ಇದೇ ಪ್ಲಾನ್ ಮಾಡಿ 2011ರ ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ
ವಿಶ್ವಕಪ್ಗೂ ಮುನ್ನ 15 ಒನ್ ಡೇ ಮ್ಯಾಚ್ ಆಡಲಿದೆ ಭಾರತ ತಂಡ
ವರ್ಲ್ಡ್ಕಪ್ ಗೆಲ್ಲಲ್ಲು ಹೀಗೆ ಮಾಡಬೇಕಂತೆ, ಏನ್ ಪ್ಲಾನ್ ಗೊತ್ತಾ..?
ಟೀಮ್ ಇಂಡಿಯಾದ ಐಸಿಸಿ ಟ್ರೋಫಿ ಬರ ನೀಗೋದ್ಯಾವಾಗ? ಈ ಪ್ರಶ್ನೆ ದಶಕದಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನ ಬಿಟ್ಟುಬಿಡದೇ ಕಾಡ್ತಿದೆ. ಹಾಗಾದ್ರೆ ಈ ವನವಾಸಕ್ಕೆ ಮುಕ್ತಿ ಸಿಗೋದೆ ಇಲ್ವ?. ಖಂಡಿತಾ ಸಿಗುತ್ತೆ. ಸಿಡಿಲ ಮರಿ ಸೆಹ್ವಾಗ್ ಹೇಳಿದ ಈ ಒಂದು ಮಾತನ್ನ ಫಾಲೋಮಾಡಿದರೆ ಡೆಫಿನೆಟ್ಲಿ 2023ರ ಒನ್ಡೇ ವಿಶ್ವಕಪ್ ನಮ್ಮದಾಗಲಿದೆ. ಅಷ್ಟಕ್ಕೂ ವಿಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾದರು ಏನು?
ಕ್ರಿಕೆಟ್ ಮಹಾಜಾತ್ರೆ ಎಂದೇ ಕರೆಯಲ್ಪಡುವ ಒನ್ಡೇ ವಿಶ್ವಕಪ್ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಫಿಫಿ ಓವರ್ ವಿಶ್ವಕಪ್ಗೆ ಗ್ರ್ಯಾಂಡ್ ಕಿಕ್ ಸ್ಟಾರ್ಟ್ ಸಿಗಲಿದ್ದು, ಟೀಮ್ ಇಂಡಿಯಾ 12 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಎದುರು ನೋಡ್ತಿದೆ. ಆದರೆ ಅದು ಅಂದುಕೊಂಡಷ್ಟು ಸುಲಭವಿಲ್ಲ. ವಿಶ್ವಕಪ್ಗೂ ಮುನ್ನ ಈ ಮೇಜರ್ ಚೇಂಜಸ್ ಮಾಡಿಕೊಂಡ್ರೆ ಮಾತ್ರ ದಶಕದ ಐಸಿಸಿ ಟ್ರೋಫಿ ಕೊರಗು ನೀಗಲಿದೆ.
ಇನ್ನಾದ್ರು ಬದಲಾಗುತ್ತಾ ಟೀಮ್ ಇಂಡಿಯಾದ ಅಪ್ರೋಚ್..?
ಒನ್ಡೇ ವಿಶ್ವಕಪ್ಗೂ ಮುನ್ನ 3 ಏಕದಿನ ಸರಣಿ ಮತ್ತು ಏಷ್ಯಾಕಪ್ ಟೂರ್ನಿಯನ್ನ ಆಡಲಿದೆ. ಒಟ್ಟು 15 ಏಕದಿನ ಪಂದ್ಯಗಳಲ್ಲಿ ಭಾರತ ಕಾದಾಡಲಿದೆ. ಇಂಡೀಸ್ 3, ಅಪ್ಘಾನಿಸ್ತಾನ 3, ಏಷ್ಯಾಕಪ್ ಫೈನಲ್ ಸೇರಿ 6 ಹಾಗೂ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳನ್ನ ಸರಣಿಯನ್ನಾಡಲಿದೆ. ಮುಂಬರುವ ಈ ಎಲ್ಲ ಸರಣಿಗಳು ಭಾರತಕ್ಕೆ ವೆರಿ ವೆರಿ ಇಂಪಾರ್ಟೆಂಟ್.
ಈ ಯಾವ ಪಂದ್ಯವನ್ನು ಲೈಟ್ ಆಗಿ ಪರಿಗಣಿಸುವಂತಿಲ್ಲ. ಎಲ್ಲ ಸರಣಿಗಳು ವಿಶ್ವಕಪ್ಗೆ ರಹದಾರಿ. ಬರೀ ಗೆಲುವಿನ ತೋರಣ ಕಟ್ಟಿದ್ರೆ ಸಾಲದು. ಇಡೀ ತಂಡವೇ ಆಟದ ಅಪ್ರೋಚ್ ಚೇಂಜ್ ಆಗಬೇಕಿದೆ. ಮುಂಬರೋ ಪ್ರತಿ ಒನ್ಡೇಯನ್ನ ರೋಹಿತ್ & ಗ್ಯಾಂಗ್ ನಾಕೌಟ್ ಗೇಮ್ನಂತೆ ಟ್ರೀಟ್ ಮಾಡುವ ಅಗತ್ಯವಿದೆ. ಆಗಲಷ್ಟೇ ಭಾರತ ವಿಶ್ವಕಪ್ ಟ್ರೋಫಿ ಬಳಿ ಸುಳಿಯಬಹುದು.
