newsfirstkannada.com

×

ಕೊಹ್ಲಿ-ರೋಹಿತ್ ಮಧ್ಯೆ ‘ನೀನಾ, ನಾನಾ’ ಜಟಾಪಟಿ.. ಭಲೇ ಜೋಡೆತ್ತು ಈಗ ದುಷ್ಮನ್ಸ್..!

Share :

Published October 29, 2023 at 11:53am

    ವಿಶ್ವಕಪ್​​ನಲ್ಲಿ ಇಬ್ಬರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ

    ಟೀಂ ಇಂಡಿಯಾಗೆ ಇವರು ಮುಟ್ಟಿದೆಲ್ಲ ಚಿನ್ನ ಆಗ್ತಿದೆ

    ವಿಶ್ವಕಪ್​​​ ಗರಿಷ್ಠ ರನ್​​ಗಾಗಿ ಕೊಹ್ಲಿ-ರೋಹಿತ್​​​​​​​​​​​​ ನಡ್ವೆ ಫೈಟ್

ಇವರು ಟೀಮ್ ಇಂಡಿಯಾದ ಜೋಡೆತ್ತು. ಸಂಕಷ್ಟದಲ್ಲಿ ಕಾಲದಲ್ಲಿ ಅದೆಷ್ಟು ಪಂದ್ಯಗಳನ್ನು ಗೆಲ್ಲಿಸಿದ ಆಪತ್ಬಾಂಧವರು. ಇಂತಹ ಭಲೇ ಜೋಡೆತ್ತುಗಳಿಗೆ ಈಗ ದುಷ್ಮನ್ಸ್ ಆಗಿದ್ದಾರೆ. ಕಾರಣ ಆ ಒಂದು ಅಗ್ರಪಟ್ಟ. ಇಬ್ಬರನ್ನ ವೈರಿಗಳನ್ನಾಗಿ ಮಾಡಿದೆ. ಅಷ್ಟಕ್ಕೂ ಆ ಭಲೇ ಜೋಡೆತ್ತು ಯಾರು? ಯಾಕಾಗಿ ಅವರ ಮಧ್ಯೆ ಸಮರ ಏರ್ಪಟ್ಟಿದೆ ಅನ್ನೋದರ ವಿವರ ಈ ಸ್ಟೋರಿಯಲ್ಲಿದೆ.

ವಿಶ್ವಕಪ್​​​ನಲ್ಲಿ ಇಲ್ಲಿಯತನಕ ಟೀಮ್ ಇಂಡಿಯಾ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಘಟಾನುಘಟಿ ತಂಡಗಳಿಗೆ ಶಾಕ್​​ ಕೊಟ್ಟಿದೆ. ಇದಕ್ಕೆಲ್ಲಾ ಕಾರಣ ಆ ಇಬ್ಬರು ದಿಗ್ಗಜರು. ಈ ಜೋಡೆತ್ತುಗಳ ಟ್ರಮಂಡಸ್​​​​​ ಫಾರ್ಮ್​ ಭಾರತಕ್ಕೆ ಅನ್​​ಬೀಟನ್​ ಅನ್ನೋ ಟ್ಯಾಗ್​ಲೈನ್​ ತಂದುಕೊಟ್ಟಿದೆ. ಅಂದಹಾಗೇ ಆ ಮ್ಯಾಚ್ ವಿನ್ನರ್ಸ್​ ಮತ್ಯಾರೂ ಅಲ್ಲ, ಅವರೇ ದಿ ಗ್ರೇಟ್ ವಿರಾಟ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ. ಕಿಂಗ್ ಕೊಹ್ಲಿ ಹಾಗೂ ಹಿಟ್​ಮ್ಯಾನ್​ ಸದ್ಯ ಹಸಿದ ಹೆಬ್ಬುಲಿಯಂತಾಗಿದ್ದಾರೆ. ಮಾರೋ ಮಾರೋ ಗೋಲಿ ಮಾರೋ ಅನ್ನೋ ಹಾಗೇ ರನ್​ ಭರಾಟೆ ನಡೆಸ್ತಿದ್ದಾರೆ. ಇಂತಹ ಡೈನಾಮಿಕ್​ ಬ್ಯಾಟ್ಸ್​​​ಮನ್​ಗಳೇ ಈಗ ನೀನಾ ? ನಾನಾ ? ಅಂತ ವಿಶ್ವಕಪ್​​​​​ನಲ್ಲಿ ತೊಡೆತಟ್ಟಲು ಸಜ್ಜಾಗಿದ್ದಾರೆ.

ವಿಶ್ವಕಪ್​​​ ಗರಿಷ್ಠ ರನ್​​ಗಾಗಿ ಕೊಹ್ಲಿ-ರೋಹಿತ್​​​​​​​​​​​​ ನಡ್ವೆ ಫೈಟ್​​​..!

