ಯಾರ ದೇಹ ಯಾರದ್ದು ಅಂತ ತಿಳಿಯುತ್ತಿಲ್ಲ ಎಂದು ಸಂಬಂಧಿ ಕಣ್ಣೀರು!
ಪ್ರವಾಹದ ರಭಸಕ್ಕೆ ದೇಹಗಳು ಅಷ್ಟರ ಮಟ್ಟಿಗೆ ನುಜ್ಜುಗುಜ್ಜಾಗಿ ಹೋಗಿವೆ
ತನ್ನ ಗೆಳೆಯನಿಗಾಗಿ ಬೆಂಗಳೂರಿನಿಂದ ಓಡೋಡಿ ಬಂದಿರುವ ವ್ಯಕ್ತಿ ನೋವು
ಗುಡ್ಡದ ಭೂತದಿಂದ ಸಾವಿನೂರಾಗಿರುವ ಕೇರಳದ ವಯನಾಡಿನಲ್ಲಿ ಕಣ್ಣೀರಿನ ಪ್ರವಾಹವೇ ಹರಿಯುತ್ತಿದೆ. ಜಲ ಪ್ರಳಯದ ಅಟ್ಟಹಾಸಕ್ಕೆ ನಲುಗಿದ ಕುಟುಂಬಗಳ ಕಣ್ಣೀರು ನಿಲ್ತಾನೆ ಇಲ್ಲ. ಒಬ್ಬೊಬ್ಬರದ್ದು ಒಂದೊಂದು ಕತೆಗಳು, ವ್ಯಥೆಗಳು.. ತಮ್ಮವರನ್ನ ಕಳೆದುಕೊಂಡವರ ನೋವು ಅಕ್ಷರಶಃ ಕಂಗಲಾಗಿಸಿದೆ. ಎಲ್ಲವನ್ನು ಎಲ್ಲರನ್ನೂ ಆಪೋಶನ ತೆಗೆದುಕೊಂಡ ಪ್ರವಾಹ ವಯನಾಡನ್ನ ಅಕ್ಷರಶಃ ಕಣ್ಣೀರನಾಡಾಗಿಸಿದೆ.
ಇದನ್ನೂ ಓದಿ: ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!
ಪ್ರವಾಸಿಗರ ಸ್ವರ್ಗ.. ರಮ್ಯ ಮನೋಹರ ಪ್ರಕೃತಿಯ ತಾಣ. ಸದಾ ಹಚ್ಚ ಹಸಿರಿನಿಂದಲೇ ಕಂಗೊಳಿಸ್ತಿದ್ದ ವಯನಾಡಲ್ಲಿ ಇಂದು ಅಕ್ಷರಶಃ ಸ್ಮಶಾನ ಮೌನ ಆವರಿಸಿದೆ. ಕಣ್ಣು ಹಾಯಿಸಿದಲ್ಲೆಲ್ಲ ಶವಗಳು. ಹೇಳಿದರು ತೀರದಷ್ಟು ನೋವಿನ ಕಥೆಗಳು. ಕಣ್ಣೀರಿನ ಪ್ರವಾಹವನ್ನೆ ಸೃಷ್ಟಿಸಿರುವ ಜಲ ಪ್ರಳಯ ವಯನಾಡ ಜನರ ಬದುಕನ್ನೆ ಬರ್ಬಾದ್ ಮಾಡಿದೆ. ಎಲ್ಲವನ್ನು ಎಲ್ಲರನ್ನ ಕಳೆದುಕೊಂಡವರ ನೋವಿಗೆ ಮುಲಾಮೇ ಇಲ್ಲದಂತಾಗಿದೆ. ಒಂದೊಂದು ಕಥೆಗಳು ಕರುಣಾಜನಕ..
ಇದನ್ನೂ ಓದಿ: ಮತ್ತೊಂದು ಮೆಡಲ್ಗೆ ಮನು ಭಾಕರ್ ಮುತ್ತಿಕ್ಕುವುದು ಗ್ಯಾರಂಟಿ.. ಚಿನ್ನದ ಪದಕ ಸಾಧನೆ ಮಾಡ್ತಾರಾ?
