newsfirstkannada.com

ಕೋಟಿ ಒಡೆಯ ಕೊಹ್ಲಿಯ ಸಕ್ಸಸ್​ ಹಿಂದಿದ್ದಾನೆ ಈ ಜೀವದ ಗೆಳೆಯ.. ವರ್ತಿಕ್​ ತಿಹಾರ ಯಾರು ಗೊತ್ತಾ?

Share :

10-11-2023

    ವಿರಾಟ್​ ಕಂಡ ಕನಸನನ್ನ ನನಸಾಗಿಸಿದ ವರ್ತಿಕ್

    ನಿನ್ನೆ ಮೊನ್ನೆಯದಲ್ಲ.. ವಿರಾಟ್​-ವರ್ತಿಕ್​ ಗೆಳೆತನ

    1050 ಕೋಟಿ ಆದಾಯದ ಹಿಂದಿದೆ ಈತನ ಶ್ರಮ

ಆನ್​ಫೀಲ್ಡ್​ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ವಿರಾಟ್​ ಕೊಹ್ಲಿ ಒಬ್ಬ ಸಕ್ಸಸ್​​ಫುಲ್​ ಪರ್ಸನ್​.! ರನ್​ಗಳಿಕೆ ಮಾತ್ರವಲ್ಲ. ಹಣಗಳಿಕೆಯಲ್ಲೂ ಮಾಸ್ಟರ್​.! ಇಂದು ವಿರಾಟ್​ ಕೊಹ್ಲಿ ಒಬ್ಬ ಯಶಸ್ವಿ ಬ್ಯುಸಿನೆಸ್ ಮ್ಯಾನ್ ಆಗಿರೋದ್ರ ಹಿಂದೆ ಒಂದು ಶಕ್ತಿಯಿದೆ. ಆ ಶಕ್ತಿಯೇ ಇಂದು ಕೊಹ್ಲಿಯನ್ನ ಕೋಟಿ ಕುಬೇರನನ್ನಾಗಿಸಿದೆ. ಆ ಶಕ್ತಿ ಯಾವುದು.? ಅನ್ನೋದರ ಇಂಟರೆಸ್ಟಿಂಗ್​ ಸುದ್ದಿ ಇಲ್ಲಿದೆ.

ವಿರಾಟ್​ ಕೊಹ್ಲಿಯ ಆನ್​ಫೀಲ್ಡ್​ ಸಕ್ಸಸ್​ನ ಬಗ್ಗೆ ಹೇಳೋಕೆ ಹೋದ್ರೆ ಒಂದು ದಿನಾನೂ ಸಾಲಲ್ಲ. ಸಾಲು ಸಾಲು ಶತಕಗಳು, ಅವಿಸ್ಮರಣೀಯ ಇನ್ನಿಂಗ್ಸ್​, ಕೆಚ್ಚೆದೆಯ ಹೋರಾಟದ ಕಥೆಗಳು. ಒಂದೊಂದೆ ತೆರೆದುಕೊಳ್ಳುತ್ತೆ. ಕ್ರಿಕೆಟ್​ಗೆ ಗುಡ್​ ಬೈ ಹೇಳೋಕೆ ಮುನ್ನವೇ ಲೆಜೆಂಡ್​ ಸಾಲಿನಲ್ಲಿ ನಿಂತಿರೋದೆ ಕೊಹ್ಲಿಯ ಯಶಸ್ಸಿಗೆ ಹಿಡಿದಿರೋ ಕನ್ನಡಿಯಾಗಿದೆ.

ಆಫ್​ ದ ಫೀಲ್ಡ್​ನಲ್ಲೂ ಕೊಹ್ಲಿಯದ್ದೇ ದರ್ಬಾರ್​​.!

ಆನ್​ಫೀಲ್ಡ್​ನಲ್ಲಿ ತನ್ನ ಆಟದಿಂದ ದಾಖಲೆಗಳನ್ನ ಕಬ್ಜ ಮಾಡಿರುವ ಕೊಹ್ಲಿ, ಆಫ್​ ದ ಫೀಲ್ಡ್​ನಲ್ಲೂ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಒಬ್ಬ ಸಕ್ಸಸ್​ಫುಲ್​ ಬ್ಯುಸಿನೆಸ್​ ಮ್ಯಾನ್​ ಆಗಿ ಕೋಟಿ ಕುಬೇರ ಕೊಹ್ಲಿ ಎನಿಸಿಕೊಂಡಿದ್ದಾರೆ. ಬ್ಯುಸಿನೆಸ್​ಮನ್​​ ಕೊಹ್ಲಿಯ ಈ ಯಶಸ್ಸಿನ ಹಿಂದೆ ಒಂದು ಶಕ್ತಿಯಿದೆ. ಆ ಶಕ್ತಿಯೆ ಗೆಳೆತನ.

