/newsfirstlive-kannada/media/post_attachments/wp-content/uploads/2023/09/Akshar-patel.jpg)
ನಾಳೆ ಭಾರತ ಮತ್ತು ಶ್ರೀಲಂಕಾ ಏಷ್ಯಾ ಕಪ್​ 2023 ಫೈನಲ್ ಪಂದ್ಯ​ ನಡೆಯಲಿಕ್ಕಿದೆ. ಆದರೆ ಆಲ್​ರೌಂಡರ್​ ಅಕ್ಷರ್​ ಪಟೇಲ್​ ಗಾಯಗೊಂಡಿದ್ದು, ಪಂದ್ಯ ಆಡಲಿದ್ದಾರಾ? ಎಂಬ ಅನುಮಾನ ಕಾಡಿದೆ. ಹೀಗಾಗಿ ಮುನ್ನೆಚ್ಚರಿಕೆಯ ಸಲುವಾಗಿ ವಾಷಿಂಗ್ಟನ್​​ ಸುಂದರ್​ ಅವರನ್ನು ಕರೆಯಲಾಗಿದೆ.
ಕೊಲಂಬೊದ ಆರ್​ ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್​ ಪಂದ್ಯ ನಡೆಯಲಿಕ್ಕಿದೆ. ಅಕ್ಷರ್​ ಆಡಲಿದ್ದಾರಾ? ಅಥವಾ ವಾಷಿಂಗ್ಟನ್​ ಸುಂದರ್​ಗೆ ಅವಕಾಶ ಸಿಗಲಿದೆಯಾ? ಎಂದು ಕಾದು ನೋಡಬೇಕಿದೆ.
ಇನ್ನು ವಾಷಿಂಗ್ಟನ್​ ಸುಂದರ್ ಜನವರಿ ತಿಂಗಳಿನಲ್ಲಿ​ ನ್ಯೂಝಿಲೆಂಡ್​​ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಆಡಿದ್ದರು. ಸದ್ಯ ಮುಂಬರುವ ಏಷ್ಯನ್​​ ಗೇಮ್ಸ್​ಗಾಗಿ ಭಾರತ ತಂಡದ ಭಾಗವಾಗಿ ಬೆಂಗಳೂರು ಶಿಬಿರದಲ್ಲಿ ಭಾಗವಹಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us