ದೇಶಿ ಕ್ರಿಕೆಟ್ನಲ್ಲಿ ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಮಿಂಚು
ಈ ಹಿಂದೆ ತಂಡದಲ್ಲಿ ಬ್ಯಾಟಿಂಗ್ ಸತತ ವಿಫಲ, ಟೀಮ್ನಿಂದ ಕೊಕ್
ಕಮ್ಬ್ಯಾಕ್ ಮಾಡೋ ಲೆಕ್ಕಾಚಾರದಲ್ಲಿ ಮಯಾಂಕ್ ಅಗರ್ವಾಲ್..!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಬದಲಾವಣೆಯದ್ದೇ ದೊಡ್ಡ ಸುದ್ದಿಯಾಗಿದೆ. ತಂಡದಿಂದ ಹೊರ ಬಿದ್ದ ಆಟಗಾರರೆಲ್ಲ ಕಮ್ಬ್ಯಾಕ್ ಕನವರಿಕೆಯಲ್ಲಿದ್ದಾರೆ. ನಮ್ಮ ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಕಮ್ಬ್ಯಾಕ್ ಮಾಡೋ ಲೆಕ್ಕಾಚಾರದಲ್ಲಿದ್ದು ಕಠಿಣ ಅಭ್ಯಾಸದ ಮೊರೆ ಹೋಗಿದ್ದಾರೆ.
ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸ್ತಿದ್ದಂತೆ, ಚಾನ್ಸ್ ಗಿಟ್ಟಿಸಿಕೊಳ್ಳೋಕೆ ಪೈಪೋಟಿ ಆರಂಭವಾಗಿದೆ. ದಿಗ್ಗಜರು, ಎಕ್ಸ್ಪರ್ಟ್ಗಳೆಲ್ಲ ಒಬ್ಬೊಬ್ಬ ಆಟಗಾರನ ಪರ ಬ್ಯಾಟಿಂಗ್ ನಡೆಸ್ತಿದ್ದಾರೆ. ಯಾವೆಲ್ಲ ಆಟಗಾರರನ್ನ ತಂಡದಿಂದ ಕೈ ಬಿಡಬೇಕು ಅನ್ನೋದ್ರ ಜೊತೆಗೆ ಇವ್ರಿಗೆ ಚಾನ್ಸ್ ಕೊಡಿ ಅಂತಾ ಲಾಬಿ ನಡೆಸ್ತಿದ್ದಾರೆ.
ಕಮ್ಬ್ಯಾಕ್ಗೆ ಪಣತೊಟ್ಟ ಕನ್ನಡಿಗ.!
ತಂಡಕ್ಕೆ ಮಯಾಂಕ್ ಅಗರ್ವಾಲ್ ಡೆಬ್ಯೂ ಮಾಡಿದಾಗ ಟೆಸ್ಟ್ ತಂಡದ ಓಪನರ್ ಸ್ಥಾನಕ್ಕೆ ಫಿಕ್ಸ್ ಎಂಬ ಟಾಕ್ ಶುರುವಾಗಿತ್ತು. ಆರಂಭಿಕ ದಿನಗಳಲ್ಲಿ ಮಯಾಂಕ್ ನೀಡಿದ ಅಬ್ಬರದ ಪ್ರದರ್ಶನ ಹಾಗಿತ್ತು. ಆದ್ರೆ, ಆ ಬಳಿಕ ಆಗಿದ್ದೇ ಬೇರೆ. ಅದನ್ನ ಅನ್ಲಕ್ ಅನ್ನಬೇಕೋ, ಮಯಾಂಕ್ ಸಾಮರ್ಥ್ಯವೇ ಇಷ್ಟು ಅನ್ನಬೇಕೋ ಗೊತ್ತಿಲ್ಲ. ಒಂದೆಡೆ ಇಂಜುರಿಗಳು ಬಾದಿಸಿದ್ರೆ, ಇನ್ನೊಂದೆಡೆ ಫಾರ್ಮ್ ಸಮಸ್ಯೆ ಮಯಾಂಕ್ಗೆ ಕಾಡ್ತು. ಪರಿಣಾಮ ತಂಡದಿಂದ ಹೊರಬಿದ್ದ ಮಯಾಂಕ್ ಇದೀಗ ಕಮ್ಬ್ಯಾಕ್ಗೆ ಸರ್ಕಸ್ ಮಾಡ್ತಿದ್ದಾರೆ.
ಸುರಿವ ಮಳೆಯಲಿ ಮಯಾಂಕ್ ಕಠಿಣ ಅಭ್ಯಾಸ.!
ಕಮ್ಬ್ಯಾಕ್ಗೆ ಪಣ ತೊಟ್ಟಿರುವ ಮಯಾಂಕ್ ಅಗರ್ವಾಲ್ ಕಠಿಣ ಅಭ್ಯಾಸದ ಮೊರೆ ಹೋಗಿದ್ದಾರೆ. ಟೀಮ್ಗೆ ವಾಪಾಸ್ಸಾಗ ಬೇಕು ಮತ್ತೆ ವೈಟ್ ಜೆರ್ಸಿಯನ್ನ ತೊಡಬೇಕು ಅನ್ನೋ ಹಂಬಲ ಮಯಾಂಕ್ರಲ್ಲಿ ಎಷ್ಟರ ಮಟ್ಟಿಗೆ ಬಂದಿದೆ ಅಂದ್ರೆ, ಸುರಿವ ಮಳೆಯನ್ನೂ ಲೆಕ್ಕಿಸದೆ ಅಭ್ಯಾಸದ ಅಖಾಡಕ್ಕೆ ಧುಮುಕಿದ್ದಾರೆ.
