ರೋಸ್ಟೋವ್ ಸಿಟಿ ವಶ.. ನೆಕ್ಸ್ಟ್ ಟಾರ್ಗೆಟ್ ಮಾಸ್ಕೋ
ಖಾಸಗಿ ಸೇನೆಯ ಚಕ್ರವ್ಯೂಹದಲ್ಲಿ ಸಿಲುಕಿದ ರಷ್ಯಾ..!
ವ್ಯಾಗ್ನರ್ ಹೊಡೆತಕ್ಕೆ 3 ಹೆಲಿಕಾಪ್ಟರ್ ಪೀಸ್ ಪೀಸ್
ಮಾಸ್ಕೋ: ಯುದ್ಧದಾಹದಿಂದ ಉಕ್ರೇನನ್ನ ಧಗಧಗಿಸುವಂತೆ ಮಾಡಿದ್ದ ರಷ್ಯಾಗೆ ಆಂತರಿಕ ಸಂಕಷ್ಟವೊಂದು ಎದುರಾಗಿದೆ. ಬಗಲ್ ಮೆ ದುಷ್ಮನ್ ಅನ್ನೋ ಹಾಗೆ ರಷ್ಯಾ ಸೇನೆ ಜೊತೆ ಕೈ ಜೋಡಿಸಿ ಬೆಂಕಿ ಉಗುಳಿದ್ದ ಖಾಸಗಿ ಸೇನೆಯೇ ಈಗ ಪುಟಿನ್ ಪಡೆಯ ಬುಡಕ್ಕೆ ಬೆಂಕಿ ಇಡಲು ಮುಂದಾಗಿದೆ. ಖಾಸಗಿ ಸೇನೆಯ ಅಟ್ಟಹಾಸಕ್ಕೆ ರಷ್ಯಾದ ಮಾಸ್ಕೋ ನಗರ ಬೆಚ್ಚಿಬಿದ್ದಿದ್ದು ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.
ಆಗಸದಲ್ಲೇ ಸೇನಾ ಹೆಲಿಕಾಪ್ಟರ್ ಉಡೀಸ್
ನಡುರಸ್ತೆಯಲ್ಲಿ ಸೇನಾ ವಾಹನ ಛಿದ್ರ ಛಿದ್ರ
ದಾಳಿ, ಸ್ಪೋಟ ಎಲೆಲ್ಲೂ ಆತಂಕದ ವಾತಾವರಣ. ಇದು ರಷ್ಯಾದಲ್ಲಿ ಕಂಡು ಬಂದಿರೋ ದೃಶ್ಯ. ಇಷ್ಟುದಿನ ನೆರೆಯ ರಾಷ್ಟ್ರ ಉಕ್ರೇನ್ ಮೇಲೆ ಕತ್ತಿ ಮಸೆಯುತ್ತಿದ್ದ ರಷ್ಯಾಗೆ ಹೊಸ ಕಂಟಕ ಎದುರಾಗಿದೆ. ತಾನೇ ಸಾಕಿದ ಗಿಣಿ ತನ್ನನ್ನೇ ಕುಕ್ಕಲು ಹೊಂಚು ಹಾಕಿ ಕುಳಿತಿದೆ. ಗಡಿಯಾಚೆಯ ವೈರಿಗಳ ಮೇಲೆ ದೃಷ್ಟಿನೆಟ್ಟು ಆಂತರಿಕ ವೈರಿಗಳ ವಿಚಾರದಲ್ಲಿ ಮೈಮರೆತಿದ್ದ ಪುಟಿನ್ ಪಡೆಗೆ ಬಗಲ್ ಮೆ ದುಷ್ಮನ್ ಅನ್ನೋ ಹಾಗೆ ಹೊಸ ವೈರಿ ಹುಟ್ಟಿಕೊಂಡಿದ್ದಾನೆ. ಅಷ್ಟಕ್ಕೂ ಇದು ರಷ್ಯಾದ ಓಳಗೆ ನುಸುಳಿರೋ ಉಕ್ರೇನ್ ಸೈನಿಕರು ಹೆಣೆದ ಬಲೆಯಲ್ಲ, ಬದಲಾಗಿ ರಷ್ಯಾದಲ್ಲೇ ಅಂಬೆಗಾಲಿಟ್ಟು ಬೆಳೆದ ಅದೊಂದು ಖಾಸಗಿ ಸೇನೆ ಎಬ್ಬಿಸಿದ ಖತರ್ನಾಕ್ ಭಯದ ಅಲೆ.