ಒಂದೇ ಕುಟುಂಬದ 25 ಮಂದಿ ಕಣ್ಮರೆ.. ಸಿಕ್ಕಿದ್ದು ಮೂರು ಮೃತದೇಹ!
ಕೇರಳದ ಚೂರಲ್ಮಲಾದ ಪ್ರವಾಹದಲ್ಲಿ ಒಂದೇ ಕುಟುಂಬದ 25 ಮಂದಿ ಕಣ್ಮರೆಯಾಗಿದ್ದಾರೆ. ಇಲ್ಲಿನ ನಿವಾಸಿ ಸುಲ್ಫೀಕರ್ ಅಲಿಯ 40 ಜನರ ಕುಟುಂಬ ಒಟ್ಟಿಗೆ ವಾಸವಿತ್ತು. ಆದ್ರೆ ಮಂಗಳವಾರದ ಭೂ ಜಲ ಪ್ರಳಯಕ್ಕೆ ಬರೋಬ್ಬರಿ 25 ಜನ ಕಣ್ಮರೆಯಾಗಿದ್ರು. ಕಳೆದ 4 ದಿನದಿಂದ ಸುಲ್ಫಿಕರ್ ತಮ್ಮವರ ಮೃತದೇಹಕ್ಕಾಗಿ ಹುಡುಕಾಡ್ತಿದ್ದಾರೆ. ದುರಂತ ಏನಂದ್ರೆ 25 ಜನರ ಪೈಕಿ ಕೇವಲ ಮೂವರ ಮೃತದೇಹ ಮಾತ್ರ ಸಿಕ್ಕಿದ್ದು ಉಳಿದವರು ಬದುಕಿದ್ದಾರ, ಇಲ್ವಾ ಅನ್ನೋದೆ ತಿಳಿಯದೇ ಸುಲ್ಫಿಕರ್ ಅಲಿ ಕಂಗಲಾಗಿದ್ದಾರೆ.
ದುರಂತ ಏನಂದ್ರೆ ವಯನಾಡಿನಲ್ಲಿ ಯಾರ ಶವ ಯಾರದ್ದು ಅನ್ನೋದೆ ಗೊತ್ತಾಗ್ತಿಲ್ಲ. ಯಾಕಂದ್ರೆ ಪ್ರವಾಹದ ರಭಸಕ್ಕೆ ದೇಹಗಳು ಅಷ್ಟರ ಮಟ್ಟಿಗೆ ನುಜ್ಜುಗುಜ್ಜಾಗಿವೆ. ಹೀಗಾಗಿ ನಮ್ಮವರು ಯಾರು ಅನ್ನೋದನ್ನ ಪತ್ತೆ ಮಾಡೋದೆ ದೊಡ್ಡ ಕಷ್ಟವಾಗಿದೆ ಅಂತ ಸುಲ್ಫೀಕರ್ ಅಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗೆಳೆಯನಿಗಾಗಿ ಕೇರಳಕ್ಕೆ ಓಡಿ ಬಂದ ಬೆಂಗಳೂರಿನ ವ್ಯಕ್ತಿ!
ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಸವಿದ್ದ ಸುಬ್ರಹ್ಮಣ್ಯ ಅನ್ನೋ ಕುಟುಂಬ ವಯನಾಡಿನ ಮುಂಡಕೈನಲ್ಲಿ ನೆಲೆಸಿತ್ತು. ಇದೇ ಮುಂಡಕೈನಲ್ಲಿರುವ ಟೀ ಎಸ್ಟೇಟ್ನಲ್ಲಿ ಸುಬ್ರಹ್ಮಣ್ಯ ಕುಟುಂಬ ಕೆಲಸ ಮಾಡ್ಕೊಂಡಿದ್ರು. ದುರಂತ ಏನಂದ್ರೆ ಈ ಸುಬ್ರಹ್ಮಣ್ಯ ಕುಟುಂಬ ಕೂಡ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಈಗ ಈ ಕುಟುಂಬದ ಹುಡುಕಾಟಕ್ಕಾಗಿ ಸುಬ್ರಹ್ಮಣ್ಯನವರ ಸ್ನೇಹಿತ ವಿಜಯಕುಮಾರ್ ಬೆಂಗಳೂರಿನಿಂದ ವಯನಾಡಿಗೆ ಧಾವಿಸಿ ಬಂದಿದ್ದಾರೆ.
