Advertisment

ಬೋರ್ಡ್​​ ಎಕ್ಸಾಂ ಬರೆದ ವಿರಾಟ್​ ಕೊಹ್ಲಿ! ಇದು ನಂಬೋಕೆ ಆಗದ ಸ್ಟೋರಿ

author-image
AS Harshith
Updated On
ಬೋರ್ಡ್​​ ಎಕ್ಸಾಂ ಬರೆದ ವಿರಾಟ್​ ಕೊಹ್ಲಿ! ಇದು ನಂಬೋಕೆ ಆಗದ ಸ್ಟೋರಿ
Advertisment
  • ಬಿಹಾರದಲ್ಲಿ ಬೋರ್ಡ್​ ಪರೀಕ್ಷೆ ಬರೆದ ಕಿಂಗ್​ ಕೊಹ್ಲಿ ವಿರಾಟ್​​
  • ಕೊಹ್ಲಿ ಬರೆದ ಬೋರ್ಡ್​​ ಪರೀಕ್ಷೆಯ ಉತ್ತರ ಪತ್ರಿಕೆ ವೈರಲ್​
  • ಕೊಹ್ಲಿ ಬರೆದ ಉತ್ತರ ಪತ್ರಿಕೆಯ ಒಳನೋಟ ನೀವು ಓದಲೇಬೇಕು

ಸದ್ಯ ವಿರಾಟ್​​ ಕೊಹ್ಲಿಗೆ 35 ವರ್ಷ. ಆದರೆ ಕಿಂಗ್​ ಕೊಹ್ಲಿ ಈವಾಗ ಬೋರ್ಡ್​ ಎಕ್ಸಾಂ ಬರೆದಿದ್ದಾರೆ ಎಂದರೆ ನಂಬ್ತೀರಾ?. ಬಿಹಾರದಲ್ಲಿ ಕೊಹ್ಲಿ ಬರೆದ ಉತ್ತರ ಪತ್ರಿಕೆ ವೈರಲ್​ ಆಗಿದೆ. ಆದರೆ ಈ ಉತ್ತರ ಪ್ರತಿಕೆಯ ಒಳನೋಟ ನೋಡಿದ್ರೆ ನಿಮಗೆ ಅಚ್ಚರಿ ಆಗೋದರಲ್ಲಿ ಅನುಮಾನವಿಲ್ಲ.

Advertisment

ಕೊಹ್ಲಿ ಮತ್ತು ಆರ್​ಸಿಬಿ. ಇವೆರಡು ಒಂದೇ ನಾಣ್ಯದ ಮುಖದಂತೆ. ಕೊಹ್ಲಿಯನ್ನು ಜನ ಎಷ್ಟು ಇಷ್ಟಪಡುತ್ತಾರೋ ಅಷ್ಟೇ ಆರ್​ಸಿಬಿಯನ್ನು ಇಷ್ಟಪಡುತ್ತಾರೆ. ಅದರಲ್ಲೂ ಪುಟಾಣಿ ಬಾಲಕರಿಗೆ ಕೊಹ್ಲಿ ಅಂದ್ರೆ ಪಂಚಪ್ರಾಣ. ಅದಕ್ಕೆ ನಾನಾ ಉದಾಹರಣೆಗಳು, ಸಾಕ್ಷಿಗಳಿವೆ. ಆದರೆ ಕೊಹ್ಲಿ ಮತ್ತು ಆರ್​ಸಿಬಿಯ ಅಪ್ಪಟ ಅಭಿಮಾನಿ ಬಾಲಕನೊಬ್ಬ ಬೋರ್ಡ್​​ ಎಕ್ಸಾಂನಲ್ಲಿ ಏನು ಮಾಡಿದ್ದಾನೆ ಗೊತ್ತಾ?.

