newsfirstkannada.com

ಅಂದು ಸೆಹ್ವಾಗ್ ತ್ರಿಶತಕ ಬಾರಿಸಿದ್ದರ ಹಿಂದೆ ಇದೆ ಒಂದು ಫನ್ನಿ ಇಂಟರೆಸ್ಟಿಂಗ್ ಘಟನೆ..!

Share :

26-07-2023

    ಈ ತಮಾಷೆಯ ಪ್ರಸಂಗ ನಿಮಗೆ ಗೊತ್ತಾದರೆ ನಗುತ್ತೀರಿ

    ದ್ರಾವಿಡ್​ಗೆ ಗೊತ್ತು ಸೆಹ್ವಾಗ್ ಆಟದ ಹಿಂದಿನ ಗುಟ್ಟು

    ಸಿಕ್ಸರ್​, ಬೌಂಡರಿ ಬಾರಿಸಲು ಸೆಹ್ವಾಗ್​ಗೆ ಬೇಕು ಈ ಬೂಸ್ಟ್​

ವಿರೇಂದ್ರ ಸೆಹ್ವಾಗ್​​.. ಈ ಸಿಡಿಲಮರಿಯ ಹೊಡಿಬಡಿ ಆಟವನ್ನು ನೋಡಿ ಮರುಳಾಗದವರಿಲ್ಲ. ದಂಡಂ ದಶಗುಣಂ ಆಟಕ್ಕೆ ಫೇಮಸ್​​​. ವೀರು ದಕ್ಷಿಣ ಆಫ್ರಿಕಾ ವಿರುದ್ಧ ಬಾರಿಸಿದ ತ್ರಿಬಲ್​ ಸೆಂಚುರಿಯನ್ನು ಯಾರೋಬ್ಬರು ಮರೆಯಲು ಸಾಧ್ಯವಿಲ್ಲ. ನಜಾಫ್​​ಗಡದ ನವಾಬ ಈ ತ್ರಿಶಕ ಬಾರಿಸಿದ್ದರ ಹಿಂದೆ ಒಂದು ಫನ್ನಿ ಇಂಟ್ರೆಸ್ಟಿಂಗ್​ ಸಂಗತಿ ಇದೆ.

ವಿರೇಂದ್ರ ಸೆಹ್ವಾಗ್​​​​​​.. ವಿಶ್ವಕ್ರಿಕೆಟ್​ ಕಂಡ ಮೋಸ್ಟ್​ ಡೆಡ್ಲಿಯೆಸ್ಟ್ ಬ್ಯಾಟ್ಸ್​​ಮನ್​​. ಶರವೇಗದ ಆಟಕ್ಕೆ ಎತ್ತಿದ ಕೈ. ವೀರೂ ವೀರಾವೇಶಕ್ಕೆ ಘಟಾನುಘಟಿ ಬೌಲರ್​​​ಗಳೇ ಥಂಡಾ ಹೊಡೆದ ಉದಾಹರಣೆಗಳಿವೆ. ಇಂತಹ ಡೇರಿಂಗ್​​ ಬ್ಯಾಟರ್​​​ಗೆ ಒಂದು ಖಯಾಲಿ ಇತ್ತು. ಅದೇನಂದ್ರೆ ಸಾಂಗ್ಸ್ ಹೇಳಿಕೊಂಡೇ ಬ್ಯಾಟಿಂಗ್ ಮಾಡೋದು. 2008 ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್​​​​​ನಲ್ಲಿ ಸಾಂಗ್ಸ್ ಹಾಡಿಕೊಂಡೇ ವಿಶ್ವದಾಖಲೆಯ ತ್ರಿಶತಕ ಬಾರಿಸಿದ್ರು.

ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಸೆಹ್ವಾಗ್​​​​, ರಾಹುಲ್​​ ದ್ರಾವಿಡ್ ಜೊತೆ ಬ್ಯಾಟಿಂಗ್​ ಮಾಡ್ತಿರ್ತಾರೆ. ಲಿರಿಕ್ಸ್​ ಹೇಳಿಕೊಂಡು ಸಿಕ್ಸರ್​​​-ಬೌಂಡ್ರಿಗಳ ಚಿತ್ತಾರ ಬಿಡಿಸಿದ್ರು. ಡ್ರಿಂಕ್ಸ್​ ಬ್ರೇಕ್​ ಮುಗಿಸಿ ಬಂದಿದ್ದೇ ತಡ, ಏಕಾಏಕಿ ವೀರೂಗೆ ಲಿರಿಕ್ಸ್ ಮರೆತು ಹೋಗುತ್ತೆ. ಬ್ಯಾಟ್​​ನಿಂದ ಸಿಕ್ಸರ್​​​-ಬೌಂಡ್ರಿಗಳ ಸಿಡಿಯಲ್ಲ. ಆಗ ದ್ರಾವಿಡ್​, ಸೆಹ್ವಾಗ್ ಬಳಿ ಬಂದು ಏನಾಯ್ತು ಅಂತಾ ಕೇಳ್ತಾರೆ. ಆಗ ವೀರೂ ಲಿರಿಕ್ಸ್ ಮರೆತು ಹೋಗಿದೆ.

ಬ್ಯಾಟಿಂಗ್ ಮಾಡಲು ಮಜಾ ಬರ್ತಿಲ್ಲ ಎಂದು ಹೇಳ್ತಾರೆ. ಕೂಡಲೇ 12ನೇ ಆಟಗಾರನನ್ನ ಕರೆದು ಐಪ್ಯಾಡ್​​​ ತೆಗೆದುಕೊಂಡು ಬರಲು ಸೂಚಿಸ್ತಾರೆ. ಐಪ್ಯಾಡ್​​ ಬಂದಿದ್ದೇ ತಡ, ಕೂಡಲೇ ಲಿರಿಕ್ಸ್ ಕೇಳಿ ಮತ್ತೆ ಬೌಂಡ್ರಿ-ಸಿಕ್ಸರ್ ಬಾರಿಸಲು ಶುರು ಮಾಡಿದ್ರಂತೆ. ಅಷ್ಟಕ್ಕೂ ಸೆಹ್ವಾಗ್ ಕೇಳ್ತಿದ್ದ ಆ ರಿಲಿಕ್ಸ್ ಯಾವುದು ಗೊತ್ತಾ ? ‘ಛಲ ಜಾತಾ ಹೂ, ಕಿಸಿ ಖೇದನ್ಮೆ’ ಹಾಡು. ಈ ಇಂಟರೆಸ್ಟಿಂಗ್ ಸಂಗತಿಯನ್ನ ವೀರು, ಮಿರ್ಚಿ ಪ್ಲಸ್​​​​ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಂದು ಸೆಹ್ವಾಗ್ ತ್ರಿಶತಕ ಬಾರಿಸಿದ್ದರ ಹಿಂದೆ ಇದೆ ಒಂದು ಫನ್ನಿ ಇಂಟರೆಸ್ಟಿಂಗ್ ಘಟನೆ..!

https://newsfirstlive.com/wp-content/uploads/2023/07/VEERU.jpg

Load More