5 ರೂ.ಗೆ ನೂಡಲ್ಸ್ ತಿಂದು ಜೀವನ ಸಾಗಿಸುತ್ತಿದ್ದ ಆಲ್ ರೌಂಡರ್
ಟೆನ್ನಿಸ್ ಬಾಲ್ನಿಂದ ಲೆದರ್ ಬಾಲ್ವರೆಗೆ.. ಲೈಫೇ ಚೇಂಜ್..!
ಸೊಸೆಗೆ 5 ಲಕ್ಷ ರೂಪಾಯಿ ಕೊಟ್ಟಿರುವುದರ ಹಿಂದೆ ಕಥೆನೇ ಇದೆ
ಹಸಿವು ಅನ್ನೋದು ಒಂದು ಇದ್ರೆ ಬಡತನ ಮೆಟ್ಟಿನಿಂತು, ಎಷ್ಟು ಎತ್ತರಕ್ಕೆ ಬೇಕಾದ್ರು ಬೆಳೆಯಬಹುದು. ಇದಕ್ಕೆ ಟೀಮ್ ಇಂಡಿಯಾದ ಈ ಸೂಪರ್ ಸ್ಟಾರ್ ಬೆಸ್ಟ್ ಎಕ್ಸಾಂಪಲ್. ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಪರದಾಡಿದ್ದ ಹಾರ್ದಿಕ್ ಪಾಂಡ್ಯ ಇಂದು ಕೋಟ್ಯಾಧಿಪತಿ. ಯಾವ ಮಟ್ಟಕ್ಕೆ ಅಂದ್ರೆ, ಒಂದು ಲಕ್ಷ ಕೇಳಿದ್ರೆ 5 ಲಕ್ಷ ನೀಡುವ ಸಿರಿವಂತಿಕೆ ಈಗ ಪಾಂಡ್ಯಗೆ ಬಂದಿದೆ.
ಹಾರ್ದಿಕ್ ಪಾಂಡ್ಯ ಈ ಹೆಸರು ಬಲ್ಲದವರು ಯಾರಿದ್ದಾರೆ ಹೇಳಿ?. ವಿಶ್ವದ ಬೆಸ್ಟ್ ಆಲ್ರೌಂಡರ್ಗಳಲ್ಲಿ ಹಾರ್ದಿಕ್ ಹೆಸಲು ಟಾಪ್ ಲಿಸ್ಟ್ನಲ್ಲಿದೆ. ಭಾರತ ತಂಡದ ಫೇವರಿಟ್ ಕ್ರಿಕೆಟರ್ ಕೂಡ. ಇಂದು ಹಾರ್ದಿಕ್ ಯಾರು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಪಾಂಡ್ಯ ಸ್ಟ್ರಗಲಿಂಗ್ ಡೇಸ್ ಬಗ್ಗೆ ನಿಮಗೆಷ್ಟು ಗೊತ್ತು?. ಇಂದು ಸದಾ ಹಸನ್ಮುಖಿಯಾಗಿ ಎಲ್ಲರನ್ನ ನಗಿಸ್ತಾ, ಕ್ರಿಕೆಟ್ ಆಡಿ ರಂಜಿಸೋ ಹಾರ್ದಿಕ್, ನಿಜಕ್ಕೂ ಬೆಂಕಿಯಲ್ಲಿ ಅರಳಿದ ಹೂ.
ನಾನು ಚಿಕ್ಕವನಿದ್ದಾಗ ತುಂಬಾ ನೂಡಲ್ಸ್ ತಿಂತಿದ್ದೆ. ಒಂದು ವೇಳೆ ನನಗೆ ಉತ್ತಮ ಅಹಾರ ತಿನ್ನುವ ಆಯ್ಕೆ ಇದ್ದಿದ್ರೆ ನಾನು ಖಂಡಿತವಾಗಿ ತಿನ್ನುತ್ತಿದ್ದೆ. ಆದರೆ ತಿನ್ನಲು ಹಣ ಇರಬೇಕು ಅಲ್ವಾ?. 5 ರೂಪಾಯಿ ಕೊಟ್ರೆ ಫುಲ್ ಪ್ಲೇಟ್ ನೂಡಲ್ಸ್ ಸಿಗ್ತಿತ್ತು. ತಿಂದ್ರೆ ಹೊಟ್ಟೆ ತುಂಬುತ್ತಿತ್ತು.
