿಂಗ್ ರನ್ ಸ್ಕೋರರ್ ಆಗಿರ್ತಿದ್ದರು. ಅಷ್ಟೇ ಅಲ್ಲ, 2014ರ ಟಿ20 ವಿಶ್ವಕಪ್ ಹಾಗೂ 2022ರ ಟಿ20 ವಿಶ್ವಕಪ್​ನಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿ ಮೆರೆದಾಡಿದ್ದರು. ಆದ್ರೀಗ ಇದೇ ಗರಿಷ್ಠ ರನ್​ ಸ್ಕೋರರ್​ ಪಾಲಿಗೆ ಈ ವಿಶ್ವಕಪ್​​ ಕರಾಳ ಅಧ್ಯಾಯವಾಗಿದೆ.

ಎರಡು ಬಾರಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ ವಿರಾಟ್​​ ಕೊಹ್ಲಿ..!

ಪ್ರಸಕ್ತ ಟಿ20 ವಿಶ್ವಕಪ್​ ವಿರಾಟ್​ ಪಾಲಿಗೆ ಕರಾಳ ಅನ್ನೋಕೆ ಕಾರಣ. ಈ ಅಂಕಿ ಅಂಶಗಳೇ ಆಗಿವೆ. ಒಂದೊಂದು ರನ್ ಗಳಿಸಲು ವಿಫಲರಾಗ್ತಿರುವ ವಿರಾಟ್, ಸಣ್ಣ ಸಣ್ಣ ಎದುರಾಳಿಗೂ ಸುಲಭದ ತುತ್ತಾಗ್ತಿದ್ದಾರೆ. ಇಂಟ್ರಸ್ಟಿಂಗ್ ಅಂದ್ರೆ, ಕಳೆದ 6 ಪಂದ್ಯಗಳಿಂದ 2 ಬಾರಿ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿರುವ ವಿರಾಟ್, 6 ಪಂದ್ಯಗಳಲ್ಲಿ 100ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​​ ಬೀಸಿದ್ದು ಗಳಿಸಿರೋ ರನ್​ ಜಸ್ಟ್​ 66 ಮಾತ್ರ..

ಇದನ್ನೂ ಓದಿ: ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಮರು ಆಯ್ಕೆ.. ಪ್ರಧಾನಿ ಮೋದಿ, ರಾಹುಲ್ ಗಾಂಧಿಯಿಂದ ಶುಭಾಶಯ

ಕೊಹ್ಲಿಯ ಈ ಪರ್ಫಾಮೆನ್ಸ್ 2021ರ ಟಿ20 ವಿಶ್ವಕಪ್​ನ ನೆನಪಿಸುತ್ತಿದೆ. ಯಾಕಂದ್ರೆ, ಆ ವಿಶ್ವಕಪ್​ನಲ್ಲೂ ನಾಯಕನಾಗಿ ವಿರಾಟ್​, ಗಳಿಸಿದ್ದ ರನ್ 68 ರನ್ ಮಾತ್ರ. ಅದು ಕೂಡ 100 ಸ್ಟ್ರೈಕ್​ರೇಟ್​​ನಲ್ಲೇ.

T20 ವಿಶ್ವಕಪ್​ಗಳ ಪೈಕಿ ಆರಂಭಿಕನಾಗಿ ಕಳಪೆ ಸಾಧನೆ

ಪ್ರಸಕ್ತ ವಿಶ್ವಕಪ್​ನಲ್ಲಿ ಅಬ್ಬರಿಸಬೇಕಿದ್ದ ವಿರಾಟ್, ಆರಂಭಿಕನಾಗಿ ಕಳಪೆ ದಾಖಲೆ ಬರೆದಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದ ಪೈಕಿ ಆರಂಭಿಕನಾಗಿ ಅತಿ ಕೆಟ್ಟ ಪರ್ಫಾಮೆನ್ಸ್​ ನೀಡಿದ ಕುಖ್ಯಾತಿಗೆ ವಿರಾಟ್ ಒಳಗಾಗಿದ್ದಾರೆ.

