newsfirstkannada.com

ಅಭಿಮಾನಿಗಳ ಮನ ಗೆದ್ದ ಕೊಹ್ಲಿ.. ವಾಟರ್​ ಬಾಯ್​ ಆಗಿ ಕೆಲಸ ಮಾಡಿದ್ರು ಕಣ್ರಿ

Share :

31-07-2023

    ಆಟಗಾರರಿಗೆ ನೀರು ನೀಡಿ ಮನ ಗೆದ್ದ ಕಿಂಗ್ ಕೊಹ್ಲಿ..!

    ಫ್ಯಾನ್ ಗರ್ಲ್​ ಗಿಫ್ಟ್​​ಗೆ ಮನಸೋತ ವಿಶ್ವ ಸಾಮ್ರಾಟ

    ಸಿಂಪಲ್ ಸುಲ್ತಾನನಿಗೆ ಅಭಿಮಾನಿಯಿಂದ ಪ್ರೀತಿಯ ಗಿಫ್ಟ್​..!

ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದ ಸೋಲು ಸೋಶಿಯಲ್ ಮೀಡಿಯಾದ ಹಾಟ್ ಟಾಫಿಕ್ ಆಗಿದೆ. ಟೀಮ್ ಮ್ಯಾನೇಜ್​ಮೆಂಟ್​ನ ನಿರ್ಧಾರದ ಬಗ್ಗೆ ಫ್ಯಾನ್ಸ್​ ಕೆಂಡಕಾರುತ್ತಿದ್ದಾರೆ. ಆದರೆ. ಬೆಂಚ್ ಕಾದಿದ್ದ ವಿರಾಟ್​ ಮಾತ್ರ, ಸಿಂಪಲ್ ಸುಲ್ತಾನನಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇಂಡೋ-ವಿಂಡೀಸ್ ನಡುವಿನ 2ನೇ ಏಕದಿನ ಪಂದ್ಯ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಣ್ಣು ಮುಕ್ಕಿದರೂ, ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದು ಮಾತ್ರ ವಿಶ್ವ ಸಾಮ್ರಾಟ ವಿರಾಟ್​ ಕೊಹ್ಲಿ. ಅರೇ! ಬಾರ್ಬೋಡಸ್​ನ 2ನೇ ಪಂದ್ಯದಲ್ಲಿ ಬೆಂಚ್ ಕಾದಿದ್ದ ವಿರಾಟ್​, ಬ್ಯಾಟ್ ಬೀಸಲಿಲ್ಲ. ಬೌಲಿಂಗ್ ಮಾಡ್ಲಿಲ್ಲ. ಕನಿಷ್ಠ ಫೀಲ್ಡಿಂಗ್ ಕೂಡ ಮಾಡ್ದೇ ಹೇಗಪ್ಪಾ ಅಭಿಮಾನಿಗಳ ಮನ ಗೆದ್ದರು ಅಂದ್ರೆ, ಸಿಂಪಲ್​ ಮ್ಯಾನ್​ ಆಗಿ.

ಬೆಂಚ್ ಕಾದರು​ ಹೊಸ ಅವತಾರ ಎತ್ತಿದ್ದ ವಿರಾಟ್..!

ಹೌದು! ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ ವಿರಾಟ್​, ಬೆಂಚ್​ ಕಾದಿದ್ರು. ಟೀಮ್ ಇಂಡಿಯಾಕ್ಕಾಗಿ ಹೊಸ ಅವತಾರ ಎತ್ತಿದ್ದರು. ಪ್ಲೇಯಿಂಗ್​​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳದಿದ್ರೂ, ತಾನೊಬ್ಬ ವಿಶ್ವದ ಸ್ಟಾರ್ ಆಟಗಾರ ಅನ್ನೋದನ್ನ ಲೆಕ್ಕಿಸದೆ, ಸಾಮಾನ್ಯ ಆಟಗಾರನಂತೆ ಡ್ರಿಂಕ್ಸ್ ಬಾಯ್ ಕೆಲ್ಸ ಮಾಡಿದ್ರು. ಇದು ನಿಜಕ್ಕೂ ಅಭಿಮಾನಿಗಳ ಮನ ಗೆಲ್ಲಿಸಿತ್ತು. ಇದಕ್ಕೆ ಕಾರಣ ಸೂಪರ್ ಸ್ಟಾರ್​ ಆಟಗಾರನಾಗಿ ಕೊಹ್ಲಿ ನಡೆದುಕೊಂಡ ರೀತಿ. ಕೊಹ್ಲಿಯ ಈ ಕ್ರೀಡಾ ಸ್ಪೂರ್ತಿಯ ನಡೆ ಇದೇ ಮೊದಲಲ್ಲ. ಈ ಹಿಂದೆಯೂ ನಾಯಕನೆಂಬ ಅಹಂ ಬಿಟ್ಟು ವಾಟರ್ ಬಾಯ್ ಕೆಲ್ಸ ಮಾಡಿದ್ದುಂಟು.