ಹಾರ್ದಿಕ್ ಪಾಂಡ್ಯ, ಆಲ್ ರೌಂಡರ್
ಇದೊಂದೇ ಮಾತು ಸಾಕು ಹಾರ್ದಿಕ್ ಎಂತಹ ಬಡತನದಲ್ಲಿ ಬೆಳೆದು ಬಂದಿದ್ದಾರೆ ಅನ್ನೋದಕ್ಕೆ. ಕಿತ್ತು ತಿನ್ನುವ ಬಡತನ. ಅಪ್ಪ ದುಡಿದ್ರೇನೆ ಒಂದೊತ್ತಿನ ತುತ್ತು. ಇಲ್ಲವಾದ್ರೆ ಅದೂ ಇಲ್ಲ. ಅಂದು ಪಾಂಡ್ಯ ಎದುರಿಸಿದ ಕಷ್ಟ, ನೋವು, ಹತಾಶೆ, ಅವಮಾನ ಒಂದಾ..? ಎರಡಾ..?
10 ವರ್ಷದಲ್ಲಿ ಹಾರ್ದಿಕ್ ಲೈಫ್ ಪುಲ್ ಚೇಂಜ್..!
ಒಂದು ಟೈಮ್ನಲ್ಲಿ ಹಾರ್ದಿಕ್ ತುತ್ತು ಅನ್ನಕ್ಕೂ ಪರದಾಡ್ತಿದ್ರು. ಆದ್ರೆ ಇಂದು ಅದೇ ಪಾಂಡ್ಯ ಕೋಟ್ಯಧಿಪತಿ. ಲೈಫ್ಸ್ಟೈಲ್ ಫುಲ್ ಚೇಂಜ್ ಆಗಿದೆ. ಎಂತಹ ರಿಚ್ ಲೈಫ್ ಅಂತೀರಾ?.
ಹಾರ್ದಿಕ್ ಸಿರಿವಂತಿಕೆನಾ.. ಇಂತಹ ಶ್ರೀಮಂತಿಕೆ ಎಷ್ಟು ಜನರಿಗೆ ಬಂರುತ್ತೆ ಹೇಳಿ?. ಅಷ್ಟಕ್ಕೂ ಪಾಂಡ್ಯ 1 ಲಕ್ಷ ಕೇಳಿದ್ದಕ್ಕೆ 5 ಲಕ್ಷ ಕೊಡ್ತೀನಿ ಅಂತ ಯಾಕೆ ಹೇಳಿದ್ರು ಅಂತೀರಾ?. ಅದಕ್ಕೊಂದು ರೀಸನ್ ಇದೆ.
ಮದುವೆಯಲ್ಲಿ ಶೂ ಬಚ್ಚಿಟ್ಟಿದ್ದಕ್ಕೆ ಬಂಪರ್ ಜಾಕ್ಪಾಟ್.!
ಹಾರ್ದಿಕ್ ಪಾಂಡ್ಯ-ನತಾಶ ದಂಪತಿ ಇದೇ ವರ್ಷಾರಂಭದಲ್ಲಿ ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದ್ರು. ಅವರ ವಿವಾಹ ಸಂಪ್ರದಾಯದಲ್ಲಿ ಜೂತ ಚುಪೈ ಅಂದ್ರೆ, ಶೂ ಮುಚ್ಚಿಡೋ ಒಂದು ಆಚರಣೆಯಿದೆ. ಈ ಆಚರಣೆಯಂತೆ ಮದುಮಗ ಹಾರ್ದಿಕ್ ಅವರ ಶೂ ಅನ್ನ ಅವರ ಸೊಸೆ ಬಚ್ಚಿಟ್ಟಿದ್ರು. ಅದನ್ನ ಮರಳಿ ನೀಡಲು 1 ಲಕ್ಷದ ಒಂದು ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ರು. ಆದ್ರೆ ಪಾಂಡ್ಯ ಒಂದು ಲಕ್ಷ ಅಲ್ಲ, ಐದು ಲಕ್ಷದ ಒಂದು ರೂಪಾಯಿಯನ್ನ ನಿನ್ನ ಅಕೌಂಟ್ಗೆ ಟ್ರಾನ್ಸ್ಪರ್ ಮಾಡ್ತೀವಿ ಅಂದಿದ್ದಾರೆ.