ಕೋಟಿ ಕೊಹ್ಲಿ ಸಕ್ಸಸ್​ ಹಿಂದೆ ಜೀವದ ಗೆಳೆಯ.!

ಹೌದು.. ಎಬಿ ಡಿವಿಲಿಯರ್ಸ್​, ಕ್ರಿಸ್ ​ಗೇಲ್, ಎಮ್​.ಎಸ್​ ಧೋನಿ ಹೀಗೆ ವಿರಾಟ್​ ಕೊಹ್ಲಿಯ ಕ್ರಿಕೆಟ್​ ಸರ್ಕಲ್​ನ ಗೆಳೆಯರ ಬಳಗದ ಬಗ್ಗೆ ನಿಮಗೆ ಗೊತ್ತಿದೆ. ಆದ್ರೆ, ಇದನ್ನೂ ಮೀರಿಸೋ ಒಬ್ಬ ಗೆಳೆಯ ಆಫ್​ ದ ಫೀಲ್ಡ್​ನಲ್ಲಿದ್ದಾನೆ. ಕೊಹ್ಲಿಯ ಕನಸನ್ನ ನನಸು ಮಾಡಿದ, ಕೊಹ್ಲಿಯನ್ನ ಕೋಟಿ ಕುಬೇರನನ್ನಾಗಿಸಿದ ಜೀವದ ಗೆಳೆಯನೇ ವರ್ತಿಕ್ ತಿಹಾರ.

View this post on Instagram

A post shared by Vartik Tihara (@vartiktiharavt)

1050 ಕೋಟಿ ಆದಾಯದ ಹಿಂದಿದೆ ಈತನ ಶ್ರಮ.!

ವಿರಾಟ್​ ಕೊಹ್ಲಿ ಸದಾ ಕಾಲ ಕ್ರಿಕೆಟ್​ನಲ್ಲಿ ಬ್ಯುಸಿಯಾಗಿದ್ರೂ, ಬ್ಯುಸಿನೆಸ್​ನಲ್ಲಿ ಸಕ್ಸಸ್ ಕಂಡಿದ್ದೇಗೆ ಅನ್ನೋ ಕುತೂಹಲ ನಿಮ್ಮನ್ನ ಕಾಡಿರುತ್ತೆ. ಅದಕ್ಕೆ ಉತ್ತರನೇ ವರ್ತಿಕ್​ ತಿಹಾರ. ಕೊಹ್ಲಿಯ ಪ್ರತಿಯೊಂದು ಬ್ಯುಸಿನೆಸ್​ ಮತ್ತು ಮಾರ್ಕೆಟಿಂಗ್​ ಮಾಡೋ ಮಾಸ್ಟರ್​ ಮೈಂಡ್ ವರ್ತಿಕ್​. ಈತ ಕೊಡೋ ಮಾರ್ಕೆಟಿಂಗ್​ ಐಡಿಯಾಗಳೇ ಇಂದು ಕೊಹ್ಲಿ ಆದಾಯವನ್ನ ದುಪ್ಪಟ್ಟು ಮಾಡಿದೆ ಅಂದ್ರೆ ತಪ್ಪಾಗಲ್ಲ.

ವಿರಾಟ್​ ಕಂಡ ಕನಸನನ್ನ ನನಸಾಗಿಸಿದ ವರ್ತಿಕ್​.!