ಯಜುವೇಂದ್ರ ಚಾಹಲ್​
ಯಜುವೇಂದ್ರ ಚಾಹಲ್​- ಕೊಹ್ಲಿ

2017ರಲ್ಲಿ ವಾಟರ್ ಬಾಯ್ ಆಗಿದ್ದ ಕ್ಯಾಪ್ಟನ್ ಕೊಹ್ಲಿ​..!

2014 ಟೆಸ್ಟ್​ ನಾಯಕನಾಗಿ ವಿರಾಟ್​ ಪದಗ್ರಹಣ ಮಾಡಿದ ವರ್ಷ. ಈ ವೇಳೆಗೆ ವಿಶ್ವ ಕ್ರಿಕೆಟ್​ನ ದಿಗ್ಗಜನಾಗಿ​​​​​​​​​ ಆಗಿ ಬೆಳೆದಿದ್ದ ವಿರಾಟ್​, 2017ರ ಆಸ್ಟ್ರೇಲಿಯಾ ಸರಣಿಯಲ್ಲಿ ಅಚ್ಚರಿ ಮೂಡಿಸಿದ್ರು. ಭುಜದ ಇಂಜುರಿಯಿಂದ ನಿರ್ಣಾಯಕ ಧರ್ಮಶಾಲಾದ ಟೆಸ್ಟ್​ನಿಂದ ಹೊರಗುಳಿಸಿದಿದ್ದ ಕೊಹ್ಲಿ, ವಾಟರ್ ಬಾಯ್ ಆಗಿದ್ರು. ಅಷ್ಟೇ ಅಲ್ಲ.! ಜಸ್ಟ್​ 6ನೇ ಓವರ್​ನಲ್ಲೇ ಮೈದಾನಕ್ಕೆ ನುಗ್ಗಿದ್ದ ಕೊಹ್ಲಿ, ಆಟಗಾರರಿಗೆ ಟಿಪ್ಸ್​ ಕೂಡ ನೀಡಿ ಹೊರ ನಡೆದಿದ್ರು.

2020ರ ಕಿವೀಸ್​​ ಸಿರೀಸ್​ನಲ್ಲೂ ಕೊಹ್ಲಿಯ ಕ್ರೀಡಾಸ್ಪೂರ್ತಿ!

2020ರ ಕಿವೀಸ್ ಪ್ರವಾಸ.. ಈ ಪ್ರವಾಸದ ಟಿ20 ಸಿರೀಸ್​ನಲ್ಲಿ ಟೀಮ್ ಇಂಡಿಯಾ, ಎದುರಾಳಿ ನ್ಯೂಜಿಲೆಂಡ್​ ತಂಡವನ್ನ 5-0 ಅಂತರದೊಂದಿಗೆ ಕ್ಲೀನ್​ಸ್ವಿಪ್ ಮಾಡಿತ್ತು. ಈ ಸರಣಿಯ ಅಂತಿಮ ಪಂದ್ಯದಲ್ಲಿ ರೆಸ್ಟ್​ ಪಡೆದಿದ್ದ ವಿರಾಟ್, ವಾಟರ್ ಬಾಯ್ ಆಗಿ ಕ್ರೀಡಾಸ್ಫೂರ್ತಿ ಮೆರೆದಿದ್ದರು. ಅಷ್ಟೇ ಅಲ್ಲ.! ಬೌಂಡರಿ ಲೈನ್​ ಹೊರಗೆ ಕೇನ್​ ಜೊತೆ ಸಾಮಾನ್ಯನಾಗಿ ಕುಳಿತು ಮಾತನಾಡುತ್ತಿದ್ದರು. ಇದು ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ರೋಚಕ ಕ್ಷಣ ಅನ್ನೋದನ್ನ ಮರೆಯುವಂತಿಲ್ಲ..