ರಷ್ಯಾದಲ್ಲಿ ತೀವ್ರ ಸ್ವರೂಪ ಪಡೆದ ಆಂತರಿಕ ಯುದ್ಧ
ಉಕ್ರೇನ್ ಅನ್ನ ಉಡೀಸ್ ಮಾಡ್ತೀವಿ, ಆ ದೇಶವನ್ನ ತಮ್ಮ ವಶಕ್ಕೆ ತೆಗೆದುಕೊಳ್ತೀವಿ ಅಂತ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಪುಟಿನ್ ಪಡೆಗೆ ರಷ್ಯಾದ ಖಾಸಗಿ ಸೇನೆಯೊಂದು ಚಕ್ರವ್ಯೂಹ ರಚಿಸಿದೆ. ಗುಂಡಿನ ಸದ್ದು ಮೊಳಗಿಸಿ ಉಕ್ರೇನಿಗರ ಎದೆ ನಡುಗಿಸಿದ್ದ ಪುಟಿನ್ ಸೇನೆಯ ಎದೆಯಲ್ಲಿಯೇ ಈಗ ಢವ ಢವ ಹೆಚ್ಚಾಗಿದೆ. ಉಕ್ರೇನ್-ರಷ್ಯಾ ನಡುವಿನ ಯುದ್ಧ ಬೂದಿ ಮುಚ್ಚಿದ ಕೆಂಡವಾಗಿರುವಾಗಲೇ ರಷ್ಯಾದಲ್ಲಿ ಆಂತರಿಕ ಯುದ್ಧ ತೀವ್ರ ಸ್ವರೂಪ ಪಡೆದಿದೆ.
ಪುಟಿನ್ ಸೇನೆಗೆ ‘ವ್ಯಾಗ್ನರ್’ ಟಕ್ಕರ್!
ರಷ್ಯಾದ ಅನ್ನ ತಿಂದು, ರಷ್ಯಾದ ನೀರು ಕುಡಿದು ಬೆಳೆದ ಖಾಸಗಿ ಸೇನೆಯೊಂದು ಈಗ ದೇಶಕ್ಕೆ ದುಸ್ವಪ್ನವಾಗಿ ಕಾಡ್ತಿದೆ. ಎವಜೆನಿ ಪ್ರಿಗೋಯಿನ್ ಸಾರಥ್ಯದ ವ್ಯಾಗ್ನರ್ ಪಡೆ ರಷ್ಯಾದಲ್ಲಿ ದಾಳಿಯೊಂದಕ್ಕೆ ಮುನ್ನುಡಿ ಬರೆದಿದೆ. ರಷ್ಯಾದ ರೋಸ್ಟೋವ್ ನಗರವನ್ನ ವಶ ಪಡೆದ ವ್ಯಾಗ್ನರ್, ಮಾಸ್ಕೋ ನಗರವನ್ನ ತನ್ನ ತೆಕ್ಕೆಗೆ ಪಡೆಯಲು ಹೊಂಚು ಹಾಕಿ ಕುಳಿತಿದೆ.
ವ್ಯಾಗ್ನರ್ ಹೊಡೆತಕ್ಕೆ ಸೇನೆಯ 3 ಹೆಲಿಕಾಪ್ಟರ್ ಪೀಸ್ ಪೀಸ್!
