newsfirstkannada.com

ತುಂಬಿ ಹರಿದ ತುಂಗೆ.. ಕೃಷಿ ಜಮೀನು ಸಾಗರದಂತೆ ಗೋಚರ.. ರಾಜ್ಯದ ಅನ್ನದಾತ ಎಲ್ಲೆಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾನೆ..

Share :

Published August 2, 2023 at 10:20am

Update August 2, 2023 at 10:23am

    ಆಂಧ್ರಕ್ಕೆ ನೀರು ಬಿಡ್ತಿದ್ದಾರೆ, ಆದರೆ ಕೊಪ್ಪಳದ ರೈತರಿಗೆ ನೀರೇ ಇಲ್ಲ

    ಬಸವಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಭಯಂಕರ ಏರಿಕೆ

    ಪಂಪ್ ಸೆಟ್​ಗಳ ಕಾಪಾಡಿಕೊಳ್ಳಲು ರೈತರ ಹರಸಾಹಸ‌ ಹೇಗಿದೆ

ರಾಜ್ಯದಲ್ಲಿ ಮುಂಗಾರು ಮಳೆ ಕೆಲವು ಜಿಲ್ಲೆಗಳಲ್ಲಿ ಉತ್ತಮವಾಗಿ ಸುರಿದ್ದಿದ್ದು, ಹಳ್ಳ-ಕೊಳ್ಳ, ಕರೆ ಸೇರಿದಂತೆ ಎಲ್ಲಾ ನದಿ ಮೂಲಗಳು ತುಂಬಿ ಹರಿಯುತ್ತಿವೆ. ಪರಿಣಾಮ ರಾಜ್ಯದ ಬಹುತೇಕ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೂ ಹಲವು ಜಿಲ್ಲೆಗಳ ರೈತರು ಮಳೆ ನೀರಿಲ್ಲದೇ ಕಂಗಾಲ್ ಆಗಿದ್ದಾರೆ.

ನೀರಿದ್ದರೂ ಬಿಡದ ಅಧಿಕಾರಿಗಳು..!

ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ ಜೀವನಾಡಿ ತುಂಗಭಧ್ರಾ ಜಲಾಶಯಕ್ಕೆ ಜೀವ ಕಳೆ ಬಂದಿದೆ. ಹೀಗಾಗಿ ಮುನಿರಾಬಾದ್‌ನ ತುಂಗಾಭದ್ರ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗಿದ್ದು, ಪ್ರವಾಸಿಗರು ಡ್ಯಾಂಗೆ ಲಗ್ಗೆ ಇಡ್ತಿದ್ದಾರೆ. ಆಂಧ್ರಕ್ಕೆ ನೀರು ಹರಿಸಲಾಗುತ್ತಿದ್ರೂ ಕೊಪ್ಪಳದ ಎಡದಂಡೆ ಕಾಲುವೆಗಳಿಗೆ ನೀರು ಹರಿಸದೇ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ. ಎಡದಂಡೆಯ ಕಾಲುವೆಗಳ ದುರಸ್ತಿ ಹಾಗೂ ಶಿವಪುರ ಬಳಿಯ ಕಾಲುವೆ ಬಳಿ ಇರುವ ಎಸ್ಕೇಪ್ ಗೇಟ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಹೀಗಾಗಿ ಕಾಲುವೆಗಳಿಗೆ ನೀರು ಹರಿಸಲು ವಿಳಂಬ ಮಾಡಲಾಗುತ್ತಿದೆ. ಕೊಪ್ಪಳ, ರಾಯಚೂರು ಭಾಗದ ರೈತರು ಬೆಳೆಗೆ ನೀರಿಲ್ಲದೆ ಗೋಳಾಡುವಂತಾಗಿದೆ.

ಎಡದಂಡೆ ಕಾಲುವೆಯ ದುರಸ್ತಿಕಾರ್ಯ
ಎಡದಂಡೆ ಕಾಲುವೆಯ ದುರಸ್ತಿಕಾರ್ಯ

ಬಸವಸಾಗರ ಜಲಾಶಯದಲ್ಲಿ ನೀರಿನ ಮಟ್ಟ

ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ಯಾದಗಿರಿಯ ಬಸವಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯಿರುವ ಬಸವಸಾಗರ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನ ಈಗಾಗಲೇ ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಹೀಗಾಗಿ ಬಸವಸಾಗರ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದ್ದು, ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ. ನದಿ ಪಾತ್ರದ ಗ್ರಾಮಗಳ ಜನರು ನದಿ ತೀರಕ್ಕೆ ಹೋಗದಂತೆ ಸೂಚನೆ ನೀಡಿದ್ದಾರೆ.

ಬೆಳೆ ಕಾಪಾಡಿಕೊಳ್ಳಲು ಜನ ಹೈರಾಣು

ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ನದಿ ದಡದಲ್ಲಿರುವ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಾಸರವಾಡ, ವಿಠಲಾಪುರ, ಬಿದರಳ್ಳಿ ಹಾಗೂ ತೊಳಲಿ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ನದಿ ದಡದ ಬೆಳೆಗಳು ನೀರಲ್ಲೇ ನಿಲ್ಲುವಂತಾಗಿದ್ದು, ಭತ್ತ.. ಗೋದಿ.. ಶೇಂಗಾ ಹಾಗೂ ಇನ್ನಿತರ ಬೆಳೆಗಳು ನದಿ ಪ್ರವಾಹಕ್ಕೆ ಮುಳಗಡೆಯಾಗಿವೆ.

ಬಸವಸಾಗರ ಜಲಾಶಯ
ಬಸವಸಾಗರ ಜಲಾಶಯ

ಇತ್ತ ರೈತರು ತಮ್ಮ ತಮ್ಮ ಪಂಪ್ ಸೆಟ್​ಗಳನ್ನ ಕಾಪಾಡಿಕೊಳ್ಳೋಕೆ ಹರಸಾಹಸ‌ ಪಡ್ತಿದ್ದಾರೆ. ನೂರಾರು ಎಕರೆ ಜಮೀನು ನದಿಯ ನೀರಿನಲ್ಲಿ ನಿಂತು ಸಾಗರದಂತೆ ಕೃಷಿ ಜಮೀನು ಕಾಣ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ರೈತರು ಗೋಳಾಡ್ತಿದ್ದಾರೆ. ಹೀಗಾಗಿ ಸರ್ಕಾರ ಪರಿಹಾರ ನೀಡಬೇಕು ಅಂತ ಒತ್ತಾಯ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಬಿ ಹರಿದ ತುಂಗೆ.. ಕೃಷಿ ಜಮೀನು ಸಾಗರದಂತೆ ಗೋಚರ.. ರಾಜ್ಯದ ಅನ್ನದಾತ ಎಲ್ಲೆಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾನೆ..

https://newsfirstlive.com/wp-content/uploads/2023/08/GDG_FLOOD.jpg

Load More