10 ತಿಂಗಳಿಂದ ವಿರಾಟ್ ವೀರಾವೇಶಕ್ಕಿಲ್ಲ ಬ್ರೇಕ್
10 ತಿಂಗಳಲ್ಲಿ 8 ಶತಕ ಸಿಡಿಸಿದ ವಿರಾಟ್ ಕೊಹ್ಲಿ
ವೃತ್ತಿ ಜೀವನದ ಉತ್ತುಂಗ ದಿನಗಳನ್ನ ನೆನಪಿಸಿದ ಕೊಹ್ಲಿ
10 ತಿಂಗಳ ಹಿಂದೆ ವಿರಾಟ್ ಕೊಹ್ಲಿಯನ್ನ ಆಡಿಕೊಂಡವರು ಒಂದಿಬ್ಬರಲ್ಲ. ಕ್ರಿಕೆಟ್ನ ಗಂಧಗಾಳಿ ತಿಳಿಯದವನೂ ಕೊಹ್ಲಿ ಆಟವನ್ನು ನೋಡಿ ಟೀಕಿಸಿದ್ದೇ ಹೆಚ್ಚು. ಇದೀಗ ಅಕ್ಷರಶಃ ಸಿಡಿಲಬ್ಬರ ಬ್ಯಾಟಿಂಗ್ ನಡೆಸ್ತಿರೋ ವಿರಾಟ್, ವಿರಾಟ ರೂಪವನ್ನೇ ಪ್ರದರ್ಶಿಸುತ್ತಿದ್ದಾರೆ. ಅಷ್ಟೇ ಅಲ್ಲ.. ಎಲ್ಲಾ ಟೀಕೆಗಳಿಗೂ 10 ತಿಂಗಳಲ್ಲೇ ಉತ್ತರ ನೀಡಿದ್ದಾರೆ.
23 ನವೆಂಬರ್ 2019.. ಈಡನ್ ಗಾರ್ಡನ್ನ ಐತಿಹಾಸಿಕ ಡೇ ಆ್ಯಂಡ್ ನೈಟ್ ಟೆಸ್ಟ್ನಲ್ಲಿ ಶತಕ ಸಿಡಿಸಿದ್ದ ವಿರಾಟ್, ನಂತರ ಮೂರಂಕಿ ಮೊತ್ತದ ಗಡಿ ದಾಟಲು ತೆಗೆದುಕೊಂಡಿದ್ದೂ ಬರೋಬ್ಬರಿ 1020 ದಿನಗಳು. ಈ ಅವಧಿಯಲ್ಲಿ ನಿಜಕ್ಕೂ ವಿರಾಟ್ ಕೊಹ್ಲಿ ಎದುರಿಸಿದ್ದು ಟೀಕೆ, ಅಪಮಾನ, ಹತಾಶೆ, ನೋವು.. ಇದಕ್ಕೆ ದಿಟ್ಟ ಉತ್ತರ ನೀಡಿಲು ಶುರು ಮಾಡಿದ್ದು ಮಾತ್ರ 8 ಸೆಪ್ಟೆಂಬರ್ 2022
ಹೌದು! ಏಷ್ಯಾಕಪ್ನ ಸೂಪರ್-4ನಲ್ಲಿ ಅಫ್ಘಾನ್ ವಿರುದ್ಧ ಘರ್ಜಿಸಿದ್ದ ಕೊಹ್ಲಿ, 3 ವರ್ಷ 3 ತಿಂಗಳ ನಂತರ ಶತಕದ ಬರ ನೀಗಿಸಿದ್ದರು. ವಿಶೇಷವಾಗಿ ಅಭಿಮಾನಿಗಳ ಕಾಯುವಿಕೆಗೆ ಬ್ರೇಕ್ ಹಾಕಿದ್ದರು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಇಲ್ಲ ಎಂಬ ಟೀಕೆಗಳು ಕೇಳುತ್ತಲೇ ಇತ್ತು. ಇದಕ್ಕೆಲ್ಲ ನಂತರದ ದಿನಗಳಲ್ಲಿ ಉತ್ತರ ಕೊಟ್ರು. ಹಾಗಿದ್ರೂ ಓವರ್ ಸೆಂಚೂರಿ ಚರ್ಚೆ ಹಾಗೇ ಉಳಿದಿತ್ತು, ಅದಕ್ಕೂ ಈಗ ಉತ್ತರ ನೀಡಿ ಸೈ ಎನಿಸಿಕೊಂಡಿರುವ ಕೊಹ್ಲಿ, ಕಿಂಗ್ ಇಸ್ ಬ್ಯಾಕ್ ಎಂಬ ಸ್ಟ್ರಾಂಗ್ ಮೆಸೇಜ್ ನೀಡಿದ್ದಾರೆ.
