ಮೂವರು ಸಿಬ್ಬಂದಿ ಸೇರಿ ವಿಮಾನದಲ್ಲಿ 10 ಮಂದಿ ಪ್ರಯಾಣ
ರಷ್ಯಾದ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್..!
ಎರಡು ತಿಂಗಳ ಹಿಂದೆ ರಷ್ಯಾ ಅಧ್ಯಕ್ಷರಿಗೆ ಟಕ್ಕರ್ ಕೊಟ್ಟಿದ್ದ
ಮಾಸ್ಕೋ: ಎರಡು ತಿಂಗಳ ಹಿಂದೆ ರಷ್ಯಾದ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ವಿರುದ್ಧ ದಂಗೆ ಎದ್ದಿದ್ದ ವ್ಯಾಗ್ನರ್ ಸೇನಾ ಪಡೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ದುರ್ಘಟನೆಯಲ್ಲಿ ಯೆವ್ಗೆನಿ ಪ್ರಿಗೊಜಿನ್ ಸೇರಿದಂತೆ 10 ಪ್ರಯಾಣಿಕರಿದ್ದರು, ಅವರೆಲ್ಲ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ.
ಕಳೆದ ಎರಡು ತಿಂಗಳ ಹಿಂದೆ ವ್ಯಾಗ್ನರ್ ಸೇನಾಪಡೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್, ರಷ್ಯಾದ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ವಿರುದ್ಧ ಬಂಡಾಯ ಸಾರಿದ್ದರು. ಇದು ನಡೆದು ಹಲವು ದಿನಗಳ ಬಳಿಕ ಇದೀಗ ಪ್ರಿಗೋಜಿನ್ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡು ಸಂಪೂರ್ಣ ಸುಟ್ಟು ಹೋಗಿದೆ. ವಿಮಾನ ಪ್ರಯಾಣಿಸುತ್ತಿದ್ದ ವೇಳೆ ಆಗಸದಲ್ಲೇ ಸಮಸ್ಯೆಯುಂಟಾಗಿ ಬೆಂಕಿ ಹೊತ್ತಿಕೊಂಡು ನೆಲಕ್ಕೆ ಬಿದ್ದಿದೆ. ಪರಿಣಾಮ ವಿಮಾನ ಸೇರಿದಂತೆ ಒಳಗಿದ್ದವರ ದೇಹವೆಲ್ಲ ಛಿದ್ರವಾಗಿ ನೆಲಕ್ಕೆ ಅಪ್ಪಳಿಸಿವೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
BREAKING NEWS – WAGNER BOSS YEVGENY PRIGOZHIN DEAD IN A PLANE CRASH IN NORTH WEST OF MOSCOW, RUSSIA pic.twitter.com/7yw6n18d73
— Insider Paper (@TheInsiderPaper) August 23, 2023
ರಷ್ಯಾದ ತುರ್ತು ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್ ನಡುವೆ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಪತನಗೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವಿಮಾನದಲ್ಲಿ ಮೂವರು ಸಿಬ್ಬಂದಿ ಸೇರಿದಂತೆ 10 ಜನರು ಪ್ರಯಾಣಿಸುತ್ತಿದ್ದರು. ಇದೇ ವಿಮಾನದಲ್ಲಿ ರಷ್ಯಾದ ವ್ಯಾಗ್ನರ್ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಕೂಡ ಇದ್ದರು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