ಆಸಿಸ್ಗೆ ಚಳ್ಳೆಹಣ್ಣು ತಿನ್ನಿಸಿದ್ದ ವೀರೇಂದ್ರ ಸೆಹ್ವಾಗ್
ವಿವಾದ ಕ್ರಿಯೇಟ್ ಮಾಡೋವಲ್ಲಿ ಆಸಿಸ್ ಫಸ್ಟ್
ಸೆಹ್ವಾಗ್ ಬ್ಯಾಟ್ಗೆ ಬಾಲ್ ಟಚ್ ಆಗಿ ಹೋಗಿತ್ತಾ?
ಆಸಿಸ್ ಕ್ರಿಕೆಟರ್ಸ್ ಮೈಂಡ್ ಗೇಮ್, ಸ್ಲೆಡ್ಜಿಂಗ್ ಮಾಡೋದ್ರಲ್ಲಿ ಸಿಕ್ಕಾಪಟ್ಟೆ ಫೇಮಸ್. ಇಂತಾ ಆಸಿಸ್ ಪಡೆಗೆ ವೀರೇಂದ್ರ ಸೆಹ್ವಾಗ್ ಚಳ್ಳೆಹಣ್ಣು ತಿನ್ನಿಸಿದ್ದರು. ಸೆಹ್ವಾಗ್ ಕೊಟ್ಟ ಉತ್ತರಕ್ಕೆ ರಿಕಿ ಪಾಂಟಿಂಗ್ ಕಕ್ಕಾಬಿಕ್ಕಿಯಾಗಿದ್ರು.
2000 ದಿಂದ 2010ರ ಅವಧಿಯಲ್ಲಿ ಆಸ್ಟ್ರೇಲಿಯನ್ ಕ್ರಿಕೆಟರ್ಸ್ ವಿಶ್ವ ಕ್ರಿಕೆಟ್ ಲೋಕಕ್ಕೆ ಬಾಸ್ಗಳಂತೆ ವರ್ತಿಸ್ತಾ ಇದ್ರು. ಎದುರಾಳಿಗಳನ್ನ ನಿಂದಿಸೋದು, ಪಂದ್ಯದೂದ್ದಕ್ಕೂ ಸ್ಲೆಡ್ಜ್ ಮಾಡೋದು, ಸುಖಾ ಸುಮ್ಮನೆ ವಿವಾದಗಳನ್ನ ಕ್ರಿಯೇಟ್ ಮಾಡೋದ್ರಿಂದಲೇ ಸದಾ ಸುದ್ದಿಯಲ್ಲಿ ಇರುತ್ತಿದ್ರು. ಇಂತಾ ಆಸಿಸ್ ಪಡೆಗೆ ನಮ್ಮ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಚಳ್ಳೆಹಣ್ಣು ತಿನ್ನಿಸಿದ್ದರು.
ಬಾಲ್ ಬ್ಯಾಟ್ಗೆ ಬಡಿತಾ..?
2008ರಲ್ಲಿ ಮೊಹಾಲಿಯಲ್ಲಿ ನಡೆದ ಟೆಸ್ಟ್ ಪಂದ್ಯದ ಕಥೆಯಿದು. ಪಂದ್ಯದಲ್ಲಿ ಬ್ಯಾಟಿಂಗ್ ಮಾಡ್ತಿರುವ ವೇಳೆ ಸೆಹ್ವಾಗ್ ಬ್ಯಾಟ್ಗೆ ಸವರಿದ ಚೆಂಡು ಸೀದಾ ಕೀಪರ್ ಕೈಗೆ ಹೋಯ್ತು. ಎಡ್ಜ್ ಆದ ಸೌಂಡ್ ಕೇಳಿದ್ದ ಆಸಿಸ್ ಪಡೆ ಉತ್ಸಾಹದಲ್ಲಿತ್ತು. ಆದ್ರೆ, ಅಂಪೈರ್ ಔಟ್ ನೀಡಲೆ ಇಲ್ಲ.
ಪಾಂಟಿಂಗ್ಗೆ ಟಾಂಗ್ ಕೊಟ್ಟ ಸೆಹ್ವಾಗ್
ಈಗಿನಂತೆ ಡಿಆರ್ಎಸ್ ಇರಲಿಲ್ಲ ನೋಡಿ. ಅಂಪೈರ್ ಮೇಲೆ ಕೋಪಗೊಂಡ ಆಸಿಸ್ ನಾಯಕ ರಿಕಿ ಪಾಟಿಂಗ್ ನೇರವಾಗಿ ಸೆಹ್ವಾಗ್ ಬಳಿ ಬಂದು ಚೆಂಡು ಬ್ಯಾಟ್ಗೆ ಎಡ್ಜ್ ಆಗಿತ್ತಾ ಎಂದು ಕೇಳಿದ್ರಂತೆ. ಇದಕ್ಕೆ ಸೆಹ್ವಾಗ್, ಹೌದು ಎಡ್ಜ್ ಆಗಿದೆ ಎಂದೇ ಉತ್ತರಿಸಿದ್ರಂತೆ. ಮತ್ಯಾಕೆ ಕ್ರಿಸ್ ಬಿಟ್ಟು ಹೋಗಿಲ್ಲ ಅಂತಾ ಪಾಂಟಿಂಗ್ ಕೇಳಿದಾಗ, ನೀನು ಎಷ್ಟೋ ಪಂದ್ಯಗಳಲ್ಲಿ ಔಟ್ ಆದ್ರೂ ಹೋಗಿಲ್ಲ, ನಾನ್ಯಾಕೆ ಹೋಗಲಿ ಎಂದು ಹೇಳಿದ್ರಂತೆ.
ಆ ಬಳಿಕ ಅಂಪೈರ್ ಬಳಿ ಹೋದ ಪಾಂಟಿಂಗ್, ವೀರೂ ಹೇಳ್ತಿದ್ದಾನೆ ಎಡ್ಜ್ ಆಗಿದ್ಯಂತೆ ಎಂದು ಮತ್ತೆ ಮನವಿ ಸಲ್ಲಿಸಿದ್ರು. ಆಗ ಅಂಪೈರ್ ಸೆಹ್ವಾಗ್ ಬಳಿ ಬಂದು ಕೇಳಿದಾಗ ಪ್ಲೇಟ್ ಚೇಂಜ್ ಮಾಡಿ, ಎಡ್ಜ್ ಆಗಿಲ್ಲ ಅಂದ್ರಂತೆ. ಆತ ಸುಳ್ಳು ಹೇಳ್ತಾನೆ ಎಂದು ಪಾಂಟಿಂಗ್ರನ್ನೇ ದೂರಿದ್ರಂತೆ. ಇಲ್ಲಿ ಸೆಹ್ವಾಗ್ ರಾಕ್, ಪಾಂಟಿಂಗ್ ಶಾಕ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