ಪ್ರತಿದಿನ ನಗರದ 1ಕೋಟಿ 29 ಲಕ್ಷ ಮಂದಿಗೆ ಬೇಕು 1450 MLD ನೀರು
1450 ದಶ ಲಕ್ಷ ಲೀಟರ್ ಶುದ್ದ ನೀರು ತಿಪ್ಪಗೊಂಡನಹಳ್ಳಿಯಿಂದ ಲಭ್ಯ
ವಾಡಿಕೆ ಮಳೆಯಾಗಿಲ್ಲ, ತಿಪ್ಪಗೊಂಡನಹಳ್ಳಿಗೆ ಹರಿಯುತ್ತಿದ್ದ ನೀರು ಇಳಿಕೆ
ಬೆಂಗಳೂರು: ಬಿಸಿಲಿನ ತಾಪಮಾನಕ್ಕೆ ತತ್ತರಿಸಿ ಹೋಗಿದ್ದ ಸಿಲಿಕಾನ್ ಸಿಟಿ ಮಂದಿಗೆ ಕಾವೇರಿ ಬಿಗ್ ಶಾಕ್ ನೀಡಿದ್ದಾಳೆ. ಸದಾ ಹಾಲ್ನೊರೆಯಂತೆ ಜಿನುಗಿ ಹರಿಯುತ್ತಿದ್ದ ಕಾವೇರಿ ಒಡಲು ಬರಿದಾಗತೊಡಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ಆಗಿರೋ ಈ ಸಮಸ್ಯೆಯ ಎಫೆಕ್ಟ್ ಸಿಲಿಕಾನ್ ಸಿಟಿ ಜನರಿಗೂ ಸಂಕಷ್ಟ ತರಲಿದೆ.
ತಮಿಳುನಾಡಿಗೆ ನೀರು ಹರಿಸಿ ಸಾರ್ಥಕತೆ ಮೆರೆದಿದ್ದ ಸರ್ಕಾರ ರಾಜಧಾನಿ ಬೆಂಗಳೂರಿನತ್ತ ಗಮನ ಹರಿಸಬೇಕಿದೆ. ರಾಜ್ಯದಲ್ಲಿ ಈ ಭಾರೀ ವಾಡಿಕೆಯಂತೆ ಮುಂಗಾರು ಮಳೆಯ ಆಗಮನವಾಗಿಲ್ಲ. ಇದ್ರಿಂದ ರೈತರು ಮಾತ್ರ ಅಲ್ಲದೇ ಸಿಲಿಕಾನ್ ಸಿಟಿ ಮಂದಿ ಕೂಡ ತತ್ತರಿಸಿ ಹೋಗಿದ್ದಾರೆ. ಕನ್ನಡನಾಡಿನ ಜೀವನದಿಯಾಗಿ ಧುಮ್ಮುಕ್ಕಿ ಹರಿಯಬೇಕಿದ್ದ ಕಾವೇರಿಯ ಒಡಲು ಬರಿದಾಗುತ್ತಿದೆ. ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಸಿಲಿಕಾನ್ ಜನರಿಗೆ ತಂಪೆರೆಯಬೇಕಿದ್ದ ಕಾವೇರಿ ತನ್ನ ಅಸಲಿ ಸೌಂದರ್ಯ ಕಳೆದುಕೊಂಡಿದ್ದಾಳೆ.
ಬೆಂಗಳೂರಿನಲ್ಲಿ ಉಂಟಾಗುತ್ತಾ ಕಾವೇರಿ ನೀರಿಗೆ ಹಾಹಾಕಾರ?
ಹೌದು ಹೀಗೊಂದು ಪ್ರಶ್ನೆ ರಾಜಧಾನಿ ಜನರನ್ನ ಬಡಿದೆಬ್ಬಿಸಿದೆ. ಈಗಾಗಲೇ ನೆತ್ತಿ ಸುಡುತ್ತಿರುವ ಸೂರ್ಯನ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಕಾವೇರಿ ನೀರಿಗಾಗಿ ಜನ ಪರದಾಡುವಂತಹ ಸ್ಥಿತಿ ಎದುರಾಗಲಿದೆ ಅನ್ನೋ ಮಾಹಿತಿ ಬೆಂಗಳೂರಿಗರ ನೆಮ್ಮದಿಗೆಡಿಸಿದೆ.
ಬೆಂಗಳೂರಿಗೆ ನೀರಿನ ಅಗತ್ಯವೆಷ್ಟು?
ಬೆಂಗಳೂರಿನಲ್ಲಿರೋ ಒಂದು ಕೋಟಿ 29 ಲಕ್ಷ ಜನರಿಗೆ 1450 ದಶಲಕ್ಷ ನೀರು ಬೇಕು. ಹೀಗಾಗಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ 1450 ದಶಲಕ್ಷ ಶುದ್ಧೀಕರಿಸಿದ ಕುಡಿಯುವ ನೀರನ್ನ ಪಡೆಯಲಾಗುತ್ತೆ. ಆದ್ರೆ ಈ ಭಾರೀ ವಾಡಿಕೆ ಮಳೆಯಾಗದ ಕಾರಣ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರಿನ ಹರಿವು ಇಳಿಮುಖವಾಗಿದೆ. ಈ ಅಣೆಕಟ್ಟಿನಲ್ಲಿ 700 ಕ್ಯೂಸೆಕ್ ನೀರಿದ್ದರೆ ಬೆಂಗಳೂರು ಜಲಮಂಡಳಿಗೆ ನೀರನ್ನ ಬಿಡಲಾಗುತ್ತೆ. ಆದ್ರೆ ಈ ಭಾರಿ ಮಳೆಯಿಲ್ಲದ ಕಾರಣ 700 ಕ್ಯೂಸೆಕ್ಗಿಂತಲೂ ನೀರಿನ ಹರಿವು ಕಡಿಮೆ ಇದೆ. ಬೆಂಗಳೂರು ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡಬೇಕಾಗುತ್ತೆ. ಹೀಗಾಗಿ ಪ್ರತಿ ತಿಂಗಳು 1 ಟಿಎಂಸಿ ನೀರಿಗೆ ಬದಲಾಗಿ 2.42 ಟಿಎಂಸಿ ನೀರು ಬೇಕಾಗುತ್ತೆ.
ಇನ್ನೂ ಈ ವಿಚಾರ ಬೆಂಗಳೂರು ಜಲಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮುಂಜಾಗೃತ ಕ್ರಮವಾಗಿ ಬೆಂಗಳೂರು ಜಲಮಂಡಳಿ ಕಾವೇರಿ ನಿಗಮಕ್ಕೆ ಪತ್ರ ಬರೆದಿದೆ. ಜಲಮಂಡಳಿಗೆ ಅಗತ್ಯ ಇರುವಷ್ಟು ನೀರನ್ನ ಕಬಿನಿ ಮತ್ತು ಕೆಆರ್ಎಸ್ ಡ್ಯಾಂ ನಿಂದ ಶೇಖರಿಸಿ ಕಾಯ್ದಿರಿಸುವಂತೆ ಮನವಿ ಮಾಡಿದೆ. ಒಟ್ನಲ್ಲಿ ಮುಂಬರುವ ದಿನಗಳಲ್ಲಿ ಬೆಂಗಳೂರು ಜನತೆಗೆ ನೀರಿನ ಹಾಹಾಕಾರ ಉಂಟಾಗದಿರಲಿ ಅನ್ನೋದು ಎಲ್ಲರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