10 ತಿಂಗಳಿಂದ ಸೆಂಚೂರಿ ಸರದಾರನ ಶತಕದ ಭರಾಟೆ..!
2022ರ ಏಷ್ಯಾಕಪ್ನಲ್ಲಿ ಅಫ್ಘಾನ್ ವಿರುದ್ಧ ಟಿ20 ಶತಕ ಸಿಡಿಸಿದ್ದ ಕೊಹ್ಲಿ, ಚೊಚ್ಚಲ ಟಿ20 ಶತಕದ ಜೊತೆ ಜೊತೆಗೆ ಶತಕದ ಬರವನ್ನೂ ನೀಗಿಸಿಕೊಂಡಿದ್ದರು. ಈ ಬೆನ್ನಲ್ಲೇ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯ 3ನೇ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಕೊಹ್ಲಿ, ಏಕದಿನ ಶತಕಕ್ಕೂ ಬ್ರೇಕ್ ಹಾಕಿದ್ದರು. ಅಷ್ಟೇ ಅಲ್ಲ.. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕ ಸಿಡಿಸಿದ್ದ ಕೊಹ್ಲಿ, ಜಸ್ಟ್ ಮೂರೇ ವಾರದಲ್ಲಿ ಮೂರು ಬಾರಿ ಮೂರಂಕಿ ಗಡಿದಾಟಿ ಕಮಾಲ್ ಮಾಡಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಇಲ್ಲ ಎಂಬ ಕೊರಗು ಇನ್ನಿಲ್ಲದಂತೆ ಕಾಡಿತ್ತು. ಇದಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಬ್ರೇಕ್ ಹಾಕಿದ್ದ ಕೊಹ್ಲಿಗೆ ಕಾಡಿದ್ದು, 5 ವರ್ಷಗಳಿಂದ ಓವರ್ಸೀಸ್ ಟೆಸ್ಟ್ ಶತಕವಿಲ್ಲ ಎಂಬ ಕಾಲೆಳೆಯುವಿಕೆ. ಇದಕ್ಕೆ ವಿಂಡೀಸ್ ವಿರುದ್ಧದ 2ನೇ ಟೆಸ್ಟ್ನಲ್ಲಿ ತೀರಿಸಿದಿದ್ದಾರೆ. ಅಷ್ಟೇ ಅಲ್ಲ. ಪ್ರತಿ ಫಾರ್ಮೆಟ್ನಲ್ಲೂ ಧೂಳ್ ಎಬ್ಬಿಸಿ ರನ್ದಾಹ ತೀರಿಸಿಕೊಳ್ಳುತ್ತಿದ್ದಾರೆ.
ಕಿಂಗ್ ಕೊಹ್ಲಿಯ ರನ್ ದಾಹಕ್ಕಿಲ್ಲ ಬ್ರೇಕ್
ವಿರಾಟ್ ಕೊಹ್ಲಿ ಒಂದೇ ಒಂದು ಫಾರ್ಮೆಟ್ನಲ್ಲಿ ರನ್ ಗಳಿಸದಿದ್ರೆ ಸಾಕು. ಅದನ್ನೇ ಬೊಟ್ಟು ಮಾಡುತ್ತಿದ್ದವರು. ಟ್ರೋಲ್ ಮಾಡುತ್ತಿದ್ದವರು. ಒಂದಿಬ್ಬರಲ್ಲ. ಒಂದು ಪಂಗಡವೇ ಇದೆ. ಇದಕ್ಕೆಲ್ಲಾ ವಿರಾಟ್ ಕೊಹ್ಲಿ, ರನ್ ಶಿಖರ ಕಟ್ಟುವ ಮೂಲಕ ಖಡಕ್ ಅನ್ಸರ್ ನೀಡಿದ್ದಾರೆ. ಯಾವೊಂದು ಫಾರ್ಮೆಟ್ನಲ್ಲಿ ತಾನೂ ಹಿಂದೆ ಬಿದ್ದಿಲ್ಲ ಅನ್ನೋದನ್ನ ತೋರಿಸಿಕೊಡ್ತಿದ್ದಾರೆ. ಇದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ.
