ವಿಶ್ವಕಪ್ ಗೆದ್ದ ಎಲ್ಲಾ ನಾಯಕರಿಗೂ ಆಹ್ವಾನ ವಿಚಾರ
ಕಾರ್ಯಕ್ರಮ ಆಯೋಕರ ವಿರುದ್ಧ ಕಪಿಲ್ ಗರಂ
ಫೈನಲ್ ಪಂದ್ಯದಲ್ಲಿ ಆಸಿಸ್ ವಿರುದ್ಧ ಭಾರತಕ್ಕೆ ಸೋಲು
ನಿನ್ನೆ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆಯಿತು. ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯಕ್ಕೆ ಈ ಹಿಂದೆ ವಿಶ್ವಕಪ್ ಗೆದ್ದ ಎಲ್ಲಾ ನಾಯಕರನ್ನೂ ಆಹ್ವಾನ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ ಕಪಿಲ್ ದೇವ್ ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಕಪಿಲ್ ದೇವ್ ಅವರು 1983 ವಿಶ್ವಕಪ್ ಗೆದ್ದ ನಾಯಕ.
ಪಂದ್ಯ ಆರಂಭಕ್ಕೂ ಮುನ್ನ ಕಪಿಲ್ ದೇವ್ ಈ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು.. ನನಗೆ ಯಾವುದೇ ಆಹ್ವಾನ ಬಂದಿಲ್ಲ. ನನಗೆ ಅವರು ಕರೆ ಮಾಡಿಲ್ಲ, ಹಾಗಾಗಿ ನಾನು ಅಲ್ಲಿಗೆ ಹೋಗುತ್ತಿಲ್ಲ. ವಿಷಯ ಇಷ್ಟೇ. ನಾನು 1883ರಲ್ಲಿ ನನ್ನ ತಂಡದೊಂದಿಗೆ ಇದ್ದ ಎಲ್ಲಾ ಆಟಗಾರರೊಂದಿಗೆ ಹೋಗಬೇಕು ಅನ್ಕೊಂಡಿದ್ದೆ. ಅದೊಂದು ದೊಡ್ಡ ಕಾರ್ಯಕ್ರಮ. ಜನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನಿರತರಾಗಿದ್ದಾರೆ, ಕೆಲವೊಮ್ಮೆ ಅವರು ಮರೆತುಬಿಡುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದ ಇತರೆ ಮಾಜಿ ಭಾರತ ನಾಯಕರಲ್ಲಿ ಸೌರವ್ ಗಂಗೂಲಿ ಇದ್ದರು. ಬಿಸಿಸಿಐ ಅಧ್ಯಕ್ಷರ ಸಾಲಿನಲ್ಲಿ ಆಹ್ವಾನಿತರಾಗಿದ್ದರು. ಹಿಂದಿನ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ಆಹ್ವಾನಿಸುವುದು ಬಿಸಿಸಿಐ ರೂಢಿಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್