newsfirstkannada.com

WATCH: ಪುಷ್ಪ 2ನಲ್ಲಿ ಭಾರೀ ಸಾಹಸ ದೃಶ್ಯಕ್ಕೆ ಕೈ ಹಾಕಿದ ನಿರ್ದೇಶಕ ಸುಕುಮಾರ್​; ಮೇಕಿಂಗ್ ವಿಡಿಯೋ ನೋಡಿ

Share :

21-06-2023

    ಹೀರೋ ಹಾಗೂ ವಿಲನ್ ನಡುವೆ ಸ್ವರ್ಣಮುಖಿ ನದಿಯಲ್ಲಿ ಚೇಸಿಂಗ್ ಸೀನ್

    ಪುಷ್ಪ ಇಂಟರ್​ವಲ್​ ಸೀನ್​ಗೆ ನಿರ್ದೇಶಕ ಸುಕುಮಾರ್​ ಕಡೆಯಿಂದ ಭರ್ಜರಿ ಪ್ಲಾನ್

    ಅನಿಮಲ್ ಚಿತ್ರದ ಶೂಟಿಂಗ್ ಮುಗಿಸಿ ಪುಷ್ಪ 2 ತಂಡ ಸೇರಿದ ರಶ್ಮಿಕಾ ಮಂದಣ್ಣ

‘ಪುಷ್ಪ’ ಸೆಕೆಂಡ್ ಚಾಪ್ಟರ್​ ದಿನೇ ದಿನೇ ದೊಡ್ಡದಾಗ್ತಾ ಹೋಗ್ತಿದೆ. ಸೀನ್ ಟು ಸೀನ್​ ತುಂಬಾ ರಿಚ್​ ಆಗಿ ಕೆಲಸ ಮಾಡ್ತಿದೆ ಚಿತ್ರತಂಡ. ಇದೀಗ ಚಿತ್ರದ ಇಂಟರ್​ವಲ್​​ ದೃಶ್ಯಕ್ಕಾಗಿ ಹೆವಿ ರಿಸ್ಕ್​​ ತೆಗೆದುಕೊಳ್ಳುತ್ತೀರೋ ಸುಕುಮಾರ್, ಭಾರಿ ಸಾಹಸಕ್ಕೆ ಕೈ ಹಾಕಿದ್ದಾರಂತೆ. ಪ್ಯಾನ್ ಇಂಡಿಯಾ ಪ್ರಪಂಚ ಬಹಳ ಕಾತುರದಿಂದ ಎದುರು ನೋಡ್ತಿರುವ ಚಿತ್ರಗಳ ಪೈಕಿ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರವೂ ಒಂದು. ಮೊದಲ ಭಾಗ ಸೂಪರ್​ ಹಿಟ್ ಆದ ಬಳಿಕ ಸೆಕೆಂಡ್​ ಚಾಪ್ಟರ್ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.

ಅದಕ್ಕಾಗಿ ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಇಬ್ಬರು ಭಾರೀ ಸಾಹಸಗಳನ್ನೇ ಮಾಡ್ತಾ ಇದ್ದಾರಂತೆ. ಪುಷ್ಪ ಚಿತ್ರದ ಬಹುತೇಕ ಚಿತ್ರೀಕರಣ ಕಾಡಿನಲ್ಲೇ ನಡೆಯುತ್ತಿದೆ. ಈಗಾಗಲೇ ಎರಡ್ಮೂರು ಹಂತದಲ್ಲಿ ಅಲ್ಲು ಅರ್ಜುನ್ ಭಾಗದ ಶೂಟಿಂಗ್ ನಡೆದಿದ್ದು, ತುಂಬಾ ರೋಚಕವಾಗಿ ಬಂದಿದೆ ಎನ್ನಲಾಗ್ತಿದೆ. ಇದೀಗ ಹೊಸ ಶೆಡ್ಯೂಲ್​​ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸುಕುಮಾರ್​ ಚಿತ್ರದ ಇಂಟರ್​ವಲ್​​ ಸೀನ್ ಶೂಟ್ ಮಾಡೋಕೆ ಸ್ಕೆಚ್ ಹಾಕಿದ್ದಾರಂತೆ. ಇದು ಪುಷ್ಪ 2 ಸಿನಿಮಾದ ಬಹುಮುಖ್ಯ ದೃಶ್ಯವಾಗಿದ್ದು, ಥಿಯೇಟರ್​ನಲ್ಲಿ ನೋಡೋ ಪ್ರೇಕ್ಷಕರಿಗೆ ವಾಹ್ ಅನ್ನೋ ಅನುಭವ ಕೊಡಬೇಕು ಅನ್ನೋ ಉದ್ದೇಶದಿಂದ ಕೆಲಸ ಮಾಡ್ತಿದ್ದಾರಂತೆ.