ಕಿಂಗ್​ ಕೊಹ್ಲಿಯನ್ನು ಹಾಡಿ ಹೊಗಳುವ ಬಣ ಒಂದೆಯಾದರೆ. ಅವರ ಫೋಟೋವನ್ನು ಹಚ್ಚೆ ಹಾಕಿಸಿಕೊಳ್ಳುವ ಬಣವೊಂದಿದೆ. ಆದರೆ ಇಲ್ಲೊಬ್ಬ ಪುಟ್ಟ ಬಾಲಕ ಬೋರ್ಡ್​ ಎಕ್ಸಾಂನ ಉತ್ತರ ಪತ್ರಿಕೆಯಲ್ಲಿ ಕೊಹ್ಲಿ ಮತ್ತು ಆರ್​ಸಿಬಿ ಎಂದು ಬರೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಅಂದಹಾಗೆಯೇ ಕೊಹ್ಲಿಯೇ ಬಮದು ಎಕ್ಸಾಂ ಬರೆದಂತೆ ಈ ಉತ್ತರ ಪತ್ರಿಕೆ ಕಾಣುತ್ತಿದೆ.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಹೆಚ್ಚು ಪದಕ ಗೆದ್ದ ದೇಶ ಯಾವುದು..? ಭಾರತಕ್ಕೆ ಎಷ್ಟನೇ ಸ್ಥಾನ..?

Advertisment

ಬಾಲಕ ಬಿಹಾರ ಮೂಲದವನಾಗಿದ್ದು, ಆರ್​ಸಿಬಿ ಅಭಿಮಾನಿಯಾಗಿದ್ದಾನೆ. ತನ್ನ ಬೋರ್ಡ್​ ಎಕ್ಸಾಂನ ಉತ್ತರ ಪತ್ರಿಕೆಯಲ್ಲಿ ತನ್ನ ಹೆಸರು ಮತ್ತು ತರಗತಿ ಕುರಿತ ಬಗ್ಗೆ ನಮೂದಿಸುವ ಬದಲು ಕೊಹ್ಲಿ ಮತ್ತು ಆತನ ಜೆರ್ಸಿ ನಂಬರನ್ನು ಬರೆದಿದ್ದಾನೆ. ಜೆಮ್ಸ್​ ಆಫ್​ ಕ್ರಿಕೆಟ್​​​ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್​ ಆಗುತ್ತಿದೆ.


">August 10, 2024

ಇದನ್ನೂ ಓದಿ: ವಿನೇಶ್ ಫೋಗಟ್​ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?

Advertisment

ಬಾಲಕ ದಿನಾಂಕವನ್ನು ನಮೂದಿಸುವಲ್ಲಿ 18 ಆರ್​ಸಿಬಿ ಎಂದು ಬರೆದಿದ್ದಾನೆ. ಕೊಹ್ಲಿ ತನ್ನ ಹೆಸರು, ತಾಯಿ ಸರೋಜ್​ ಕೊಹ್ಲಿ, ತಂದೆ ಪ್ರೇಮ್​ ನಾಥ್​ ಕೊಹ್ಲಿ, ತರಗತಿ ಆರ್​ಸಿಬಿ, ಸೆಕ್ಷನ್​ ಎ, ರೋಲ್​ ನಂಬರ್​ 18, ವಿಷಯ ಕ್ರಿಕೆಟ್​, ಶಿಫ್ಟ್​​​ ಓಪನಿಂಗ್​ ಎಂದು ಬರೆದಿದ್ದಾನೆ.

ಇದನ್ನೂ ಓದಿ: ಪಾಂಡ್ಯ ರಿಲೀಸ್​, ರೋಹಿತ್ ರಿಟೈನ್​ಗೆ ಮುಂಬೈ ಬಿಗ್ ಪ್ಲಾನ್​.. ಕ್ಯಾಪ್ಟನ್ ಮಾತ್ರ ಈ ಇಬ್ಬರೂ ಅಲ್ಲ!

ಸದ್ಯ ಬಾಲಕನ ಆರ್​ಸಿಬಿ ಮತ್ತು ಕೊಹ್ಲಿ ಮೇಲಿನ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬಾಲಕ ಎಷ್ಟು ಕೊಹ್ಲಿಯನ್ನು ಹಚ್ಚಿಕೊಂಡಿದ್ದಾನೆ ಎಂದರೆ ಸೃಜನಶೀಲವಾಗಿ ಉತ್ತರ ಪತ್ರಿಕೆಯನ್ನು ತುಂಬಿದ್ದಾನೆ. ಮೇಲ್ನೋಟಕ್ಕೆ ಕಂಡಾಗ ಬಾಲಕ ಈ ಬಾರಿಯ ಐಪಿಎಲ್​​ನಲ್ಲಿ ಕೊಹ್ಲಿ ಆರ್​ಸಿಬಿಯಲ್ಲಿ ಮಿಂಚುವುದನ್ನು ಕಾಣುವ ತವಕದಲ್ಲಿದ್ದಾನೆ ಎಂದು ಕಾಣುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment