ಈತ ಟೀಮ್ ಇಂಡಿಯಾದ ಯಂಗ್ ಬೌಲರ್
ಯಂಗ್ ಬೌಲರ್ಗೆ ಮಾಜಿ ಕೋಚ್ ಕ್ಲಾಸ್..!
ಮಾಜಿ ಕೋಚ್ ಬ್ರಿಯಾನ್ ಲಾರಾ ವಾರ್ನಿಂಗ್
ಕಳೆದ ಎರಡ್ಮೂರು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗಳಲ್ಲಿ ತನ್ನ ಸ್ಪೀಡ್ ಬೌಲಿಂಗ್ ಮೂಲಕವೇ ಭಾರೀ ಗಮನ ಸೆಳೆದ ಟೀಂ ಇಂಡಿಯಾದ ಯುವ ವೇಗಿ ಉಮ್ರಾನ್ ಮಲಿಕ್. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಉಮ್ರಾನ್ ಟೀ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಕ್ಸಸ್ ಆದರು. ಆದರೆ, ವಿಕೆಟ್ ತೆಗೆಯದೆ ಭಾರೀ ಪ್ರಮಾಣದಲ್ಲಿ ಉಮ್ರಾನ್ ರನ್ ಬಿಟ್ಟು ಕೊಡುತ್ತಿರುವುದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿದೆ.
ಹೀಗೆ ಟೀಂ ಇಂಡಿಯಾಗೆ ತಲೆನೋವಾದ ಉಮ್ರಾನ್ಗೆ ತನ್ನ ಮಾಜಿ ಕೋಚ್ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಸಲಹೆಯೊಂದು ನೀಡಿದ್ದಾರೆ. ಉಮ್ರಾನ್ಗೆ ವೇಗವೊಂದೇ ಅಸ್ತ್ರವಾಗಬಾರದು. ಜಗತ್ತಿನ ಶ್ರೇಷ್ಠ ಬೌಲರ್ಗಳಾಗಿ ಬೆಳೆದ ಸ್ಟಾರ್ ಕ್ರಿಕೆಟರ್ಸ್ ಜತೆಗೆ ಮಾತಾಡಬೇಕು. ಅವರನ್ನು ನೋಡಿ ಕಲಿಯಬೇಕು, ಇಲ್ಲದೆ ಹೋದಲ್ಲಿ ಉಮ್ರಾನ್ಗೆ ಮುಂದೆ ಕಷ್ಟವಾಗಬಹುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚಿಂಗ್ ವಿಭಾಗದಲ್ಲಿ ಬ್ರಿಯಾನ್ ಲಾರ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಉಮ್ರಾನ್ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದಾರೆ.
22 ವಿಕೆಟ್ ಕಬಳಿಸಿ ಭಾರತ ತಂಡದಲ್ಲಿ ಸ್ಥಾನ
2021ರಲ್ಲಿ ಐಪಿಎಲ್‌ಗೆ ಡೆಬ್ಯೂಟ್ ಮಾಡಿದ ಉಮ್ರಾನ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. 2022ರ ಐಪಿಎಲ್ನಲ್ಲಿ ಕೇವಲ 14 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿ ಭಾರತ ತಂಡದಲ್ಲಿ ಸ್ಥಾನ ಪಡೆದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