/newsfirstlive-kannada/media/post_attachments/wp-content/uploads/2024/08/wayanad-22.jpg)
ವಯನಾಡು ಭೂಕುಸಿತವು ಸಾವಿರಾರು ಕತೆಗಳನ್ನು ಹೇಳುತ್ತಿದೆ. ಕುಟುಂಬ ಕಳೆದುಕೊಂಡು ಜನರು ಇಂದಿಗೂ ಅಲ್ಲೇ ಇದ್ದು ಕಣ್ಣೀರು ಹಾಕುತ್ತಾ ಹುಡುಕಾಡುತ್ತಿದ್ದಾರೆ. ಅದರಂತೆಯೇ ಇದೇ ಸ್ಥಳದಲ್ಲಿ ಒಂದೇ ಕುಟುಂಬದ 16 ಮಂದಿ ಸಾವನ್ನಪ್ಪಿದ್ದು, ಬರೀ ನಾಲ್ಕು ಮೃತದೇಹಗಳು ಮಾತ್ರ ಪತ್ತೆಯಾಗಿವೆ.
ಚುರಲ್ಮಲಾದ 42 ವರ್ಷದ ಮನ್ಸೂರ್ ತನ್ನ ಮನೆಯವರೆಲ್ಲರನ್ನು ಕಳೆದುಕೊಂಡಿದ್ದಾರೆ. ಜುಲೈ 30 ರಂದು ಎದುರಾದ ಭೀಕರ ಭೂಕುಸಿತಕ್ಕೆ ಸಿಲುಕಿ ತಾಯಿ, ಹೆಂಡತಿ, ಇಬ್ಬರು ಮಕ್ಕಳು, ಸಹೋದರಿ, ಅತ್ತಿಗೆ ಹೀಗೆ ಕುಟುಂಬದ 16 ಮಂದಿ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಸದ್ಯ ಮನ್ಸೂರ್​ ಒಬ್ಬಂಟಿಯಾಗಿ ಬದುಕುಳಿದಿದ್ದಾರೆ.
/newsfirstlive-kannada/media/post_attachments/wp-content/uploads/2024/08/WAYANADU_2.jpg)
ಇದನ್ನೂ ಓದಿ: ಮೇಘಾ ಶೆಟ್ಟಿ ಫುಲ್ ಬ್ಯುಸಿ! ಒಂದಲ್ಲಾ.. ಎರಡಲ್ಲಾ ‘ಕೈವ’ ನಟಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಗೊತ್ತಾ?
ಮನೆಯವರನ್ನು ಕಳೆದುಕೊಂಡ ಮನ್ಸೂರ್​ ‘ನನಗೆ ನಾಲ್ಕು ಶವಗಳು ಸಿಕ್ಕಿವೆ. ನನ್ನ ಹೆಂಡತಿ, ಮಗ, ಸಹೋದರಿ ಮತ್ತು ತಾಯಿ ಮೃತದೇಹ ಪತ್ತೆಯಾಗಿದೆ. ಮಗಳ ಮೃತದೇಹವಿನ್ನೂ ಸಿಕ್ಕಿಲ್ಲ. ನಾನು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಭೂಕುಸಿತವಾಗಿದೆ. ಸದ್ಯ ನನ್ನ ಬಳಿ ಏನೂ ಉಳಿದಿಲ್ಲ. ನಾನು ನನ್ನ ಸಹೋದರನ ಜೊತೆಗೆ ಇದ್ದೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭೂಕುಸಿತದಲ್ಲಿ 3 ಬಾರಿ ಮನೆ ಕಳೆದುಕೊಂಡು ಬದುಕುಳಿದ ಮೇರಿಯಮ್ಮ.. ಈ ತಾಯಿಯ ನೋವಿನ ಕತೆಯೇ ವಿಭಿನ್ನ
/newsfirstlive-kannada/media/post_attachments/wp-content/uploads/2024/08/wayanad-8.jpg)
ವಯನಾಡು ಭೂಕುಸಿತ ಸಂಭವಿಸಿ ಇಂದಿಗೆ 7 ದಿನಗಳು. ಅನೇಕರು ತಮ್ಮ ಕುಟುಂಬಗಳಿಗಾಗಿ ಈ ಜಾಗದಲ್ಲಿ ಹುಡುಕಾಡುತ್ತಿದ್ದಾರೆ. ಈಗಾಗಲೇ ಭೂಕುಸಿತದಲ್ಲಿ 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಅದರಲ್ಲಿ 100ಕ್ಕೂ ಹೆಚ್ಚು ಮೃತದೇಗಳ ಗುರುತೇ ಸಿಗದಂತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us