ರಷ್ಯಾದ ರೋಸ್ಟೋವ್ ನಗರಕ್ಕೆ ದಿಗ್ಬಂದನ ವಿಧಿಸಿರೋ ವ್ಯಾಗ್ನರ್ ಪಡೆ ನಗರದ ಮೇಲ್ಮೈನಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್ಗಳನ್ನ ಧೂಳಿಪಟ ಮಾಡ್ತಿದೆ. ವ್ಯಾಗ್ನರ್ ಕ್ಷಿಪಣಿಯ ಅಟ್ಟಹಾಸಕ್ಕೆ ಈಗಾಗಲೇ ಮೂರು ಸೇನಾ ಹೆಲಿಕಾಪ್ಟರ್ಗಳು ಛಿದ್ರ ಛಿದ್ರವಾಗಿ 10ಕ್ಕೂ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟು ದಿನ ದೇಶದ ಸೇನೆ ಜೊತೆಯೇ ಕರ್ತವ್ಯ ನಿರ್ವಹಿಸಿದ್ದ ಈ ವ್ಯಾಗ್ನರ್ ಪಡೆ ಈಗ ಬಂಡಾಯವೆದ್ದು ತನ್ನ ಸೈನ್ಯದ ಮೇಲೆಯೇ ದಾಳಿ ನಡೆಸುತ್ತಿದೆ.
ಬಗಲ್ ಮೆ ದುಷ್ಮನ್!
ರಷ್ಯಾ ಮೇಲೆಯೇ ಮುನಿಸಿಕೊಂಡಿರುವ ವ್ಯಾಗ್ನರ್ ಪಡೆ ದಾಳಿಗೆ ಕಾರಣ ಸಹ ನೀಡಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡಲು ಸೂಕ್ತ ಕಾರಣವೇ ಇರಲಿಲ್ಲ ಅಂತ ವ್ಯಾಗ್ನರ್ ಮುಖ್ಯಸ್ಥ ಎವಜೆನಿ ಪ್ರಿಗೋಯಿನ್ ಸಿಡಿಮಿಡಿಗೊಂಡಿದ್ದಾರೆ. ಸರ್ಕಾರಿ ಸೇನೆಯ ಯೋಧರೇ ಉಕ್ರೇನ್ನಿಂದ ವಾಪಸ್ ಬರಲು ಇಚ್ಛಿಸಿದ್ದಾರೆ, ಅವರಿಗೆ ನಾವು ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನೂ ಉಕ್ರೇನ್ ಯುದ್ಧದ ವೇಳೆ ವ್ಯಾಗ್ನರ್ ಸೇನೆಯ ಮೇಲೆ ದಾಳಿ ಮಾಡಿದ್ದ ಸರ್ಕಾರಿ ಸೇನೆ ದೌರ್ಜನ್ಯ ನಡೆಸಿತ್ತು ಅಂತ ಆರೋಪ ಸಹ ಮಾಡಿದ್ದಾರೆ. ಅಲ್ಲದೇ ವ್ಯಾಗ್ನರ್ ಪಡೆಯ ಸೈನಿಕರನ್ನ ಸಹ ಸರ್ಕಾರಿ ಸೇನೆಯ ಸೈನಿಕರು ಹತ್ಯೆ ಮಾಡಿದ್ರು ಅಂತ ದೂರಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ವ್ಯಾಗ್ನರ್ ಪಡೆ ಸರ್ಕಾರಿ ಸೇನೆಯನನ್ನ ಟಾರ್ಗೆಟ್ ಮಾಡಿದೆ ಅಂತ ಹೇಳಿದ್ದಾರೆ.