ಗೆಳಯನಿಗಾಗಿ ಕೇರಳಕ್ಕೆ ಓಡೋಡಿ ಬಂದಿರುವ ವಿಜಯಕುಮಾರ್ ಇಲ್ಲಿನ ಪರಿಸ್ಥಿತಿ ನೋಡಿ ಅಕ್ಷರಶಃ ದಂಗಾಗಿ ಹೋಗಿದ್ದಾರೆ. ವಾಸ್ತವ ಚಿತ್ರಣವನ್ನ ಕಂಡು ಅಯ್ಯೋ ಏನಿದು ಪರಿಸ್ಥಿತಿ ಅಂತ ದುಃಖಿಸಿದ್ದಾರೆ. ದೇವರನಾಡಿನಲ್ಲಿ ಜನರನ್ನ ದೇವರು ಕಾಪಾಡಬೇಕಿತ್ತು. ಆದ್ರೆ ಆಗಿದ್ದೇನು ಅಂತ ವಿಜಯಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಇಂಟರ್’ನೆಟ್’ನಲ್ಲಿ ಅತಿಹೆಚ್ಚು ಸರ್ಚ್‌ಗೆ ಒಳಗಾದ ಮನು ಭಾಕರ್ ಜಾತಿ; ಇದೆಂಥಾ ಮನಸ್ಥಿತಿ!
ಮೊಮ್ಮಗನ ಬಿಟ್ಟು ಯಾರೂ ಉಳಿದಿಲ್ಲ.. ಶವಕ್ಕಾಗಿ ಅಜ್ಜನ ಪರದಾಟ !
ಮನಸ್ಸು ಮಮ್ಮಲ ಮರುಗಿಬಿಡುತ್ತೆ.. ಅಜ್ಜನ ತೊಳಲಾಟ.. ಸಂಕಟ ನಿಜಕ್ಕೂ ಹೇಳತೀರದು. ಈ ಅಜ್ಜನ ಕುಟುಂಬದ 5 ಜನ ಗುಡ್ಡದ ಭೂತಕ್ಕೆ ನಾಪತ್ತೆಯಾಗಿದ್ದಾರೆ. ಎಲ್ಲಿದ್ದಾರೆ ಏನು ಅನ್ನೋ ಒಂದು ಸುಳಿವು ಸಿಕ್ಕಿಲ್ಲ. ದುರಂತ ಏನಂದ್ರೆ ಇಡೀ ಕುಟುಂಬದಲ್ಲಿ ಸದ್ಯ ಮೊಮ್ಮಗನ ಬಿಟ್ಟು ಯಾರು ಉಳಿದಿಲ್ಲ. ಪ್ರತಿ ಬಾರಿ ಶವಗಳು ಬಂದಾಗ ಈ ಅಜ್ಜ ಓಡಿ ಬಂದು ತಮ್ಮವರದೇನು ಅಂತ ನೋಡುವ ಈ ದೃಶ್ಯ ಕರುಳನ್ನ ಕಿವುಚಿಬಿಡುತ್ತೆ. ಇಡೀ ಕುಟುಂಬದಲ್ಲಿ ಕೇವಲ ಮೊಮ್ಮಗ ಮಾತ್ರ ಉಳಿದಿದ್ದು. ಉಳಿದವರ ಪತ್ತೆಯಾಗಿಲ್ಲ.. ಮಗ ಸೊಸೆ ಎಲ್ಲರೂ ಕಣ್ಮರೆಯಾಗಿದ್ದಾರೆ. ಕೊನೆ ಪಕ್ಷ ಅವರ ಮುಖವನ್ನಾದ್ರೂ ನೊಡ್ಬೇಕು ಅಂತ ಅಜ್ಜ ಶವಗಳು ಬಂದಾಗಲೆಲ್ಲ ಆಸೆಗಣ್ಣಿನಿಂದ ಓಡಿ ಬರ್ತಾರೆ.. ಅಜ್ಜನ ಸಂಕಟ ನಿಜಕ್ಕೂ ಕಣ್ಣೀರು ತರಿಸುತ್ತೆ.