9 ಇನ್ನಿಂಗ್ಸ್ನಲ್ಲಿ ಫ್ಲಾಪ್, ಮಯಾಂಕ್ಗೆ ಕೊಕ್..!
ಟ್ರ್ಯಾಕ್ ರೆಕಾರ್ಡ್ ತೆಗೆದು ನೋಡಿದ್ರೆ ನಿಮಗೂ ಆಶ್ಚರ್ಯ ಆಗಬಹುದು. 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ನಲ್ಲಿ ಆರ್ಭಟಿಸಿದ್ದ ಮಯಾಂಕ್ ಆ ಬಳಿಕ ಆಡಿದ ಕೊನೆಯ 5 ಟೆಸ್ಟ್ಗಳಲ್ಲಿ ನಿರೀಕ್ಷಿತ ಪರ್ಫಾಮೆನ್ಸ್ ನೀಡಲಿಲ್ಲ. ಕೊನೆಯದಾಗಿ ಆಡಿದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮಯಾಂಕ್ ಹೀನಾಯ ಪ್ರದರ್ಶನ ನೀಡಿದ್ರು. ಅದಕ್ಕೂ ಹಿಂದಿನ ಸೌತ್ ಆಫ್ರಿಕಾ ಸಿರೀಸ್ನಲ್ಲೂ ರನ್ ಗಳಿಸಲು ಪರದಾಡಿದ್ರು. ಅದಕ್ಕೆ ತಂಡದಿಂದ ಕೊಕ್ ಕೊಡಲಾಗಿತ್ತು. ಆದ್ರೆ, ಸಾಲು ಸಾಲು ಫ್ಲಾಪ್ ಶೋ ನೀಡ್ತಿದ್ರು ಅನುಭವಿಗಳನ್ನ ಮಾತ್ರ ಟೀಮ್ ಮ್ಯಾನೇಜ್ಮೆಂಟ್ ಬ್ಯಾಕ್ ಮಾಡ್ತಿದೆ.
ಕಳೆದ ಸೀಸನ್ ರಣಜಿ ಟೂರ್ನಿಯಲ್ಲಿ ಕಮಾಲ್.!
ಟೀಮ್ನಿಂದ ಡ್ರಾಪ್ ಆದ ಮಾತ್ರಕ್ಕೆ ಮಯಾಂಕ್ ಅಗರ್ವಾಲ್ ಸುಮ್ಮನೆ ಕೂರಲಿಲ್ಲ. ಡೊಮೆಸ್ಟಿಕ್ ಅಖಾಡಕ್ಕೆ ನೇರವಾಗಿ ಧುಮಿಕಿದ್ರು. ಕಳೆದ ಸೀಸನ್ನಲ್ಲಿ ಕರ್ನಾಟಕ ತಂಡವನ್ನ ಮುನ್ನಡೆಸಿದ್ದ ಮಯಾಂಕ್, ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಆಡಿದ 13 ಇನ್ನಿಂಗ್ಸ್ಗಳಲ್ಲೇ ಬರೋಬ್ಬರಿ 990 ರನ್ ಸಿಡಿಸಿದ್ರು. ಬರೋಬ್ಬರಿ 82.50ರ ಸರಾಸರಿಯಲ್ಲಿ 2 ದ್ವಿಶತಕ ಸೇರಿ 3 ಶತಕ, 6 ಅರ್ಧಶತಕ ಸಿಡಿಸಿದ್ದಾರೆ.
ಇಂಡೀಸ್ ಪ್ರವಾಸದಲ್ಲಿ ಮಯಾಂಕ್ಗೆ ಸಿಗುತ್ತಾ ಚಾನ್ಸ್?.
ತಂಡದಿಂದ ಡ್ರಾಪ್ ಆದ ಬಳಿಕ ರಣಜಿ ಅಖಾಡಕ್ಕೆ ದುಮುಕಿ ರನ್ ಕೊಳ್ಳೆ ಹೊಡೆದ್ರೂ, ಬಾರ್ಡರ್ -ಗವಾಸ್ಕರ್ ಸರಣಿಯ ವೇಳೆ ಮಯಾಂಕ್ರನ್ನ ಕಡೆಗಣಿಸಲಾಯಿತು. ಬದಲಾವಣೆಯ ಗಾಳಿ ಬೀಸಿರುವ ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಯಾಂಕ್ಗೆ ಅವಕಾಶ ನೀಡೋಕೆ ಉತ್ತಮ ವೇದಿಕೆಯಾಗಿದೆ. ಕೆ.ಎಲ್ ರಾಹುಲ್ ತಂಡದಲ್ಲಿ ಇಲ್ಲದೇ ಇರೋದ್ರಿಂದ ಬ್ಯಾಕ್ ಅಪ್ ಓಪನರ್ ಆಗಿ ಮಣೆ ಹಾಕಬಹದು. ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್ ನಡೆಸಲು ಮಯಾಂಕ್ ಸಿದ್ಧರಿದ್ದಾರೆ. ಆದ್ರೆ, ಆಯ್ಕೆ ಸಮಿತಿ ಅವಕಾಶ ನೀಡುತ್ತಾ ಅನ್ನೋದಷ್ಟೇ ಸದ್ಯದ ಪ್ರಶ್ನೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Rain doesn't play a spoil sport if you use it to train yourself pic.twitter.com/O0XW1AGLwW
— Mayank Agarwal (@mayankcricket) June 20, 2023