2023ರಿಂದ ಕಿಂಗ್ ಕೊಹ್ಲಿಯ ರನ್ ಶಿಕಾರಿ
2023ರಿಂದ ಒಟ್ಟು 7 ಟೆಸ್ಟ್ ಪಂದ್ಯಗಳ 10 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್, 557 ರನ್ ಕಲೆಹಾಕಿದ್ದಾರೆ. 55.70 ಸರಾಸರಿಯಲ್ಲಿ ರನ್ ಗಳಿಸಿರುವ ಕೊಹ್ಲಿ 1 ಅರ್ಧಶತಕ, 2 ಶತಕ ಸಿಡಿಸಿದ್ದಾರೆ. ಇನ್ನೂ ಏಕದಿನ ಫಾರ್ಮೆಟ್ನಲ್ಲಿ ಆಡಿರೋ 9 ಪಂದ್ಯಳಿಂದ 427 ರನ್ ದಾಖಲಿಸಿರೋ ವಿರಾಟ್, 53.37ರ ಅವರೇಜ್ನಲ್ಲಿ ರನ್ ಗಳಿಸಿದ್ದಾರೆ. ಈ ಪೈಕಿ 1 ಅರ್ಧಶತಕ, 2 ಶತಕ ಸಿಡಿಸಿದ್ದಾರೆ. ಇನ್ನೂ ಐಪಿಎಲ್ ಸೀಸನ್-16ರಲ್ಲಿ ಅತ್ಯದ್ಬುತ ಪ್ರದರ್ಶನ ತೋರಿದ್ದ ವಿರಾಟ್, 14 ಪಂದ್ಯಗಳಿಂದ 639 ರನ್ ಗಳಿಸಿದ್ದಾರೆ. ಸುಮಾರು 53.25ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ, ತಲಾ 2 ಅರ್ಧಶತಕ, ಶತಕ ಸಿಡಿಸಿದ್ದಾರೆ.
ಕರಿಯರ್ನ ಪೀಕ್ ಇಯರ್ ನೆನಪಿಸಿದ ವಿರಾಟ್
ಟಿ20 ಏಕದಿನ, ಟೆಸ್ಟ್ ಕ್ರಿಕೆಟ್ನಲ್ಲಿ ಶತಕಗಳ ಸುರಿಮಳೆಯನ್ನೇ ಸುರಿಸಿರುವ ವಿರಾಟ್, ಕಳೆದ 10 ತಿಂಗಳಲ್ಲಿ ಬರೋಬ್ಬರಿ 8 ಶತಕ ಸಿಡಿಸಿದ್ದಾರೆ. ಇದು ವಿರಾಟ್ ಕೊಹ್ಲಿಯ ವೃತ್ತಿ ಜೀವನದ ಫೀಕ್ ಇಯರ್ ಅನ್ನೇ ನೆನಪಿಸುವಂತೆ ಮಾಡಿದೆ. 2017 ಹಾಗೂ 2018ರ ವರ್ಷದಲ್ಲಿ ವೃತ್ತಿ ಜೀವನದ ಉತ್ಸುಂಗದಲ್ಲಿದ್ದ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕ್ರಮವಾಗಿ 11, 11 ಶತಕ ಸಿಡಿಸಿ ಮಿಂಚಿದ್ದರು. 2022 ಗ್ರೇಟ್ ಕಮ್ಬ್ಯಾಕ್ ಬಳಿಕ ವಿರಾಟ್ ವೀರಾವೇಶ ನೋಡ್ತಿದ್ರೆ. ಕೊಹ್ಲಿ 2.O ವರ್ಷನ್ ಅನ್ನೇ ಅಭಿಮಾನಿಗಳಿಗೆ ತೋರಿಸ್ತಿದ್ದಾರೆ.
ಅದೇನೇ ಆಗಲಿ, ಕೊಹ್ಲಿ ಶತಕದ ಬರ ಅನುಭವಿಸಿದಾಗ ರನ್ಗಳಿಸಿದಿದ್ದಾಗ ಕೊಹ್ಲಿ ಕಥೆ ಮುಗೀತು ಅನ್ನೋ ಟೀಕೆಗಳಿಗೆಲ್ಲ ಈ 10 ತಿಂಗಳಲ್ಲೇ ಉತ್ತರಿಸಿರೋದು ಸುಳ್ಳಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್