newsfirstkannada.com

ಟಾರ್ಗೆಟ್ ಭಾರತವಲ್ಲ, ಒನ್​ & ಓನ್ಲಿ ಕಿಂಗ್​ ಕೊಹ್ಲಿ; ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕ್ ರಣತಂತ್ರ

Share :

31-08-2023

    ಪಾಕ್​ಗೆ ಮುಖಭಂಗ, ವಿರಾಟ್​ ಕೊಹ್ಲಿಗೆ ಫ್ಯಾನ್ಸ್ ಬಹುಪರಾಕ್

    ಯಾರೂ ಊಹಿಸದ ರೀತಿಯಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿತ್ತು​

    ಕೊಹ್ಲಿ ಬ್ಯಾಟ್​ನಿಂದ ಸಿಡಿದ ಆ ಸಿಕ್ಸರ್‌ಗೆ ಬೆಚ್ಚಿ ಬಿದ್ದಿದ್ದ ಪಾಕ್ ತಂಡ

ಕಳೆದ 10 ತಿಂಗಳಿನಿಂದ ಪಾಕಿಸ್ತಾನದ ಆಟಗಾರರಲ್ಲಿ ರೋಷಾಗ್ನಿ ಉಕ್ಕಿ ಹರಿಯುತ್ತಿದೆ. ಅಂದು ಆ ಒಬ್ಬನ ಆಟಕ್ಕೆ ಇಡೀ ವಿಶ್ವದ ಮುಂದೆ ಮುಖಭಂಗ ಅನುಭವಿಸಿದ್ದ ಪಾಕ್​ ಪಡೆ, ಇದೀಗ ಸೇಡು ತೀರಿಸಿಕೊಳ್ಳೋ ತವಕದಲ್ಲಿದೆ. ಸೂಪರ್​​ ಶನಿವಾರ ನಡೆಯೋ ಪಂದ್ಯದಲ್ಲಿ ಪಾಕಿಸ್ತಾನದ ಎದುರಾಳಿ ಟೀಮ್​ ಇಂಡಿಯಾ ಅಲ್ಲ, ಒನ್​ ಆ್ಯಂಡ್ ಓನ್ಲಿ ಕಿಂಗ್​ ಕೊಹ್ಲಿ.

ಏಷ್ಯಾಕಪ್​ ಟೂರ್ನಿಗೆ ಕಿಕ್​ ಸ್ಟಾರ್ಟ್​​ ಸಿಕ್ಕಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸಿರೋ ಪಾಕ್​ ಪಡೆ ಶುಭಾರಂಭ ಮಾಡಿದೆ. ಆದ್ರೂ ಪಾಕ್​ ಆಟಗಾರರ ಮುಖದಲ್ಲಿ ನಗುವಿನ ಜತೆ ಸಂತೋಷವಿಲ್ಲ. ಅದಕ್ಕೆ ಕಾರಣ 10 ತಿಂಗಳ ಹಿಂದೆ ಆದ ಆ ಒಂದು ಮುಖಭಂಗ.

ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್

ಕಿಂಗ್​ ಕೊಹ್ಲಿ ಬ್ಯಾಟ್​ನಿಂದ ಸಿಡಿದ ಈ ಸಿಕ್ಸರ್​​ ಅನ್ನು ಯಾವೊಬ್ಬ ಕ್ರಿಕೆಟ್​ ಅಭಿಮಾನಿಯು ಮರೆತಿಲ್ಲ. ಕ್ರಿಕೆಟ್​ ಇತಿಹಾಸ ಪುಟಗಳಲ್ಲಿರೋ ದಿ ಬೆಸ್ಟ್​​ ಶಾಟ್​​ಗಳ ಪಟ್ಟಿಯಲ್ಲಿ ಇದು ಕೂಡ ಒಂದು. ಅಸಾಧ್ಯ ಅಂದುದನ್ನ ಸಾಧ್ಯವಾಗಿದಕ್ಕೆ ಈ ಶಾಟ್​​ ಬೆಸ್ಟ್​ ಎಕ್ಸಾಂಪಲ್.

ಕೇವಲ ಈ ಸಿಕ್ಸರ್​​ ಮಾತ್ರವಲ್ಲ. ಈ ಪಂದ್ಯದ ಫಲಿತಾಂಶ ಹೀಗಾಗುತ್ತೆ ಅಂತಾ ಯಾವೊಬ್ಬ ಕೂಡ ಪ್ರಿಡಿಕ್ಟ್​ ಮಾಡಿರಲಿಲ್ಲ. 160 ರನ್​ ಚೇಸ್​ ಮಾಡ್ತಿದ್ದ ಭಾರತ 31 ರನ್​ಗಳಿಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡಿತ್ತು. ಆರಂಭದಲ್ಲೇ ಸಕ್ಸಸ್​ ಕಂಡ ಪಾಕ್​ ಗೆದ್ದೇ ಬಿಟ್ಟೇ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿ ಮೆರೆದಾಡಿತ್ತು. ಆದ್ರೆ, ಅಂತ್ಯದಲ್ಲಿ ಆಗಿದ್ದು ಮುಖಭಂಗ.