ನೋಡಿ ಹೇಗಿದ್ದ ಹಾರ್ದಿಕ್ ಪಾಂಡ್ಯ ಹೇಗಾಗಿಬಿಟ್ರು?. ಅಂದು ತುತ್ತು ಕೂಳಿಗೂ ಪರದಾಡಿದ್ದ ಹಾರ್ದಿಕ್ಗೆ ಇಂದು 5 ಲಕ್ಷ ಅನ್ನೋದು ಮ್ಯಾಟರೇ ಅಲ್ಲ. ಅದಕ್ಕೆ ಸದ್ಯ ಎಲ್ರೂ ಹೇಳ್ತಿರೋದು ಒಂದೇ, ಸಕ್ಸಸ್ ಅನ್ನೋದು ಬಂದ್ರೆ ಹಿಂಗೇ ಬರಬೇಕು ಅಂತಾ. ಅದ್ರಲ್ಲಿ ತಪ್ಪೇನಿಲ್ಲ ಬಿಡಿ. ಯಾಕಂದ್ರೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಲೈಫ್ ಅಷ್ಟೊಂದು ಕಲರ್ಫುಲ್ ಆಗಿದೆ.
ಹಾರ್ದಿಕ್ಗೆ ಈ ಸಕ್ಸಸ್ ಸುಮ್ಮನೇ ಬಂದಿದ್ದಲ್ಲ. ಒಬ್ಬ ಸಾಮಾನ್ಯ ಪ್ಲೇಯರ್ ಆಗಬೇಕು ಎಂದು ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಪಾಂಡ್ಯ, ಜರ್ನಿ ಆರಂಭಿಸಿದ್ದು ಟೆನ್ನಿಸ್ ಬಾಲ್ನಿಂದ. ಆ ಬಳಿಕ ಲೆದರ್ ಬಾಲ್ ಹಿಡಿದ ಹಾರ್ದಿಕ್ ಜೀವನಕ್ಕೆ ತಿರುವು ನೀಡಿದ್ದು, ಐಪಿಎಲ್. ಅಂದು ಮುಂಬೈ ಇಂಡಿಯನ್ಸ್ ಸೇರಿದ ಪಾಂಡ್ಯ ಹಿಂತಿರುಗಿ ನೋಡಿದ್ದೇ ಇಲ್ಲ. ಟೀಮ್ ಇಂಡಿಯಾವನ್ನೇ ಮುನ್ನಡೆಸುವಷ್ಟರ ಮಟ್ಟಿಗೆ ಪಾಂಡ್ಯ ಬೆಳೆದಿದ್ದಾರೆ. ಡೆಡಿಕೇಶನ್, ಹಾರ್ಡ್ವರ್ಕ್ ಜೊತೆಗೆ ಸ್ಪಷ್ಟವಾದ ಗುರಿ ಇದ್ರೆ, ಏನನ್ನ ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಪಾಂಡ್ಯನೇ ಬೆಸ್ಟ್ ಎಕ್ಸಾಂಪಲ್. ಹಾರ್ದಿಕ್ ಬೆಳದು ಬಂದ ಹಾದಿ ಎಂತವರಿಗೂ ಸ್ಪೂರ್ತಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Ameeri ho to aisi ho. Hardik Pandya jitna ameer hona hai life me pic.twitter.com/qyHvfkxFWq
— CS Rishabh (Professor) (@ProfesorSahab) June 18, 2023