ಇನ್ನೂ ಎವಜೆನಿ ಪ್ರಿಗೋಯಿನ್ ಅವರ ನಡೆ ರಾಷ್ಟ್ರ ವಿರೋಧಿಯಾದದ್ದು, ವ್ಯಾಗ್ನರ್ ಪಡೆ ದೇಶ ವಿರೋಧಿ ಪಡೆ ಅಂತ ಪುಟಿನ್ ಸಿಡಿದಿದ್ದಾರೆ. ಪ್ರಿಗೋಯಿನ್ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಪುಟಿನ್ ಆಕ್ರೋಶ ಹೊರಹಾಕಿದ್ದಾರೆ. ರಷ್ಯಾ ರಕ್ಷಣಾ ಇಲಾಖೆಯಿಂದಲೂ ಎಚ್ಚರಿಕೆ ಸಂದೇಶ ಬಿಡುಗಡೆಯಾಗಿದ್ದು, ವ್ಯಾಗ್ನರ್ ಪಡೆಯ ಸೈನಿಕರು ಶರಣಾಗುವಂತೆ ಸೂಚನೆ ನೀಡಿದ್ದಾರೆ.
ವ್ಯಾಗ್ನರ್ ಪಡೆಯ ಅಬ್ಬರಕ್ಕೆ ಬೆಚ್ಚಿಬಿದ್ದ ಮಾಸ್ಕೋ ನಗರ!
ವ್ಯಾಗ್ನರ್ ಪಡೆಯ ಅಬ್ಬರಕ್ಕೆ ರಷ್ಯಾದ ಮಾಸ್ಕೋ ನಗರ ಬೆಚ್ಚಿಬಿದ್ದಿದೆ. ಮಾಸ್ಕೋನತ್ತ ಸಾಗುವ ಹೆದ್ದಾರಿಯನ್ನ ರಷ್ಯಾ ಸೇನೆ ಬಂದ್ ಮಾಡಿದೆ. ಶೀಘ್ರವೇ ರಷ್ಯಾಕ್ಕೆ ಹೊಸ ಅಧ್ಯಕ್ಷ ಸಿಗಲಿದ್ದಾರೆ ಎಂದ ಎವಜೆನಿ ಹೇಳಿಕೆ ಬೆನ್ನಲ್ಲೇ ಎಚ್ಚೆತ್ತ ಸೇನೆ ಹೆದ್ದಾರಿ ಬಂದ್ ಮಾಡಿ ಹದ್ದಿನ ಕಣ್ಣಿಟ್ಟಿದೆ. ಇನ್ನೂ ನಾವು ರಷ್ಯಾ ಸರ್ಕಾರಿ ಸೇನೆಗೆ ಶರಣಾಗಲ್ಲ ಎಂದಿರುವ ಎವಜೆನಿ, ನಾವು ಈ ನೆಲದ ದೇಶಪ್ರೇಮಿಗಳು ಅಂತ ತಮ್ಮ ಬೆನ್ನನ್ನ ತಾವೇ ತಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ.
ಒಟ್ನಲ್ಲಿ ಯುದ್ಧದ ನಶೆಯಲ್ಲಿ ತೇಲಾಡ್ತಿದ್ದ ಪುಟಿನ್ ಪಡೆಗೆ ಟಕ್ಕರ್ ನೀಡ್ತಿರೋ ವ್ಯಾಗ್ನರ್ ಪಡೆ ಕನಸಲ್ಲೂ ಕಾಡಲು ಶುರುಮಾಡಿದೆ. ಉಕ್ರೇನ್ನಲ್ಲಿ ದಂಡು ದಾಳಿಯೊಂದಿಗೆ ಅಬ್ಬರಿಸ್ತಿದ್ದ ರಷ್ಯಾ ಸೈನಿಕರು ಈಗ ತಮ್ಮ ದೇಶವನ್ನ ರಕ್ಷಣೆ ಮಾಡಿಕೊಳ್ಳಲು ವಾಪಸ್ ಆಗುವ ಪರಿಸ್ಥಿತಿಯನ್ನ ವ್ಯಾಗ್ನರ್ ಪಡೆ ತಂದಿಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