ಗ್ರಾಮದಲ್ಲಿ ಗಲಾಟೆ ಮಾಡಿ ಚಾಕು ಇರಿದು ಓಡಿ ಹೋದ ರೌಡಿಶೀಟರ್
ವಾಟರ್‌ಮ್ಯಾನ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಚಾಕು ಇರಿದ ಪಾಪಿ ಮಧು
ಗೌರಿ ಗಣೇಶ ಹಬ್ಬಕ್ಕೆ ಗ್ರಾಮಕ್ಕೆ ಬಂದಾಗ ಕೃತ್ಯ ಎಸಗಿ ಎಸ್ಕೇಪ್ ಆದ ರೌಡಿ
ಹಾಸನ: ವಾಟರ್ಮ್ಯಾನ್ಗೆ ಚಾಕು ಇರಿದು ರೌಡಿಶೀಟರ್ ಹತ್ಯೆ ಮಾಡಿರುವ ಘಟನೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚೀಕನಹಳ್ಳಿ ಗ್ರಾಮ ಪಂಚಾಯತಿಯ ವಾಟರ್‌ಮ್ಯಾನ್ ಗಣೇಶ್ (27) ಹತ್ಯೆಯಾಗಿರುವ ದುರ್ದೈವಿ.
ಇದನ್ನೂ ಓದಿ: ಲವ್ವರ್‌ಗಾಗಿ ಹೆತ್ತ ತಾಯಿ ಉಸಿರು ನಿಲ್ಲಿಸಿದ ಪಾಪಿ ಮಗಳು; ಸತ್ಯ ಬಯಲಾಗಿದ್ದು ಹೇಗೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
ಗ್ರಾಮದ ರೌಡಿಶೀಟರ್ ಮಧು ಕ್ಷುಲ್ಲಕ ಕಾರಣಕ್ಕೆ ವಾಟರ್‌ಮ್ಯಾನ್ ಜೊತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿಯು ಚಾಕುವಿನಿಂದ ವಾಟರ್ಮ್ಯಾನ್ಗೆ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗೌರಿ-ಗಣೇಶ ಹಬ್ಬಕ್ಕೆ ಗ್ರಾಮಕ್ಕೆ ಬಂದಿದ್ದ ರೌಡಿಶೀಟರ್ ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