ರಾಮಮಂದಿರ ಉದ್ಘಾಟನೆ ಯಾವಾಗೆಂದು ಹೇಳಿದ ಶ್ರೀಪಾದರು
ರಾಮಮಂದಿರದಲ್ಲಿ ಯಾವುದೇ ಸೇವೆಗಳು ಇರಲ್ಲ.. ಇನ್ನೇನಿರುತ್ತೆ..?
ವಿಶ್ವಪ್ರಸನ್ನ ಶ್ರೀ ರಾಮಮಂದಿರ ನಿರ್ಮಾಣ ಸಮಿತಿಯ ಸದಸ್ಯರು
ಮಂಗಳೂರಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಜನವರಿಯ ಮಕರ ಸಂಕ್ರಾಂತಿ ಬಳಿಕ ರಾಮ ಮಂದಿರ ಲೋಕಾರ್ಪಣೆಗೆ ದಿನಾಂಕ ನಿಗದಿಯಾಗಲಿದೆ. ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ. ರಾಮನ ಹೆಸರಲ್ಲಿ ಭಕ್ತರು ಮಾಡುವ ದಾನಗಳೇ ರಾಮನ ಸೇವೆ ಎಂದಿದ್ದಾರೆ. ವಿಶ್ವಪ್ರಸನ್ನ ಶ್ರೀಪಾದರು, ರಾಮ ಮಂದಿರ ನಿರ್ಮಾಣ ಸಮಿತಿಯ ಸದಸ್ಯರಾಗಿದ್ದಾರೆ.
ದಾನಗಳೇ ರಾಮನ ಸೇವೆ
ಅಯೋಧ್ಯೆ ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದೆ. ಪ್ರಥಮ ಹಂತದ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಮುಂದಿನ ಮಕರ ಸಕ್ರಾಂತಿ ಕಳೆದ ಬಳಿಕ ಮಂದಿರ ಲೋಕಾರ್ಪಣೆ ಯಾಗಲಿದೆ. ರಾಮ ಪ್ರತಿಮೆ ನಿರ್ಮಾಣ ಕಾರ್ಯ ಕೂಡಾ ಭರದಿಂದ ಸಾಗುತ್ತಿದೆ. ನಮ್ಮ ಕನಸು ರಾಮಮಂದಿರ ಅಲ್ಲ, ರಾಮ ರಾಜ್ಯದ ಕನಸು ಅಂತಾ ಹೇಳಿದರು.
ಇನ್ನೇನಿದ್ದರೂ ರಾಮ ರಾಜ್ಯದ ಕನಸು..!
ಈ ಕನಸಿನ ಸಾಕಾರ ಮಾಡೋದು ರಾಮನಿಗೆ ಕೊಡುವ ಕಾಣಿಕೆ. ಅಯೋಧ್ಯೆಯಲ್ಲಿ ರಾಮನ ಮುಂದೆ ದಾನವನ್ನು ಅರ್ಪಿಸೋಣ. ಬಡವರಿಗೆ ಉಚಿತ ಚಿಕಿತ್ಸೆ, ಅರ್ಹ ವಿದ್ಯಾರ್ಥಿಗೆ ಚಿಕಿತ್ಸೆ, ಗೋ ದತ್ತು ಪಡೆಯುವ ಮೂಲಕ ರಾಮಸೇವೆ ಮಾಡೋಣ. ಈ ಮೂಲಕ ರಾಮ ರಾಜ್ಯದ ಕನಸನ್ನು ನನಸು ಮಾಡೋಣ ಅಂತಾ ಕರೆ ನೀಡಿದರು.
ಭಾರತದಂತಹ ನೆಲದಲ್ಲಿ ಗೋಹತ್ಯೆ ಆಗಬಾರದು. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧವನ್ನು ಹಿಂಪಡೆಯುವ ದುಸ್ಸಾಹಸಕ್ಕೆ ಕೈಹಾಕಬಾರದು. ಹಿಂದೂ ಸಂಘಟನೆಗಳು ಗೋಹತ್ಯೆಯನ್ನು ತಡೆಯಬೇಕು. ಅದು ಪೊಲೀಸರ ಮೂಲಕ ಈ ಹತ್ಯೆಯನ್ನು ತಡೆಯಬೇಕು ಎಂದು ಮನವಿ ಮಾಡಿಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