newsfirstkannada.com

ವಿಠ್ಠಲನಿಗೆ ಮತ್ತೆ ‘ಜಲದಿಗ್ಭಂದನ’.. 40 ವರ್ಷಗಳ ಬಳಿಕ ಪ್ರತ್ಯಕ್ಷವಾಗಿದ್ದ ದೇವಸ್ಥಾನ ಮುಳುಗಡೆ

Share :

23-07-2023

    ನೀರಿನಲ್ಲಿ ಮುಳುಗಡೆಯಾದ ಬೆಳಗಾವಿಯ ಪ್ರಸಿದ್ಧ ವಿಠ್ಠಲ ದೇವಸ್ಥಾನ

    ಹಿಡಕಲ್ ಡ್ಯಾಂನ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರಸಿದ್ದ ದೇವಸ್ಥಾನ

    ದೇವಸ್ಥಾನ ಮುಳುಗಡೆ ಮುನ್ನಚ್ಚರಿಕೆ ಕ್ರಮವಾಗಿ ದರ್ಶನಕ್ಕೆ ನಿರ್ಬಂಧ

ಬೆಳಗಾವಿ: ಬರೋಬ್ಬರಿ 40 ವರ್ಷಗಳ ಬಳಿಕ ಪ್ರತ್ಯಕ್ಷಗೊಂಡಿದ್ದ ಐತಿಹಾಸಿಕ ವಿಠ್ಠಲ ದೇವಸ್ಥಾನ ನೀರಿನಲ್ಲಿ ಮತ್ತೆ ಮುಳುಗಡೆಯಾಗಿದೆ. ಬೆಳಗಾವಿ ಜಿಲ್ಲೆ ಹುನ್ನೂರು ಗ್ರಾಮದ ಬಳಿ ಈ ದೇವಸ್ಥಾನ ಪ್ರತ್ಯಕ್ಷವಾಗಿತ್ತು. ಘಟಪ್ರಭಾ ನದಿ ಮೂಲಕ ಹಿಡಕಲ್ ಡ್ಯಾಂಗೆ ಹರಿದು ಬಂದ ಅಧಿಕ ನೀರಿನಲ್ಲಿ ದೇವಸ್ಥಾನ ಮುಳುಗಡೆಯಾಗಿದೆ.

ಸದ್ಯ ಇದೀಗ ವಿಠ್ಠಲ ದೇವಸ್ಥಾನ ಮುಳುಗಡೆಯಾಗಿ ಶಿಖರ ಮಾತ್ರ ಗೋಚರಿಸುತ್ತಿದೆ. ಪ್ರಥಮ ಬಾರಿ ಹಿಡಕಲ್ ಜಲಾಶಯ ಸಂಪೂರ್ಣ ಖಾಲಿಯಾಗಿದ್ದರಿಂದ ಹಿಡಕಲ್ ಪ್ರಸಿದ್ಧ ವಿಠ್ಠಲ ದೇವಸ್ಥಾನ ಓಪನ್ ಆಗಿತ್ತು. ಹೀಗಾಗಿ 1 ತಿಂಗಳಿಂದ ಲಕ್ಷಾಂತರ ಭಕ್ತರು ನಾ ಮುಂದು ತಾ ಮುಂದು ಎಂದು ಓಡಿ ಬಂದು ದರ್ಶನ ಪಡೆದಿದ್ದರು. ಸದ್ಯ ಪ್ರಸಿದ್ಧ ವಿಠ್ಠಲ ದೇವಸ್ಥಾನ ಮುಳುಗಡೆಯಾಗಿದ್ದರಿಂದ ಭಕ್ತರ ದರ್ಶನಕ್ಕೆ ಆಡಳಿತ ಮಂಡಳಿ ನಿರ್ಬಂಧ ಹೇರಿದೆ.

ಇದನ್ನು ಓದಿ: 1951ರಲ್ಲಿ ನಿರ್ಮಾಣವಾದ ದೇವಸ್ಥಾನ 40 ವರ್ಷಗಳ ಬಳಿಕ ಪ್ರತ್ಯಕ್ಷ!

1951ರಲ್ಲಿ ನಿರ್ಮಾಣ

ಅಚ್ಚರಿಯ ಸಂಗತಿ ಎಂದರೆ 40ವರ್ಷಗಳಲ್ಲಿ ಪ್ರಥಮ ಬಾರಿ ಇಡೀ ದೇವಸ್ಥಾನ ಜನರಿಗಾಗಿ ತೆರೆದುಕೊಂಡಿತ್ತು. ಮತ್ತೊಂದು ಸಂಗತಿ ಎಂದರೆ 40ವರ್ಷ ನೀರಿನಲ್ಲಿದ್ದರೂ ದೇವಸ್ಥಾನ, ದೇವರ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ. ಈ ದೇವಸ್ಥಾನವನ್ನು 1951ರಲ್ಲಿ ನಿರ್ಮಾಣ ಮಾಡಲಾಗಿತ್ತು. ಇದನ್ನು ಕಲ್ಲಿನಲ್ಲಿ ನಿರ್ಮಾಣ ಮಾಡಲಾಗಿತ್ತು. 40 ವರ್ಷಗಳಿ ಬಳಿಕ ದೇವಸ್ಥಾನ ಪ್ರತ್ಯಕ್ಷಗೊಂಡಿದ್ದಕ್ಕೆ ಜನರು ಅಚ್ಚರಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಠ್ಠಲನಿಗೆ ಮತ್ತೆ ‘ಜಲದಿಗ್ಭಂದನ’.. 40 ವರ್ಷಗಳ ಬಳಿಕ ಪ್ರತ್ಯಕ್ಷವಾಗಿದ್ದ ದೇವಸ್ಥಾನ ಮುಳುಗಡೆ

https://newsfirstlive.com/wp-content/uploads/2023/07/temple-1.jpg

Load More