/newsfirstlive-kannada/media/post_attachments/wp-content/uploads/2024/08/wayanad-25.jpg)
ವಯನಾಡಿನ ಭೂಕುಸಿತವನ್ನು ಕಣ್ಣಾರೆ ಕಂಡ ಬಸ್​ ಕಂಡಕ್ಟರ್​ ಬದುಕಿ ಬಂದ ರೋಚಕ ಕ್ಷಣವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ‘ತಾನು ತಂಗುತ್ತಿದ್ದ ಸಮೀಪ ನದಿ ಇರುವುದರಿಂದ ನೀರು ಹೆಚ್ಚಾಗಿ ಬರುತ್ತಿತ್ತು ಅಂದುಕೊಂಡೆ. ಆದರೆ ಹೊರಗೆ ಬಂದು ನೋಡಿದಾಗ ಭಯಾನಕ ದೃಶ್ಯ ಕಣ್ಣಿಗೆ ಕಟ್ಟಿತ್ತು’ ಎಂದು ಹೇಳಿದ್ದಾರೆ.
ಕೋಝಿಕ್ಕೋಡ್​​ ಕೊಡುವಳ್ಳಿ ಮೂಲದ ಮೊಹಮ್ಮದ್​​ ಕುಂಞ ಒಂದು ವರ್ಷದಿಂದ ಕಲ್ಪೆಟ್ಟಾ-ಮುಂಡಕ್ಕೈ ಮಾರ್ಗವಾಗಿ ಸಂಚರಿಸುವ ಬಸ್​ಗೆ ಕಂಡಕ್ಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನ ಚುರಲ್ಮಲಾಗೆ ಮೂರು ಬಾರಿ ಮತ್ತು ಮುಂಡಕ್ಕೈಗೆ ಎರಡು ಬಾರಿ ಬಸ್​ ಸಂಚರಿಸುತ್ತದೆ. ರಾತ್ರಿ ವೇಳೆ 8.30ಕ್ಕೆ ಕಲ್ಪೆಟ್ಟಾದಿಂದ ಕೊನೆಯ ಟ್ರಿಪ್​ ಪಾರಂಭವಾಗಿ 10 ಗಂಟೆಗೆ ಚುರಲ್ಮಲಾ ತಲುಪಿ ಅಲ್ಲಿ ಬಸ್​ ತಂಗುತ್ತದೆ. ಚುರಲ್ಮಲಾದಿಂದ 50 ಮೀಟರ್​​ ದೂರದಲ್ಲಿ ಕಂಡಕ್ಟರ್​ ಮತ್ತು ಚಾಲಕ ಮನೆಯೊಂದರಲ್ಲಿ ತಂಗುತ್ತಾರೆ.
/newsfirstlive-kannada/media/post_attachments/wp-content/uploads/2024/08/wayanad-22.jpg)
ಇದನ್ನೂ ಓದಿ: ಉಚಿತ ಆಟೋ ಸೇವೆ.. ಈ ತಾಯಿಯ ಮಹಾತ್ಕಾರ್ಯದ ಉದ್ದೇಶ ಕೇಳಿದ್ರೆ ಕರುಳು ಚುರುಕ್​ ಅನ್ನುತ್ತೆ!
ಜುಲೈ 29ರಂದು ಮಧ್ಯರಾತ್ರಿ ವಿಪರೀತ ಮಳೆಗೆ ಚುರಲ್ಮಲಾದಲ್ಲಿರುವ ಸೇತುವೆ ನಾಶವಾಗುತ್ತದೆ. ಆದರೆ 9.45ಕ್ಕೆ ಬಸ್​ ಚುರಲ್ಮಲಾ ತಲುಪಿದ್ದರಿಂದ ಚಾಲಕ ಮತ್ತು ನಿರ್ವಾಹಕ ಮೊಹಮ್ಮದ್​​ ಕುಂಞ ಅಷ್ಟೇನು ತಲೆ ಕೆಡಿಸಿಕೊಂಡಿಲ್ಲ. ಬಸ್ಸನ್ನು ಚುರಲ್ಮಲಾ ಬಳಿ ಇರುವ ದೇವಸ್ಥಾನ ಹತ್ತಿರದ ಕ್ಲಿನಿಕ್​ ಬಳಿ ನಿಲ್ಲಿಸಿದ್ದರು. ಜೋರು ಮಳೆಯಿದ್ದರಿಂದ ತಮ್ಮ ಕೋಣೆಯಲ್ಲಿ ನಿದ್ರೆಗೆ ಜಾರಿದ್ದರು.
/newsfirstlive-kannada/media/post_attachments/wp-content/uploads/2024/08/wayanad-7.jpg)
ಇದನ್ನೂ ಓದಿ: ಹೈಟೆನ್ಷನ್​ ವಿದ್ಯುತ್​ ತಂತಿಗೆ ಸಿಲುಕಿಕೊಂಡ DJ ವಾಹನ.. 9 ಮಂದಿ ಸಾವು, ಹಲವರಿಗೆ ಗಾಯ
ಆದರೆ ಮೊಹಮ್ಮದ್​​ ಕುಂಞ ಬೆಳಗ್ಗೆ ಎದ್ದು ನೋಡಿದಾಗ ಚಿತ್ರಣವೇ ಬದಲಾಗಿತ್ತಂತೆ. ಈ ಕುರಿತಾಗಿ ಮಾತನಾಡಿದ ಅವರು, ‘ತಾನಿದ್ದ ಜಾಗದ ಮೂರು ಕಡೆಯು ನೀರು ನಿಂತಿತ್ತು. ಪ್ರಾರಂಭದಲ್ಲಿ ಮಳೆ ಬಂದಿರುವ ಕಾರಣ ನೀರು ತುಂಬಿದೆ ಎಂದುಕೊಂಡೆ. ಆದರೆ ಸರಿಯಾಗಿ ಗಮನಿಸಿದಾಗ ವ್ಯಕ್ತಿಯೊಬ್ಬರು ಎದೆಯವರೆಗಿನ ಮಣ್ಣಿನಲ್ಲಿರುವುದು ಕಾಣಿಸಿತು. ಅವರನ್ನು ಬದುಕಿಸಲು ಹಗ್ಗ ಹುಡುಕಿದಾಗ ಇಡೀ ಊರೇ ನಾಶವಾಗಿತ್ತು’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us