‘ಪ್ರತಿ ಒನ್ಡೇಯನ್ನ ನಾಕೌಟ್ನಂತೆ ಆಡಬೇಕು’
ಇವತ್ತಿನಿಂದಲೇ ಟೀಮ್ ಇಂಡಿಯಾ ಮುಂಬರುವ ಪ್ರತಿ ಏಕದಿನ ಪಂದ್ಯವನ್ನ ನಾಕೌಟ್ ಪಂದ್ಯದಂತೆ ಟ್ರೀಟ್ ಮಾಡ್ಬೇಕು. ಆಗ ಏಕದಿನ ವಿಶ್ವಕಪ್ನಲ್ಲಿ ಸುಲಭವಾಗಿ ನಾಕೌಟ್ ಹಂತಕ್ಕೆ ತಲುಪಲಿದೆ. ಜತೆಗೆ ಈ ಮೈಂಡ್ಸೆಟ್ ನಾಕೌಟ್ ಪಂದ್ಯಗಳನ್ನ ಒತ್ತಡವನ್ನ ಕಡಿಮೆ ಮಾಡಲು ಸಹಕಾರಿ ಆಗಲಿದೆ.
ವಿರೇಂದ್ರ ಸೆಹ್ವಾಗ್, ಭಾರತದ ಮಾಜಿ ಕ್ರಿಕೆಟಿಗ
ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಹೇಳಿದ ಮಾತಿನಲ್ಲಿ ನಿಜಕ್ಕೂ ಅರ್ಥವಿದೆ. ಯಾಕಂದ್ರೆ ಈಗಿನ ಭಾರತ ತಂಡದಲ್ಲಿ ಅಗ್ರೆಸ್ಸಿವ್ ಅಪ್ರೋಚ್ ಕಾಣಿಸ್ತಿಲ್ಲ. ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಅಗ್ರೆಸ್ಸಿವ್ನೆಸ್ ಮರೆಯಾಗ್ತಿದೆ. ಆದರೆ ವಿಶ್ವಕಪ್ನಂತ ಬಿಗ್ ಟೂರ್ನಿಯನ್ನ ಗೆಲ್ಲಬೇಕಾದ್ರೆ ಅಗ್ರೆಸ್ಸಿವ್ ಅಪ್ರೋಚ್ ಬಹುಮುಖ್ಯ.
ಅಪ್ರೋಚ್ ಬದಲಿಸಿ 2011ರ ವಿಶ್ವಕಪ್ ಗೆದ್ದ ‘ಮಹೇಂದ್ರ’ ಪಡೆ
2 ನವೆಂಬರ್, 2011 ರಂದು ಭಾರತ ವಿಶ್ವವನ್ನೇ ಗೆದ್ದ ಸುದೀನ. ಫೈನಲ್ನಲ್ಲಿ ಬಲಿಷ್ಠ ಶ್ರೀಲಂಕಾ ತಂಡವನ್ನ ಮಣಿಸಿ ಹಿಸ್ಟಾರಿಕಲ್ ಒನ್ಡೇ ವಿಶ್ವಕಪ್ ಜಯಿಸಿತ್ತು. ಅಂದಿನ ಧೋನಿ ಪಡೆ ಅಪ್ರೋಚ್ ಬದಲಿಸಿದ್ದರಿಂದಲೇ ಚರಿತ್ರೆ ಸೃಷ್ಟಿಸಿತು ಅನ್ನೋ ಇನ್ಸೈಡ್ ಸ್ಟೋರಿಯನ್ನ ಸೆಹ್ವಾಗ್ ರಿವೀಲ್ ಮಾಡಿದ್ದಾರೆ.
‘ಅಪ್ರೋಚ್ ಬದಲಿಸಿ ಟ್ರೋಫಿ ಗೆದ್ದೆವು’
2008 ರಲ್ಲಿ ಗ್ಯಾರಿ ಕರ್ಸ್ಟನ್ ತಂಡದ ಕೋಚ್ ಆಗಿದ್ದರು. ವಿಶ್ವಕಪ್ ಆರಂಭಕ್ಕೆ ಇನ್ನೂ 3 ವರ್ಷ ಬಾಕಿ ಇತ್ತು. ಆದರೆ ನಾವು ಸುದೀರ್ಘ ಸಮಯ ಇದೆ ಎಂದು ನಿರ್ಲಕ್ಷಿಸಲಿಲ್ಲ. ಅಂದಿನಿಂದಲೇ ಪ್ರತಿ ಏಕದಿನ ಪಂದ್ಯವನ್ನ ನಾಕೌಟ್ ಗೇಮ್ನಂತೆ ಆಡಲು ಶುರು ಮಾಡಿದೆವು. ವಿಶ್ವಕಪ್ ಗೆಲ್ಲಲು ಅದು ಸಹಕಾರಿ ಆಯ್ತು.
ವಿರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ
ತವರಿನಲ್ಲಿ ನಡೆಯುವ ಒನ್ಡೇ ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾ ಹವಣಿಸ್ತಿದೆ. ಆ ಮಹಾದಾಸೆ ಈಡೇರಬೇಕಾದ್ರೆ ಸೆಹ್ವಾಗ್ ಹೇಳಿದಂತೆ ತಂಡ ಅಪ್ರೋಚ್ ಚೇಂಜ್ ಆಗಲೇಬೇಕಿದೆ. ಇನ್ನಾದ್ರು ರೋಹಿತ್ ಪಡೆ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸುತ್ತಾ ಅಥವಾ ಇಲ್ವಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