ನಾಪತ್ತೆಯಾಗಿರುವ ಮಗನಿಗಾಗಿ ಹೆತ್ತ ಕರುಳಿನ ಕಣ್ಣಿರು
ವಯನಾಡು ಅಕ್ಷರಶಃ ದುರಂತಭೂಮಿಯಾಗಿದೆ. ಸತ್ತವರ ಲೆಕ್ಕ ಸಿಗ್ತಿಲ್ಲ.. ಅದೆಷ್ಟು ಮಕ್ಕಳು ಹೆತ್ತಮ್ಮನನ್ನ ಕಳೆದುಕೊಂಡ್ರೆ ಅದೆಷ್ಟು ತಾಯಂದಿರು ಕರುಳ ಬಳ್ಳಿಗಳನ್ನ ಕಳೆದುಕೊಂಡಿದ್ದಾರೆ. ಅದ್ರಲ್ಲೂ ಈ ತಾಯಿಯ ಸಂಕಟವಂತು ಕರುಣಾಜನಕವಾಗಿದೆ. ಈ ತಾಯಿ ಹೆಸರು ರಬೀನಾ ಅಂತ. ಭೂ ಜಲ ಪ್ರಳಯದಲ್ಲಿ ರಬೀನಾ ಕುಟುಂಬದ ಎಲ್ಲರೂ ನಾಪತ್ತೆಯಾಗಿದ್ದಾರೆ. ಅದ್ರಲ್ಲೂ ಆಕೆ ಪುಟ್ಟ ಮಗ ಕೂಡ ಕಣ್ಮರೆಯಾಗಿದ್ದು, ಮಗನಿಗಾಗಿ ಈ ಜೀವ ಕಣ್ಣೀರು ಸುರಿಸುತ್ತಿದೆ. ರಬೀನಾ ಮಗನ ಜೊತೆ ಅವನ ಸ್ನೇಹಿತರು ಕೂಡ ನಾಪತ್ತೆಯಾಗಿದ್ದು, ಮಗ ಏನಾದ ಅನ್ನೋದನ್ನ ತಿಳಿಯದೇ ರಬಿನಾ ಕಂಗಲಾಗಿದ್ದಾರೆ.
ಭೂಕುಸಿತದ ನಂತ್ರ ಬೆಳಗ್ಗೆ ಒಂದ್ಸಲ ನಮ್ಮ ಮನೆ ಇದ್ದ ಜಾಗಕ್ಕೆ ಹೋಗಿ ನೋಡೋಣ ಅಂತ ಹೇಳಿ ಹೋಗಿದ್ವಿ. ಅಲ್ಲಿಗೆ ಹೋದ್ಮೇಲೆ ನಾವು ನಿಜಕ್ಕೂ ಮರಣವನ್ನ ನೋಡಿದ್ವಿ. ನಮ್ಮಂತಹ ಸಾಮಾನ್ಯ ಜನರನ್ನ ನಾಯಿಗಳನ್ನ ತರುವಂತೆ ಎತ್ಕೊಂಡು ಬರ್ತಿದ್ರು.. ನಮಗೆ ಇದನ್ನ ನಿಜಕ್ಕೂ ಸಹಿಸೋದಕ್ಕೆ ಆಗ್ತಿಲ್ಲ. ಇನ್ಮುಂದೆ ನಾವಿಲ್ಲ ಆ ಊರಿಗೆ ಹೋಗಲ್ಲ. ನಮ್ಮ ಜನರೆಲ್ಲ ಹೋದ್ರು.. ನಮ್ಮಗಿಲ್ಲ ಆ ಊರು ಬೇಡ. ನಾವು ಹುಟ್ಟಿ ಬೆಳೆದ ಊರು ಅದು, ನಮಗೆ ಆ ಊರು ಬೇಡ.. ನಮ್ಮರಿಗೆ ಹೋಗೋಕೆ ನಮಗೆ ಭಯ ಆಗ್ತಿದೆ.. ನಮಗೆ ಗೊತ್ತಿರೋ ಸಾಕಷ್ಟು ಜನರು ಹೋದ್ರು.
