ಹೊಸ ಸ್ಪರ್ಶ, 6 ಕೋಟಿ ವೆಚ್ಚದಲ್ಲಿ ಕಾಮಗಾರಿ ಶುರು ಮಾಡಿದ ಬಿಬಿಎಂಪಿ
ಹೊಸ ಲುಕ್ನೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾದ ಪುಡ್ ಸ್ಟ್ರೀಟ್
ನವೀಕರಣಗೊಂಡ ವಿವಿ ಪುರಂ ಫುಡ್‌ಸ್ಟ್ರೀಟ್ ಯಾವಾಗ ಓಪನ್ ಆಗಲಿದೆ?
ಬೆಂಗಳೂರು: ಆಹಾರ ಪ್ರಿಯರ ಹಾಟ್ ಸ್ಪಾಟ್ ಅಂತಲೇ ಫೇಮಸ್ ಆಗಿರೋ ವಿವಿ ಪುರಂನ ಹೈಟೆಕ್ ಪುಡ್ ಸ್ಟ್ರೀಟ್ ಲೋಕಾರ್ಪಣೆಗೆ ಕೌಂಟ್ ಡೌನ್ ಶುರುವಾಗಿದೆ. ಹೊಸ ಲುಕ್ನೊಂದಿಗೆ ಗ್ರಾಹಕರನ್ನ ಸೆಳೆಯಲು ಸಜ್ಜಾಗುತ್ತಿದೆ. ಡಿಸೆಂಬರ್‌ನಲ್ಲಿ ಆರಂಭವಾದ ಕಾಮಗಾರಿ ಸದ್ಯ ಮುಕ್ತಾಯದ ಹಂತಕ್ಕೆ ಬಂದಿದೆ.
ಕೆಲವೇ ದಿನಗಳಲ್ಲಿ ಮತ್ತೆ ನೀವು ಫುಡ್‌ಸ್ಟ್ರೀಟ್‌ಗೆ ಹೋಗಿ ವಿವಿಧ ತಿಂಡಿಗಳ ರುಚಿ ಸವಿಯಬಹುದು. ಸದಾ ಜನರಿಂದಲೇ ಗಿಜಿಗುಡುತ್ತಿದ್ದ ಸಿಲಿಕಾನ್ ಸಿಟಿಯ ವಿವಿಪುರಂನ ಪುಡ್ ಸ್ಟ್ರೀಟ್ಗೆ ಹೊಸ ಸ್ಪರ್ಶ ಕೊಡಲು ಬಿಬಿಎಂಪಿ 6 ಕೋಟಿ ವೆಚ್ಚದಲ್ಲಿ ಕಾಮಗಾರಿ ಶುರು ಮಾಡಿತ್ತು. 2022ರ ಡಿಸೆಂಬರ್‌ನಲ್ಲಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಚಾಲನೆ ನೀಡಿದ್ರು. 7 ಮೀಟರ್ ಇದ್ದ ರಸ್ತೆ 5 ಮೀಟರ್‌ಗೆ ಇಳಿಸಿ, ಪಾದಚಾರಿಗಳು ಹಾಗೂ ಆಹಾರ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಹಲವು ಮೂಲ ಸೌಕರ್ಯಗಳನ್ನ ಒದಗಿಸಿ ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ.
ಚಿಕ್ಕಪೇಟೆಯ ಬಿಜೆಪಿ ಶಾಸಕ ಡಾ. ಉದಯ್ ಗರುಡಾಚಾರ್ ವಿವಿ ಪುರಂನ ಫುಡ್ ಸ್ಟ್ರಿಟ್ ಕಾಮಗಾರಿ ಶೀಘ್ರದಲ್ಲಿಯೇ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಜುಲೈ 15ಕ್ಕೆ ಡೆಡ್ ಲೈನ್ ನೀಡಿದ್ದಾರೆ. ಜೊತೆಗೆ ಆಗಸ್ಟ್ನಲ್ಲಿ ಹೈಟೆಕ್ ತಿಂಡಿ ಬೀದಿ ಲೋಕಾರ್ಪಣೆ ಮಾಡುವ ಭರವಸೆಯನ್ನೂ ನೀಡಿದ್ದಾರೆ. ವಾಹನ ನಿಲುಗಡೆ ವ್ಯವಸ್ಥೆ, ಕೈ ತೊಳೆಯಲು ವ್ಯವಸ್ಥೆ, ರಸ್ತೆ ಬದಿಯಲ್ಲಿಯೇ ಆಹಾರ ಸೇವಿಸಲು ವ್ಯವಸ್ಥೆ ಸೇರಿ ಹಲವು ಕಾಮಗಾರಿ ಕೈಗೊಳ್ಳಲಾಗಿತ್ತು. ಬಿಬಿಎಂಪಿ ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್ ಮಾದರಿಯಲ್ಲಿಯೇ ವಿವಿ ಪುರಂ ಫುಡ್‌ಸ್ಟ್ರೀಟ್ ಅಭಿವೃದ್ಧಿ ಮಾಡಲಾಗ್ತಾಯಿದೆ ಅನ್ನೋದು ವಿಶೇಷ. ಈಗ ನವೀಕರಣ ಕಾಮಗಾರಿಯ ಕಾರಣ ಸಂಜೆ 6 ಗಂಟೆಯ ನಂತರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿಂದೆ 4 ಗಂಟೆಗೆ ವಿವಿ ಪುರಂ ಫುಡ್‌ಸ್ಟ್ರೀಟ್ ಅಂಗಡಿಗಳ ಬಾಗಿಲು ತೆರೆಯುತ್ತಿದ್ದವು.
ಬೆಂಗಳೂರು ನಗರದ ಪುರಾತನ ಫುಡ್‌ಸ್ಟ್ರೀಟ್ ಸಜ್ಜನ್ ರಾವ್ ವೃತ್ತದಿಂದ ಮಿನರ್ವ ವೃತ್ತದ ತನಕ ಇದೆ. ಸುಮಾರು 40 ಅಂಡಿಗಳು ಹಲವು ತಳ್ಳುಗಾಡಿಗಳು ವಿವಿ ಪುರಂ ಫುಡ್‌ಸ್ಟ್ರೀಟ್‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತವೆ. ಸಂಜೆ ಆದ್ರೆ ಸಾಕು ತಿಂಡಿ ಪ್ರಿಯರ ದಂಡು ವಿವಿ ಪುರಂ ಕಡೆ ಆಗಮಿಸುತ್ತದೆ. ಈಗಾಗಲೇ ಬಹತೇಕ ಕಾಮಗಾರಿ ಮುಗಿದಿದೆ. ಸದ್ಯ ನವೀಕರಣಗೊಂಡ ವಿವಿ ಪುರಂ ಫುಡ್‌ಸ್ಟ್ರೀಟ್ ಯಾವಾಗ ಓಪನ್ ಆಗಲಿದೆ? ಅಂತ ಜನರು ಸಹ ಕಾದು ಕುಳಿತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