ಫ್ಯಾನ್ಸ್​ ಕೂಡ ಟಿವಿ ಆಫ್​ ಮಾಡಿಬಿಟ್ಟಿದ್ರು

ಚೇಸಿಂಗ್​ ವೇಳೆ ಟೀಮ್​ ಇಂಡಿಯಾದ ಆರಂಭಿಕ ಪರಿಸ್ಥಿತಿ ನೋಡಿದ್ದ ಯಾವೊಬ್ಬ ಕೂಡ ಭಾರತ ಗೆಲ್ಲುತ್ತೆ ಅಂತಾ ಊಹಿಸಿರಲಿಲ್ಲ. ಅದೇಷ್ಟೋ ಇಂಡಿಯನ್​​ ಫ್ಯಾನ್ಸ್​ ಕೂಡ ಟಿವಿ ಆಫ್​ ಮಾಡಿಬಿಟ್ಟಿದ್ರು. ಆದ್ರೆ, ಎಲ್ಲರ ಲೆಕ್ಕಾಚಾರವನ್ನ ಹುಸಿಯಾಗಿಸಿದ್ದು ಚೇಸ್​ ಮಾಸ್ಟರ್​​, ಛಲದಂಕಮಲ್ಲ ವಿರಾಟ್​ ಕೊಹ್ಲಿ.

ಆತ್ಮವಿಶ್ವಾಸ ಅಲೆಯಲ್ಲಿ ಮೆರೆದಾಡ್ತಿದ್ದ ಪಾಕ್​ ಆಟಗಾರರಿಗೆ ಮೆಲ್ಬೊರ್ನ್​​ ಮೈದಾನದಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ರು ವಿರಾಟ್​ ಕೊಹ್ಲಿ. ಆ ಇನ್ನಿಂಗ್ಸ್​​ ಅನ್ನ ಕೊಹ್ಲಿ ಜೀವನದ ಒನ್​ ಆಫ್ ದ ಬೆಸ್ಟ್​ ಇನ್ನಿಂಗ್ಸ್​ ಅಂದ್ರೂ ತಪ್ಪಾಗಲ್ಲ. ಹೈ ಪ್ರೆಶರ್​ ಗೇಮ್​​, ಹೈ ಪ್ರೆಶರ್​ ಸಿಚ್ಯೂವೇಶನ್​ನಲ್ಲಿ ಒಂಟಿ ಸಲಗದಂತೆ ಕಾದಾಡಿದ ಕೊಹ್ಲಿ, ಪಾಕ್​ ಬೌಲರ್​ಗಳನ್ನ ಚೆಂಡಾಡಿದ್ರು. 82 ರನ್​​ಗಳ ಮ್ಯಾಚ್​ ವಿನ್ನಿಂಗ್​ ಇನ್ನಿಂಗ್ಸ್​ ಕಟ್ಟಿ, ತಂಡವನ್ನ ಗೆಲುವಿನ ದಡ ಸೇರಿಸಿದ್ರು.

ಪಾಕ್​ ವಿರುದ್ಧದ ಪಂದ್ಯ ಗೆಲ್ಲಿಸಿದ್ದಕ್ಕೆ ರೋಹಿತ್ ಶರ್ಮಾ ಅವರು ಕೊಹ್ಲಿಯನ್ನು ಭುಜ ಮೇಲೆ ಹೊತ್ತುಕೊಂಡು ಸಂಭ್ರಮಿಸಿದ್ದ ಕ್ಷಣ.

ಸೇಡಿನ ಸಮರಕ್ಕಾಗಿ ಕಾದಿದೆ ಇಡೀ ಪಾಕಿಸ್ತಾನ.!

ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ವಿರಾಟ ರೂಪಕ್ಕೆ ಪಾಕಿಸ್ತಾನದ ಗರ್ವಭಂಗವಾಗಿ 10 ತಿಂಗಳುಗಳೇ ಉರುಳಿವೆ. ಆದ್ರೆ, ಪಾಕಿಸ್ತಾನದ ಆಟಗಾರರು ಎದೆಯಲ್ಲಿ ರೋಷಾಗ್ನಿಯ ಜ್ವಾಲೆ ಹೊತ್ತಿ ಉರಿಯುತ್ತಿದೆ. ಅಂದು ಮೆಲ್ಬೊರ್ನ್​ ಅಂಗಳದಲ್ಲಿ ಹೀನಾಯ ಮುಖಭಂಗದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕ್​ ಆಟಗಾರರು ಕಾದಿದ್ದಾರೆ.

ಏಷ್ಯಾಕಪ್​ ಗೆಲುವಲ್ಲ.. ಸೇಡು ತೀರಿಸಿಕೊಳ್ಳೋದೆ ಗುರಿ.!

ಸೂಪರ್​ ಶನಿವಾರ ನಡೆಯಲಿರೋ ಏಷ್ಯಾಕಪ್​​ ಪಂದ್ಯ ಪಾಕಿಸ್ತಾನದ ಪಾಲಿಗೆ ಸೇಡಿನ ಸಮರವಾಗಿ ಮಾರ್ಪಟ್ಟಿದೆ. ಅಂದು ಹೀನಾಯ ಮುಖಭಂಗ ಅನುಭವಿಸಿದ ಪಾಕ್​ ಆಟಗಾರರು ಪಲ್ಲೆಕೆಲೆ ಫೈಟ್​​ನಲ್ಲಿ ಗೆಲುವನ್ನೇ ಟಾರ್ಗೆಟ್​ ಮಾಡಿದ್ದಾರೆ. ಏಷ್ಯಾಕಪ್​ ಟೂರ್ನಿ ಸೋತರೂ ಭಾರತದ ಎದುರು ಮುಖಭಂಗ ಅನುಭವಿಸಬಾರದು ಅನ್ನುವಷ್ಟರ ಮಟ್ಟಿಗೆ ಪಾಕ್​ ತಂಡ ಸಿದ್ಧವಾಗಿದೆ. ಹೀಗಾಗಿ ಟೀಮ್​ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಾರ್ಗೆಟ್ ಭಾರತವಲ್ಲ, ಒನ್​ & ಓನ್ಲಿ ಕಿಂಗ್​ ಕೊಹ್ಲಿ; ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕ್ ರಣತಂತ್ರ

https://newsfirstlive.com/wp-content/uploads/2023/08/KOHLI_BATTING.jpg

Load More