ಇದೀಗ ಇಂಥದ್ದೇ ಕ್ರೀಡಾಸ್ಪೂರ್ತಿಯ ನಡೆಯಿಂದ ಕ್ರಿಕೆಟ್ ಫಾನ್ಸ್ ಮನ ಗೆದ್ದಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಕಿಂಗ್ ಕೊಹ್ಲಿ ಸಿಂಪಲ್ ಮ್ಯಾನ್ ಅನ್ನೋದಕ್ಕೆ ಮತ್ತೊಂದು ನ್ಯೂ ಎಕ್ಸಾಂಪಲ್​ ಕೂಡ ಇದೆ.

ಫ್ಯಾನ್ ಗರ್ಲ್​ ಗಿಫ್ಟ್​​ಗೆ ಮನಸೋತ ವಿಶ್ವ ಸಾಮ್ರಾಟ..!

ನಾವ್​ ಕೊಹ್ಲಿಯನ್ನ ಸಿಂಪಲ್ ಸುಲ್ತಾನ ಅನ್ನೋದಕ್ಕೆ ಕಾರಣ ಫ್ಯಾನ್​​ ಜೊತೆ ಕಿಂಗ್ ಕೊಹ್ಲಿ ನಡೆದುಕೊಂಡ ರೀತಿ. ಯಾಕಂದ್ರೆ, ಅಭ್ಯಾಸ ವೇಳೆ ಸ್ಟ್ಯಾಂಡ್​​​ನಿಂದ ಹುಡುಗಿಯೊಬ್ಬಳು ಕೊಹ್ಲಿ-ಕೊಹ್ಲಿ ಎಂದು ಕೂಗಾಡಿದ್ದಳು. ಕೊಹ್ಲಿಯನ್ನ ಮೀಟ್ ಮಾಡೋಕೆ ಬಯಸಿದ್ದ ಪೋರಿ, ಸ್ಪೆಷಲ್​ ಗಿಫ್ಟ್​ನ ತಂದಿದ್ದಳು. ಹುಡುಗಿಯ ಧ್ವನಿ ಕೇಳಿದ ಕೊಹ್ಲಿ, ಕ್ಷಣ ಮಾತ್ರ ಯೋಚಿಸದೆ ಭೇಟಿಯಾದ್ರು. ಅಷ್ಟೇ ಅಲ್ಲ.! ಆ ಹುಡುಗಿ ತಂದಿದ್ದ ಬ್ರೇಸ್​ಲೆಟ್​​​​​, ಸ್ವೀಕರಿಸಿದ ಕೊಹ್ಲಿ ಕೈಗೆ ಧರಿಸಿಕೊಂಡು ಸೆಲ್ಫಿಗೆ ಫೋಸ್​ ನೀಡಿದ್ರು.

ಕೊಹ್ಲಿಯ ಈ ನಡೆ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ರೆ. ಮತ್ತೊಂದೆಡೆ ವಿರಾಟ್​ ಕೊಹ್ಲಿಯ ಹೃದಯವಂತಿಕೆಯನ್ನ ಬಿಂಬಿಸುವಂತಿತ್ತು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಭಿಮಾನಿಗಳ ಮನ ಗೆದ್ದ ಕೊಹ್ಲಿ.. ವಾಟರ್​ ಬಾಯ್​ ಆಗಿ ಕೆಲಸ ಮಾಡಿದ್ರು ಕಣ್ರಿ

https://newsfirstlive.com/wp-content/uploads/2023/07/Kohli-water.jpg

Load More