newsfirstkannada.com

ನಾಯಿ, ಬೆಕ್ಕುಗಳೊಂದಿಗೆ ಬಿಗ್​ ಡೀಲ್​ ಮಾಡಿದ ಅಮೆರಿಕನ್ನರು.. ಇದು ಟಾಮ್‌ & ಜೆರ್ರಿ ಆಟಕ್ಕಿಂತ ಸಖತ್‌ ಡಿಫರೆಂಟ್‌!

Share :

19-06-2023

    ಮನೆಯಲ್ಲಿ ಊಟ, ನಿದ್ದೆ ಮಾಡೋಕು ಬಿಡುವುದಿಲ್ಲವಂತೆ ಇಲಿಗಳು

    ಇಲಿಗಳ ಕಾಟಕ್ಕೆ ಬಳಲಿ ಹೋದ ಆಡಮ್ಸ್ ಮೋರ್ಗಾನ್ ಪ್ರದೇಶದ ಜನ

    ಆ ಒಂದು ಅಭಿಯಾನದಿಂದ ಇಲಿಗಳಿಗೆ ತಕ್ಕ ಪಾಠ ಕಲಿಸಿದ ಪೊಲೀಸರು

ವಾಷಿಂಗ್ಟನ್​ ಡಿ.ಸಿ: ಕೊರೊನಾ ಮಹಾಮಾರಿ ಹೋಯಿತು. ಇನ್ಮುಂದೆ ಅರಾಮವಾಗಿ ಇರಬಹುದು ಎಂದುಕೊಂಡಿದ್ದ ಅಮೆರಿಕದ ಜನರಿಗೆ ಇಲಿಗಳ ಕಾಟ ಶುರುವಾಗಿದೆ. ಇಲಿಗಳು ಕೊಡುವ ತೊಂದರೆಗೆ ನಿವಾಸಿಗಳು ಮನೆ ಬಿಟ್ಟು ಓಡಿ ಹೋಗುವಂತೆ ಆಗಿದೆ. ಹೀಗಾಗಿಯೇ ಅಮೆರಿಕನ್ ಜನರು ಹೊಸ ಅಭಿಯಾನ ಆರಂಭಿಸಿದ್ದು ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಸಾಕುತ್ತಿದ್ದಾರೆ.

ರಾಜಧಾನಿ ವಾಷಿಂಗ್ಟನ್‌ನ ಪಕ್ಕದಲ್ಲಿರೋ ಆಡಮ್ಸ್ ಮೋರ್ಗಾನ್ ಪ್ರದೇಶ ಸುಂದರವಾಗಿದ್ದು ಜೂನ್​ನಲ್ಲಿ ಬೆಚ್ಚಗಿನ ವಾತಾವರಣ ಇರುತ್ತೆ. ಹೀಗಾಗಿ ಜನ ಇಲ್ಲಿಗೆ ಗುಂಪು ಗುಂಪಾಗಿ ಬರುತ್ತಾರೆ. ಎಲ್ಲೆಂದರಲ್ಲಿ ಊಟ ಮಾಡಿ ಉಳಿದ ಆಹಾರ ಎಸೆಯುವುದರಿಂದ ಇದನ್ನು ತಿನ್ನಲು ಬರುವ ಇಲಿಗಳ ಸಂಖ್ಯೆ ಹೆಚ್ಚಳವಾಗಿವೆ. ಹೀಗೆ ಈ ಇಲಿಗಳು ಪಕ್ಕದ ಪ್ರದೇಶಗಳಿಗೂ ವ್ಯಾಪಿಸುತ್ತಿವೆ. ರೆಸ್ಟೋರೆಂಟ್‌, ಬಾರ್‌- ಕ್ಲಬ್‌ಗಳು, ಮನೆಗಳಲ್ಲಿ ಇಲಿಗಳ ಉಪಟಳ ಹೆಚ್ಚಳವಾಗಿತ್ತು.

ಹೀಗಾಗಿಯೇ ನಾಯಿ, ಬೆಕ್ಕುಗಳನ್ನು ಸಾಕಲು ಅಭಿಯಾನ ಶುರು ಮಾಡಿರುವ ನಿವಾಸಿಗಳು ಸಕ್ಸಸ್​ ಆಗಿದ್ದಾರೆ. ಅವುಗಳಿಗೆ ಸೂಕ್ತ ಪ್ರಮಾಣದಲ್ಲಿ ಟ್ರೈನಿಂಗ್​ ಕೊಟ್ಟು ಇಲಿಗಳ ಮೇಲಿನ ಸವಾರಿಗೆ ರೆಡಿ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಇಲಿಗಳನ್ನು ಹಿಡಿದು ನಾಯಿ, ಬೆಕ್ಕುಗಳು ಕೊಲ್ಲುತ್ತಿರುವುದು ಸ್ವಲ್ಪ ಮಟ್ಟಿಗೆ ಇಲಿಗಳ ಚೇಷ್ಠೆ ಕಡಿಮೆ ಆಗಿದೆ. ಇದರಿಂದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು 28 ವರ್ಷದ ಶ್ವಾನ ತರಬೇತುದಾರ ಮಾರ್ಷಲ್ ಫೀನ್‌ಬರ್ಗ್ ಐಡಿಯಾ ಉತ್ತಮವಾಗಿ ವರ್ಕೌಟ್​ ಆಗಿದೆ ಎನ್ನಲಾಗಿದೆ.

ಇಲಿಗಳನ್ನು ಹಿಡಿಯುವ ಅಭಿಯಾನ ಆರಂಭಿಸಿದವರು 60 ವರ್ಷದ ನಿವೃತ್ತ ಪೊಲೀಸ್​ ಅಧಿಕಾರಿಯೊಬ್ಬರು. ಅವರು ಅಭಿಯಾನ ಶುರು ಮಾಡಿದ್ದಾರೆಂದು ತಿಳಿಯುತ್ತಿದ್ದಂತೆ ಹಲವಾರು ಜನರು ಇದರ ಭಾಗವಾಗಿ ಇಲಿಗಳನ್ನು ಸಾಯಿಸಲು ನಾಯಿ, ಬೆಕ್ಕುಗಳನ್ನು ಸಾಕುತ್ತಿದ್ದಾರೆ. ಅಷ್ಟೇ ಅಲ್ಲ, ಈ ನಿವೃತ್ತ ಅಧಿಕಾರಿಯ ನಾಯಿಯೊಂದು 3 ಗಂಟೆಯಲ್ಲಿ 30ಕ್ಕೂ ಅಧಿಕ ಇಲಿಗಳನ್ನು ಕೊಂದು ಹಾಕಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಿ, ಬೆಕ್ಕುಗಳೊಂದಿಗೆ ಬಿಗ್​ ಡೀಲ್​ ಮಾಡಿದ ಅಮೆರಿಕನ್ನರು.. ಇದು ಟಾಮ್‌ & ಜೆರ್ರಿ ಆಟಕ್ಕಿಂತ ಸಖತ್‌ ಡಿಫರೆಂಟ್‌!

https://newsfirstlive.com/wp-content/uploads/2023/06/RAT_DOG_CAT_2.jpg

Load More