ಒನ್ಡೇ ವಿಶ್ವಕಪ್​​​​​​​​​​​​​ ಪ್ರತಿಯೊಬ್ಬರೂ ಪ್ರತಿಷ್ಠೆ. ಎಲ್ಲರೂ ದಿ ಬೆಸ್ಟ್​​ ಪರ್ಫಾಮೆನ್ಸ್​​ ನೀಡಲು ಬಯಸ್ತಾರೆ. ಯಾಕಂದ್ರೆ ಐಸಿಸಿ ಟೂರ್ನಮೆಂಟ್​​ಗಳಲ್ಲಿ ಅಬ್ಬರಿಸಿದವನೇ ಟ್ರೂ ಫೈಟರ್ ಅನ್ನೋ ಮಾತಿದೆ. ಅದು ನಾನೇ ಆಗ್ಬೇಕು ಅಂತ ಕಿಂಗ್ ಕೊಹ್ಲಿ ಹಾಗೂ ರೋಹಿತ್​ ನಡುವೆ ವಾರ್​ ಏರ್ಪಟ್ಟಿದೆ. ಅದು ಅಂತಿಂಥ ಫೈಟ್​ ಅಲ್ಲ.. ಸೇರಿಗೆ ಸವಾ ಸೇರಿನ ಸಮರ.. ನೀನಾ ? ನಾನಾ? ನೋಡೇ ಬಿಡೋಣ ಅನ್ನೋ ತೀವ್ರ ಜಿದ್ದಿನ ಹಣಾಹಣಿ. ಚಾಲೆಂಜ್​​ ಅಂತ ಬಂದರೆ ಕಿಂಗ್ ಕೊಹ್ಲಿಯನ್ನ ಮೀರಿಸೋ ಮತ್ತೊಬ್ಬ ಆಟಗಾರನಿಲ್ಲ. ಇಂತಹ ಒಂಟಿಸಲಗ ಪ್ರಸಕ್ತ ವಿಶ್ವಕಪ್​​ನಲ್ಲಿ ಸಾಲಿಡ್​​ ಟಚ್​​​ನಲ್ಲಿದ್ದಾರೆ. ಫಸ್ಟ್​​ಹಾಫ್​​ನಲ್ಲಿ ಅಕ್ಷರಶಃ ವಿರಾಟರೂಪವನ್ನೇ ತಾಳಿದ್ದಾರೆ.

2023ರ ವಿಶ್ವಕಪ್​​ನಲ್ಲಿ ಕಿಂಗ್ ಕೊಹ್ಲಿ

ಪ್ರಸಕ್ತ ವಿಶ್ವಕಪ್​​ನಲ್ಲಿ 5 ಇನ್ನಿಂಗ್ಸ್ ಆಡಿರೋ ಕಿಂಗ್ ಕೊಹ್ಲಿ 354 ರನ್​​ ಬಾರಿಸಿದ್ದಾರೆ. ಇದ್ರಲ್ಲಿ 3 ಹಾಫ್​ಸೆಂಚುರಿ ಹಾಗೂ 1 ಶತಕ ಹೊಡೆದಿದ್ದಾರೆ. 103 ಬೆಸ್ಟ್ ಸ್ಕೋರ್ ಆಗಿದೆ. ಕ್ಯಾಪ್ಟನ್ ರೋಹಿತ್​ ಶರ್ಮಾ ನಾನೇನೂ ಕಮ್ಮಿ ಎನ್ನುವಂತೆ ಬ್ಯಾಟ್​ ಬೀಸ್ತಿದ್ದಾರೆ. ಸ್ಫೋಟಕ ಆಟವಾಡುತ್ತಾ ತಂಡವನ್ನ ಗೆಲ್ಲಿಸೋದಲ್ಲದೇ ಚಾನ್ಸ್ ಸಿಕ್ಕರೆ ಕಿಂಗ್ ಕೊಹ್ಲಿ ಪಂಚ್​​ ಕೊಡಲು ಹವಣಿಸ್ತಿದ್ದಾರೆ.

2023ರ ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾ

ರೋಹಿತ್ ಶರ್ಮಾ ಈವರೆಗೆ ಆಡಿದ 5 ಇನ್ನಿಂಗ್ಸ್​ಗಳಿಂದ 311 ರನ್​ ಸಿಡಿಸಿದ್ದಾರೆ. ತಲಾ ಒಂದು ಅರ್ಧಶತಕ ಹಾಗೂ 1 ಶತಕ ಮೂಡಿಬಂದಿದ್ದು, 131 ಬೆಸ್ಟ್​ ಸ್ಕೋರ್ ಅನ್ನಿಸಿಕೊಂಡಿದೆ. ಕಿಂಗ್ ಕೊಹ್ಲಿ ಹಾಗೂ ರೋಹಿತ್​​​ ನಡುವೆ ಹೆಚ್ಚೇನೂ ಅಂತರವಿಲ್ಲ. ರನ್ ಮಷೀನ್​, ಹಿಟ್​ಮ್ಯಾನ್​ಗಿಂತ 43 ರನ್​​​ ಮುಂದಿದ್ದಾರೆ. ಸೆಕೆಂಡ್​​ ಹಾಫ್​​​ ಹಾಗೂ ನಾಕೌಟ್​​​​ ಪಂದ್ಯಗಳು ನಡೆಯಬೇಕಿವೆ. ಹೀಗಾಗಿ ಕೊಹ್ಲಿ-ರೋಹಿತ್​​ ನಡುವಿನ ವಿಶ್ವಕಪ್​​ ಟಾಸ್ಕ್​​ ಸ್ಕೋರ್​​​​ ಬ್ಯಾಟಲ್​​​ ಇನ್ನಷ್ಟು ತಾರಕ್ಕೇರೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ-ರೋಹಿತ್ ಮಧ್ಯೆ ‘ನೀನಾ, ನಾನಾ’ ಜಟಾಪಟಿ.. ಭಲೇ ಜೋಡೆತ್ತು ಈಗ ದುಷ್ಮನ್ಸ್..!

https://newsfirstlive.com/wp-content/uploads/2023/10/ROHIT_SHARMA_TEAM_1.jpg

Load More