ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಯಾವೆಲ್ಲ ರೆಕಾರ್ಡ್ ಮಾಡಲಿದ್ದಾರೆ?
ಕಿಂಗ್ ಕೊಹ್ಲಿ ರನ್ ಗಳಿಸಿದರೆ ಸಾಕು ಒಂದೊಂದೆ ದಾಖಲೆ ಬ್ರೇಕ್
ಮೂರು ಕ್ಯಾಚ್ಗಳನ್ನು ಹಿಡಿದರೆ ಯಾರ ರೆಕಾರ್ಡ್ ಬ್ರೇಕ್ ಆಗುತ್ತೆ?
ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ ಪೂರ್ಣಗೊಂಡಿದ್ದು ರೋಹಿತ್ ಶರ್ಮಾ ಬಳಗ ರೋಚಕ ಗೆಲುವು ಸಾಧಿಸಿದೆ. 2 ಇನ್ನಿಂಗ್ಸ್ನಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಆದರೆ ಕಾನ್ಪುರದಲ್ಲಿ ನಡೆಯುವ ಮುಂದಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲವು ರೆಕಾರ್ಡ್ಗಳನ್ನ ಬ್ರೇಕ್ ಮಾಡಲಿದ್ದಾರೆ. ಇದರಲ್ಲಿ ಡಾನ್ ಬ್ರಾಡ್ಮನ್ ಅವರ ದಾಖಲೆ ಕೂಡ ಅಳಿಸಿ ಹೋಗಲಿದೆ.
ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕಿಂಗ್ ಕೊಹ್ಲಿ ಕೇವಲ 23ರನ್ ಗಳಿಸಿದರೂ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ವದೇಶದಲ್ಲಿ ವೇಗವಾಗಿ 12,000 ರನ್ ಪೂರೈಸಿ ದಾಖಲೆ ಮಾಡಿದರು. ಇದರಿಂದ ಸಚಿನ್ ತೆಂಡೂಲ್ಕರ್ ದಾಖಲೆ ಹಿಂದಿಕ್ಕಿದರು.
ಮುಂದಿನ ಟೆಸ್ಟ್ ಪಂದ್ಯದಲ್ಲಿ ಇನ್ನು 35 ರನ್ಗಳಿಸಿದರೆ ವೇಗವಾಗಿ 27,000 ರನ್ಗಳನ್ನು ಕಿಂಗ್ ಕೊಹ್ಲಿ ಪೂರೈಸಲಿದ್ದಾರೆ. ಈ ಮೂಲಕ 593 ಎನ್ನಿಂಗ್ಸ್ನಲ್ಲಿ 27,000 ರನ್ಗಳನ್ನ ಕಲೆ ಹಾಕಿದ ವಿಶ್ವದ 4ನೇ ಪ್ಲೇಯರ್ ಎನ್ನುವ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ ಒಟ್ಟು 782 ಇನ್ನಿಂಗ್ಸ್ನಿಂದ 34,357 ರನ್ಗಳನ್ನು ಕೂಡಿ ಹಾಕಿ ಪ್ರಥಮ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!
ಸದ್ಯ ವಿರಾಟ್ ಕೊಹ್ಲಿಯವರು 113 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಕೇವಲ ಇನ್ನು ಮೂರೇ 3 ಕ್ಯಾಚ್ಗಳನ್ನು ಹಿಡಿದದರೆ ಸಚಿನ್ ತೆಂಡೂಲ್ಕರ್ ಕ್ಯಾಚ್ ದಾಖಲೆ ಬ್ರೇಕ್ ಮಾಡಲಿದ್ದಾರೆ. ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದು ಒಟ್ಟು 210 ಕ್ಯಾಚ್ಗಳನ್ನು ಹಿಡಿದಿದ್ದಾರೆ. ವಿವಿಎಸ್ ಲಕ್ಷ್ಮಣ್ 135 ಕ್ಯಾಚ್ಗಳಿಂದ 2ನೇ ಸ್ಥಾನದಲ್ಲಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯವರು ಒಟ್ಟು 29 ಸೆಂಚುರಿಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಕೇವಲ ಒಂದೇ 1 ಶತಕ ಬಾರಿಸಿದರೆ ಒಟ್ಟು 30 ಶತಕ ಸಿಡಿಸಿದಂತೆ ಆಗುತ್ತದೆ. ಇದರಿಂದ ಆಸ್ಟ್ರೇಲಿಯಾದ ಕ್ರಿಕೆಟರ್ ಡಾನ್ ಬ್ರಾಡ್ಮನ್ ಅವರ 29 ಶತಕಗಳ ದಾಖಲೆ ಬ್ರೇಕ್ ಆಗುತ್ತದೆ. ಟೆಸ್ಟ್‌ನಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೆಂಚುರಿ ಸಿಡಿಸಿದ 2ನೇ ಬ್ಯಾಟ್ಸ್ಮನ್ ಎಂಬ ಖ್ಯಾತಿ ಕಿಂಗ್ ಕೊಹ್ಲಿ ಪಡೆಯಲಿದ್ದಾರೆ. ಸಚಿನ್ ಟೆಸ್ಟ್‌ನಲ್ಲಿ ಒಟ್ಟು 51 ಶತಕಗಳನ್ನು ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