ರಬಿನಾ, ಸ್ಥಳೀಯ ನಿವಾಸಿ
ಅಪ್ಪ-ಅಮ್ಮ, ತಂಗಿಯ ಸಾವಿನ ಶಾಕ್ನಿಂದ ಹೊರ ಬಾರದ ಅಕ್ಕ
ವಯನಾಡಿನ ಮರಣ ಮಳೆಯಿಂದಾಗಿ ಸಂಭ್ರಮದ ಮನೆಯಲ್ಲಿ ಸೂತಕ ಆವರಿಸಿಬಿಟ್ಟಿದೆ. ವಯನಾಡಿನ ಶಿವಣ್ಣ-ಸಬೀತಾ ದಂಪತಿ ಮನೆಯಲ್ಲಿ ಒಟ್ಟು 7 ಮಂದಿ ಅನೋನ್ಯವಾಗಿದ್ದರು. ಹಿರಿಯ ಮಗಳು ಶ್ರುತಿ ಮದುವೆ ನಡೆಯಬೇಕಿದ್ದರಿಂದ ಅದೇ ಸಂಭ್ರಮದಲ್ಲೇ ರಾತ್ರಿ ಊಟ ಮಾಡಿ ಮಲಗಿದ್ರು. ಚುರಲ್ಮಲಾದಲ್ಲಿರುವ ವೆಲ್ಲರ್ಮಲಾ ಶಾಲೆ ಬಳಿಯೇ ಶಿವಣ್ಣ ದಂಪತಿ ಮನೆ ಇತ್ತು. ಚುರಲ್ಮಲಾದಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಶಿವಣ್ಣ ಕುಟುಂಬದ 7 ಮಂದಿ ನಾಪತ್ತೆ ಆಗಿದ್ದರು. ಅದ್ರಲ್ಲಿ ಶಿವಣ್ಣನ ಕಿರಿಯ ಮಗಳು ಶವವಾಗಿ ಸಿಕ್ಕಿದ್ದಾಳೆ. ದುರಂತ ಏನಂದ್ರೆ ಮದುವೆಯಾಗಬೇಕಿದ್ದ ಶ್ರುತಿ ಬದುಕುಳಿದಿದ್ದು, ಅಪ್ಪ ಅಮ್ಮ ತಂಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ಮನೆಯವರೆಲ್ಲರನ್ನು ಕಳೆದುಕೊಂಡ ಶೃತಿಗೆ ತನ್ನ 19 ವರ್ಷದ ತಂಗಿ ಶ್ರೇಯಾ ಮೃತದೇಹ ಸಿಕ್ಕಿದೆ. ತಂಗಿಯ ಮೃತದೇಹ ಕಂಡಂತೆ ಶೃತಿ ಕಣ್ಣೀರು ಸುರಿಸಿದ್ದಾಳೆ. ತನ್ನವರಿಗಾಗಿ ಹುಡುಕಾಡಿದ್ದಾಳೆ. ಅಮ್ಮ, ಅಪ್ಪನನ್ನು ಹುಡುಕಿ ಕೊಡಿ ಎಂದು ಕೇಳಿಕೊಂಡಿದ್ದಾಳೆ.
ಕುಟುಂಬದ 6 ಜನ ದುರ್ಮರಣ.. ಶವವೂ ಸಿಗದೇ ಕಂಗಾಲು
ಚುರಲ್ಮಲಾದ ರಾಜೇಶ್ ಕುಟುಂಬದ 6 ಜನ ಪ್ರವಾಹದಲ್ಲಿ ದುರ್ಮರಣ ಹೊಂದಿದ್ದಾರೆ. ದುರಂತ ಏನಂದ್ರೆ ತಮ್ಮವರ ಮೃತದೇಹವನ್ನಾದ್ರೂ ತೆಗೆದುಕೊಂಡು ಹೋಗೋಣ ಅಂದ್ರೆ ಅದು ಸಾಧ್ಯವಾಗದೇ ರಾಜೇಶ್ ಕಂಗಾಲಾಗಿದ್ದಾರೆ. ರಾತ್ರಿ ರಾಜೇಶ್ ಸಂಬಂಧಿಯ ಶವ ಸಿಕ್ಕಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದ್ರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಆ ಶವವನ್ನು ಇನ್ಯಾರು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಮೃತದೇಹ ಎಲ್ಲಿದೆ ಅನ್ನೋದೆ ಗೊತ್ತಾಗದೇ ರಾಜೇಶ್ ಅಕ್ಷರಶಃ ದಿಕ್ಕೆಟ್ಟು ಹೋಗಿದ್ದಾರೆ.