ಪುಷ್ಪ ಇಂಟರ್​ವಲ್​ ಸೀನ್​ಗಾಗಿ ಭಾರಿ ಪ್ಲಾನ್!
ಸ್ವರ್ಣಮುಖಿ ನದಿಯಲ್ಲಿ ನಡೆಯುತ್ತೆ ಮಸ್ತ್ ಆ್ಯಕ್ಷನ್!

ಪುಷ್ಪ ಪಾರ್ಟ್​ 2 ಸಿನಿಮಾದ ಚಿತ್ರೀಕರಣ ಭಾರಿ ಕುತೂಹಲದಿಂದ ಸಾಗ್ತಿದ್ದು, ಸದ್ಯ ಚಿತ್ರದ ಇಂಟರ್​ವಲ್ ದೃಶ್ಯಕ್ಕಾಗಿ ಭಾರಿ ಪ್ಲಾನ್ ಮಾಡಲಾಗ್ತಿದೆಯಂತೆ. ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿರುವ ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ ನದಿಯಲ್ಲಿ ಈ ದೃಶ್ಯದ ಶೂಟಿಂಗ್ ಮಾಡೋಕೆ ಸುಕುಮಾರ್ ನಿರ್ಧರಿಸಿದ್ದಾರಂತೆ. ಇದು ಚೇಸಿಂಗ್ ಸೀನ್ ಅಂತೆ. ರಕ್ತಚಂದನವನ್ನ ಅಕ್ರಮವಾಗಿ ಸಾಗಿಸುವ ಪುಷ್ಪರಾಜ್​ನನ್ನ ಭನ್ವಿರ್​ಸಿಂಗ್ ಶೇಖಾವತ್ ಚೇಸ್ ಮಾಡುವ ಸೀನ್. ಹಾಗಾಗಿ ಈ ದೃಶ್ಯದಲ್ಲಿ ಅಲ್ಲು ಅರ್ಜುನ್ ಜೊತೆ ಮಲಯಾಳಂ ನಟ ಫಾಹದ್ ಫಾಸಿಲ್ ಸಹ ಭಾಗಿಯಾಗಲಿದ್ದಾರಂತೆ. ಸದ್ಯ ಅಲ್ಲು ಅರ್ಜುನ್ ಪುಷ್ಪ ಶೂಟಿಂಗ್​ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ತ್ರಿಬಲ್ ಎ ಸಿನಿಮಾ ಉದ್ಘಾಟನೆ ಜೊತೆಗೆ ಅಹಾ ಸಂಸ್ಥೆ ನಿರ್ಮಾಣ ಮಾಡಲಿರುವ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದರು. ರಿಸೆಂಟ್​ ಆಗಿ ರಾಮ್ ಚರಣ್ ತೇಜ ದಂಪತಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದು, ಈ ವೇಳೆ ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಆ ಕಡೆ ಅಲ್ಲು ಅರ್ಜುನ್ ಬಿಟ್ಟು ಶೂಟಿಂಗ್ ಮುಂದುವರಿಸಿರುವ ಸುಕುಮಾರ್, ಇಂಟರ್​ವಲ್ ಬ್ಲಾಕ್​ಗಾಗಿ ತಲೆಕೆಡಿಸಿಕೊಂಡು ಕೆಲಸ ಮಾಡ್ತಿದ್ದಾರಂತೆ. ಪುಷ್ಪ ಚಿತ್ರದ ಮೇಲೆ ಎಕ್ಸ್​ಪೆಕ್ಟೇಶನ್ ಜಾಸ್ತಿ ಇದೆ. ಮೊದಲ ಚಾಪ್ಟರ 350 ಕೋಟಿ ಗಳಿಸಿತ್ತು. ಹಾಗಾಗಿ ಎರಡನೇ ಚಾಪ್ಟರ್ ಬಾಕ್ಸಾಫೀಸ್​ನಲ್ಲಿ ಧಮಾಕಾ ಸೃಷ್ಟಿಸಬಹುದು ಅನ್ನೋ ಲೆಕ್ಕಾಚಾರ ಹುಟ್ಕೊಂಡಿದೆ. ಈ ಲೆಕ್ಕಾಚಾರಗಳಿಗೆ ಅನುಗುಣವಾಗಿ ಸಿನಿಮಾ ತಯಾರಾಗ್ತಿದ್ದು, ಸಿನಿಮಾ ತುಂಬಾ ದೊಡ್ಡದಾಗಿ ರೆಡಿ ಆಗೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

WATCH: ಪುಷ್ಪ 2ನಲ್ಲಿ ಭಾರೀ ಸಾಹಸ ದೃಶ್ಯಕ್ಕೆ ಕೈ ಹಾಕಿದ ನಿರ್ದೇಶಕ ಸುಕುಮಾರ್​; ಮೇಕಿಂಗ್ ವಿಡಿಯೋ ನೋಡಿ

https://newsfirstlive.com/wp-content/uploads/2023/06/pushpa-4.jpg

Load More