ಇದನ್ನೂ ಓದಿ: ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಬಿರುಕು.. 15 ವರ್ಷದ ಸಂಸಾರಕ್ಕೆ ಡಿವೋರ್ಸ್​​ ಕೊಡಲು ತಯಾರಿ..?

T20 WC​ನಲ್ಲಿ ಭಾರತ ಪರ ಆರಂಭಿಕನಾಗಿ ಕಳಪೆಯಾಟ

ಪ್ರಸಕ್ತ ವಿಶ್ವಕಪ್​ನಲ್ಲಿ ಆರಂಭಿಕನಾಗಿ ವಿರಾಟ್, 11ರ ಅವರೇಜ್​ನಲ್ಲಿ ರನ್ ಗಳಿಸಿದ್ರೆ, 2012ರ ಟಿ20 ವಿಶ್ವಕಪ್​ನಲ್ಲಿ ಗೌತಮ್ ಗಂಭೀರ್, 16ರ ಸರಾಸರಿಯಲ್ಲಿ ರನ್ ಗಳಿಸಿದ್ರು. 2016ರಲ್ಲಿ 17.60ರ ಅವರೇಜ್​ನಲ್ಲಿ ರೋಹಿತ್ ಕಳಪೆ ರನ್ ಗಳಿಸಿದ್ರು. ಇವರೆಲ್ಲರಿಗಿಂತ ಕಳಪೆಯಾಟ ವಿರಾಟ್​ ಕೊಹ್ಲಿಯಿಂದ ಮೂಡಿಬರ್ತಿದೆ.

ಎರಡೇ ಚಾನ್ಸ್​.. ಕಮ್​ಬ್ಯಾಕ್ ಮಾಡ್ತಾರಾ ವಿರಾಟ್.. ?

ಸತತ 6 ಪಂದ್ಯಗಳಿಂದ ವಿರಾಟ್​ ವಿಫಲರಾಗಿದ್ದಾರೆ. ಟೀಕಾಕಾರರಿಗೂ ಆಹಾರವಾಗಿದ್ದಾರೆ. ಆದ್ರೀಗ ಈ ಎಲ್ಲಕ್ಕೂ ಉತ್ತರ ನೀಡಲು ಎರಡೇ 2 ಅವಕಾಶ ಮಾತ್ರವಿದೆ. ಅದು ಕೂಡ ಇಂಗ್ಲೆಂಡ್ ಎದುರು ಟೀಮ್ ಇಂಡಿಯಾ ಗೆದ್ದರಷ್ಟೇ. ಇಲ್ಲ ಅಂದ್ರೆ ಸೆಮೀಸ್​​ ಅವಕಾಶ ಕೊನೆ ಆಗಲಿದೆ. ಹೀಗಾಗಿ ಬಿಗ್ ಮ್ಯಾಚ್ ಪ್ಲೇಯರ್ ವಿರಾಟ್​​, ಮುಂದಿನ ಪಂದ್ಯದಲ್ಲೇ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಬೇಕಿದೆ. ಇಲ್ಲಾಂದ್ರೆ, ಈ ಟಿ20 ವಿಶ್ವಕಪ್​ ಕೊಹ್ಲಿ ಪಾಲಿಗೆ ಕರಾಳವಾಗೋದು ಗ್ಯಾರಂಟಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿಗೆ ಕೇವಲ ಎರಡೇ 2 ಚಾನ್ಸ್​.. ಮಿಸ್ ಮಾಡಿದ್ರೆ T20 ಅಧ್ಯಾಯದಿಂದ ಹೊರ ಬೀಳ್ತಾರಾ ವಿರಾಟ್​?

https://newsfirstlive.com/wp-content/uploads/2024/06/VIRAT_KOHLI-17.jpg

Load More