ನಮ್ಮ ಕುಟುಂಬ ಆರು ಜನ ಸಾವನ್ನಪ್ಪಿದ್ದಾರೆ. ಅಮ್ಮ.. ಅಣ್ಣ .. ಅಣ್ಣನ ಹೆಂಡತಿ ಅವರ ಮಗ.. ಅದ್ರಲ್ಲಿ ಒಬ್ಬರು ಮಾತ್ರ ಸಿಕ್ಕಿದ್ದಾರೆ. ರಾಜನ್ ಅವರ ಮೃತದೇಹ ಸಿಕ್ಕಿದೆ ಅಂತ ವಾಟ್ಸಪ್ನಲ್ಲಿ ಮೆಸೆಜ್ ಬಂದಿತ್ತು. ನಾವು ಬಾಡಿ ತೆಗೆದುಕೊಂಡು ಹೋಗೋಣ ಅಂತ ರಾತ್ರಿಯೇ ಇಲ್ಲಿಗೆ ಬಂದಿದ್ವಿ. ಇದೇ ಫೋಟೋ ಅದು.
ರಾಜೇಶ್, ಸ್ಥಳೀಯ ನಿವಾಸಿ
ಇದನ್ನೂ ಓದಿ: ಈ ವಾರ ಕನ್ನಡಿಗರ ಮನಗೆದ್ದ ಸೀರಿಯಲ್ ಯಾವುದು.. TRPಯಲ್ಲಿ ಯಾವುದು ಫಸ್ಟ್, ಲಾಸ್ಟ್?
ಸಾವಿನ ಭೀಕರತೆಗೆ ಸಾಕ್ಷಿಯಾದ ಚಾಲಿಯಾರ್ ನದಿ
ನೆಲಂಬೂರು ಸಮೀಪದಲ್ಲಿರುವ ಚಾಲಿಯಾರ್ ನದಿ ವಯನಾಡಿನ ಭೀಕರತೆಗೆ ಸಾಕ್ಷಿಯಾಗಿದೆ. ಪ್ರವಾಹದ ರಭಸಕ್ಕೆ ನಲುಗಿ ಪ್ರಾಣ ಬಿಟ್ಟವರ ಮೃತದೇಹಗಳು ಇದೇ ಚಾಲಿಯಾರ್ ನದಿಯಲ್ಲಿ ತೇಲಿ ಬಂದಿದ್ವು. ಬಂಡೆ ಕಲ್ಲುಗಳ ನಡುವೆ ಚಾಲಿಯಾರ್ ನದಿ ರಭಸವಾಗಿ ಹರಿಯುತ್ತಿದ್ದು, ಇದೇ ನೀರಿನಲ್ಲಿ ರುಂಡ ಮುಂಡವಿಲ್ಲದ ಮೃತದೇಹಗಳು ತೇಲಿ ಬಂದಿದ್ವು.
ಇದನ್ನೂ ಓದಿ: ಇನ್ನು ಬದುಕಿದವರು ಯಾರು ಸಿಗಲ್ಲ.. ನಿಮ್ಮವರ ಆಸೆ ಬಿಟ್ಟು ಬಿಡಿ; ಕೇರಳ ಸಿಎಂ ಶಾಕಿಂಗ್ ಹೇಳಿಕೆ
ದೇವರ ಸ್ವಂತನಾಡಿನಲ್ಲಿ ಮಳೆ ಬಂದ್ರೆ ಅವಘಡಗಳು ಸಂಭವಿಸೋದು ನಿಶ್ಚಿತ. ಆದ್ರೆ, ಈಗ ಸಂಭವಿಸಿರೋದು ಅವಘಡ ಅಲ್ಲ. ಘನಘೋರ ದುರಂತ. ಮೇಘರಾಜನ ಸಾವಿನ ಮರ್ಧನ. ಭೂ ದೇವಿಯ ರೌದ್ರನರ್ತನಕ್ಕೆ ವಯನಾಡು ಈಗ ಅಕ್ಷರಶಃ ಕಮರಿ ಹೋಗಿರುವುದಂತು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