ಸದಾ ಕ್ರಿಕೆಟ್​ನಲ್ಲಿ ಬ್ಯುಸಿಯಿದ್ರೂ ಹೋಟೆಲ್​ ಬ್ಯುಸಿನೆಸ್​ ಮಾಡಬೇಕು ಅನ್ನೋದು ಕೊಹ್ಲಿ ಕನಸಾಗಿತ್ತು. ಅದಕ್ಕಾಗಿಯೇ ಶುರು ಮಾಡಿದ್ದು ಒನ್​ 8 ಕಮ್ಯೂನ್​ ರೆಸ್ಟೊರೆಂಟ್. ಕೊಹ್ಲಿಯ ಕನಸನ್ನ ನನಸು ಮಾಡಲು ಬೆನ್ನಿಗೆ ನಿಂತಿದ್ದು ಜೀವದ ಗೆಳೆಯ ವರ್ತಿಕ್​ ತಿಹಾರ. ಆರಂಭದಿಂದ ಈವರೆಗೆ ಆ ಬ್ಯುಸಿನೆಸ್​ಗೆ ತನ್ನನ್ನ ತಾನು ತೊಡಗಿಸಿಕೊಂಡ ಕಾರ್ತಿಕ್​ ಸಕ್ಸಸ್​ನ ಸೂತ್ರದಾರನಾಗಿದ್ದಾರೆ. ಇಂದು ದೆಹಲಿ, ಪುಣೆ, ಬೆಂಗಳೂರು ಎಲ್ಲಾ ಕಡೆ ಒನ್​ 8 ಕಮ್ಯೂನ್​ ಬ್ರ್ಯಾಂಚ್​ ಓಪನ್​ ಆಗಿದೆ. 112 ಕೋಟಿ ಬ್ರ್ಯಾಂಡ್​ ವ್ಯಾಲ್ಯೂ ಅನ್ನ ಹೊಂದಿದೆ ಅಂದ್ರೆ ಅದರ ಹಿಂದೆ ವರ್ತಿಕ್​ ಶ್ರಮ ಅಪಾರ.

ನಿನ್ನೆ ಮೊನ್ನೆಯದಲ್ಲ.. ವಿರಾಟ್​-ವರ್ತಿಕ್​ ಗೆಳೆತನ.!

ವಿರಾಟ್​ ಕೊಹ್ಲಿ – ವರ್ತಿಕ್​ ತಿಹಾರ ಅಂಡರ್​ 17 ದಿನದಿಂದಲೂ ಗೆಳೆಯರು. ಆಗ ಕ್ರಿಕೆಟರ್​ ಆಗಬೇಕು ಅನ್ನೋ ಕನಸು ಇಬ್ಬರಲ್ಲೂ ಇತ್ತು. ಆದ್ರೆ, ಆಗೋ ಅದೃಷ್ಟ ಕೊಹ್ಲಿಗೆ ಮಾತ್ರವಿತ್ತು. ಕೊಹ್ಲಿ ಕ್ರಿಕೆಟ್​ನಲ್ಲಿ ಸಕ್ಸಸ್​ ಕಂಡುಕೊಂಡರೆ, ವರ್ತಿಕ್​ ಆಗಲೇ ಬ್ಯುಸಿನೆಸ್​ ಲೋಕಕ್ಕೆ ಕಾಲಿಟ್ರು. ಫೀಲ್ಡ್​ ಬೇರೆ ಬೇರೆಯಾದ್ರೂ, ಗೆಳೆತನ ಮಾತ್ರ ದೂರವಾಗಲಿಲ್ಲ. 2017ರಲ್ಲಿ ವಿರಾಟ್​ – ಅನುಷ್ಕಾ ವಿವಾಹಕ್ಕೆ ತೆರಳಿದ್ದ ಏಕೈಕ ಕ್ರಿಕೆಟಿಗ ವರ್ತಿಕ್​ ತಿಹಾರ.! ಇವರಿಬ್ಬರು ಎಷ್ಟು ಆತ್ಮೀಯರು ಅನ್ನೋದಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್​.

ಇಂದಿನ ಕಾಲದಲ್ಲಿ ಗೆಳೆತನದಲ್ಲಿ ವ್ಯವಹಾರ ಬಂದ್ರೆ ಅದ್ರ ವ್ಯಾಲಿಡಿಟಿ ತುಂಬಾ ಕಡಿಮೆ ಅನ್ನೋ ಮಾತಿದೆ. ಆದ್ರೆ, ವಿರಾಟ್ ಹಾಗೂ ವರ್ತಿಕ್​ರ ಗೆಳೆತನ ಇದಕ್ಕೆ ತದ್ವಿರುದ್ಧವಾಗಿದೆ. ಇವರಿಬ್ಬರ ಈ ಗೆಳೆತನ ಮುಂದೆಯೂ ಹೀಗೆ ಇರಲಿ ಅನ್ನೋದೆ ನಮ್ಮ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ಒಡೆಯ ಕೊಹ್ಲಿಯ ಸಕ್ಸಸ್​ ಹಿಂದಿದ್ದಾನೆ ಈ ಜೀವದ ಗೆಳೆಯ.. ವರ್ತಿಕ್​ ತಿಹಾರ ಯಾರು ಗೊತ್ತಾ?

https://newsfirstlive.com/wp-content/uploads/2023/11/Vartik-Tihar.jpg

Load More